​ಶೇ 5ರಷ್ಟು ಉದ್ಯಾನವನ ಜಾಗ ಬಳಕೆ: ಮೂಲಸೌಕರ್ಯ ಯೋಜನೆಗಳಿಗಾಗಿ ಕಾಯ್ದೆ ತಿದ್ದುಪಡಿ ಮಾಡಿದ ರಾಜ್ಯ ಸರ್ಕಾರ

Date:

ಮೂಲಸೌಕರ್ಯ ಯೋಜನೆಗಳಿಗಾಗಿ ಉದ್ಯಾನಗಳ (ಪಾರ್ಕ್) ನಿರ್ದಿಷ್ಟ ಜಾಗವನ್ನು ಬಳಸಿಕೊಳ್ಳಲು ಸರ್ಕಾರಕ್ಕೆ ಅವಕಾಶ ಕಲ್ಪಿಸುವ ಮಸೂದೆಯನ್ನು ಸೋಮವಾರ ವಿಧಾನಸಭೆಯಲ್ಲಿ ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲಾಗಿದೆ.

- Advertisement -

ಈ ಬೆಳವಣಿಗೆಯನ್ನು ಖಂಡಿಸಿರುವ ವಿರೋಧ ಪಕ್ಷ ಬಿಜೆಪಿ, ಉದ್ಯಮಿ ಗೌತಮ್ ಅದಾನಿ ಅವರ ಜೊತೆ ಡಿ.ಕೆ. ಶಿವಕುಮಾರ್ ಅವರು ಶಾಮೀಲಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇಂದು ಭಗತ್ ಸಿಂಗ್ ಹೆಸರು ಬಳಸುವ ಆರ್‌ಎಸ್‌ಎಸ್ ನಾಯಕರಿಗೆ...

ಜಾತ್ಯತೀತತೆ ಮತ್ತು ಸಮಾಜವಾದದ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಿದ್ದ, ಕೋಮುವಾದಿ ಧೋರಣೆಗಳನ್ನು ಕಟುವಾಗಿ ವಿಮರ್ಶಿಸುತ್ತಿದ್ದ ಭಗತ್ ಸಿಂಗ್ ಅವರನ್ನು ಇಂದು ಅದೇ ಸಿದ್ಧಾಂತಗಳ ವಿರುದ್ಧ ನಿಂತಿರುವ ಬಿಜೆಪಿ, ಆರ್‌ಎಸ್‌ಎಸ್, ಎಬಿವಿಪಿ ನಾಯಕರು ತಮ್ಮ 'ಸ್ವಂತ...

ಬರಗಾಲ | ಕಾಡಿನ ಮೌನದ ಹಿಂದೆ ಅಡಗಿದೆ ಜೀವಸಂಕುಲದ...

ಒಂದು ಆನೆಗೆ ದಿನಕ್ಕೆ ನೂರಾರು ಲೀಟರ್ ನೀರು ಮತ್ತು ನೂರಾರು ಕೆ.ಜಿ. ಆಹಾರ ಬೇಕಾಗುತ್ತದೆ. ಇನ್ನು ಕಾಡಿನಲ್ಲಿರುವ ಸಾವಿರಾರು ಆನೆಗಳು, ಹುಲಿಗಳು, ಚಿರತೆಗಳು, ಜಿಂಕೆಗಳು, ಕಾಡೆಮ್ಮೆಗಳು ಸೇರಿದಂತೆ ವಿವಿಧ ವನ್ಯಜೀವಿಗಳ ಅಗತ್ಯವನ್ನು ಲೆಕ್ಕಹಾಕಿದರೆ...

ಬಾಗಲಕೋಟೆ | ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ತರಗತಿ ಆರಂಭ;...

ಬಾಗಲಕೋಟೆ ಜಿಲ್ಲೆಯ ಜನರ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಕಾಲ ಕೂಡಿಬಂದಿದೆ. ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು ಎಂಬ ದಶಕಗಳ ಬೇಡಿಕೆಗೆ ಸಾಕಾರ ರೂಪ ಸಿಕ್ಕಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನಗರದ ಬಹುನಿರೀಕ್ಷಿತ...

