ತೆರೆಕಂಡ 7 ದಿನಕ್ಕೆ ₹100 ಕೋಟಿ ಗಳಿಸಿದ ʼದಸರಾʼ

Date:

ಚೊಚ್ಚಲ ಚಿತ್ರದಲ್ಲೇ ದಾಖಲೆ ಸೃಷ್ಟಿಸಿದ ನಿರ್ದೇಶಕ ಶ್ರೀಕಾಂತ್‌ ಒಡೆಲಾ

ನಿರ್ದೇಶಕರಿಗೆ ದುಬಾರಿ ಕಾರು ಉಡುಗೊರೆ ನೀಡಿದ ನಿರ್ಮಾಪಕ ಸುಧಾಕರ್‌

ತೆಲುಗಿನ ಖ್ಯಾತ ನಟ ನಾನಿ ಅಭಿನಯದ ದಸರಾ ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ತೆರೆಕಂಡ ಒಂದು ವಾರಕ್ಕೆ ಬರೋಬ್ಬರಿ ₹100 ಕೋಟಿ ಗಳಿಸಿದೆ.

ಸಿನಿಮಾ 100 ಕೋಟಿ ಕ್ಲಬ್‌ ಸೇರುತ್ತಲೇ ತಮ್ಮ ಟ್ವಿಟರ್‌ ಖಾತೆಯಲ್ಲಿ ವಿಶೇಷ ಪೋಸ್ಟರ್‌ ಹಂಚಿಕೊಂಡು ಸಂತಸ ವ್ಯಕ್ತಪಡಿಸಿರುವ ನಾನಿ, “ನಮ್ಮ ಶ್ರಮಕ್ಕೆ ತಕ್ಕನಾದ ಉಡುಗೊರೆಯನ್ನು ನೀವು ನೀಡಿದ್ದೀರಿ. ದಸರಾ ಭರ್ಜರಿ ಯಶಸ್ಸು ಕಂಡಿದೆ” ಎಂದು ಬರೆದುಕೊಂಡಿದ್ದಾರೆ.

ದಸರಾ ಯಶಸ್ಸನ್ನು ಸಂಭ್ರಮಿಸಿರುವ ನಿರ್ಮಾಪಕ ಸುಧಾಕರ್‌ ಚೆರುಕುರಿ, ಚಿತ್ರದ ನಿರ್ದೇಶಕ ಶ್ರೀಕಾಂತ್‌ ಒಡೆಲಾ ಅವರಿಗೆ ದುಬಾರಿ ಬೆಲೆಯ ʼಬಿಎಂಡಬ್ಲ್ಯೂʼ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಜೊತೆಗೆ ಚಿತ್ರದ ತಾಂತ್ರಿಕ ವರ್ಗ ಮತ್ತು ಕಲಾವಿದರಿಗೆ ತಲಾ 10 ಗ್ರಾಂ ಚಿನ್ನದ ನಾಣ್ಯಗಳನ್ನು ನೀಡಿದ್ದಾರೆ.

ಯುವ ನಿರ್ದೇಶಕ ಶ್ರೀಕಾಂತ್‌ ಒಡೆಲಾ ತಮ್ಮ ಚೊಚ್ಚಲ ಚಿತ್ರದಲ್ಲೇ ಭಾರೀ ಯಶಸ್ಸು ಗಳಿಸುವ ಮೂಲಕ ರಾಜಮೌಳಿ, ಪ್ರಭಾಸ್‌, ಮಹೇಶ್‌ ಬಾಬು ಹೀಗೆ ತೆಲುಗಿನ ಖ್ಯಾತನಾಮರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಾನಿ ಸಿನಿ ಬದುಕಿನಲ್ಲೂ ʼದಸರಾʼ ಸಿನಿಮಾ ಮಹತ್ವದ ತಿರುವು ನೀಡಿದೆ.

ಈ ಸುದ್ದಿ ಓದಿದ್ದೀರಾ? ʼಸಲಾರ್‌ʼ ಬಿಡುಗಡೆ ದಿನಾಂಕ ಘೋಷಿಸಿದ ಚಿತ್ರತಂಡ

ಮಾಸ್‌, ಆ್ಯಕ್ಷನ್ ಕಥಾಹಂದರವುಳ್ಳ ಈ ಚಿತ್ರದಲ್ಲಿ ಖ್ಯಾತ ನಟಿ ಕೀರ್ತಿ ಸುರೇಶ್‌ ನಾಯಕಿಯ ಪಾತ್ರದಲ್ಲಿ ಮಿಂಚಿದ್ದಾರೆ. ʼದಿಯಾʼ ಖ್ಯಾತಿಯ ನಟ, ಕನ್ನಡಿಗ ದೀಕ್ಷಿತ್‌ ಶೆಟ್ಟಿ, ಸಾಯಿ ಕುಮಾರ್‌, ಸಮುದ್ರ ಖಣಿ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಸಂತೋಷ್‌ ನಾರಾಯಣನ್‌ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಬೆಂಗಳೂರು ಕಂಬಳ’ಕ್ಕೆ ಚಾಲನೆ ನೀಡಲಿದ್ದಾರೆ ಅಶ್ವಿನಿ ಪುನೀತ್​ ರಾಜ್‌ಕುಮಾರ್

ಇತಿಹಾಸದಲ್ಲಿ ಮೊದಲ ಬಾರಿಗೆ ನಡೆಯಲಿರುವ 'ಬೆಂಗಳೂರು ಕಂಬಳ'ಕ್ಕೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್...

ಕಾರಿನೊಳಗೆ ಶವವಾಗಿ ಪತ್ತೆಯಾದ ಮಲಯಾಳಂ ನಟ ವಿನೋದ್ ಥಾಮಸ್

ಮಲಯಾಳಂ ನಟ ವಿನೋದ್ ಥಾಮಸ್ ಕೇರಳದ ಕೊಟ್ಟಾಯಂನ ಪಂಪಾಡಿ ಬಳಿಯ ಹೋಟೆಲ್‌ನಲ್ಲಿ...

ತೆಲಂಗಾಣ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ ವಿಜಯಶಾಂತಿ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

ಬಹುಭಾಷಾ ನಟಿ ಹಾಗೂ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ವಿಜಯಶಾಂತಿ ಅವರು...

ಮೊದಲು ಹೊಡೆದು ನಂತರ ಕ್ಷಮೆ ಕೇಳಿದ ನಟ ನಾನಾ ಪಾಟೇಕರ್: ವಿಡಿಯೋ ವೈರಲ್

ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಬಾಲಿವುಡ್ ಹಿರಿಯ ನಟ-ನಿರ್ದೇಶಕ ನಾನಾ ಪಾಟೇಕರ್ ಇದೀಗ...