ಹೆಣ್ಣು ಮಕ್ಕಳ ಸಮಗ್ರ ಅಭಿವೃದ್ಧಿ-ರಕ್ಷಣೆ-ಸ್ವಾವಲಂಬನೆಯತ್ತ ಗಮನ ಹರಿಸದ ರಾಜಕೀಯ ಪಕ್ಷಗಳ ಪ್ರಣಾಳಿಕೆ

Date:

  • ಚುನಾವಣೆಗಷ್ಟೇ ಮೀಸಲಾಗುವ ರಾಜಕೀಯ ಪಕ್ಷಗಳ ಮಹಿಳಾಪರ ಯೋಜನೆಗಳು
  • ಹೆಣ್ಣು ಭ್ರೂಣ ಹತ್ಯೆ, ಮಹಿಳಾ ದೌರ್ಜನ್ಯ ನಿಯಂತ್ರಕ್ಕಿಲ್ಲ ಯಾವುದೇ ಯೋಜನೆ 

“ಒಂದು ಸಮಾಜದ

ಬೆಳವಣಿಗೆಯನ್ನು ನಾನು 

ಆ ಸಮಾಜದ ಹೆಣ್ಣು ಮಕ್ಕಳ 

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸ್ಥಿತಿಗತಿಯ ಮೇಲೆ 

ನಿರ್ಧರಿಸುತ್ತೇನೆ’’ 

ಇದು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಹೇಳಿದ್ದ ಪ್ರಸಿದ್ಧ ಮಾತು. ಆದರೆ ಅಂಬೇಡ್ಕರ್ ಅವರೇ ಬರೆದ ಸಂವಿಧಾನದ ನೆಲೆಯಿಂದ ರೂಪುಗೊಂಡಿರುವ ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ಪ್ರಾಧಾನ್ಯತೆ ಅನ್ನೋದು ಹಿಂದಿಗೂ ಚರ್ಚಾ ವಿಚಾರವಷ್ಟೆ. ಯಾಕೆಂದರೆ ರಾಜಕಾರಣಕ್ಕೆ ಅಥವಾ ರಾಜಕಾರಣಿಗಳಿಗೆ ಮಹಿಳೆಯರು ಕೇವಲ ಮತಗಳು ಮಾತ್ರ. ಚುನಾವಣೆ ಸಮೀಪಿಸಿದಾಗ ಸಾಲು ಸಾಲು ಮಹಿಳಾ ಪರ ಯೋಜನೆಗಳನ್ನು ಘೋಷಿಸುವ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದ ನಂತರ ಅವುಗಳನ್ನು ಜಾರಿಗೊಳಿಸೋದು, ಮಹಿಳಾ ಪರ ಕಾನೂನುಗಳನ್ನು ಗೌರವಿಸುವುದು ಕನಸಿನ ಮಾತು. ಅದರಲ್ಲೂ ಈ ಯೋಜನೆಗಳು ಮಹಿಳಾ ಸ್ವಾವಲಂಬನೆ ಅಥವಾ ಸ್ವಾಯತ್ತತೆಗೆ ಗಮನ ಹರಿಸುವುದೇ ಇಲ್ಲ. ಬದಲಾಗಿ ಬಿಟ್ಟಿ ಭಾಗ್ಯಗಳ ರೀತಿ ಸಾಲ ಸೌಲಭ್ಯ, ಉಚಿತ ಭಾಗ್ಯಗಳಿಗೆ ಜೋತು ಬೀಳುತ್ತವೆ. ಇದರಿಂದಾಗಿ ಮಹಿಳಾ ಸಮಗ್ರ ಅಭಿವೃದ್ಧಿಗೆ ಯಾವ ಪ್ರಯೋಜನಗಳೂ ಇಲ್ಲ. 

2023 ಮೇ 10ಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ ಈ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳನ್ನ ಬಿಡುಗಡೆ ಮಾಡಿವೆ. ಈ ಪ್ರಣಾಳಿಕೆಗಳಲ್ಲಿ ಮಹಿಳಾ ಸಬಲೀಕರಣಕ್ಕೆ, ಮಹಿಳೆಯರ ಏಳಿಗೆಗೆ ಅಂತಲೇ ಒಂದಷ್ಟು ಪ್ರತ್ಯೇಕ ಯೋಜನೆಗಳನ್ನ ಘೋಷಿಸಿವೆ. ಆದರೆ ಆ ಘೋಷಣೆಗಳಾವುವು ಮಹಿಳೆಯರ ಸಮಗ್ರ ಅಭಿವೃದ್ಧಿಯನ್ನಾಗಲಿ, ಸ್ವಾಯತ್ತತೆಯ ಬದುಕನ್ನಾಗಲಿ ಕಲ್ಪಿಸುವುದಿಲ್ಲ. ಬದಲಾಗಿ ಇವು ಕೇವಲ ಚುನಾವಣಾ ತಂತ್ರವಷ್ಟೇ ಅನ್ನೋದು ಮೇಲ್ನೋಟಕ್ಕೆ ಕಂಡುಬರುತ್ತಿದೆ. 

ಸರ್ವಜನಾಂಗದ ಶಾಂತಿಯ ತೋಟ ಎಂಬ ಧ್ಯೇಯವಾಕ್ಯದೊಂದಿಗೆ ಪ್ರಣಾಳಿಕೆ ಪ್ರಕಟಿಸಿರುವ ಕಾಂಗ್ರೆಸ್ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನ ಘೋಷಿಸಿದೆ. ಮುಖ್ಯವಾಗಿ ಸಾರ್ವಜನಿಕ ಸೇವೆಗಳ ಅಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು ರೂ. 11,500/- ರಿಂದ 15, 000 ಹೆಚ್ಚಿಸುವ ಕುರಿತು ಭರವಸೆ ನೀಡಿದೆ. ಜೊತೆಗೆ ಮಿನಿ ಅಂಗನವಾಡಿ ಕಾರ್ಯಕರ್ತೆಯರ ವೇತನ ರೂ 7,500/- ರಿಂದ ರೂ 10,000 ಹೆಚ್ಚಳ ಮತ್ತು ವಿಶ್ರಾಂತಿ ವೇತನ ರೂ. 2 ಲಕ್ಷ ನೀಡುವುದಾಗಿ ಘೋಷಿಸಿದೆ. ಇನ್ನು ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನವನ್ನು ರೂ 5,000/- ದಿಂದ ರೂ 8,000/- ಹೆಚ್ಚಳ ಮತ್ತು ಬಿಸಿಯೂಟದ ಅಡುಗೆಯವರಿಗೆ ಮಾಸಿಕ ಗೌರವಧನ ರೂ. 3,600/-ರಿಂದ ರೂ 6,000ಕ್ಕೆ ಹೆಚ್ಚಿಸುವುದಾಗಿ ತಿಳಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಘೋಷಿಸಿದೆ. ಜೊತೆಗೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2,000 ರೂ. ನೀಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದೆ. ಇವು ಕಾಂಗ್ರೆಸ್ ಪ್ರಣಾಳಿಕೆಯ ಬಹುಮುಖ್ಯ ಅಂಶಗಳಾಗಿವೆ. ಈ ಎಲ್ಲಾ ಯೋಜನೆಗಳು ಮಹಿಳಾ ಪರವೇ ಆದರೆ ಇವುಗಳಿಂದ ಮಹಿಳಾ ಸ್ವಾವಲಂಬನೆ ಸಾಧ್ಯವಾಗುತ್ತದೆಯೇ ಅನ್ನೋದನ್ನ ಯೋಚಿಸಬೇಕು.

