ಕೊಡಗು | ವಿಶ್ವ ಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷರ ಕಾರಿನ ಮೇಲೆ ಗುಂಡಿನ ದಾಳಿ

Date:

  • ಬುಧವಾರ ತಡರಾತ್ರಿ ಚೆಟ್ಟಳ್ಳಿಯಲ್ಲಿ ನಡೆದ ಗುಂಡಿನ ದಾಳಿ
  • ದಾಳಿ ಆರೋಪಿಗಳ ಪತ್ತೆಗೆ ಮುಂದಾದ ಜಿಲ್ಲಾ ಪೊಲೀಸರು

ವಿಶ್ವ ಹಿಂದೂ ಪರಿಷತ್‌ನ ಕೊಡಗು ಜಿಲ್ಲಾಧ್ಯಕ್ಷರ ಕಾರಿನ ಮೇಲೆ ಗುಂಡಿನ ದಾಳಿ ನಡೆದಿರುವ ಘಟನೆ ಮಡಿಕೇರಿಯಲ್ಲಿ ದಾಖಲಾಗಿದೆ.

ವೃತ್ತಿಯಲ್ಲಿ ವಕೀಲರಾಗಿರುವ ಪಿ.ಕೃಷ್ಣಮೂರ್ತಿ ವಿಶ್ವಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷರಾಗಿದ್ದರು. ಬುಧವಾರ ರಾತ್ರಿ ಕುಶಾಲನಗರದಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ತಮ್ಮ ಮಡಿಕೇರಿ ನಿವಾಸಕ್ಕೆ ಕಾರಿನಲ್ಲಿ ಹಿಂದಿರುಗುತ್ತಿದ್ದ ವೇಳೆ ದಾಳಿ ನಡೆದಿದೆ.

ಚೆಟ್ಟಳ್ಳಿ ಸಮೀಪ ರಾತ್ರಿ 11.30 ಗಂಟೆ ಸುಮಾರಿಗೆ ಚೆಟ್ಟಳ್ಳಿ ಗ್ರಾ.ಪಂ ಸದಸ್ಯ ಹಾಗೂ ವಕೀಲ ಬಲ್ಲಾರಂಡ ಕಂಠಿ ಕಾರ್ಯಪ್ಪ ಅವರನ್ನು ಚೆಟ್ಟಳ್ಳಿಯ ನಿವಾಸಕ್ಕೆ ಬಿಟ್ಟು ಮಡಿಕೇರಿ ಕಡೆಗೆ ಅವರು ಪ್ರಯಾಣ ಬೆಳೆಸಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹೀಗೆ ಸಾಗುತ್ತಿದ್ದ ವಕೀಲ ಕೃಷ್ಣಮೂರ್ತಿ ಅವರ ಕಾರಿನ ಮೇಲೆ ಗಿಡದ ಮರೆಯಲ್ಲಿ ನಿಂತಿದ್ದರೆಂದು ಶಂಕೆ ಮಾಡಲಾದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಸುದ್ದಿ ಓದಿದ್ದೀರಾ?: ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡಿದ ಸ್ಯಾಂಡಲ್‌ವುಡ್‌ ತಾರೆಯರು

ದಾಳಿ ಸಂದರ್ಭದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಕೃಷ್ಣಮೂರ್ತಿ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಇತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

ಚುನಾವಣೆಗೆ ಸಿದ್ದವಾಗುತ್ತಿರುವ ಜಿಲ್ಲೆಯಲ್ಲಿ ಹಿಂದೂ ಸಂಘಟನೆ ಮುಖ್ಯಸ್ಥನ ಮೇಲೆ ನಡೆದಿರುವ ಈ ದಾಳಿ ಸ್ಥಳೀಯರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ. ಹಾಗೆಯೇ ಹಲವು ಅನುಮಾನಗಳಿಗೂ ಆಸ್ಪದ ನೀಡಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ ಚುನಾವಣೆ | ರಾಜ್ಯದಲ್ಲಿ ಒಡೆದ ಮನೆಯಾದ ಬಿಜೆಪಿ; ಕಾಂಗ್ರೆಸ್‌ಗೆ ಅಚ್ಚರಿಯ ಲಾಭ?

ಕಳೆದ ವರ್ಷ ಮೇನಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹೀನಾಯವಾಗಿ...

ಬೆಂಗಳೂರು | ಐಟಿ, ಬಿಟಿ ಕಂಪನಿಗಳಿಗೆ ಸಮರ್ಪಕ ನೀರು ಪೂರೈಕೆಗೆ ಬದ್ಧ: ಜಲಮಂಡಳಿ ಅಧ್ಯಕ್ಷ

“ಬೆಂಗಳೂರಿನ ಇತರೆ ಪ್ರದೇಶಗಳಂತೆಯೇ, ನಗರದ ಹೊರವಲಯದಲ್ಲಿರುವ ಐಟಿ-ಬಿಟಿ ಕಂಪನಿಗಳಿಗೂ ನೀರಿನ ಕೊರತೆಯಾಗದಂತೆ...

ಜೆಡಿಎಸ್‌ ಟಿಕೆಟ್‌ ಫೈನಲ್ | ಮಂಡ್ಯಕ್ಕೆ ಎಚ್‌ಡಿಕೆ, ಹಾಸನಕ್ಕೆ ಪ್ರಜ್ವಲ್‌, ಕೋಲಾರಕ್ಕೆ ಮಲ್ಲೇಶ್‌ ಬಾಬು

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ಗೆ 28...