ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಎದೆ ಹಾಲು ಶೇಖರಣೆ; ಸಾವಿರಕ್ಕೂ ಹೆಚ್ಚು ಶಿಶುಗಳಿಗೆ ಪ್ರಯೋಜನ

Date:

- Advertisement -
ಅಂಗಾಗ ದಾನ, ರಕ್ತದಾನದಂತೆ ಸರ್ಕಾರಿ ಸ್ವಾಮ್ಯದ ವಾಣಿ ವಿಲಾಸ್‌ ಆಸ್ಪತ್ರೆಗೆ ತಾಯಂದಿರಿಂದ ಎದೆ ಹಾಲು ದಾನವಾಗುತ್ತಿದೆ. ಎದೆ ಹಾಲು ಶೇಖರಿಸಿಡುವುದಾದದರು ಹೇಗೆ? ಯಾರಿಗೆ ಪ್ರಯೋಜನ? ಎಂಬುದರ ಮಾಹಿತಿ ಇಲ್ಲಿದೆ…

2022 ಮಾರ್ಚ್ 8 ರಿಂದ ಇಲ್ಲಿಯವರೆಗೂ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಎದೆ ಹಾಲು ಶೇಖರಣೆ ಘಟಕದಿಂದ 158 ಲೀಟರ್ ಮತ್ತು 364 ಮಿ.ಲೀ ಎದೆ ಹಾಲನ್ನು ಸಂಗ್ರಹಿಸಿಸಲಾಗಿದೆ. ಈವರೆಗೆ 886 ಶಿಶುಗಳಿಗೆ 101 ಲೀಟರ್ ವಿತರಿಸಿದೆ. ಅದರಲ್ಲಿ 300 ಅವಧಿಪೂರ್ವ ಶಿಶುಗಳಿಗೆ ಎದೆ ಹಾಲು ವಿತರಣೆಯಾಗಿದೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಶಿಶುಗಳಿಗೆ ತಾಯಿ ಹಾಲು ಶ್ರೇಷ್ಠ ಮತ್ತು ಅಮೃತವಿದ್ದಂತೆ. ಮಗು ಜನಿಸಿದ ತಕ್ಷಣ ಉತ್ಪತ್ತಿಯಾಗುವ ‘ಕೊಲಸ್ಟ್ರಮ್‌‘ ಮಗುವಿನ ಬೆಳವಣಿಗೆಯಲ್ಲಿ ಆಂತರಿಕ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ತಾಯಿಯ ಹಾಲಿನ ಬದಲಾಗಿ, ಶಿಶುವಿಗೆ ಯಾವುದೇ ಆಹಾರ ಯೋಗ್ಯವಲ್ಲ. 

ಆರು ತಿಂಗಳು ಎದೆ ಹಾಲು ಶೇಖರಣೆ

ತಾಯಿಯ ಎದೆಯಲ್ಲಿ ಉತ್ಪತ್ತಿಯಾಗುವ ಹಾಲನ್ನೆಲ್ಲಾ ಮಕ್ಕಳು ಕುಡಿಯುವುದಿಲ್ಲ. ಮಗು ಅಗತ್ಯವಿರುವಷ್ಟು ಹಾಲನ್ನು ಕುಡಿದು ಉಳಿಯುವ ಹಾಲನ್ನು ತಾಯಂದಿರು ವ್ಯರ್ಥವಾಗಿ ಹೊರಹಾಕುತ್ತಾರೆ. ಅಂತಹ ತಾಯಂದಿರಿಂದ ಹಾಲನ್ನು ಸಂಗ್ರಹಿಸಲಾಗುತ್ತದೆ. ಬದಲಾದ ಜೀವನಶೈಲಿ, ಆಹಾರದ ಕೊರತೆ ಸೇರಿದಂತೆ ಮತ್ತಿತರ ಕಾರಣಗಳಿಂದ ತಾಯಂದಿರಿಗೆ ಹಾಲಿನ ಕೊರತೆ ಇರಬಹುದು. ಅನಾಥ ಶಿಶುಗಳಿಗೆ, ಅವಧಿ ಪೂರ್ವ ಜನಿಸಿದ  ಶಿಶುವಿಗೆ ಬೇರೊಬ್ಬ ತಾಯಿಯ ಹಾಲನ್ನು ಪಡೆದು ನೀಡಲಾಗುತ್ತದೆ. ಸಂಗ್ರಹಿಸಿದ ಎದೆಹಾಲು ಆರು ತಿಂಗಳು ವ್ಯವಸ್ಥಿತವಾಗಿ ವಿಧಿ ವಿಜ್ಞಾನಗಳನ್ನು ಅನುಸರಿಸಿ ಶೇಖರಿಸಲಾಗುತ್ತದೆ. 

