ಈದಿನ.ಕಾಮ್, ಸಾಮಾಜಿಕ ಜವಾಬ್ದಾರಿಯೊಂದಿಗೆ ಸತ್ಯವನ್ನು ನಿಮ್ಮ ಮುಂದಿಡುವ ಒಂದು ನಿಜವಾದ ಮಾಧ್ಯಮವಾಗಿ ಕೆಲಸ ಮಾಡುತ್ತಾ ಬಂದಿದೆ. ವಿಶೇಷವಾಗಿ ಧರ್ಮಸ್ಥಳ ಮತ್ತು ಸೌಜನ್ಯ ವಿಷಯದಲ್ಲಿ ನಾವು ಮಾಡಿರುವ ಗ್ರೌಂಡ್ ರಿಪೋರ್ಟ್‌ಗಳು, ವಿಡಿಯೋಗಳು ಮತ್ತು ತನಿಖಾತ್ಮಕ ಸುದ್ದಿಗಳನ್ನು ನೀವೆಲ್ಲರೂ ಗಮನಿಸಿರುವಿರಿ. ಆದರೆ, ಈ ಪ್ರಯತ್ನದ ಭಾಗವಾಗಿ, ಧರ್ಮಸ್ಥಳಕ್ಕೆ ಸಂಬಂಧಿಸಿದ ಕೆಲವರಿಂದ ನಮ್ಮ ಚಾನೆಲ್‌ನ ಮೇಲೆ ಕಾನೂನು ಕೇಸ್ ಹಾಕಲಾಗಿತ್ತು. ಕೋರ್ಟಿನ ಆದೇಶದ ಕಾರಣಕ್ಕಾಗಿ, ನಾವು ಕೆಲವು ವಿಡಿಯೋಗಳನ್ನು ತೆಗೆದುಹಾಕುವ ಅನಿವಾರ್ಯತೆಯೂ ಉಂಟಾಗಿತ್ತು.
ಆದರೂ, ಈಗ, ಹೈಕೋರ್ಟ್‌ನ ಮಧ್ಯಂತರ ಆದೇಶದಿಂದಾಗಿ ನಮ್ಮ ಈದಿನ ಯೂಟ್ಯೂಬ್ ಚಾನೆಲ್‌ನನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಲಾಗಿದೆ. ಈಗ, ನಾವು ನಮ್ಮ ವಿಡಿಯೋಗಳನ್ನು ಈದಿನ ಟಿವಿ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟಿಸುತ್ತಿದ್ದೇವೆ. ಈದಿನ ಚಾನೆಲ್‌ಗೆ ನೀವು ತೋರಿದ ಬೆಂಬಲವನ್ನೇ ಈದಿನ ಟಿವಿ ಚಾನೆಲ್‌ಗೂ ತೋರಬೇಕೆಂದು ನಿಮ್ಮೆಲ್ಲರಲ್ಲಿ ಪ್ರೀತಿಪೂರ್ವಕವಾಗಿ ಕೇಳಿಕೊಳ್ಳುತ್ತೇವೆ. ನಮ್ಮ ನ್ಯಾಯಾಂಗ ಹೋರಾಟ ಮುಂದುವರೆಯಲಿದೆ. ಅಲ್ಲಿಯವರೆಗೆ ಪರ್ಯಾಯ ವ್ಯವಸ್ಥೆ ಇದೆ, ನಿಮ್ಮ ಸಹಕಾರ ಬೇಕಿದೆ.
Eedina TV ಸಬ್‌ಸ್ಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ
