ವಿಜಯನಗರ ಜಿಲ್ಲೆಗೆ ಸಿಗುವುದೇ ಮಂತ್ರಿ ಸ್ಥಾನ? ನಿರೀಕ್ಷೆ ಬಿಟ್ಟರೇ ಕೈ ಶಾಸಕರು?

Date:

ಈಗ ಸಂಪುಟ ಪುನರ್‌ ರಚನೆಯಾದರೂ ಆಗಲಿ, ವಿಸ್ತರಣೆಯಾದರೂ ಆಗಲಿ, ಈ ಬಾರಿಯಾದರೂ ವಿಜಯನಗರ ಜಿಲ್ಲೆಗೆ ಸಚಿವ ಸ್ಥಾನ ಸಿಗಲಿ ಎನ್ನುವುದು ವಿಜಯನಗರ ಕ್ಷೇತ್ರದ ಮತದಾರರ ಆಗ್ರಹವಾಗಿದೆ‌.

ವಿಶ್ವವಿಖ್ಯಾತ ಪ್ರವಾಸಿತಾಣ ಹಂಪಿ ಕ್ಷೇತ್ರ ಹೊಂದಿರುವ ವಿಜಯನಗರ ಜಿಲ್ಲೆ ಕಾಂಗ್ರೆಸ್ ಸರ್ಕಾರದ ಆಡಳಿತ ಅವಧಿಯಲ್ಲಿ ಸಚಿವ ಸ್ಥಾನ ಇಲ್ಲದೆ ಸೊರಗಿದೆ. ಈ ಬಾರಿಯಾದರೂ ವಿಜಯನಗರ ಜಿಲ್ಲೆಯ ಮತದಾರರ ಆಸೆ ಈಡೇರುತ್ತದೆಯೇ? ಎನ್ನುವ ವಿಚಾರಕ್ಕೆ ರೆಕ್ಕೆಪುಕ್ಕಗಳು ಸಿಕ್ಕಂತಾಗಿವೆ.

- Advertisement -

2021ರ ನವೆಂಬರ್ 17ರಂದು ಬಳ್ಳಾರಿ ಅಖಂಡ ಜಿಲ್ಲೆಯಿಂದ ಬೇರ್ಪಟ್ಟು ವಿಜಯನಗರ ಹೊಸ ಜಿಲ್ಲೆಯಾಗಿ ಬೇರ್ಪಟ್ಟಿತು. ವಿಜಯನಗರ ಕ್ಷೇತ್ರದ ಅಂದಿನ ಶಾಸಕರಾಗಿದ್ದ ಆನಂದ್ ಸಿಂಗ್ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಸ್ತುವಾರಿ ಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ, 2023ರ ಚುನಾವಣೆಯಲ್ಲಿ ಆನಂದ್ ಸಿಂಗ್ ಸೋತರು. ಅಲ್ಲಿಂದ ಇಲ್ಲಿವರೆಗೂ ವಿಜಯನಗರ ಜಿಲ್ಲೆಗೆ ಮಂತ್ರಿ ಸ್ಥಾನ ದೊರೆತಿಲ್ಲ. ಈಗ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ಅವರ ಸಂಪುಟದಲ್ಲೂ ವಿಜಯನಗರ ಜಿಲ್ಲೆಯ ಯಾವೊಬ್ಬ ಶಾಸಕರಿಗೂ ಸಚಿವ ಸ್ಥಾನ ದಕ್ಕಿರಲಿಲ್ಲ. ದೂರದೂರಿನ ಜಮೀರ್ ಅಹ್ಮದ್ ಖಾನ್ ಅವರು ವಿಜಯನಗರ ಜಿಲ್ಲೆಯ ಉಸ್ತುವಾರಿ ನಿಭಾಯಿಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಇದೀಗ ಸಿದ್ದರಾಮಯ್ಯ ಅವರ ನಿರ್ಗಮನದ ನಂತರ ಕ್ಯಾಬಿನೆಟ್ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಸಿದ್ದರಾಮಯ್ಯ ಸಂಪುಟದ ಸಚಿವರನ್ನೇ ಮುಂದುವರಿಸಲಾಗುತ್ತದೆಯೇ? ಅಥವಾ ಎಲ್ಲರನ್ನೂ ಕೈಬಿಟ್ಟು ಪುನರ್ ರಚನೆ ಮಾಡಲಾಗುತ್ತದೆಯೇ? ಎನ್ನುವುದು ಸದ್ಯಕ್ಕೆ ನಿಗೂಢವಾಗಿದೆ. ಇದರ ಮಧ್ಯೆ ವಿಜಯನಗರ ಜಿಲ್ಲೆಗೆ ಮತದಾರರ ಒತ್ತಾಯದ ಜತೆಗೆ ಅನಿವಾರ್ಯತೆಯೂ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ ವಿಜಯನಗರ ಜಿಲ್ಲೆ ವಿಶ್ವಪ್ರಸಿದ್ಧವಾದುದು. ಹಂಪಿ ಉತ್ಸವದಂಥ ದೊಡ್ಡ ಕಾರ್ಯಕ್ರಮಗಳು ಜರುಗುತ್ತವೆ. ಆಗ ಬೇರೆ ಜಿಲ್ಲೆಯಿಂದ ಬಂದು ಉಸ್ತುವಾರಿ ವಹಿಸಿಕೊಂಡು ಜವಾಬ್ದಾರಿ ನಿಭಾಯಿಸುವುದು ಜನರ ಮನಸಿಗೆ ಹಿಡಿಸಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹಾಗೆಯೇ ಮೂರು ಜಿಲ್ಲೆಗಳ ಜನರ ಜೀವನಾಡಿ ತುಂಗಭದ್ರಾ ಡ್ಯಾಮ್‌ ನಿರ್ವಹಣೆಯ ಜವಾಬ್ದಾರಿಗಳೂ ಸಾಕಷ್ಟಿವೆ. ಇದರ ಜತೆಗೆ ರೈತರ ಸಮಸ್ಯೆ, ಕುಡಿಯುವ ನೀರಿನ ಬವಣೆ, ಪ್ರವಾಸಿಗರ ಸಮಸ್ಯೆಗಳನ್ನು ಸುಲಭವಾಗಿ ನಿರ್ವಹಿಸುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ವಿಜಯನಗರ ಜಿಲ್ಲೆಗೊಂದು ಸಚಿವ ಸ್ಥಾನ ಬೇಕೇ ಬೇಕು ಎನ್ನುವುದು ಮತದಾರರ ಬೇಡಿಕೆ.

ಈಗ ಸಂಪುಟ ಪುನರ್‌ ರಚನೆಯಾದರೂ ಆಗಲಿ, ವಿಸ್ತರಣೆಯಾದರೂ ಆಗಲಿ, ಈ ಬಾರಿಯಾದರೂ ವಿಜಯನಗರ ಜಿಲ್ಲೆಗೆ ಸಚಿವ ಸ್ಥಾನ ಸಿಗಲಿ ಎನ್ನುವುದು ವಿಜಯನಗರ ಕ್ಷೇತ್ರದ ಮತದಾರರ ಆಗ್ರಹವಾಗಿದೆ‌. ಈ ಹಿನ್ನೆಲೆಯಲ್ಲಿ ಈ ದಿನ.ಕಾಮ್ ತಂಡ ಜಿಲ್ಲೆಯ ಶಾಸಕರನ್ನು ಸಂಪರ್ಕಿಸಿದ್ದು, ಮತದಾರರ ಒತ್ತಾಸೆಯಂತೆ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.

ಈ ದಿನ.ಕಾಮ್ ಗೆ ಪ್ರತಿಕ್ರಿಯೆ ನೀಡಿರುವ ವಿಜಯನಗರ ಕ್ಷೇತ್ರದ ಶಾಸಕ ಎಚ್ ಆರ್ ಗವಿಯಪ್ಪ ಅವರು, “ಸಿಎಲ್‌ಪಿ ಸಭೆ ಸಂಬಂಧ ಬೆಂಗಳೂರಿಗೆ ಬಂದಿದ್ದೇನೆ. ನಾನು ಸಚಿವ ಸ್ಥಾನದ ಮೇಲೆ ನಿರೀಕ್ಷೆ ಇಟ್ಟುಕೊಂಡಿಲ್ಲ. ಸಿದ್ದರಾಮಯ್ಯನವರ ಸಂಪುಟದಲ್ಲೂ ನಮ್ಮ ಜಿಲ್ಲೆಗೆ ಸಚಿವ ಸ್ಥಾನದ ಫಲ ಸಿಕ್ಕಿಲ್ಲ‌. ಇದೆಲ್ಲವೂ ಹೈಕಮಾಂಡ್‌ಗೆ ಗೊತ್ತಿದ್ದು, ಸರಿಯಾದ ನಿರ್ಧಾರ ಕೈಗೊಳ್ಳುತಾರೆ ಎನ್ನುವ ವಿಶ್ವಾಸವಿದೆ” ಎಂದು ಹೇಳಿದರು.

ಇನ್ನು ಕೂಡ್ಲಿಗಿ ಕ್ಷೇತ್ರದ ಶಾಸಕ ಎನ್ ಟಿ ಶ್ರೀನಿವಾಸ್ ಅವರು ಮಾತನಾಡಿ, “ನಾನು ಮೊದಲ ಬಾರಿಗೆ ಗೆದ್ದು ಶಾಸಕನಾಗಿದ್ದೇನೆ. ಜನರ ಸೇವೆ ಮಾಡುವ ಕಾಯಕ ಇನ್ನೂ ಬಹಳಷ್ಟಿದೆ. ನಮ್ಮ ಕ್ಷೇತ್ರವೇ ಇನ್ನೂ ನಮಗೆ ಸರಿಯಾಗಿ ಗೊತ್ತಿಲ್ಲ. ನಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಈಗಷ್ಟೇ ಚುರುಕುಗೊಂಡಿದ್ದು, ಅವುಗಳು ಯಶಸ್ವಿಯಾಗಿ ಮುಗಿದು ಜನರಿಗೆ ಅನುಕೂಲ ಆದರಷ್ಟೇ ಸಾಕು. ಹೀಗಾಗಿ, ನಾನು ಯಾವುದೇ ಮಂತ್ರಿಸ್ಥಾನದ ಮೇಲೆ ನಿರೀಕ್ಷೆ ಇಟ್ಟುಕೊಂಡಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ನಮ್ಮ ಸಮುದಾಯದ ಹಿರಿಯ ನಾಯಕರಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಕ್ಕರೂ ಖುಷಿ ಅಂದಿದ್ದಾರೆ. ಅಲ್ಲದೇ, ವಿಜಯನಗರ ಜಿಲ್ಲೆಗೆ ಆದ್ಯತೆ ನೋಡಿಕೊಂಡು ಮಂತ್ರಿಸ್ಥಾನ ನೀಡಲೆಂದು ಒತ್ತಾಯಿಸುತ್ತೇನೆ” ಎಂದರು.

ಇದನ್ನೂ ಓದಿದ್ದೀರಾ? ಸಮಸ್ಯೆಗೆ ಸ್ಪಂದಿಸುವ ಸ್ಥಳೀಯ ಸರ್ಕಾರವಿಲ್ಲ: ಮೂಲಸೌಕರ್ಯ ಮರೀಚಿಕೆ, ಸಿಗದ ಪಂಚಾಯತ್‌ ಯೋಜನೆ

ಒಟ್ಟಿನಲ್ಲಿ, ಈಗ ರಾಜ್ಯಕ್ಕೆ ಹೊಸ ಸಿಎಂ, ಹೊಸ ಕ್ಯಾಬಿನೆಟ್‌ಗೆ ಕೌಂಟ್ ಡೌನ್ ಶುರುವಾಗಿದೆ. ಈ ಬಾರಿಯಾದರೂ ವಿಜಯನಗರ ಜಿಲ್ಲೆಗೆ ಸಂಪುಟದ ಬಾಗಿಲು ತೆರೆಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

WhatsApp Image 2026 04 20 at 18.37.37 e1776691850820
ವಿಜಯಕುಮಾರ್ ಎಂ
+ posts

ವಿಜಯನಗರ ಕೋಆರ್ಡಿನೇಟರ್‌

ಪೋಸ್ಟ್ ಹಂಚಿಕೊಳ್ಳಿ:

ವಿಜಯಕುಮಾರ್ ಎಂ
ವಿಜಯಕುಮಾರ್ ಎಂ
ವಿಜಯನಗರ ಕೋಆರ್ಡಿನೇಟರ್‌

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಂತರ್ ಮಂತರ್ ಧರಣಿ ಸ್ಥಳ ರದ್ದತಿ ಖಂಡಿಸಿ ಎಸ್‌ಎಫ್‌ಐ, ಡಿವೈಎಫ್‌ಐ ಪ್ರತಿಭಟನಾ ಮೆರವಣಿಗೆ: ಹಲವು ನಾಯಕರು ಪೊಲೀಸ್ ವಶಕ್ಕೆ

ದೇಶದ ರಾಜಧಾನಿ ದೆಹಲಿಯ ಐತಿಹಾಸಿಕ 'ಜಂತರ್ ಮಂತರ್' ಅನ್ನು ಪ್ರಜಾಸತ್ತಾತ್ಮಕ ಪ್ರತಿಭಟನಾ...

ಎಸ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಓವೈಸಿ: ಅರ್ಜಿಯ ತುರ್ತು ವಿಚಾರಣೆಗೆ ಮನವಿ

ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್) ನಡೆಸುತ್ತಿರುವ ಚುನಾವಣಾ ಆಯೋಗದ...