ʼ19.20.21ʼ ಸಿನಿಮಾ ಡಿಜಿಟಲ್‌ ಹಕ್ಕು ಖರೀದಿ ನಿರಾಕರಿಸಿದ ʼಅಮೆಜಾನ್‌ ಪ್ರೈಂʼ, ʼನೆಟ್‌ಫ್ಲಿಕ್ಸ್‌ʼ

Date:

  • ಟ್ವಿಟರ್‌ನಲ್ಲಿ ಅಳಲು ತೋಡಿಕೊಂಡ ಮಂಸೋರೆ
  • ನಿರ್ದೇಶಕನ ಬೆಂಬಲಕ್ಕೆ ನಿಂತ ಕನ್ನಡಿಗರು

ಕನ್ನಡದ ಖ್ಯಾತ ನಿರ್ದೇಶಕ, ರಾಷ್ಟ್ರಪ್ರಶಸ್ತಿ ವಿಜೇತ ಮಂಸೋರೆ ನಿರ್ದೇಶನದಲ್ಲಿ ಮೂಡಿಬಂದಿದ್ದ ನೈಜ ಘಟನೆ ಆಧಾರಿತ ʼ19.20.21ʼ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಗಳಿಸಿದ್ದ ಈ ಸಿನಿಮಾದ ಡಿಜಿಟಲ್‌ ಹಕ್ಕನ್ನು ಖರೀದಿಸಲು ಯಾವುದೇ ಒಟಿಟಿ ಸಂಸ್ಥೆಗಳು ಮುಂದೆ ಬರುತ್ತಿಲ್ಲ ಎಂದು ಮಂಸೋರೆ ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಮಂಸೋರೆ, “ಒಟಿಟಿಯಲ್ಲಿ ನಮ್ಮ ಸಿನಿಮಾ ಬಿಡುಗಡೆ ಯಾವಾಗ ಎಂದು ಕೇಳುತ್ತಿರುವ ಸ್ನೇಹಿತರ ಗಮನಕ್ಕೆ, ʼಅಮೆಜಾನ್‌ ಪ್ರೈಂʼನವರಿಗೆ ನೈಜ ಕಥೆಯನ್ನಾಧರಿಸಿದ ನಮ್ಮ ಕನ್ನಡ ಸಿನಿಮಾ ಬೇಡವಂತೆ. ʼನೆಟ್‌ಫ್ಲಿಕ್ಸ್‌ʼನವರು ಕನ್ನಡ ಸಿನಿಮಾ ತೆಗೆದುಕೊಳ್ಳುವುದಿಲ್ಲವಂತೆ. ನಮ್ಮ ಸಿನಿಮಾವನ್ನು ಒಮ್ಮೆಯೂ ನೋಡದೆ ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಸೋರೆ ಟ್ವಿಟರ್‌ನಲ್ಲಿ ತಮ್ಮ ಚಿತ್ರ ಎದುರಿಸುತ್ತಿರುವ ಸಮಸ್ಯೆಯನ್ನು ಬಹಿರಂಗ ಪಡಿಸುತ್ತಲೇ ಅವರ ಬೆಂಬಲಕ್ಕೆ ನಿಂತ ನೆಟ್ಟಿಗರು, “ʼನಾತಿಚರಾಮಿʼ ಮತ್ತು ʼಆ್ಯಕ್ಟ್‌ 1978ʼ ಚಿತ್ರಗಳ ಡಿಜಿಟಲ್‌ ಹಕ್ಕನ್ನು ಖರೀದಿಸಿ ಪ್ರಸಾರ ಮಾಡಿದ್ದ ಒಟಿಟಿ ಸಂಸ್ಥೆಗಳಿಗೆ ಅದೇ ಚಿತ್ರಗಳ ನಿರ್ದೇಶಕನ ʼ19.20.21ʼ ಸಿನಿಮಾ ಖರೀದಿಸಲು ಏನು ತೊಂದರೆ” ಎಂದು ಪ್ರಶ್ನಿಸುತ್ತಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ʼ19.20.21ʼ ಚಿತ್ರವನ್ನು ನಿರಾಕರಿಸಿದ ಒಟಿಟಿ ಸಂಸ್ಥೆಗಳ ನಡೆಯನ್ನು ಖಂಡಿಸಿರುವ ಟ್ವಿಟರ್‌ ಬಳಕೆದಾರರೊಬ್ಬರು “ಅಮೇಜಾನ್ ಪ್ರೈಮ್ ಆಗಲಿ, ನೆಟ್‌ಫ್ಲಿಕ್ಸ್‌ ಆಗಲಿ, ಥ್ರಿಲ್ಲರ್, ಕ್ರೈಮ್ ಕತೆಗಳನ್ನು ರೋಚಕವಾಗಿ ಹೇಳಲು ನೈಜ ಘಟನೆಗಳು ಬೇಕು. ಆದರೆ ಕನ್ನಡದ ಸಿನಿಮಾಗಳನ್ನು ರಿಯಲಿಸ್ಟಿಕ್‌ ಆಗಿ ಮಾಡಿದ್ರೆ ಬೇಡವಂತೆ. ಯಾಕೆ? ಕನ್ನಡ ಚಿತ್ರರಂಗದ ತಾರೆಯರು ಇದನ್ನು ಯಾಕೆ ಕೇಳುವುದಿಲ್ಲ? ವಿದೇಶಗಳಲ್ಲಿರುವ ಕನ್ನಡಿಗರಿಗೆ ಕನ್ನಡ ಚಿತ್ರಗಳನ್ನು ನೋಡಲು ಒಟಿಟಿಗಿಂತ ಉತ್ತಮ ವೇದಿಕೆ ಇಲ್ಲ. ಇದು ಕನ್ನಡ ಚಿತ್ರರಂಗದ ಹಿರಿಯರಿಗೆ ಯಾಕೆ ಅರ್ಥವಾಗುವುದಿಲ್ಲ. ಅರ್ಥವಾಗಿದ್ದರೆ, ಕನ್ನಡದ ಚಿತ್ರಗಳನ್ನು ಒಟಿಟಿಗೆ ʼಪುಷ್ʼ ಮಾಡುವುದಕ್ಕೆ ಯಾಕೆ ಯೋಚಿಸುವುದಿಲ್ಲ?” ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮಹಿಳಾ ಕುಸ್ತಿಪಟುಗಳು ರಸ್ತೆಗಿಳಿಯಲು ಮೋದಿ ಕಾರಣ : ಕಿಶೋರ್‌ ಕುಮಾರ್‌

