ಬಾಗಲಕೋಟೆಯ ಗ್ರಾಮೀಣ ಭಾಗದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಕುಡಚಿಯ ಹಿಂದಿನ ಶಾಸಕ ಪಿ ರಾಜೀವ ಅವರು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ವಿಶೇಷವಾಗಿ ಲಂಬಾಣಿ ತಾಂಡಾಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದು, “ಕಾಂಗ್ರೆಸ್ ಪಕ್ಷ ಬಂಜಾರಾ ಮತ್ತು ಲಂಬಾಣಿ ಸಮುದಾಗಳನ್ನು ವಂಚಿಸುತ್ತ ಬಂದಿದೆ. ಅಲ್ಲದೆ ಒಳಮೀಸಲಾತಿ ವಿಚಾರದಲ್ಲಿ ಸಮುದಾಯಕ್ಕೆ ದ್ರೋಹ ಮಾಡುತ್ತಿದೆ” ಎಂದು ಹೇಳುತ್ತ ಪ್ರಚಾರ ಕೈಗೊಂಡರು.
“ಹಿಂದಿನ ಚುಣಾವಣೆಯಲ್ಲಿ ಸಮುದಾಯದ ಜನರ ಮಧ್ಯೆ ಬಿಜೆಪಿ ಕುರಿತು ಅಪಪ್ರಚಾರ ಮಾಡಿ ಕಾಂಗ್ರೆಸ್ ಪಕ್ಷ ಲಾಭ ಪಡೆದುಕೊಂಡಿದೆ. ತದನಂತರ ಕಳೆದ ಮೂರು ವರ್ಷದಿಂದ ಸಮುದಾಯಕ್ಕೆ ಒಳಮೀಸಲಾತಿ ವಿಚಾರದಲ್ಲಿ ಮೋಸ ಮಾಡುತ್ತಿದೆ” ಎಂದು ದೂರಿದರು.
ಪಿ. ರಾಜೀವ ಅವರು ಪ್ರಚಾರ ಕೈಗೊಂಡ ಎಲ್ಲ ತಾಂಡಾಗಳಲ್ಲಿ ಸಮುದಾಯದ ಬಂಧುಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ʼ2023ರಲ್ಲಿ ಮಾಡಿದ ತಪ್ಪನ್ನು ನಾವು ಈ ಬಾರಿ ಮಾಡುವುದಿಲ್ಲʼವೆಂದು ಭರವಸೆ ನೀಡಿ, ಈ ಬಾರಿ ಬಿಜೆಪಿ ಪರವಾಗಿ ಮತ ನೀಡುವ ಸಂಕಲ್ಪ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ ಉಪಚುನಾವಣೆ: ಮಾ.30ರಿಂದ ಸಿದ್ದರಾಮಯ್ಯ ಐದು ದಿನ ಪ್ರಚಾರ
ಪಿ ರಾಜೀವ ಅವರೊಂದಿಗೆ ಮಾಜಿ ಶಾಸಕ ರಾಜಶೇಖರ ಶೀಲವಂತ, ಜಿಲ್ಲಾ ಲಂಬಾಣಿ, ಬಂಜಾರಾ ಸಮುದಾಯದ ಮುಂಖಂಡರುಗಳಾದ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹೂವಪ್ಪ ರಾಠೋಡ, ದೀಲಿಪ ರಾಠೋಡ, ಸೋಮಸಿಂಗ ಲಮಾಣಿ, ಉಮೇಶ ರಾಠೋಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಂಗನಗೌಡ ಗೌಡರ, ವಕೀಲ ಸಿ ವಿ ಕೋಟಿ, ಗ್ರಾಮಿಣ ಪ್ರಧಾನ ಕಾರ್ಯದರ್ಶಿ ಕಲ್ಲಪ್ಪ ಭಗವತಿ, ರಮೇಶ ಕುರಿಗಾರ, ಶಿವಪುತ್ರಪ್ಪಾ ಕಟ್ಟಿಮನಿ, ಸುನೀಲ ರಾಠೋಡ, ಗಂಗಾರಾಮ ಚವ್ಹಾಣ, ಕಿರಣ ಬಾಗೆವಾಡಿ, ಹನುಮಂತ ಚವ್ಹಾಣ ಸೇರಿದಂತೆ ಬಹುತೇಕ ಹಿರಿಯ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.




