ಬೆಂಗಳೂರು | ಜ.29ರಂದು ‘ಗೌರಿ ದಿನ’ ಕಾರ್ಯಕ್ರಮ; ನಟ ದುನಿಯಾ ವಿಜಯ್ ಭಾಗಿ!

Date:

ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಅವರು ಹುಟ್ಟಿದ ದಿನದ ಅಂಗವಾಗಿ ಜನವರಿ 29ರಂದು ಬೆಂಗಳೂರಿನಲ್ಲಿ ‘ಗೌರಿ ದಿನ’ ಕಾರ್ಯಕ್ರಮವನ್ನು ‘ಗೌರಿ ಮೀಡಿಯಾ ಟ್ರಸ್ಟ್‌’ ಅಯೋಜಿಸಿದೆ. ಕಾರ್ಯಕ್ರಮದಲ್ಲಿ ಲ್ಯಾಂಡ್‌ಲಾರ್ಡ್‌ ಸಿನಿಮಾ ಮೂಲಕ ರಾಜ್ಯದ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿರುವ ನಟ ದುನಿಯಾ ವಿಜಯ್ ಭಾಗಿಯಾಗಲಿದ್ದಾರೆ.

- Advertisement -

‘ನಾವೆಲ್ಲರೂ ಗೌರಿ’ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರಿನ ನ್ಯಾಷನಲ್ ಕಾಲೇಜಿನ ‘ಎಚ್‌.ಎನ್‌ ಮಲ್ಟಿಮೀಡಿಯಾ ಸಭಾಂಗಣದಲ್ಲಿ ಜ.29ರ ಗುರುವಾರ ಸಂಜೆ 5ಯಿಂದ ಕಾರ್ಯಕ್ರಮ ನಡೆಯಲಿದೆ. ದುನಿಯಾ ವಿಜಯ್ ಜೊತೆಗೆ, ಗೌರಿ ಅವರ ತಾಯಿ ಇಂದಿರಾ ಲಂಕೇಶ್‌, ಸಹೋದರಿ ಕವಿತಾ ಲಂಕೇಶ್‌, ಹೋರಾಟಗಾರ ನೂರ್ ಶೀಧರ್, ಗೌರಿ ಮೀಡಿಯಾ ಟ್ರಸ್ಟ್‌ನ ನಗರಕೆರೆ ರಮೇಶ್‌, ರಾಜಲಕ್ಷ್ಮಿ ಅಂಕಲಗಿ, ಎ.ಎಸ್ ಪ್ರಭಾಕರ್ ಹಾಗೂ ಗುರು ಆಕೃತಿ ಅವರು ಭಾಗವಹಿಸಲಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮ್ಯಾಕಲ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

“ಗೌರಿ ಲಂಕೇಶ್‌ ಅವರು ಸಮಾಜದ ಶೋಷಿತರ ಪರವಾಗಿ ಸದಾ ಗಟ್ಟಿ ನಿಲುವು ತಳೆದು, ಆಳುವ ವರ್ಗಗಳ ಮತ್ತು ಮಾನವವಿರೋಧಿ ಸಿದ್ಧಾಂತಗಳ ವಿರುದ್ಧ ನೇರವಾಗಿ ಹೋರಾಡಿದ್ದರು. ಅಂತಹ ಧೈರ್ಯದ ಕಾರಣಕ್ಕಾಗಿಯೇ ಅವರನ್ನು ಮನುಷ್ಯ ವಿರೋಧಿ ಸಿದ್ಧಾಂತಿಗಳು ಹತ್ಯೆಗೈದರು. ಆದರೆ, ಅವರ ಆಶಯಗಳನ್ನು ಪತ್ರಕರ್ತರು, ಚಿಂತಕರು ಹಾಗೂ ಸಾಮಾಜಿಕ ಕಾರ್ಯಕರ್ತರು ತಮ್ಮದೇ ರೀತಿಯಲ್ಲಿ ಮುಂದುವರೆಸುತ್ತಿದ್ದಾರೆ” ಎಂದು ಗೌರಿ ಮೀಡಿಯಾ ಟ್ರಸ್ಟ್‌ ಹೇಳಿದೆ.

“ಮಾನವವಿರೋಧಿ ಭಾವನೆಗಳ ವಿರುದ್ಧ ಸದಾ ಎಚ್ಚರಿಕೆಯಿಂದ ನಿಲ್ಲುತ್ತಿದ್ದ ಗೌರಿ ಲಂಕೇಶ್ ಆಶಯಗಳನ್ನು ಮುಂದುವರೆಸಲು ‘ನ್ಯಾಯಪಥ’ ಪತ್ರಿಕೆ ಮುಂದುವರೆದಿದೆ. ಗೌರಿ ಆಶಯಗಳನ್ನು ವಿವಿಧ ರೂಪಗಳಲ್ಲಿ ಮುಂದುವರೆಸುತ್ತಿರುವ ಎಲ್ಲರೂ ಜೊತೆಗೂಡಿ ಗೌರಿ ದಿನವನ್ನು ಆಚರಿಸಿ, ಹೋರಾಟದ ಕರೆ ನೀಡಬೇಕಿದೆ. ಜೀವವಿರೋಧಿ ಸಿದ್ಧಾಂತಗಳಿಗೆ ಎಚ್ಚರಿಕೆ ನೀಡಲು ಎಲ್ಲರೂ ಒಗ್ಗೂಡುವ ಅಗತ್ಯವಿದೆ” ಎಂದು ಟ್ರಸ್ಟ್‌ ಕರೆಕೊಟ್ಟಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹವಾಮಾನ ವರದಿ: ರಾಜ್ಯದ 16 ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರೀ ಮಳೆ

ಬಂಗಾಳಕೊಲ್ಲಿ ಮತ್ತು ಉತ್ತರ ಅಂಡಮಾನ್ ಸಮುದ್ರ ಭಾಗದಲ್ಲಿ ತೀವ್ರ ವಾಯುಭಾರ ಕುಸಿತ...

E-KYC: ಸರ್ವರ್‌ಗಿಂತ ದೊಡ್ಡ ಸಮಸ್ಯೆ: ಜನರ ಬದುಕು

ಇ-ಕೆವೈಸಿ ಗಡುವು ವಿಸ್ತರಿಸಿದರೂ ಬದಲಾಗಬೇಕಿರುವುದು ವ್ಯವಸ್ಥೆ; ಕೊಡಗು-ಚಿಕ್ಕಮಗಳೂರು-ಚಾಮರಾಜನಗರದ ಗಡಿ ಹಳ್ಳಿಗಳವರೆಗೆ ತಲುಪಬೇಕಿದೆ...

ಟಿ ನರಸೀಪುರದಲ್ಲಿ ಪ್ರಚೋದನಕಾರಿ ಭಾಷಣ; ಪ್ರತಾಪ್ ಸಿಂಹ ವಿರುದ್ಧ FIR ದಾಖಲು

ಟಿ ನರಸೀಪುರದಲ್ಲಿ ನಡೆದ ಗಣೇಶೋತ್ಸವ ಮೆರವಣಿಗೆ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ...

‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ–2025’; ಕೃತಿಗಳಿಗೆ ಆಹ್ವಾನ

ಮುಸ್ಲಿಮ್ ಬರಹಗಾರರ ಕನ್ನಡ ಸಾಹಿತ್ಯ ಸೃಷ್ಟಿಗೆ ‘ಕರ್ನಾಟಕ ಮುಸ್ಲಿಮ್ ಲೇಖಕರ ಸಂಘ’ವು...