ಇನ್ನು ಕೆಲವರು ಮಂಸೋರೆ ಅವರ ಸಿನಿಮಾದ ಡಿಜಿಟಲ್‌ ಹಕ್ಕನ್ನು ಖರೀದಿಸದಿದ್ದರೆ ಅಮೆಜಾನ್‌ ಪ್ರೈಂ ಮತ್ತು ನೆಟ್‌ಫ್ಲಿಕ್ಸ್‌ ಚಂದಾದಾರಿಕೆಯನ್ನು ನಿಲ್ಲಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಆದರೆ, ಈವರೆಗೆ ಎರಡೂ ಒಟಿಟಿ ಸಂಸ್ಥೆಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬೇರೆ ಭಾಷೆಗೆ ಹೋಲಿಸಿಕೊಂಡರೆ ಕನ್ನಡ ಸಿನಿಮಾಗಳನ್ನು ಹೆಚ್ಚಾಗಿ ಪ್ರಸಾರ ಮಾಡದ ನೆಟ್‌ಫ್ಲಿಕ್ಸ್‌ ಮೇಲೆ ಕ್ರಮ ಕೈಗೊಳ್ಳುವಂತೆಯೂ ಕೆಲವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒತ್ತಾಯಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೆಣ್ಣುಮಕ್ಕಳ ಬಗ್ಗೆ ನಾಲಿಗೆ ಹರಿಬಿಟ್ಟ ಎಚ್‌ಡಿಕೆ ‘ದಾರಿತಪ್ಪಿದ ಮಗ’: ಪ್ರಕಾಶ್ ರಾಜ್

ನಾಡಿನ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹಗುರ ಮತ್ತು ಅವಹೇಳನಕಾರಿಯಾಗಿ ಮಾತನಾಡಿರುವ...

ಖ್ಯಾತ ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್​ ಆತ್ಮಹತ್ಯೆ!

ಬೆಂಗಳೂರಿನ ಜೆಟ್​ಲಾಗ್​ ಪಬ್ ಮಾಲೀಕ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ...

‘RCB ಸೋಲಿಗೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಕಾರಣ’ ಎಂದು ಅವಹೇಳನಕಾರಿ ಟ್ವೀಟ್: ಕಮಿಷನರ್‌ಗೆ ದೂರು

ಕನ್ನಡ ಚಿತ್ರರಂಗದ ನಟ, ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ...