‘ಚೆನ್ನೈ ಎಕ್ಸ್‌ಪ್ರೆಸ್‌’ ನೆನಪಿಸುವ ʼಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ʼ ಟ್ರೈಲರ್‌

Date:

ಆ್ಯಕ್ಷನ್‌‌ ಹೀರೋ ಪಾತ್ರದಲ್ಲಿ ಮಿಂಚಿದ ಸಲ್ಮಾನ್ ಖಾನ್

ʼಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ʼ ಸಿನಿಮಾ ಏಪ್ರಿಲ್ 21ಕ್ಕೆ ತೆರೆಗೆ

ಬಾಲಿವುಡ್‌ನ ಸ್ಟಾರ್‌ ನಟ ಸಲ್ಮಾನ್‌ ಖಾನ್‌ ಅಭಿನಯದ ʼಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ʼ ಸಿನಿಮಾದ ಬಹುನಿರೀಕ್ಷಿತ ಟ್ರೈಲರ್‌ ಸೋಮವಾರ ಬಿಡುಗಡೆಯಾಗಿದ್ದು, ಎಂದಿನಂತೆ ಆ್ಯಕ್ಷನ್ ಹೀರೋ ಪಾತ್ರದಲ್ಲಿ ಸಲ್ಮಾನ್‌ ಖಾನ್‌ ಗಮನ ಸೆಳೆಯುತ್ತಿದ್ದಾರೆ. ಈ ಚಿತ್ರದ ಟ್ರೈಲರ್‌ ಶಾರುಖ್‌ ಖಾನ್‌ ಮುಖ್ಯಭೂಮಿಕೆಯಲ್ಲಿ ತೆರೆಕಂಡಿದ್ದ ʼಚೆನ್ನೈ ಎಕ್ಸ್‌ಪ್ರೆಸ್‌ʼ ಚಿತ್ರವನ್ನು ನೆನಪಿಸುವಂತಿವೆ.

ಪ್ರೇಮ ಕಥೆ ಮತ್ತು ಕೌಟುಂಬಿಕ ಕಥಾಹಂದರದ ಸುತ್ತ ಚಿತ್ರದ ಕಥೆ ಮೂಡಿ ಬಂದಿದೆ ಎಂಬುದನ್ನು ಎರಡು ನಿಮಿಷಗಳ ಟ್ರೈಲರ್‌ನಲ್ಲಿ ಸೂಚ್ಯವಾಗಿ ತೋರಿಸಲಾಗಿದೆ. ವೈರಿಗಳಿಂದ ನಾಯಕಿಯ ಕುಟುಂಬವನ್ನು ರಕ್ಷಿಸಲು ಹೋರಾಡುವ ಭಾಯ್‌ಜಾನ್‌ ಆಗಿ ಸಲ್ಮಾನ್‌ ಖಾನ್‌ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ನಲ್ಲಿ ಕಂಡುಬರುವ ಆ್ಯಕ್ಷನ್ ದೃಶ್ಯಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿವೆ.

2013ರಲ್ಲಿ ಶಾರುಖ್‌ ಖಾನ್‌ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ತೆರೆಗೆ ಬಂದಿದ್ದ ʼಚೆನ್ನೈ ಎಕ್ಸ್‌ಪ್ರೆಸ್‌ʼ ಚಿತ್ರದಲ್ಲಿ ತಮಿಳುನಾಡಿನ ಸಂಪ್ರದಾಯ, ಆಚರಣೆಗಳನ್ನು ಒಳಗೊಂಡಿತ್ತು. ಅದೇ ರೀತಿ ʼಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ʼ ಚಿತ್ರದಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣದ ಸಂಪ್ರದಾಯ, ಆಚರಣೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಅಷ್ಟು ಮಾತ್ರವಲ್ಲ, ಸಲ್ಮಾನ್‌ ಹೊರತು ಪಡಿಸಿ, ಟ್ರೈಲರ್‌ನಲ್ಲಿ ಕಾಣಸಿಗುವ ಬಹುತೇಕ ಕಲಾವಿದರು ದಕ್ಷಿಣ ಸಿನಿರಂಗದವರು ಎಂಬುದು ಗಮನಾರ್ಹ. ಕನ್ನಡತಿ ಪೂಜಾ ಹೆಗ್ಡೆ ನಾಯಕಿಯ ಪಾತ್ರದಲ್ಲಿ ಮಿಂಚಿದ್ದು, ವಿಕ್ಟರಿ ವೆಂಕಟೇಶ್‌, ಜಗಪತಿ ಬಾಬು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಫರ್ಹಾದ್‌ ಸಮ್ಜಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಸಲ್ಮಾನ್‌ ಖಾನ್‌ ಅವರ ತಾಯಿ ಸಲ್ಮಾ ಖಾನ್‌ ಬಂಡವಾಳ ಹೂಡಿದ್ದಾರೆ. ಕನ್ನಡಿಗ, ‘ಕೆಜಿಎಫ್‌’ ಖ್ಯಾತಿಯ ರವಿ ಬಸ್ರೂರ್‌ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಇದೇ ಏಪ್ರಿಲ್ 21ರಂದು ಚಿತ್ರ ತೆರೆಗೆ ಬರಲಿದೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಿಜಾಬು ಮತ್ತು ಕುಸ್ತಿ ಅಖಾಡದಲ್ಲಿ ಮನುವಾದಿ ಮಸಲತ್ತು

ಲೈಂಗಿಕ ದೌರ್ಜನ್ಯದ ವಿರುದ್ಧ ಕುಸ್ತಿಪಟುಗಳ ಹೋರಾಟ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿ...

ಲೋಕಸಭಾ ಚುನಾವಣೆ ಸಮೀಪಿಸುತ್ತಲೇ ತೆರೆಗೆ ಸಜ್ಜಾಗುತ್ತಿವೆ ಸಾವರ್ಕರ್‌ ಜೀವನಾಧಾರಿತ ಚಿತ್ರಗಳು

ಸಾವರ್ಕರ್‌ ಜೀವನಾಧಾರಿತ ಚಿತ್ರಕ್ಕೆ ನಟ ರಾಮ್‌ ಚರಣ್‌ ಬಂಡವಾಳ ಚುನಾವಣೆ ಹೊತ್ತಲೇ ತೆರೆಗೆ...

ರಾಷ್ಟ್ರಪತಿಗಳು ಏಕೆ ಸಂಸತ್ ಭವನ ಉದ್ಘಾಟಿಸಬಾರದು: ನಟ ಕಮಲ್‌ ಹಾಸನ್‌ ಪ್ರಶ್ನೆ

"ದೇಶದ ಹೆಮ್ಮೆಯ ಈ ಕ್ಷಣವು ರಾಜಕೀಯವಾಗಿ ವಿಭಜನೆಯಾಗಿದೆ. ನಾನು ನನ್ನ ಪ್ರಧಾನಿಯವರಿಗೆ...

ʼದಿ ಕೇರಳ ಸ್ಟೋರಿʼ ಕುರಿತ ಹೇಳಿಕೆ ತಿರುಚಿದ ಮಾಧ್ಯಮಗಳು : ಚಳಿ ಬಿಡಿಸಿದ ನವಾಜುದ್ದೀನ್‌ ಸಿದ್ದಿಕಿ

ದೇಶಾದ್ಯಂತ ವಿವಾದ ಸೃಷ್ಟಿಸಿರುವ ʼದಿ ಕೇರಳ ಸ್ಟೋರಿʼ ಚಿತ್ರದ ಕುರಿತು ತಾವು...