SIR | ಸ್ವಂತ ಮನೆಯಲ್ಲಿದ್ದರೂ ‘ಖಾಯಂ ಸ್ಥಳಾಂತರ’ ಗುರುತು; ಲಕ್ಷಾಂತರ ಮತದಾರರ ಹಕ್ಕು ಕಸಿಯಲು ಇದೇ ಕಾರಣ?

Date:

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮತ್ತೊಂದು ಆತಂಕಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ ಅಂತಿಮ ಘಟ್ಟ ತಲುಪಿದೆ ಎಂದು ಚುನಾವಣಾ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಆದರೆ, ಬೆಂಗಳೂರಿನಲ್ಲೇ ಹಲವು ಅರ್ಹ ಮತದಾರರಿಗೆ ಇನ್ನೂ ಎನ್ಯುಮರೇಷನ್ ನಮೂನೆ ತಲುಪಿಲ್ಲ. ಮಾತ್ರವಲ್ಲ, ಸ್ವಂತ ಮನೆಯಲ್ಲೇ ಇರುವ ಮತದಾರರಿಗೆ ಯಾವುದೇ ಮಾಹಿತಿ ನೀಡದೇ, ಅವರ ಅನುಮತಿ ಅಥವಾ ದೃಢೀಕರಣ ಪಡೆಯದೇ ಅವರನ್ನು ‘ಖಾಯಂ ಸ್ಥಳಾಂತರ’ ಎಂದು ಗುರುತಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

- Advertisement -

ಇಂತಹದೊಂದು ಗಂಭೀರ ಲೋಪವು ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕುಮಾರಸ್ವಾಮಿ ಬಡಾವಣೆಯ 273ನೇ ಮತಗಟ್ಟೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಹಲವು ವರ್ಷಗಳಿಂದ ಸ್ವಂತ ಮನೆಯಲ್ಲಿ ವಾಸಿಸುತ್ತಿರುವ ಒಂದೇ ಕುಟುಂಬದ ನಾಲ್ವರು ಮತದಾರಿಗೆ (ಪೃಥ್ವಿರಾಜು, ಅವರ ತಾಯಿ, ಸೋದರ ಅತ್ತೆ ಹಾಗೂ ಮಾವ) ಎಸ್‌ಐಆರ್ ಎನ್ಯುಮರೇನ್ ನಮೂನೆ ಇನ್ನೂ ತಲುಪಿಲ್ಲ. ಅಲ್ಲದೆ, ಅವರೆಲ್ಲರೂ ಖಾಯಂ ಸ್ಥಳಾಂತರಗೊಂಡಿದ್ದಾರೆ ಎಂದು ಎಸ್‌ಐಆರ್‌ನಲ್ಲಿ ಅಪ್‌ಡೇಟ್‌ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ʻಬಳ್ಳಾರಿ ಚಲೋʼ ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಬಿಜೆಪಿ ಪಾದಯಾತ್ರೆ; ಲಾಭ...

ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದು ಕಾಂಗ್ರೆಸ್‌ ಬಿಜೆಪಿ ಪಕ್ಷವನ್ನು ಸಂಪೂರ್ಣವಾಗಿ ಮಣಿಸಿತ್ತು. ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ತನ್ನ ಪ್ರಾಬಲ್ಯವನ್ನು ಮುಂದುವರಿಸಿತು. ಇತ್ತೀಚೆಗೆ ನಡೆದ ಸಂಡೂರು ವಿಧಾನಸಭಾ ಕ್ಷೇತ್ರದ...

ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಸಮರ: ಕಕ್ಷೆಯಲ್ಲಿ ಆಯುಧಗಳನ್ನು ಇರಿಸಿದ್ದನ್ನು ಒಪ್ಪಿಕೊಂಡ...

ಉಪಗ್ರಹವನ್ನು ಸ್ಫೋಟಿಸದಿದ್ದರೂ ಬಾಹ್ಯಾಕಾಶದಲ್ಲಿ ಜಾಮರ್‌ಗಳು ಸಹ ಅತ್ಯಂತ ಮಾರಕವಾಗಿ ಪರಿಣಮಿಸಬಹುದು. ಇಂದಿನ ದಿನಗಳಲ್ಲಿ ಸಂಪರ್ಕ, ಹವಾಮಾನ ಮುನ್ಸೂಚನೆ, ವಿಮಾನ ಮತ್ತು ಹಡಗುಗಳ ಜಿಪಿಎಸ್ (GPS), ತುರ್ತು ಸೇವೆಗಳು ಮತ್ತು ಆರ್ಥಿಕ ಜಾಲಗಳು ಸಂಪೂರ್ಣವಾಗಿ...

ಗಣೇಶೋತ್ಸವ ಕೋಮು ಸೌಹಾರ್ದದ ಸೇತುವಾಗಲಿ; ಮನುಜ ಸಂಬಂಧದ ತಂತು...

ಗಣೇಶೋತ್ಸವ ಸಂಭ್ರಮ, ಭಕ್ತಿಯಿಂದ ಜನರು ಒಂದೆಡೆ ಸೇರಿ ಆಚರಿಸುವ ಹಬ್ಬ. ಆದರೆ ಇದೇ ಹಬ್ಬದ ಸಂದರ್ಭದಲ್ಲಿ ಕೆಲವೆಡೆ ಕೋಮು ಸಂಘರ್ಷಗಳು ನಡೆಯುತ್ತಿರುವುದು ಮಾತ್ರ ವಿಷಾದನೀಯ. ಭಾರತದಂತಹ ವಿವಿಧ ಧರ್ಮ, ಭಾಷೆ, ಸಂಸ್ಕೃತಿಗಳನ್ನು ಹೊಂದಿರುವ...

“ಎಸ್‌ಐಆರ್ ಆರಂಭವಾದ ದಿನದಿಂದಲೇ ಗಣತಿ ನಮೂನೆ ಪಡೆಯಲು ಬಿಎಲ್‌ಒ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ. ಆನ್‌ಲೈನ್‌ನಲ್ಲೂ ಕರೆ ಮಾಡಲು ಮನವಿ ಸಲ್ಲಿಸಿದ್ದೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ” ಎಂದು ಪೃಥ್ವಿರಾಜು ತಿಳಿಸಿದ್ದಾರೆ.

“ಜುಲೈ 29ರವರೆಗೂ ಬಿಎಲ್‌ಒ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಸ್ಥಳೀಯ ಬಿಎಲ್‌ಎ ಅವರನ್ನು ಸಂಪರ್ಕಿಸಿ, ಎನ್ಯುಮರೇಷನ್ ಫಾರ್ಮ್‌ ಬಗ್ಗೆ ವಿಚಾರಿಸಿದ್ದೇವೆ. ಆಗ, ಅವರು ನಿಮ್ಮನ್ನು ಈಗಾಗಲೇ ‘ಖಾಯಂ ಸ್ಥಳಾಂತರ’ ಎಂದು ದಾಖಲಿಸಲಾಗಿದೆ ಎಂಬ ಮಾಹಿತಿ ನೀಡಿದರು. ನಾವು ನಮ್ಮ ಮನೆಯಲ್ಲೇ ಇದ್ದರೂ, ನಮ್ಮನ್ನು ಖಾಯಂ ಸ್ಥಾಳಾಂತರ ಎಂದು ಗುರುತಿಸಿ, ಮತಪಟ್ಟಿಯಿಂದ ಹೊರಹಾಕುವ ಪ್ರಕ್ರಿಯೆ ನಡೆಸಿದ್ದಾರೆ” ಎಂದು ಅವರು ಅವಲತ್ತುಕೊಂಡಿದ್ದಾರೆ.

“ನಮಗೆ ಎನ್ಯುಮರೇನ್ ಫಾರ್ಮ್‌ ನೀಡದೇ ಇರುವ ಬಗ್ಗೆ ಪ್ರಶ್ನಿಸಿದರೆ, ‘ನೀವು ಮನೆಯಲ್ಲಿ ಇರಲಿಲ್ಲ, ಸಂಪರ್ಕಕ್ಕೆ ಸಿಗಲಿಲ್ಲ’ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಯಾರೂ ಮನೆಗೆ ಬಂದಿರಲಿಲ್ಲ, ಯಾವುದೇ ನೋಟಿಸ್ ನೀಡಲಾಗಿರಲಿಲ್ಲ” ಎಂದು ಪೃಥ್ವಿರಾಜು ಆರೋಪಿಸಿದ್ದಾರೆ.