ಇನ್ನು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಮಹಿಳೆಯರಿಗಾಗಿ ಹಲವು ಯೋಜನೆಗಳನ್ನ ಘೋಷಿಸಿವೆ. ಮಹಿಳಾ ಸಬಲೀಕರಣದ ಹೆಸರಿನ ಈ ಯೋಜನೆಗಳಲ್ಲಿ ತಾಳಿ ಭಾಗ್ಯ, ಕುಂಕುಮ ಭಾಗ್ಯದಂತಹ ಯೋಜನೆಗಳೇ ಹೆಚ್ಚು. ಯಾವ ಯೋಜನೆಗಳೂ ಮಹಿಳಾ ಶಿಕ್ಷಣಕ್ಕಾಗಲಿ, ಮಹಿಳೆಯರ ಮೇಲಿನ ದೌರ್ಜನ್ಯ ನಿಯಂತ್ರಣಕ್ಕಾಗಲಿ ಕಿಂಚಿತ್ತೂ ಗಮನ ಹರಿಸಿಲ್ಲ. ಇವು ಹೆಣ್ಣು ಮಕ್ಕಳ ಸ್ವಾವಲಂಬನೆಯ ಬದುಕಿಗೆ ಉಪಯೋಗವಾಗುತ್ತವೆಯಾ ಅಂತಾ ಯೋಚಿಸಿದ್ರೆ ನಿಜಕ್ಕೂ ಇಲ್ಲ ಅನ್ನಿಸುತ್ತದೆ. ಈ ಪ್ರಣಾಳಿಕೆಗಳ ಕುರಿತು ಈ ದಿನ.ಕಾಮ್ ನೊಂದಿಗೆ ಮಾತನಾಡಿರುವ ಕನ್ನಡದ ಪ್ರಸಿದ್ಧ ಲೇಖಕಿ ಸಾಮಾಜಿಕ ಹೋರಾಟಗಾರ್ತಿ ರೂಪ ಹಾಸನ ರಾಜಕೀಯ ಪ್ರಣಾಳಿಕೆಗಳು ಮತ್ತು ವಾಸ್ತವವನ್ನು ನಮ್ಮೆದುರು ತೆರೆದಿಟ್ಟಿದ್ದಾರೆ.

ಜೀವಪರವಾಗಿ ಸಾಹಿತ್ಯ ಕ್ಷೇತ್ರ ಸೇರಿದಂತೆ ‘ಪ್ರೇರಣಾ ವಿಕಾಸ ವೇದಿಕೆʼಯ ಎಂಬ ಸಂಸ್ಥೆಯ ಮೂಲಕ ಮಕ್ಕಳು ಹಾಗೂ ಮಹಿಳಾ ಹಕ್ಕುಗಳಿಗೆ ದನಿಯಾಗುತ್ತಿರುವ ರೂಪ ಹಾಸನ ಅವರು ಮೂರು ಪಕ್ಷಗಳ ಯೋಜನೆಗಳ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಈದಿನ.ಕಾಮ್ ನೊಂದಿಗೆ ಮಾತನಾಡಿರುವ ಅವರು ‘ಮೂರು ಪಕ್ಷಗಳು ಪೈಪೋಟಿಯ ಮೇಲೆ ಮಹಿಳೆಯರಿಗೆ ಉಚಿತ ಭಾಗ್ಯಗಳನ್ನ ಘೋಷಿಸಿವೆ. ಆದರೆ ಇದು ಎಷ್ಟು ದಿನದ ವರೆಗೆ ಬರುತ್ತದೆ..? ಈ ಹಿಂದೆ ಘೋಷಿಸಿದ್ದ ಎಷ್ಟು ಯೋಜನೆಗಳು ಜಾರಿಯಾಗಿವೆ ಅನ್ನೋದನ್ನ ರಾಜಕಾರಣಿಗಳು ತಿಳಿಸಬೇಕು’ ಎಂದು ಪ್ರಶ್ನಿಸಿದ್ದಾರೆ.   

ಶಾಶ್ವತ ಪರಿಹಾರವನ್ನ ನಾವಿಂದು ಕೇಳುತ್ತಿದ್ದೇವೆ. ಮದ್ಯ ವಿರೋಧಿ ಆಂದೋಲನ ಮಾಡುತ್ತಿದ್ದೇವೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಕೇಳುತ್ತಿರುವುದು ತಮ್ಮ ಕೆಲಸವನ್ನ ಖಾಯಂಗೊಳಿಸುವಂತೆ. ಆದರೆ ಇತ್ತ ಗಮನ ಹರಿಸದ ರಾಜಕೀಯ ಪಕ್ಷಗಳು ಚುನಾವಣೆ ಸಮಯದಲ್ಲಿ ಅವರ ಮನವೊಲಿಸಲು ಒಂದು ಸಾವಿರ ಎರಡು ಸಾವಿರ ಸಂಬಳವನ್ನು ಹೆಚ್ಚಿಸುತ್ತವೆ. ಇದು ಕಣ್ಣೊರೆಸುವ ತಂತ್ರವಲ್ಲದೇ ಮತ್ತೇನು ಅಲ್ಲ. ಸಾಲದ್ದಕ್ಕೆ ದಶಕಗಳಿಂದಲೂ ನಡೆಯುತ್ತಿರೋ ಮದ್ಯ ವಿರೋಧಿ ಹೋರಾಟದತ್ತ ಯಾವುದೇ ಪಕ್ಷ ಗಮನ ಹರಿಸಿಲ್ಲ. ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಯಾವುದೇ ಯೋಜನೆ ಘೋಷಿಸಿಲ್ಲ. ಇಲ್ಲಿ ಪ್ರತಿ 15 ನಿಮಿಷಕ್ಕೊಂದು ಹೆಣ್ಣು ಮಗುವಿನ ಮೇಲೆ ದೌರ್ಜನ್ಯವಾಗುತ್ತಿದೆ. ಪ್ರತೀ ದಿನ ಕನಿಷ್ಠ ಮೂವರು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳಾಗುತ್ತಿವೆ. ದಿನೇ ದಿನೇ ಬಾಲ್ಯವಿವಾಹಗಳು ಹೆಚ್ಚಾಗುತ್ತಿವೆ. ಈ ಗಂಭೀರ ಸಮಸ್ಯೆಗಳ ಬಗ್ಗೆ ಒಂದೇ ಒಂದು ಪ್ರಣಾಳಿಕೆಯು ಏನನ್ನು ಮಾತನಾಡಿಲ್ಲ. ಮಹಿಳಾ ದೌರ್ಜನ್ಯವನ್ನ ತಡೆಯುವ ಸಲುವಾಗಿ ಯಾವುದೇ ಯೋಜನೆ ಘೋಷಿಸಿಲ್ಲ. 

ಮುಖ್ಯವಾಗಿ ದಿನದಿಂದ ದಿನಕ್ಕೆ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗುತ್ತಿವೆ. ಲಿಂಗಾನುಪಾತದಲ್ಲಿ 1,000 ಕ್ಕೆ 907 ಹೆಣ್ಣು ಮಕ್ಕಳಿದ್ದಾರೆ. ಕರ್ನಾಟಕದಲ್ಲಿಯೂ ಸಹ ಈ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಹೆಣ್ಣು ಸಿಗದೇ ಜಾಥಾ ಹೋಗುವ ಸ್ಥಿತಿ ಎದುರಾಗಿದೆ. ರಾಜಕಾರಣಿಯೊಬ್ಬ ನನ್ನ ಗೆಲ್ಲಿಸಿದರೆ ಮದುವೆ ಆಗದಿರುವ ಹುಡುಗರಿಗೆ ಮದುವೆ ಮಾಡಿಸುತ್ತೇನೆ ಅಂತಾ ಭರವಸೆ ಕೊಡುತ್ತಾನೆ. ಹುಟ್ಟುವಾಗಲೇ ಹೆಣ್ಣು ಮಕ್ಕಳನ್ನ ಕೊಂದರೆ ಇವರು ಎಲ್ಲಿಂದ ತಂದು ಕೊಡುತ್ತಾರೆ. ಹೆಣ್ಣು ಮಕ್ಕಳು ವಸ್ತುಗಳೇ ತಂದು ಕೊಡುವುದಕ್ಕೇ ಎಂದು ಪ್ರಶ್ನಿಸಿದ್ದಾರೆ. 

ಇನ್ನು ಕೆಲ ವರ್ಷ ಕಳೆದರೇ ಹೆಣ್ಣು ಮಕ್ಕಳೇ ಹುಟ್ಟದಿರುವ ಸ್ಥಿತಿ ಬರುತ್ತದೆ. ಇದಕ್ಕೆ ಶಾಶ್ವತವಾದ ಪರಿಹಾರ ಏನಾದ್ರು ಇದೆಯಾ..? ಮಹಿಳಾಪರವಾಗಿ ಕಾರ್ಯನಿರ್ವಹಿಸಬೇಕಾದ ಎಲ್ಲಾ ಕಮಿಟಿಗಳು ನಿಷ್ಕ್ರಿಯವಾಗಿವೆ. ಹೆಣ್ಣು ಮಕ್ಕಳ ಕಳ್ಳ ಸಾಗಾಣಿಕೆ ತಡೆಯೋಕೆ ಎಲ್ಲಾ ಎಸ್ಪಿ ಆಫೀಸ್ ಗಳಲ್ಲಿ ಒಂದು ಮಹಿಳಾ ಘಟಕ ಇರುತ್ತದೆ ಸದ್ಯಕ್ಕೆ ಅದು ಸಂಪೂರ್ಣ ನಿಷ್ಕ್ರಿಯವಾಗಿದೆ. ಎಲ್ಲಾ ಜಿಲ್ಲಾ ಎಸ್ಪಿ ಆಫೀಸಿನಲ್ಲಿ ಇರಬೇಕಾದ ಮಹಿಳಾ ಜಾಗೃತ ಘಟಕಗಳು ಕಾಣೆಯಾಗಿವೆ. ಹಾಸನದಲ್ಲಿ ಹೋರಾಟ ಮಾಡಿ ನಾವು ಮಾಡಿಸಿದ್ದು ಬಿಟ್ಟರೇ ಬೇರೆಲ್ಲೂ ಆ ಘಟಕ ಸಕ್ರಿಯವಾಗಿಲ್ಲ. ಎಲ್ಲಾ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮಹಿಳಾ ಕಾವಲು ಪಡೆಗಳನ್ನ ಮಾಡಬೇಕು. 2008 ಈವರೆಗೆ ನಾಲ್ಕು ಬಿಲ್ ಪಾಸಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. 

ಮಹಿಳಾ ದೌರ್ಜನ್ಯದ ಬಗ್ಗೆ ಇವರ ಮಾತೇ ಇಲ್ಲ. ಪ್ರತೀ ವರ್ಷ ಸಾವಿರಾರು ಹೆಣ್ಣು ಮಕ್ಕಳು ಸೆಕ್ಸ್ ವರ್ಕ್ ಗೆ ಸೇರುತ್ತಿದ್ದಾರೆ. ಬಡತನದ ಕಾರಣಕ್ಕೆ ಈ ಕೆಲಸಕ್ಕೆ ಬರುತ್ತಿದ್ದಾರೆ. ಇಂಥ ಗಂಭೀರ ವಿಚಾರದ ಬಗ್ಗೆ ಯಾವ ಪಕ್ಷಗಳು ಉಸಿರೆತ್ತುತ್ತಿಲ್ಲ. ಸ್ವಾವಲಂಬನೆಯನ್ನು ನೀಡಿ ಎಲ್ಲಾ ಕ್ಷೇತ್ರಗಳಲ್ಲೂ ಅವರನ್ನು ಸಮನಾಗಿ ಒಳಗೊಳ್ಳುವ ಕೆಲಸ ಆಗಬೇಕು. ಆದರೆ ಇಂಥ ಗಂಭೀರ ವಿಚಾರಗಳು ಚರ್ಚೆಯೇ ಆಗುತ್ತಿಲ್ಲಾ.  

ರಾಜಕೀಯದಲ್ಲಿ ಮಹಿಳೆಯರಿಗೆ 33 % ಮೀಸಲಾತಿ ಕೊಡುವುದಕ್ಕೆ ಈವರೆಗೆ ಸಾಧ್ಯವಾಗಿಲ್ಲ. ಒಂದು ಪಕ್ಷದಲ್ಲಿ ಎಷ್ಟು ಹೆಣ್ಣು ಮಕ್ಕಳಿಗೆ ಟಿಕೆಟ್ ಕೊಟ್ಟಿದ್ದಾರೆ ಅಂತಾ ನೋಡಿ. ಪುರುಷ ಮುಖಂಡರಷ್ಟೇ ತಮ್ಮ ಅನುಕೂಲದ ಸಮಯದಲ್ಲಿ ಸೇರಿ, ಟಿಕೇಟ್ ನಿರ್ಧಾರ ಮಾಡ್ತಾರೆ. ಅಲ್ಲಿ ಮಹಿಳಾ ಪ್ರಾತಿನಿಧ್ಯ, ಲಿಂಗಸಮಾನತೆಯ ಪ್ರಶ್ನೆ ಚರ್ಚೆಗೂ ಬರುವುದಿಲ್ಲ!. ಯಾರು ಗೆಲ್ಲುವಂತವರು, ಅನುಕಂಪದ ಮತ ಬರುವಲ್ಲಿಗೆ ಮಾತ್ರ ಮಹಿಳೆಯರಿಗೆ ಒಂದು ಟಿಕೆಟ್ ನೀಡುತ್ತಾರೆ. ಒಂದು ರೀತಿಯ ಭಿಕ್ಷೆಯ ರೀತಿ ಟಿಕೆಟ್ ಕೊಡುತ್ತಾರೆ ಬಿಟ್ಟರೆ ಸಮಾನ ಅವಕಾಶ ಅಂತಾ ಯಾವ ಮಹಿಳೆಯರಿಗೂ ಟಿಕೆಟ್ ನೀಡುವುದಿಲ್ಲ. ಇವೆಲ್ಲವೂ ರಾಜಕೀಯ ಪ್ರಣಾಳಿಕೆಗಳ ಸೋಲು.  

ಹೆಣ್ಣು ಮಕ್ಕಳ ಸಮಗ್ರ ಅಭಿವೃದ್ಧಿ, ಸ್ವಾವಲಂಬನೆ, ಸ್ವಾಯತ್ತತೆ ಮತ್ತು ಶಿಕ್ಷಣ ಒದಗಿಸುವ ಯೋಜನೆಗಳನ್ನ ಜಾರಿಗೊಳಿಸಬೇಕು ಬದಲಾಗಿ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಸಾಲ ಸೌಲಭ್ಯ ಅಂತಾ ಯೋಜನೆಗಳನ್ನು ಘೋಷಿಸುತ್ತಾರೆ. ಇವು ಮಾರ್ಕೆಟಿಂಗ್ ತಿಳಿಯದ ಮಹಿಳೆಯರಿಗೆ ಸಮಸ್ಯೆಗಳಾಗಿ ಪರಿಣಮಿಸುವುದೇ ಹೆಚ್ಚು. ಇದಕ್ಕೆ ಬೇಕಾದ ಜ್ಞಾನವನ್ನು ಅವರಿಗೆ ನೀಡುವುದಿಲ್ಲ. ಮಹಿಳೆಯರಿಗೆ ಸ್ವಾಯತ್ತವಾಗಿ ಕಾರ್ಯನಿರ್ವಹಿಸುವ ಯೋಜನೆಗಳನ್ನು ಘೋಷಿಸಬೇಕು. ನುರಿತ ಕೆಲಸಗಾರರಿಂದ ಅವರಿಗೆ ಆ ಬಗ್ಗೆ ತಿಳಿಸಿಕೊಡುವ ಕೆಲಸಗಳಾಗಬೇಕು. ಸರ್ಕಾರವೇ ಮುಂದು ನಿಂತು ಪ್ರತೀ ಲೋಕಲ್ ಘಟಕಗಳಲ್ಲಿ ಉದ್ದಿಮೆಗಳನ್ನ ಆರಂಭಿಸಬೇಕು. ಕೃಷಿ ಉತ್ಪನ್ನಗಳನ್ನ ತಯಾರಿಸಿ ಸರ್ಕಾರವೇ ಮಾರಾಟ ಮಾಡಬೇಕು ಈ ಕಾರ್ಯಕ್ಕೆ ಮಹಿಳೆಯರನ್ನ ಒಳಗೊಂಡು ಕಾರ್ಯನಿರ್ವಹಿಸಿದರೆ ಅವರು ಆರ್ಥಿಕವಾಗಿ ಗಟ್ಟಿಯಾಗುತ್ತಾರೆ. ಸರ್ಕಾರಕ್ಕೂ ಇದರಿಂದ ಲಾಭವಾಗುತ್ತದೆ. ಇಂತಹ ಯೋಜನೆಗಳ ಬಗ್ಗೆ ಯಾವ ಪಕ್ಷಗಳು ಗಮನ ಹರಿಸಿಲ್ಲ ಎಂದು ವಿವರಿಸಿದ್ದಾರೆ. 

ಒಟ್ಟಿನಲ್ಲಿ ಚುನಾವಣೆಯಲ್ಲಿ ನಿರ್ಣಾಯಕವಾಗುವ ಮಹಿಳಾ ಮತ ಸೆಳೆಯಲು ಹಲವು ಯೋಜನೆಗಳನ್ನು ಘೋಷಿಸುವ ರಾಜಕೀಯ ಪಕ್ಷಗಳು ರಾಜಕೀಯದಲ್ಲಿ ಮಹಿಳಾ ಸಮಾನತೆಯನ್ನು ವಿರೋಧಿಸುತ್ತವೆ. ಚುನಾವಣೆ ತಂತ್ರವಾಗಿ ಬಳಕೆಯಾಗುವ ಅವರ ಮಹಿಳಾಪರ ಯೋಜನೆಗಳು ಹೆಣ್ಣು ಮಕ್ಕಳ ಶಿಕ್ಷಣ, ಸಮಗ್ರ ಅಭಿವೃದ್ಧಿಗೆ ಗಮನ ನೀಡುವುದು ಕಡಿಮೆ ಎಂಬುದಕ್ಕೆ ಈ ಬಾರಿಯ ಚುನಾವಣಾ ಪ್ರಣಾಳಿಕೆಗಳೇ ಸಾಕ್ಷಿ.

Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಮಕ್ಕಳ ಪಾಲನೆ ಪೂರ್ಣಾವಧಿ ಕೆಲಸ’ – ಪತ್ನಿಗೆ ಪತಿ ಹಣ ನೀಡಬೇಕು: ಹೈಕೋರ್ಟ್‌ ಆದೇಶ

ತನ್ನ ಮಕ್ಕಳನ್ನು ಪಾಲನೆ ಮಾಡುವುದಕ್ಕಾಗಿ ಪತ್ನಿಗೆ ಉಪನ್ಯಾಸಕಿ ಹುದ್ದೆ ತೊರೆಯುವಂತೆ ಮಾಡಿದ್ದ...

ಬಾಂಬ್ ಹೇಗೆ ಮತ್ತು ಎಲ್ಲಿ ತಯಾರಾಗುತ್ತದೆ ? ಪೊಲೀಸ್ ದಾಖಲೆಗಳಲ್ಲಿದೆ ಅಸಲಿ ‘ಸ್ಫೋಟಕ’ ಸತ್ಯ !

ನವೆಂಬರ್ 2017, ಕಣ್ಣೂರಿನ ಕೂತುಪರಂಬ ಎಂಬಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್)...

ಕೋಟಿ ಕೋಟಿ ಲೂಟಿ ಮಾಡಿದ ಸ್ಕ್ಯಾಮರ್‌ಗಳನ್ನು ಮೋದಿ ಸರ್ಕಾರ ಮಟ್ಟ ಹಾಕಿದ್ದು ಹೀಗೆ!

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಲೋಕಸಭೆಯಲ್ಲಿ ಮಾತನಾಡುತ್ತಾ, "ಕಾಂಗ್ರೆಸ್‌ ಮತ್ತು...

ಬಾಬಾ ರಾಮ್‌ದೇವ್‌ಗೂ ಪ್ರಧಾನಿ ಮೋದಿಗೂ ಏನು ಸಂಬಂಧ? ಕೇಂದ್ರ ಸರ್ಕಾರವೇಕೆ ಕಣ್ಮುಚ್ಚಿ ಕೂತಿದೆ?

ಸನಾತನದ ನೆಪದಲ್ಲಿ ದೇಶವನ್ನು ಪುರಾತನ ಕಾಲಕ್ಕೆ ಕೊಂಡೊಯ್ಯುತ್ತಿರುವ ಸಂಘಿಗಳ ಸಾರಥ್ಯದ ಬಿಜೆಪಿಯ...