ಫಾರ್ಮುಲಾ ಫೀಡ್ ಮುಕ್ತ

“ಅನಾಥ ಮಕ್ಕಳು ಸೇರಿದಂತೆ ಎದೆ ಹಾಲು ಕೊರತೆ ಇರುವ ತಾಯಂದಿರ ಮಕ್ಕಳಿಗೆ ಹಸು ಹಾಲು ಅಥವಾ ವೈದ್ಯರು ನಿಯೋಜಿಸುವ ‘ಫಾರ್ಮುಲಾ ಫೀಡ್ ಪೌಡರ್‍‌’ಗಳನ್ನು ನೀಡಲಾಗುತ್ತಿತ್ತು. ಇದರಿಂದ ಮಕ್ಕಳಿಗೆ ಪೌಷ್ಠಿಕಾಂಶ ಸಿಕ್ಕರೂ, ಅದು ಯೋಗ್ಯವಾಗಿರುತ್ತಿರಲಿಲ್ಲ. ಕಳೆದ ಕೆಲ ವರ್ಷಗಳಿಂದ ಅನೇಕ ತಾಯಂದಿರು ಎದೆ ಹಾಲನ್ನು ಶೇಖರಿಸಿ ಫ್ರಿಜ್‌ನಲ್ಲಿಟ್ಟು ಮಕ್ಕಳಿಗೆ ನೀಡುತ್ತಿದ್ದರು. ಇದನ್ನು ಗಮನಿಸಿ, ವಾಣಿ ವಿಲಾಸ ಆಸ್ಪತ್ರೆಯಲ್ಲಿಯೂ ಕೂಡ ಇಂತಹ ಯೋಜನೆ ಜಾರಿಯಾಗಬೇಕು ಎಂದು ಚಿಂತಿಸಿ ಕಾರ್ಯ ರೂಪಕ್ಕೆ ತರಲಾಯಿತು. ಇದೀಗ ವಾಣಿ ವಿಲಾಸ ಆಸ್ಪತ್ರೆಯು ಎರಡು ತಿಂಗಳಿನಿಂದ ‘ಫಾರ್ಮುಲಾ ಫೀಡ್’ ಮುಕ್ತವಾಗಿದೆ,” ಎಂದು ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಅಧೀಕ್ಷಕಿ ವೈದ್ಯೆ ಸವಿತಾ ಈದಿನ.ಕಾಮ್‌ನೊಂದಿಗೆ ಮಾತನಾಡಿದರು.

ಎದೆ ಹಾಲು ದಾನ ಮಾಡಲು ಈ ನಿಯಮ ಕಡ್ಡಾಯ!

ಅಗತ್ಯಕ್ಕಿಂತ ಹೆಚ್ಚು ಎದೆಹಾಲು ಹೊಂದಿರುವ ತಾಯಿಯರೆಲ್ಲ ಹಾಲನ್ನು ದಾನ ನೀಡಲಾಗುವುದಿಲ್ಲ. ಎಚ್‌ಐವಿ ಸೋಂಕು, ಜ್ವರ ಅಥವಾ ಇನ್ನಿತರ ಗಂಭೀರ ಸಮಸ್ಯೆಗೆ ಒಳಗಾಗಿದ್ದರೆ ಹಾಲನ್ನು ದಾನವಾಗಿ ಕೊಡುವಂತಿಲ್ಲ. ತಾಯಂದಿರ ರಕ್ತವನ್ನು ಪರೀಕ್ಷಿಸಿ ತಾಯಿಯ ಆರೋಗ್ಯದಲ್ಲಿ ಯಾವುದೇ ಗಂಭೀರ ಸಮಸ್ಯೆಗಳಿಲ್ಲದಿರುವುದನ್ನು ಖಚಿತಪಡಿಸಿಕೊಂಡ ನಂತರ ಒಪ್ಪಂದ ಪತ್ರಕ್ಕೆ ಸಹಿ ಹಾಕಿಸಿಕೊಂಡು ಹಾಲನ್ನು ಸಂಗ್ರಹಿಸಲಾಗುತ್ತದೆ. ಇತ್ತೀಚೆಗೆ ಮಹಿಳೆಯರು ಜಾಗೃತರಾಗಿದ್ದಾರೆ. ಕೆಲವರು ತಾವೇ ಹಾಲು ಸಂಗ್ರಹಿಸಿ ವಾಣಿ ವಿಲಾಸ ಅಸ್ಪತ್ರೆಗೆ ಕಳುಹಿಸುತ್ತಾರೆ. ಅಂತಹ ಹಾಲನ್ನು ಸಂಸ್ಥೆಯವರು ಮತ್ತೊಮ್ಮೆ ಪರೀಕ್ಷಿಸಿ, ಶಿಶು ಕುಡಿಯಲು ಯೋಗ್ಯವೇ ಎಂಬುದನ್ನು ಖಚಿತಪಡಿಸಿಕೊಂಡು ನೀಡಲಾಗುತ್ತದೆ.

“ಎದೆಹಾಲನ್ನು ನೀಡುವ ತಾಯಂದಿರಿಗೆ ಆಸ್ಪತ್ರೆಯಿಂದ ಯಾವುದೇ ರೀತಿಯ ಗೌರವಧನ ನೀಡುವುದಿಲ್ಲ. ಶಿಶುಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಉತ್ತಮ ರೀತಿಯಲ್ಲಿ ನಡೆಯಲು ತಾಯಿಯ ಎದೆ ಹಾಲು ತುಂಬಾ ಅವಶ್ಯಕ. ಅದಕ್ಕಾಗಿಯೇ ಪ್ರತಿ ಮಗುವಿಗೆ ತಾಯಿಯ ಹಾಲು ಸಿಗಬೇಕು. ತಾಯಿ ಸೂಕ್ತ ಸಮಯಗಳ ಕಾಲ ಮಗುವಿಗೆ ಹಾಲುಣಿಸುವುದರಿಂದ ಅಂಡಾಶಯದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಸೇರಿದಂತೆ ಇತರ ಕ್ಯಾನ್ಸರ್ ಮತ್ತು ಅನಾರೋಗ್ಯ ಸಮಸ್ಯೆಯನ್ನು ತಡೆಯಬಹುದು. ವಾಣಿ ವಿಲಾಸ ಆಸ್ಪತ್ರೆಗೆ ದಾಖಲಾಗುವ ಎಲ್ಲ ಗರ್ಭಿಣಿಯರಿಗೆ ಈ ಬಗ್ಗೆ ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ. ಎಲ್ಲ ತಾಯಂದಿರು ಹಾಲು ದಾನ ಮಾಡಿದರೆ, ಎದೆ ಹಾಲು ಕೊರತೆ ಇರುವ ಮಕ್ಕಳಿಗೆ ಫಲಕಾರಿಯಾಗಲಿದೆ,” ಎಂದು ವೈದ್ಯೆ ಸವಿತಾ ಹೇಳಿದರು. 

e761f9abfdc9ef87e6de54ca37fd3aa1e8b74659897c34d58aff74e9b6c9aa14?s=150&d=mp&r=g
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಡಿಮೆನ್ಶಿಯಾ ರೋಗಿಗಳ ಆರೈಕೆ ಕುರಿತ ಕೃತಿ ಬಿಡುಗಡೆ ಮಾಡಿದ ಬಿಎಲ್‌ಡಿಇ

ವಿಜಯಪುರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಜೆರಿಯಾಟ್ರಿಕ್ಸ್ ವಿಭಾಗ ಮತ್ತು ಸಂಗನಬಸವ...

ಭವಿಷ್ಯದ ʼಸೂಪರ್‌ ಆಂಟಿಜೆನ್‌ʼ; ಇದು AI ರೂಪಿಸಿದ ವಿಶ್ವದ ಮೊದಲ ಲಸಿಕೆ!

ಜಗತ್ತನ್ನು ಕಾಡಬಹುದಾದ ಭವಿಷ್ಯದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮತ್ತು ವ್ಯಾಪಕ ಶ್ರೇಣಿಯ...

ಜೀವನ ಶೈಲಿ ಬದಲಿಸಿ, ಹೃದಯಾಘಾತ ತಪ್ಪಿಸಿ

ಗೊತ್ತಿರಲಿ, ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದರಿಂದ ರಕ್ತನಾಳಗಳಲ್ಲಿ ಉರಿಯೂತ ಉಂಟಾಗುತ್ತದೆ. ಹಾಗೆಯೇ...

ರಾಜ್ಯದ ಮಹಿಳೆಯರಲ್ಲಿ ಹೆಚ್ಚುತ್ತಿದೆ ಬೊಜ್ಜು: NFHS ವರದಿ

ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ಮಹಿಳೆಯರಲ್ಲಿ ಬೊಜ್ಜಿನ ಪ್ರಮಾಣ ತೀವ್ರವಾಗಿ ಹೆಚ್ಚಾಗಿದೆ....