ಗುತ್ತಿಗೆದಾರರೊಬ್ಬರ ಬಾಕಿ ಬಿಲ್ ಬಿಡುಗಡೆಗೆ ₹35 ಸಾವಿರ ಲಂಚ ಫೋನ್‌ಪೇ ಮೂಲಕ ಹಣ ಸ್ವೀಕರಿಸಿದ ಆರೋಪದಡಿ ಇಬ್ಬರು ಇಂಜಿನಿಯರ್‌ಗಳನ್ನು ಲೋಕಾಯುಕ್ತ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.
ಶಹಾಪುರ ತಾಲೂಕಿನ ಭೀಗುಡಿಯಲ್ಲಿರುವ ಕೆಬಿಜೆಎನ್‌ಎಲ್ ಕಚೇರಿಯಲ್ಲಿ ಎಇಇ ಮಧುಸೂದನ ಅವರು ₹35 ಸಾವಿರ ಲಂಚ ಪಡೆದ ಹಿನ್ನೆಲೆಯಲ್ಲಿ ಇಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ವಡಗೇರಾ ತಾಲೂಕಿನ ಗಡ್ಡೆಸೂಗುರಿನ ಖಾಸಿಂಸಾಬ್ ಜಲಾಲ್ ಸಾಬ್ ನೀಡಿದ ದೂರಿನ ಮೇರೆಗೆ ಲೋಕಾಯುಕ್ತರು ದಾಳಿ ನಡೆಸಿದರು.
ಲೋಕಾಯುಕ್ತ ಎಸ್‌ಪಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಜೆ.ಎಚ್.ಇನಾಂದಾರ್, ಇನ್‌ಸ್ಪೆಕ್ಟರ್ ಸಿದ್ದರಾಯ ಬಳ್ಳೂರಗಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ರೆಡ್‌ಹ್ಯಾಂಡ್ ಹಿಡಿದಿದ್ದಾರೆ. ಇಬ್ಬರ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಸರ್ವಪಕ್ಷ ಸಭೆ ಎಂದಾಕ್ಷಣ ಹೆದರಿ ಓಡುವುದೇಕೆ ಪ್ರಧಾನಿ ಮೋದಿ?