​ಹಗರಣದ ಆರೋಪ ಹೊತ್ತಿರುವ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಗದ್ದಲದ ನಡುವೆಯೇ, ‘ಕರ್ನಾಟಕ ಸರ್ಕಾರಿ ಉದ್ಯಾನಗಳ (ಸಂರಕ್ಷಣೆ) ಕಾಯ್ದೆ’ಗೆ ತಿದ್ದುಪಡಿ ತರುವ ಮಸೂದೆಯನ್ನು ಮಂಡಿಸಿ ಅಂಗೀಕರಿಸಲಾಯಿತು. ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪರವಾಗಿ ಸಚಿವ ಜಿ. ಪರಮೇಶ್ವರ ಅವರು ಮಸೂದೆಯನ್ನು ಮಂಡಿಸಿದರು.

​ಈ ಮಸೂದೆಯ ಅನ್ವಯ, ಯಾವುದೇ ಉದ್ಯಾನ ಅಥವಾ ಪಾರ್ಕ್‌ನ ಒಟ್ಟು ವಿಸ್ತೀರ್ಣದ ಶೇ 5ರಷ್ಟು ಜಾಗವನ್ನು ‘ಸಾರ್ವಜನಿಕ ಹಿತಾಸಕ್ತಿ’ಯ ದೃಷ್ಟಿಯಿಂದ ಮೂಲಸೌಕರ್ಯ ಅಥವಾ ಸಾರ್ವಜನಿಕ ಉಪಯೋಗಿ ಯೋಜನೆಗಳಿಗೆ ಬಳಸಿಕೊಳ್ಳಬಹುದಾಗಿದೆ. ಈ ಜಾಗವನ್ನು ಮಾರಾಟ, ಗುತ್ತಿಗೆ, ಉಡುಗೊರೆ, ವಿನಿಮಯ ಅಥವಾ ಅಡಮಾನದ ಮೂಲಕ ಹಸ್ತಾಂತರಿಸಬಹುದು. ಆದರೆ, ಕೇವಲ ಸರ್ಕಾರಿ ಇಲಾಖೆಗಳು, ಶಾಸನಬದ್ಧ ಪ್ರಾಧಿಕಾರಗಳು, ಸರ್ಕಾರಿ ಸ್ವಾಮ್ಯದ ಕಂಪನಿಗಳು ಅಥವಾ ಸ್ಥಳೀಯ ಸಂಸ್ಥೆಗಳಿಗೆ ಮಾತ್ರ ಈ ಜಾಗವನ್ನು ಬಳಸಲು ಅವಕಾಶವಿರುತ್ತದೆ.

​ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ‘ಸುರಂಗ ರಸ್ತೆ’ (ಟನಲ್ ರಸ್ತೆ) ಯೋಜನೆಗಾಗಿ ಲಾಲ್‌ಬಾಗ್‌ನಿಂದ ತಾತ್ಕಾಲಿಕವಾಗಿ ಸುಮಾರು ಆರು ಎಕರೆ ಹಾಗೂ ಶಾಶ್ವತವಾಗಿ ಒಂದು ಎಕರೆ ಜಾಗದ ಅಗತ್ಯವಿದೆ ಎನ್ನಲಾಗಿದೆ. ಈ ಯೋಜನೆಗೆ ‘ಅದಾನಿ ಎಂಟರ್‌ಪ್ರೈಸಸ್’ ಅತಿ ಕಡಿಮೆ ಮೊತ್ತದ ಬಿಡ್‌ದಾರರಾಗಿ (L1) ಹೊರಹೊಮ್ಮಿದೆ. ಭಾನುವಾರವಷ್ಟೇ ಗೌತಮ್ ಅದಾನಿ ಅವರು ಡಿ.ಕೆ. ಶಿವಕುಮಾರ್ ಅವರೊಂದಿಗೆ ಗೌಪ್ಯ ಸಭೆ ನಡೆಸಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೇ ಮಸೂದೆ ಅಂಗೀಕಾರವಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

​ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, “ಉದ್ಯಾನವನಗಳ ಜಾಗವನ್ನು ಕಬಳಿಸಲೇ ಅದಾನಿ ಅವರು ಶಿವಕುಮಾರ್ ಮನೆಗೆ ಹೋಗಿದ್ದರು. ರಿಯಲ್ ಎಸ್ಟೇಟ್ ಉದ್ದೇಶಕ್ಕಾಗಿ ಜಾಗ ನೀಡಲು ಶಿವಕುಮಾರ್ ಅವರು ಅದಾನಿ ಜೊತೆ ಶಾಮೀಲಾಗಿದ್ದಾರೆ” ಎಂದು ಆರೋಪಿಸಿದರು. “ಅದಾನಿಗೆ ಮಣೆ, ಜನರಿಗೆ ಬಿಸ್ಕೆಟ್” ಎಂದು ವ್ಯಂಗ್ಯವಾಡಿದ ಅವರು, “ಲಾಲ್‌ಬಾಗ್‌ನ ಶೇ 5ರಷ್ಟು ಎಂದರೆ 10 ಎಕರೆ ಜಾಗವಾಗುತ್ತದೆ. ಕಾಂಗ್ರೆಸ್ ಸರ್ಕಾರ ಸುರಂಗ ರಸ್ತೆ ಯೋಜನೆಗಾಗಿ ಪಾರ್ಕ್‌ಗಳನ್ನು ಸಹ ಬಿಡುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಗೆಯೇ ನಾಗೇಂದ್ರ ಅವರನ್ನು ಮನೆಗೆ ಕರೆಸಿ ಶಿವಕುಮಾರ್ ಅವರು ರಾಜೀನಾಮೆ ಪಡೆಯಬೇಕಿತ್ತು ಎಂದು ಅಶೋಕ್ ಲೇವಡಿ ಮಾಡಿದರು.

​”ಅದಾನಿಯನ್ನು ಭೇಟಿಯಾಗಲು ಶಿವಕುಮಾರ್ ಅವರಿಗೆ ಸಮಯವಿದೆ. ಆದರೆ ಬರಗಾಲ ಘೋಷಿಸಲು ಸಮಯವಿಲ್ಲ. ಅವರಿಗೆ ರೈತರು ಹಾಗೂ ದಲಿತರು ಬೇಕಿಲ್ಲ, ಕೇವಲ ಅದಾನಿ ಬೇಕು” ಎಂದು ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ವಾಗ್ದಾಳಿ ನಡೆಸಿದರು.

ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, “ನಮ್ಮ ಪಾಲಿಗೆ ಅದಾನಿ ಕೇವಲ ಓರ್ವ ಗುತ್ತಿಗೆದಾರ. ಸುರಂಗ ಮಾರ್ಗ ಯೋಜನೆ ಸರ್ಕಾರಕ್ಕೆ ಬಹಳ ಮುಖ್ಯವಾಗಿದೆ ಮತ್ತು ಕೆಲವು ಯೋಜನೆಗಳಲ್ಲಿ ಅವರು ಅತಿ ಕಡಿಮೆ ಮೊತ್ತ ನಮೂದಿಸಿದ್ದಾರೆ. ಟೆಂಡರ್ ಪ್ರಕ್ರಿಯೆಯಲ್ಲಿ ನಾವು ಯಾವುದೇ ಪ್ರಭಾವ ಬೀರಿಲ್ಲ. ಹೀಗಾಗಿ ಸೌಜನ್ಯದ ದೃಷ್ಟಿಯಿಂದ ಅವರು ಭೇಟಿಯಾಗಿರಬಹುದು. ಕಾನೂನುಬದ್ಧವಾಗಿ ಅವರು ಟೆಂಡರ್ ಪಡೆದರೆ ನಮ್ಮ ಅಭ್ಯಂತರವಿಲ್ಲ” ಎಂದರು.

​”ಸುರಂಗ ರಸ್ತೆ ಯೋಜನೆ ಅದಾನಿ ಪಾಲಾಗಿರುವುದರಿಂದ, ಈಗ ಆ ಯೋಜನೆಯ ಬಗ್ಗೆ ಬಿಜೆಪಿಯ ನಿಲುವೇನು? ಅವರು ಯೋಜನೆಯನ್ನು ವಿರೋಧಿಸುತ್ತಾರೆಯೇ?” ಎಂದು ಖರ್ಗೆ ಪ್ರಶ್ನಿಸಿದರು. ಅಲ್ಲದೆ, ಕೇಂದ್ರ ಸರ್ಕಾರವು ಅದಾನಿ ಮತ್ತು ಅಂಬಾನಿ ಕೈಗೊಂಬೆಯಾಗಿದೆ ಎಂಬ ಕಾಂಗ್ರೆಸ್ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು. “ಏಷ್ಯಾದ ಅತಿದೊಡ್ಡ ಕ್ಲಿಂಕರ್ ಕಾರ್ಖಾನೆ ನನ್ನ ಚಿತ್ತಾಪುರ ಕ್ಷೇತ್ರದಲ್ಲಿದ್ದು, ಎಸಿಸಿ ಸಿಮೆಂಟ್‌ನಿಂದ ಅದನ್ನು ಅದಾನಿ ಖರೀದಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ನಾನೇನಾದರೂ ಮಾಡಲು ಸಾಧ್ಯವೇ? ಕಾನೂನು ಪಾಲನೆಯಾಗಬೇಕು ಅಷ್ಟೆ” ಎಂದು ಖರ್ಗೆ ಸಮರ್ಥಿಸಿಕೊಂಡರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಬಿದ್ರಿ ಕಲಾವಿದೆ ಶಾಂತಾಬಾಯಿ ಕಾಂಬಳೆಗೆ ನಿವೇಶನ, ಮನೆ, ಜಮೀನು ಮಂಜೂರಾತಿಗೆ ಒತ್ತಾಯ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಹಿರಿಯ ಬಿದ್ರಿ ಕಲಾವಿದೆ ಶಾಂತಾಬಾಯಿ ಕಾಂಬಳೆ...

ಮುಂಡಗೋಡ | ನೀರು ಕೇಳುವ ನೆಪದಲ್ಲಿ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರ ಕಿತ್ತು ಪರಾರಿ

ಅಂಗಡಿಗೆ ಬಂದು ವಿಮಲ್ ಹಾಗೂ ಕುಡಿಯುವ ನೀರು ಕೇಳುವ ನೆಪದಲ್ಲಿ ಮಹಿಳೆಯ...

ಬೀದರ್‌ | ಟನ್ ಕಬ್ಬಿಗೆ ₹4,000 ಬೆಲೆ ಘೋಷಣೆಗೆ ಪಟ್ಟು: ರೈತರ ಧರಣಿ 11ನೇ ದಿನಕ್ಕೆ

ಬೀದರ್ ಜಿಲ್ಲೆಯ ರೈತರ ನಾಲ್ಕು ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ನಡೆಯುತ್ತಿರುವ ಅನಿರ್ದಿಷ್ಟಾವಧಿ...

ಶಿರಸಿ | ಮೊಗೇರರಿಗೆ ಎಸ್‌ಸಿ ಪ್ರಮಾಣಪತ್ರ ನೀಡಬೇಡಿ: ಅರ್ಜುನ್ ಮಿಂಟಿ

ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಮೊಗೇರ್ ಸಮುದಾಯಕ್ಕೆ ಪರಿಶಿಷ್ಟ ಜಾತಿ (ಎಸ್‌ಸಿ)...