“ಕುಟುಂಬದ ಹಳೆಯ ಮತದಾರರ ದಾಖಲೆಗಳು, 2002ರಿಂದಲೂ ಇರುವ ದಾಖಲಾತಿಗಳು ಹಾಗೂ ಇತರೆ ದಾಖಲೆಗಳನ್ನು ಸಲ್ಲಿಸಿದರೂ ಅಧಿಕಾರಿಗಳು ಪರಿಗಣಿಸಿಲ್ಲ. ಬದಲಾಗಿ ಹಲವು ವರ್ಷಗಳಿಂದ ವಾಸಿಸುತ್ತಿರುವ ಸ್ವಂತ ಮನೆಯ ಕಂದಾಯ ರಸೀದಿಯನ್ನೂ ಕೇಳಿದ್ದಾರೆ. ಅಷ್ಟೇ ಅಲ್ಲದೆ, ‘ಈಗ ಪಟ್ಟಿಯಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆಗಸ್ಟ್‌ 17ರ ನಂತರ ಹೊಸದಾಗಿ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಿ’ ಎನ್ನುತ್ತಿದ್ದಾರೆ ಬಿಎಲ್‌ಒ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಎಎಸ್‌ಡಿಡಿಒ (Absent, Shifted, Dead, Duplicate, Others) ವರ್ಗದಲ್ಲಿ ಹೆಚ್ಚಿನ ಮತದಾರರನ್ನು ಗುರುತಿಸಲಾಗುತ್ತಿದೆ. ಎಂದರೆ, ಈ ವರ್ಗದಡಿ ಗುರುತಿಸಲಾಗುವ ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ಅಳಿಸಿ ಹಾಕಲಾಗುತ್ತದೆ. ಈ ವರ್ಗದಡಿ ಸುಮಾರು 36 ಲಕ್ಷ ಮತದಾರರನ್ನು ಬೆಂಗಳೂರಿನಲ್ಲಿಯೇ ಪಟ್ಟಿ ಮಾಡಲಾಗಿದೆ. ಈಗ, ಪೃಥ್ವಿರಾಜ್ ಅವರ ಪ್ರಕರಣವನ್ನು ಗಮನಿಸಿದರೆ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಚುನಾವಣಾ ಆಯೋಗದ ಎಡವಟ್ಟಿನಿಂದಾಗಿಯೇ ಈ ಪ್ರಮಾಣದಲ್ಲಿ ಎಎಸ್‌ಡಿಡಿಒ ಅಡಿಯಲ್ಲಿ ಮತದಾರರ ಹೆಸರುಗಳು ಪಟ್ಟಿಯಾಗುತ್ತಿವೆ ಎಂಬ ಗಂಭೀರ ಲೋಪ ಕಂಡುಬರುತ್ತಿದೆ.

ಬಿಎಲ್‌ಒಗಳ ಮನೆ-ಮನೆ ಭೇಟಿ ಪೂರ್ಣಗೊಳ್ಳದಿರುವುದು, ಗಣತಿ ನಮೂನೆ ವಿತರಿಸದಿರುವುದು, ಮತದಾರರನ್ನು ಸಂಪರ್ಕಿಸದಿರುವುದು ಹಾಗೂ ಆಡಳಿತಾತ್ಮಕ ಲೋಪಗಳೂ ಎಎಸ್‌ಡಿಡಿಒ ವರ್ಗದಲ್ಲಿ ಮತದಾರರ ಹೆಸರುಗಳು ಹೆಚ್ಚಾಗಲು ಕಾರಣವಾಗಿವೆಯೇ ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.

ಈ ಹಿಂದೆ ಕೊಡಗು ಜಿಲ್ಲೆಯ ಆದಿವಾಸಿ ಹಾಡಿಗಳಲ್ಲಿಯೂ ಗಣತಿ ನಮೂನೆ ಮತದಾರರಿಗೆ ತಲುಪದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈಗ ಬೆಂಗಳೂರಿನ ಈ ಪ್ರಕರಣವೂ ಎಸ್‌ಐಆರ್ ಅನುಷ್ಠಾನದ ಬಗ್ಗೆ ಹೊಸ ಪ್ರಶ್ನೆಗಳನ್ನು ಎಬ್ಬಿಸಿದೆ.

ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ರಾಜ್ಯದಲ್ಲಿ ಗಣತಿ ನಮೂನೆಗಳನ್ನು ಶೇ.100ರಷ್ಟು ಮತದಾರರಿಗೆ ತಲುಪಿಸಲಾಗಿದೆ ಎಂದು ಹೇಳಿರುವ ಸಂದರ್ಭದಲ್ಲಿ, ನೆಲಮಟ್ಟದಲ್ಲಿ ಹೊರಬರುತ್ತಿರುವ ಇಂತಹ ಪ್ರಕರಣಗಳು ಆ ಹೇಳಿಕೆಗಳ ವಿಶ್ವಾಸಾರ್ಹತೆಯ ಬಗ್ಗೆಯೂ ಪ್ರಶ್ನೆ ಹುಟ್ಟಿಸುತ್ತಿವೆ.

ಹೆಚ್ಚುತ್ತಿರುವ ಎಎಸ್‌ಡಿಡಿಒ ಸಂಖ್ಯೆಯ ಹಿಂದೆ ಕೇವಲ ಮತದಾರರ ಸ್ಥಳಾಂತರವಲ್ಲದೆ, ಎಸ್‌ಐಆರ್ ಅನುಷ್ಠಾನದ ವಿಧಾನ, ಬಿಎಲ್‌ಒಗಳ ಮೇಲಿನ ಆಡಳಿತಾತ್ಮಕ ಒತ್ತಡ, ನೋಟಿಸ್ ಪ್ರಕ್ರಿಯೆಯ ಲೋಪ ಹಾಗೂ ಕಾನೂನು ಪಾಲನೆಯ ಕೊರತೆಯೂ ಕಾರಣವಾಗಿದೆಯೇ ಎಂಬುದನ್ನು ಚುನಾವಣಾ ಆಯೋಗ ಪರಿಶೀಲಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಣೇಶೋತ್ಸವ ಕೋಮು ಸೌಹಾರ್ದದ ಸೇತುವಾಗಲಿ; ಮನುಜ ಸಂಬಂಧದ ತಂತು ಬೆಸೆಯಲಿ

ಗಣೇಶೋತ್ಸವ ಸಂಭ್ರಮ, ಭಕ್ತಿಯಿಂದ ಜನರು ಒಂದೆಡೆ ಸೇರಿ ಆಚರಿಸುವ ಹಬ್ಬ. ಆದರೆ...

ಸೇವಾ ಅವಧಿಯಲ್ಲಾದ ದೈಹಿಕ ಸಮಸ್ಯೆಯು ‘ಸೇವಾ ಸಂಬಂಧಿ’ ಎಂದೇ ಪರಿಗಣಿತ: ಸುಪ್ರೀಂ ಕೋರ್ಟ್

ಸೇನಾ ಪಡೆಗೆ ಸೇರ್ಪಡೆಯಾಗುವ ಸಂದರ್ಭದಲ್ಲಿ ಯಾವುದೇ ದೈಹಿಕ ಅಥವಾ ಮಾನಸಿಕ ಅನಾರೋಗ್ಯ...

ಬಾಡಿ ಶೇಮಿಂಗ್ ತಮಾಷೆಯಲ್ಲ; ಮಾನಸಿಕ ಆರೋಗ್ಯದ ಮೇಲಾಗುವ ಮಾಯದ ಗಾಯ

ದೇಹದ ಬಣ್ಣ, ರೂಪ, ತೂಕ-ಎತ್ತರ, ಮುಖ, ಕೂದಲು ಅಥವಾ ದೈಹಿಕ ವೈಶಿಷ್ಟ್ಯಗಳ...