ಅಭಿ-ಅವಿ ಮದುವೆ | ನೂತನ ವಧು-ವರರಿಗೆ ಆಶೀರ್ವದಿಸಿದ ಗಣ್ಯರು

Date:

  • ಕಳೆದ ವರ್ಷ ಡಿ.11ರಂದು ನಿಶ್ವಿತಾರ್ಥ ಮಾಡಿಕೊಂಡಿದ್ದ ಅವಿ-ಅಭಿ
  • ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದ ಕಲ್ಯಾಣಮಂಟಪದಲ್ಲಿ ಮದುವೆ

ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸಂಸದೆ ಸುಮಲತಾ ಪುತ್ರ ನಟ ಅಭಿಷೇಕ ಅಂಬರೀಶ ಸೋಮವಾರ ಮಾಡೆಲ್ ಅವಿವಾ ಬಿದ್ದಪ್ಪ ಅವರನ್ನು ವರಿಸಿದ್ದಾರೆ.

ಅವಿವಾ ಬಿದ್ದಪ್ಪ ಅವರು ಖ್ಯಾತ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಹಾಗೂ ಜುಡಿತಾ ಬಿದ್ದಪ್ಪ ಪುತ್ರಿ. ಜೂನ್ 5ರಂದು ಒಕ್ಕಲಿಗ ಸಂಪ್ರದಾಯದ ಪ್ರಕಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ವಿವಾಹ ನೆರವೇರಿದೆ.

ಜೂನ್ 5ರ ಬೆಳಗ್ಗೆ 9:30-10:30ರ ನಡುವೆ ಕರ್ಕಾಟಕ ಲಗ್ನ ಮುಹೂರ್ತದಲ್ಲಿ ವಧು-ವರರು ಹಸೆಮಣೆ ಏರಿದ್ದಾರೆ. ಅಭಿಷೇಕ್ ಅವರು ಅವಿವಾಗೆ ಮಾಂಗಲ್ಯ ಧಾರಣೆ ಮಾಡಿದರು. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದ ಕಲ್ಯಾಣಮಂಟಪದಲ್ಲಿ ಮದುವೆ ನೆರವೇರುತ್ತಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮದುವೆಗೆ ಗಣ್ಯರ ಆಗಮನ

ಎರಡು ಕುಟುಂಬಗಳು ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದರಿಂದ ಸ್ಯಾಂಡಲ್‌ವುಡ್ ಮಾತ್ರವಲ್ಲದೇ, ಟಾಲಿವುಡ್ ಕಾಲಿವುಡ್ ಸೇರಿದಂತೆ ಇನ್ನಿತರ ಸಿನಿಮಾ ಇಂಡಸ್ಟ್ರಿಯಿಂದಲೂ ಅನೇಕ ಸೆಲೆಬ್ರಟಿಗಳು ವಿವಾಹ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು, ವಧು-ವರರಿಗೆ ಆಶೀರ್ವದಿಸುತ್ತಿದ್ದಾರೆ.

ಜತೆಗೆ, ಅಂಬರೀಶ ರಾಜಕೀಯ ಹಿನ್ನೆಲೆಯುಳ್ಳವರು ಅವರ ಪತ್ನಿ ಸುಮಲತಾ ಅವರು ಕೂಡಾ ಪ್ರಸ್ತುತ ಸಂಸದೆಯಾಗಿರುವ ಕಾರಣ ಮೋದಿ ಸೇರಿದಂತೆ ಅನೇಕ ರಾಜಕಾರಣಿಗಳಿಗೆ ಮದುವೆಯ ಆಹ್ವಾನ ಪತ್ರಿಕೆ ನೀಡಿದ್ದರು. ಅದರಂತೆ, ರಾಜಕೀಯ ನಾಯಕರು, ಗಣ್ಯರು ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ.

ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್, ಸುಹಾಸಿನಿ ಮಣಿರತ್ನಂ, ಅನಿಲ್ ಕುಂಬ್ಳೆ, ನರೇಶ್-ಪವಿತ್ರಾ ಲೋಕೇಶ್, ರಾಕಿಂಗ್ ಸ್ಟಾರ್ ಯಶ್ ದಂಪತಿ, ಮೋಹನ್ ಬಾಬು, ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ‘ಪೀಪಲ್ಸ್‌ ಮ್ಯಾನ್‌’ ಖ್ಯಾತಿಯ ಇನ್ಸ್‌ಪೆಕ್ಟರ್‌ ಮಂಜುನಾಥ್‌ ನಿಧನ

ಜೂನ್ 7 ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿ ಹಾಲ್‌ನಲ್ಲಿ ಅಭಿಷೇಕ್ ಹಾಗೂ ಅವಿವಾ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಅಂಬರೀಶ್ ಹುಟ್ಟೂರು ಮಂಡ್ಯದಲ್ಲಿ ಜೂನ್ 16 ರಂದು ಬೀಗರ ಔತಣ ಕಾರ್ಯಕ್ರಮ ಇದ್ದು, ಈ ಕಾರ್ಯಕ್ರಮಕ್ಕೆ ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಕಳೆದ ವರ್ಷ ಡಿಸೆಂಬರ್ 11ರಂದು ಈ ಜೋಡಿ ನಿಶ್ವಿತಾರ್ಥ ಮಾಡಿಕೊಂಡಿದ್ದರು. ಆಗಲೂ ಕೂಡಾ ಅನೇಕ ಗಣ್ಯರು ಹಾಜರಾಗಿದ್ದರು.

ಮದುವೆ ಕ್ಷಣದ ಕೆಲವು ಫೋಟೋಗಳು ಇಲ್ಲಿವೆ

ಅಭಿ-ಅವಿ

ಅಭಿ-ಅವಿ

ಅಭಿ-ಅವಿ

ಯಶ್

abhi

abhi

abhi

abhi

ಅಭಿ

abhi

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತಮ ನಡೆ | ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ತರಗತಿ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು (ಡಿಎಸ್‌ಇಎಲ್) 2024-25ರ ಶೈಕ್ಷಣಿಕ ವರ್ಷದಿಂದ...

ಬೆಂಗಳೂರು | ಜೂನ್ 1ರಿಂದ ಬಿಎಂಟಿಸಿ ವಿದ್ಯಾರ್ಥಿ ಬಸ್ ಪಾಸ್ ವಿತರಣೆ

ಸರ್ಕಾರದ ನಿರ್ದೇಶನದಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಉಚಿತ ಮತ್ತು...

ಯುವತಿಯರ ಫೋಟೋ ಮಾರ್ಫ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಅಪ್ರಾಪ್ತರು ಸೇರಿ ಮೂವರ ಬಂಧನ

ಸಾಮಾಜಿಕ ಜಾಲತಾಣದಲ್ಲಿ ಯುವತಿಯರ ಮಾರ್ಫ್‌ ಮಾಡಿದ ಫೋಟೋಗಳನ್ನು ಹರಿಬಿಡುತ್ತಿದ್ದ ಇಬ್ಬರು ಅಪ್ರಾಪ್ತರು...

ಮೇ 31ರವರೆಗೆ ಬೆಂಗಳೂರಿಗೆ ಬರುವ ಕೆಲವು ರೈಲುಗಳು ರದ್ದು; ವಿವರ ಇಲ್ಲಿದೆ!

ಬೈಯಪ್ಪನಹಳ್ಳಿ ವೆಸ್ಟ್ ಕ್ಯಾಬಿನ್ ಮತ್ತು ಬೈಯಪ್ಪನಹಳ್ಳಿ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣಗಳ...