ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ಪಡೆದ ಕರ್ನಾಟಕ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ

Date:

ಸುಪ್ರೀಂ ಕೋರ್ಟ್ ಕೋಲಿಜಿಯಂ ಕರ್ನಾಟಕದ ಮುಖ್ಯಮಂತ್ರಿ ಪಿ ಬಿ ವರಾಳೆ ಅವರನ್ನು ಸುಪ್ರೀಂ ಕೋರ್ಟಿನ ನ್ಯಾಯಾಧೀಶರನ್ನಾಗಿ ಬಡ್ತಿ ನೀಡಲು ಶಿಫಾರಸ್ಸು ಮಾಡಿದೆ.

ವರಾಳೆ ಅವರು ಪರಿಶಿಷ್ಟ ಜಾತಿಯ ಹೈಕೋರ್ಟ್ ನ್ಯಾಯಾಧೀಶದಲ್ಲಿಯೇ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದಾರೆ. ದೇಶದಲ್ಲಿಯೇ ಇರುವ ಮುಖ್ಯ ನ್ಯಾಯಮೂರ್ತಿಗಳಲ್ಲಿಯೇ ಪರಿಶಿಷ್ಟ ಜಾತಿಯ ಏಕೈಕ ಮುಖ್ಯ ನ್ಯಾಯಮೂರ್ತಿಗಳಾಗಿದ್ದಾರೆ.

ಇವರು ಭಾರತದ ಹೈಕೋರ್ಟ್ ನ್ಯಾಯಾಧೀಶರ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿರುವುದು ಬಾಂಬೆ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರ ಕೊಲಿಜಿಯಂ ಸಮಿತಿ ಬಡ್ತಿ ನೀಡುವ ಮೊದಲು ವರಾಳೆಯವರ ತೀರ್ಪುಗಳು ಮತ್ತು ಸಾಧನೆಗಳನ್ನು ಗಮನಿಸಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಸ್ಪೃಶ್ಯತೆ, ಮೌಢ್ಯ, ಜಾತೀಯತೆ ತೊಲಗಿಸಿ ಬಸವಣ್ಣನಿಗೆ ನಿಜ ಗೌರವ ಸಲ್ಲಿಸೋಣ

“ಇವರು ದೋಷಾರೂಪಣೆ ಮಾಡಲಾಗದ ಸಮರ್ಥ ನ್ಯಾಯಾಧೀಶರು. ಇವರು ವೃತ್ತಿಪರ ನೈತಿಕತೆಯು ಉತ್ತಮ ಗುಣಮಟ್ಟದಿಂದ ಕೂಡಿದೆ” ಎಂದು ಡಿ ವೈ ಚಂದ್ರಚೂಡ್ ನೇತೃತ್ವದ ಐವರ ಕೊಲಿಜಿಯಂ ಸಮಿತಿ ತಿಳಿಸಿದೆ.

ವರಾಳೆ ಅವರು 2008ರಲ್ಲಿ ಬಾಂಬೆ ಹೈಕೋರ್ಟಿನ ನ್ಯಾಯಾಧೀಶರಾಗುವ ಮೊದಲು 23 ವರ್ಷಗಳ ಕಾಲ ಜಿಲ್ಲಾ, ಸಶನ್ಸ್, ಹೈಕೋರ್ಟ್‌ಗಳಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದ್ದಾರೆ. 2022ರಲ್ಲಿ ಇವರನ್ನು ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು.

ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿರುವ ಎಸ್‌ ಕೆ ಕೌಲ್‌ ಅವರು ಕಳೆದ ತಿಂಗಳು ನಿವೃತ್ತರಾಗಿರುವ ಹಿನ್ನೆಲೆಯಲ್ಲಿ ಖಾಲಿಯಿದ್ದ ಸ್ಥಾನಕ್ಕೆ ವರಾಳೆ ಅವರನ್ನು ನೇಮಿಸಲಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಂಗ್ರೆಸ್‌ಗೆ ಮರಳಿದ ಮಾಜಿ ಸಂಸದ ಎಸ್ ಪಿ ಮುದ್ದಹನುಮೇಗೌಡ

ಬಿಜೆಪಿ ತೊರೆದಿದ್ದ ಮಾಜಿ ಸಂಸದ ಎಸ್ ಪಿ ಮುದ್ದಹನುಮೇಗೌಡ ಗುರುವಾರ ಬೆಂಗಳೂರಿನ...

ದಲಿತರ ಅನುದಾನ ದುರ್ಬಳಕೆ ಆರೋಪ; ರಾಜ್ಯಾದ್ಯಂತ ನಾಳೆ (ಫೆ.23) ಪ್ರತಿಭಟನೆಗೆ ಬಿಜೆಪಿ ಕರೆ

ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು 9 ತಿಂಗಳು ಕಳೆದಿದ್ದು, ಪರಿಶಿಷ್ಟ...

ಅಂಕ ಕಡಿಮೆ ಕೊಟ್ಟು ವಿದ್ಯಾರ್ಥಿಗಳ ಶೋಷಣೆ; ಬೆಂಗಳೂರು ನಗರ ವಿವಿಯಲ್ಲಿ ಪ್ರತಿಭಟನೆ

ಬೆಂಗಳೂರು ನಗರ ವಿಶ್ವವಿದ್ಯಾಲಯ ಪರೀಕ್ಷಾ ವಿಭಾಗವು ಪರೀಕ್ಷೆಗಳಲ್ಲಿ ಹಗರಣಗಳನ್ನು ನಡೆಸುತ್ತಿದೆ. ಸೆಮಿಸ್ಟರ್‌...

ಕಲಬುರಗಿ | ಅಪ್ರಾಪ್ತ ಬಾಲಕಿಯ ಕತ್ತು ಕೊಯ್ದು ಪರಾರಿಯಾದ ಬಾಲಕರು

ಸಿನಿಮೀಯ ರೀತಿಯಲ್ಲಿ ಇಬ್ಬರು ಬಾಲಕರು ಅಪ್ರಾಪ್ತ ಬಾಲಕಿಯನ್ನು ಬಸ್ಸಿನಿಂದ ಕೆಳಗಿಳಿಸಿ ಚಾಕುವಿನಿಂದ...