ಸುದೀಪ್, ಪ್ರಶ್ನೆ ಎದುರಿಸಲು ಸಜ್ಜಾಗಿ ಎಂದ ಪ್ರಕಾಶ್ ರಾಜ್

Date:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಸುದೀಪ್ ಪ್ರಚಾರ

- Advertisement -

ಸರಣಿ ಟ್ವೀಟ್ ಮಾಡಿ ವಿರೋಧ ವ್ಯಕ್ತಪಡಿಸಿದ ಬಹುಭಾಷಾ ನಟ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಪಾನ್ ಅಂಗಳದಲ್ಲಿ ಮಿನುಗಿದ ಭಾರತದ ‘ಚಿನ್ನ’ದ ನಾರಿಯರು: ಕಷ್ಟಗಳನ್ನು...

ಜಪಾನ್‌ನ ಐಚಿ ಪ್ರಾಂತ್ಯದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಭಾರತೀಯ ಮಹಿಳಾ ಕ್ರೀಡಾಪಟುಗಳ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದೆ. ಬಡತನ, ಗಾಯದ ನೋವು ಹಾಗೂ ಸಮಾಜದ ಕಟ್ಟುಪಾಡುಗಳನ್ನು ಮೆಟ್ಟಿ ನಿಂತು 14 ಚಿನ್ನದ...

ವ್ಯವಸ್ಥೆಯ ವೈಫಲ್ಯಕ್ಕೆ 32 ಬೈಗಾ ಕಂದಮ್ಮಗಳ ಬಲಿ: ಬುಡಕಟ್ಟು...

ಕೇಂದ್ರ, ರಾಜ್ಯ ಸರ್ಕಾರಗಳು ಇಂತಹ ಅಳಿದುಳಿಯುತ್ತಿರುವ ಬುಡಕಟ್ಟು ಸಮುದಾಯದ ಕಡೆಗೆ ತಮ್ಮ ಮತ ಬಾಚುವ ಕಣ್ಣು ಮುಚ್ಚಿ ತನ್ಮ ಕರ್ತವ್ಯದ ಕಣ್ಣು ತೆರೆದು ನೋಡುವುದು ಅಗತ್ಯ. ಬೈಗಾ ಸಮುದಾಯದಂತಹ ಅಪರೂಪದ ಬುಡಕಟ್ಟು ಸಂತತಿಯನ್ನು...

ಆದಿವಾಸಿ ಕಲಾವಿದನ ನಿಧನದ 25 ವರ್ಷಗಳ ನಂತರ ₹18...

ಈ ಚಿತ್ರಕಲಾಕೃತಿಯಲ್ಲಿ ಚಿತ್ರಿತವಾಗಿರುವ ನಾಗ, ಭೂಮಿತಾಯಿಯ ಪ್ರತೀಕ. ನಾಗನ ಮೇಲೆ ನಿಂತಿರುವ ವಿಶಾಲ ವೃಕ್ಷ, ಪ್ರಕೃತಿ ಮತ್ತು ಬದುಕಿನ ಸಂಬಂಧದ ಪ್ರತಿಫಲನ. ಗೊಂಡ್ ಆದಿವಾಸಿ ಕಲಾವಿದನ ಚಿತ್ರ ಕಲಾಕೃತಿಯೊಂದು ಆತನ ಮರಣದ 25...

ನಟ‌ ಸುದೀಪ್ ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೆಂಬಲಿಸುತ್ತಿರುವುದಕ್ಕೆ ಬಹುಭಾಷಾ ನಟ ಪ್ರಕಾಶ್ ರಾಜ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸುದೀಪ್ ನಡೆಯ ಬಗ್ಗೆ ಸರಣಿ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿರುವ ಪ್ರಕಾಶ್ ರಾಜ್, “ಸುದೀಪ್ ಒಬ್ಬ ಮೇರು ಕಲಾವಿದನಾಗಿ ಸಮಾಜದ ಎಲ್ಲ ವರ್ಗದ ಪ್ರೀತಿಯಿಂದ ಬೆಳೆದ ನೀವು ಜನ ಸಾಮಾನ್ಯನ ದನಿಯಾಗುವಿರಿ ಎಂದು ಆಶಿಸಿದ್ದೆ. ಆದರೆ, ತಾವು ಒಂದು ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಲ್ಲ. ಇನ್ನು ಮುಂದೆ ನಿಮ್ಮನ್ನು, ನಿಮ್ಮ ಪಕ್ಷವನ್ನು ಪ್ರಶ್ನಿಸುವ ಜನ ದನಿಗೆ ತಯಾರಾಗಿರಿ” ಎಂದಿದ್ದಾರೆ.

ಬೊಮ್ಮಾಯಿ ಮಾಮ ನಾನು ಕಷ್ಟದಲ್ಲಿದ್ದಾಗ ನೆರವಾಗಿದ್ದರು. ಆ ಋಣ ತೀರಿಸಲು ಅವರ ಪರ ಪ್ರಚಾರ ಮಾಡತ್ತಿದ್ದೇನೆ ಎನ್ನುವ ಸುದೀಪ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಕಾಶ್ ರಾಜ್,”ನೋಡ್ರಪ್ಪ ನಿಮ್ಮ ಮಾಮನೊ, ಅತ್ತೆಯೊ ನಿಮ್ಮ ಕಷ್ಟಕಾಲದಲ್ಲಿ ಸಹಾಯ ಮಾಡಿದ್ದರೆ, ನೀವು ದುಡಿದಿದ್ದರಲ್ಲಿ 10%, 20% ಇಲ್ಲ 30% ಕೊಡಿ, ಅದು ನಿಮ್ಮಿಷ್ಟ. ಆದರೆ, ಪ್ರಜೆಗಳ 30% ಕೊಳ್ಳೆ ಹೊಡೆಯೋಕೆ ಬಿಡಬೇಡಿ” ವ್ಯಂಗ್ಯವಾಡಿದ್ದಾರೆ.

ಜೊತೆಗೆ ಬಸವರಾಜ ಬೊಮ್ಮಾಯಿ ಮತ್ತು ಸುದೀಪ್ ಕುರಿತ ವ್ಯಂಗ್ಯಚಿತ್ರವನ್ನು ಹಂಚಿಕೊಂಡಿರುವ ಅವರು, “ನೀವು ಈಗ ಹೊರಲೇಬೇಕಾದ ಬೇರೆ ಬಣ್ಣದ ಲೋಕದ ಭಾರ” ಎಂದು ಸುದೀಪ್ ಅವರನ್ನು ಟ್ಬೀಟ್‌‌ನಲ್ಲೇ ತಿವಿದಿದ್ದಾರೆ.

ಈ ಹಿಂದೆ ಸುದೀಪ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡಿದ್ದಾಗ ಪ್ರತಿಕ್ರಿಯಿಸಿದ್ದ ಪ್ರಕಾಶ್ ರಾಜ್, “ಕರ್ನಾಟಕದಲ್ಲಿ ಸೋಲುವ ಭಯದಲ್ಲಿ ಭ್ರಷ್ಟ ಬಿಜೆಪಿ ಹರಡುತ್ತಿರುವ ಸುಳ್ಳು ಸುದ್ದಿ ಎಂದು ನಾನು ನಂಬುತ್ತೇನೆ. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ” ಎಂದಿದ್ದರು.

971ebeff7523e71323fef3c7b5b2eb494a70a04dcd51867b0c522de0b1aa64b7?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೇಣುಕಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿ ವಿಚಾರಣೆಗೆ ದರ್ಶನ್‌ ಪರ ವಕೀಲರ ಆಕ್ಷೇಪ

ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ, 'ಮಾಫಿ ಸಾಕ್ಷಿ'ಯ...

ಪುರುಷರಿಗೂ ‘ಪೀರಿಯಡ್ಸ್’ ಬರಬೇಕು; ಗಂಡಸರಿಗೆ ‘ಮುಟ್ಟಾಗಿದ್ದರೆ’ ಕೆಲಸದ ನಿಯಮಗಳೇ ಬದಲಾಗುತ್ತಿದ್ದವು: ನಟಿ ಶೃತಿ ಹಾಸನ್

ಪುರುಷರಿಗೂ ಪೀರಿಯಡ್ಸ್ ಬರುವಂತಾಗಿದ್ದರೆ ಪರಿಸ್ಥಿತಿ ತೀರಾ ಭಿನ್ನವಾಗಿರುತ್ತಿತ್ತು. ಉದ್ಯೋಗ ಒಪ್ಪಂದಗಳಲ್ಲಿ 'ಋತುಚಕ್ರದ...

ಆಸ್ಕರ್ 2026: ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ ವಿಭಾಗಕ್ಕೆ ಮರಾಠಿಯ ‘ಗೋಂಧಳ್’ ಆಯ್ಕೆ

2026ರಲ್ಲಿ ನಡೆಯಲಿರುವ 99ನೇ ಸಾಲಿನ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿಯ (ಆಸ್ಕರ್) 'ಅತ್ಯುತ್ತಮ...