ಲೈಂಗಿಕ ಅಪರಾಧಗಳ ಅಪ್ರಾಪ್ತ ಸಂತ್ರಸ್ತರ ರಕ್ಷಣೆ ಮತ್ತು ಪುನರ್ವಸತಿಗಾಗಿ ‘SOP’ ರಚಿಸಿದ ಹೈಕೋರ್ಟ್‌

Date:

ಲೈಂಗಿಕ ಅಪರಾಧಗಳಿಗೆ ತುತ್ತಾಗುವ ಅಪ್ರಾಪ್ತ ಸಂತ್ರಸ್ತರ ರಕ್ಷಣೆ ಮತ್ತು ಪುನರ್ವಸತಿಗಾಗಿ ಕರ್ನಾಟಕ ಹೈಕೋರ್ಟ್, ‘ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ’ (SOP 2025)ಅನ್ನು ರಚಿಸಿದೆ. ಸಂಬಂಧಿತ ಎಲ್ಲ ಸಂಸ್ಥೆಗಳು ಈ ಎಸ್‌ಒಪಿಯನ್ನು ಅನುಸರಿಸಬೇಕು ಎಂದು ಹೇಳಿದೆ.

- Advertisement -

ಅಪ್ರಾಪ್ತ ಸಂತ್ರಸ್ತರ ರಕ್ಷಣೆ ಮತ್ತು ಪುನರ್ವಸತಿ ವಿಚಾರವಾಗಿ ಅಧಿಕಾರಿಗಳು ಅನುಸರಿಸುವ ಕಾರ್ಯವಿಧಾನದಲ್ಲಿ ಲೋಪಗಳು ಕಂಡುಬಂದಿವೆ ಎಂದು ಕೋರ್ಟ್‌ ಹೇಳಿದೆ. ಆದ್ದರಿಂದಲೇ, ಹೊಸದಾಗಿ ಎಸ್‌ಒಪಿ ಸಿದ್ದಪಡಿಸಲಾಗಿದೆ ಎಂದು ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ತನ್ನ ಚಿಕ್ಕಪ್ಪನ ಸ್ನೇಹಿತನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ 13 ವರ್ಷದ ಬಾಲಕಿಗೆ ‘ವೈದ್ಯಕೀಯ ಗರ್ಭಧಾರಣೆ ತಡೆ’ (MTP) ನಡೆಸಲು ಅನುಮತಿ ನೀಡುವ ಅರ್ಜಿಯನ್ನು ಹೈಕೋರ್ಟ್‌ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ವಿಚಾರಣೆ ನಡೆಸಿದ್ದಾರೆ. “ನ್ಯಾಯಾಲಯದ ಮುಂದೆ ಹಲವಾರು ಎಂಟಿಪಿಗಾಗಿನ ಪ್ರಕರಣಗಳು ಬರುತ್ತಿವೆ. ಅಪ್ರಾಪ್ತ ಸಂತ್ರಸ್ತೆಯರ ಕುಟುಂಬಕ್ಕೆ ಸರಿಯಾದ ಸಮಯದಲ್ಲಿ MTP ಸಾಧ್ಯತೆಗಳ ಕುರಿತು ಅಧಿಕಾರಿಗಳು ತಿಳಿಸಿಲಾಗಿಲ್ಲ ಎಂಬುದು ನ್ಯಾಯಾಲಯದ ಗಮನಕ್ಕೆ ಬಂದಿಲ್ಲ. ಕುಟುಂಬಸ್ಥರಿಗೆ ಮಾಹಿತಿ ದೊರೆಯುವ ಹೊತ್ತಿಗೆ MTP ಕಾಯ್ದೆಯಡಿ ಅನುಮತಿಸಲಾದ ಅವಧಿ ಮೀರಿರುತ್ತದೆ. ಇದರಿಂದಾಗಿ ಬಲಿಪಶು ಈ ನ್ಯಾಯಾಲಯವನ್ನು ಸಂಪರ್ಕಿಸಬೇಕಾಗುತ್ತದೆ” ಎಂದು ಹೈಕೋರ್ಟ್‌ ಹೇಳಿದೆ.

“ಅಧಿಕಾರಿಗಳಿಗೆ ಹಲವಾರು ಸಂದರ್ಭಗಳಲ್ಲಿ ನಿರ್ದೇಶನಗಳನ್ನು ನೀಡಲಾಗಿದ್ದರೂ, ಅವುಗಳನ್ನು ಪಾಲಿಸಿಲ್ಲ. ಅಧಿಕಾರಿಗಳು ನಿರಂತರವಾಗಿ ನಿರ್ಲಕ್ಷಿಸುತ್ತಲೇ ಇದ್ದಾರೆ” ಎಂದು ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

“ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರು ಪೋಕ್ಸೋ ಪ್ರಕರಣಗಳಲ್ಲಿ ಸಂತ್ರಸ್ತೆಯರಿಗೆ ನೆರವು ನೀಡಬೇಕಾದ ಎಲ್ಲ ಇಲಾಖೆಗಳು/ಅಧಿಕಾರಿಗಳಿಗೂ ಸೂಕ್ತವಾದ SOPಅನ್ನು ರೂಪಿಸಿದರೆ ಇವೆಲ್ಲವನ್ನೂ ಪರಿಹರಿಸಬಹುದು. ಅಂತಹ SOPಅನ್ನು ರೂಪಿಸುವವರೆಗೂ ಇಂತಹ ಪ್ರಕರಣಗಳು ಮುಂದುವರೆಯುತ್ತವೆ. ಹೀಗಾಗಿ, ನ್ಯಾಯಾಲಯವೇ ತಾತ್ಕಾಲಿಕ ಎಸ್‌ಒಪಿ ರಚಿಸಿದೆ” ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

“ನ್ಯಾಯಾಲಯ ರೂಪಿಸಿರುವ ಈ SOP ಕೇವಲ ಸೂಚಕವಾಗಿದೆ. ತಜ್ಞರಿಂದ ಸಲಹೆ ಪಡೆದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಪೊಲೀಸ್‌ ಮಹಾನಿರ್ದೇಶಕರು ಸಮಗ್ರ SOP ಅನ್ನು ರೂಪಿಸಬೇಕು. ಇದು ಸಾಧ್ಯವಾದಷ್ಟು ಬೇಗ ಕಾರ್ಯಗತಗೊಳ್ಳಬೇಕು” ಎಂದು ಕೋರ್ಟ್‌ ಹೇಳಿದೆ.

SOPಯ ಪ್ರಾಥಮಿಕ ಉದ್ದೇಶಗಳು:

  • ಪ್ರತಿಯೊಬ್ಬ ಅಪ್ತಾಪ್ತ ಸಂತ್ರಸ್ತೆಗೆ ತಕ್ಷಣದ ಸುರಕ್ಷತೆ, ವೈದ್ಯಕೀಯ ಆರೈಕೆ ಹಾಗೂ ಮಾನಸಿಕ ಸ್ಥೈರ್ಯ ತುಂಬುವ ನೆರವನ್ನು ಖಾತ್ರಿಪಡಿಸುವುದು.
  • ಪ್ರತಿ ಹಂತದಲ್ಲೂ ಮಕ್ಕಳ ಸ್ನೇಹಿ ಕಾರ್ಯವಿಧಾನಗಳನ್ನು ಜಾರಿಗೆ ತರುವ ಮೂಲಕ ತ್ವರಿತ, ಸೂಕ್ಷ್ಮ ಹಾಗೂ ಆಘಾತ-ಮುಕ್ತ ತನಿಖೆಯನ್ನು ಖಚಿತಪಡಿಸುವುದು.
  • ಎಲ್ಲ ಪ್ರಕ್ರಿಯೆಗಳು ಮತ್ತು ದಾಖಲೆಗಳಲ್ಲಿ ಸಂತ್ರಸ್ತೆಯ ಗುರುತಿನ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು.
  • ಸಂತ್ರಸ್ತೆಯು ತನ್ನ ಮೇಲಾದ ದೌರ್ಜನ್ಯದ ಆಘಾತದಿಂದ ಹೊರಬಂದು ಆರೋಗ್ಯಕರವಾಗಿ ಸಮಾಜದಲ್ಲಿ ಯಶಸ್ವಿಯಾಗಿ ಬದುಕನ್ನು ರೂಪಿಸಿಕೊಳ್ಳುವವರೆಗೆ ಶಿಕ್ಷಣ, ಸಮಾಲೋಚನೆ ಹಾಗೂ ಜೀವನೋಪಾಯ ಬೆಂಬಲ ಒಳಗೊಂಡ ಸಮಗ್ರ ಪುನರ್ವಸತಿಯನ್ನು ಒದಗಿಸುವುದು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಮನುಷ್ಯಕೇಂದ್ರಿತ ವೈಜ್ಞಾನಿಕ ಚಿಂತನೆ ಅತ್ಯಗತ್ಯ: ಡಾ. ರಾಜಪ್ಪ ದಳವಾಯಿ

ಮನುಷ್ಯನಿಗಿಂತ ಧರ್ಮ, ದೇವರು, ದೇವಾಲಯಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಮುಖ್ಯವಾಗುವ ಪರಿಸ್ಥಿತಿ...

ಹಾಸನ | ಭಗತ್ ಸಿಂಗ್ ಕೇವಲ ಕ್ರಾಂತಿಕಾರಿಯಲ್ಲದೆ ವೈಜ್ಞಾನಿಕ ಮನೋಭಾವ ಉಳ್ಳವರಾಗಿದ್ದರು: ಡಾ. ಎಚ್ ಆರ್ ಸ್ವಾಮಿ

ಭಗತ್ ಸಿಂಗ್ ಅವರನ್ನು ಕೇವಲ ಒಬ್ಬ ಕ್ರಾಂತಿಕಾರಿ ಅಥವಾ ಸ್ವಾತಂತ್ರ್ಯ ಹೋರಾಟಗಾರನಾಗಿ...