ರಾಯಚೂರ | ಕಾಮಗಾರಿ ಬಿಲ್‌ ಪಾವತಿಗೆ ವಿಳಂಬ : ಎನ್.ಡಿ.ವಡ್ಡರ್‌ ಕಂಪನಿ ಕಚೇರಿಗೆ ಬಿಗ್‌ ಜಡೆದು ಪ್ರತಿಭಟನೆ

Date:

ದೇವದುರ್ಗ ತಾಲೂಕಿನ ನಾರಾಯಣಪುರ ಬಲದಂಡೆ ಕಾಲುವೆ ನವೀಕರಣ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸಿದ ಗುತ್ತಿಗೆದಾರರಿಗೆ ಬಾಕಿ ಇರುವ ಸುಮಾರು 25 ಕೋಟಿ ರೂ. ಬಿಲ್‌ ಪಾವತಿಸುವಂತೆ ಒತ್ತಾಯಿಸಿ, ಗುತ್ತಿಗೆದಾರರು ಎನ್.ಡಿ. ವಡ್ಡರ್ ಕಂಪನಿಯ ಕಚೇರಿಗೆ ಬೀಗ ಹಾಕಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.

- Advertisement -

ಕಳೆದ ಮೂರು-ನಾಲ್ಕು ವರ್ಷಗಳಿಂದ ತಾವು ಕೈಗೊಂಡ ಕಾಮಗಾರಿಗಳ ಬಿಲ್ ಪಾವತಿಗಾಗಿ ನೂರಾರು ಬಾರಿ ಮನವಿ ಸಲ್ಲಿಸಿದ್ದರೂ ಕಂಪನಿ ಆಡಳಿತ ಸ್ಪಂದಿಸಿಲ್ಲ. ಇದರಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಜೀವನ ನಿರ್ವಹಣೆಯೇ ಕಷ್ಟಕರವಾಗಿದೆ ಎಂದು ಅವರು ಸುಮಾರು 40ಕ್ಕೂ ಹೆಚ್ಚು ಗುತ್ತಿಗೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ, ಜನರ ಬದುಕನ್ನು ಸುಡುತ್ತಿರುವ ಬೆಂಕಿ ಕಾಣುವುದಿಲ್ಲವೇ? ರಾಜಕಾರಣಿಯೊಬ್ಬರ ಖಾಸಗಿ ಬದುಕಿನ ಬಗ್ಗೆ ಸುದ್ದಿ ಹೊರಬಿದ್ದರೆ ಸಾಕು; ಮಾಧ್ಯಮಗಳಲ್ಲಿ ಚರ್ಚೆಗಳ ಮಹಾಪೂರ. ಯಾರು...

ಬ್ರೆಜಿಲ್‌ನಲ್ಲಿ ʼಲೂಲಾʼ ಐತಿಹಾಸಿಕ ಗೆಲುವು: ನಾಗರಿಕ ಸಂಘಟನೆಗಳು ಚುನಾವಣೆಯ...

ಬ್ರೆಜಿಲ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಂಥೀಯ ನಾಯಕ ಲೂಯಿಸ್ ಇನಾಸಿಯೊ ಲೂಲಾ ಡಿ ಸಿಲ್ವಾ ಅವರು ಅತ್ಯಂತ ಐತಿಹಾಸಿಕ ರೀತಿಯಲ್ಲಿ ಮರುಆಯ್ಕೆಯಾಗಿದ್ದಾರೆ. ಅಕ್ಟೋಬರ್ 25ರಂದು ನಡೆದ ಎರಡನೇ ಸುತ್ತಿನ ಮತದಾನದಲ್ಲಿ ಅವರು ಬಲಪಂಥೀಯ ಅಭ್ಯರ್ಥಿ...

ರಕ್ತಪಾತಕ್ಕೆ ಬೇಕಿದೆ ಪೂರ್ಣವಿರಾಮ: ಇಸ್ರೇಲ್ ಚುನಾವಣೆಯಲ್ಲಿ ಮೊಳಗಲಿದೆಯೇ ಶಾಂತಿಯ...

ಇಸ್ರೇಲ್ ದೇಶದ ಸಂಸತ್ತನ್ನು ‘ನೆಸೆಟ್’ (Knesset) ಎಂದು ಕರೆಯಲಾಗುತ್ತದೆ. ಇಲ್ಲಿನ ಚುನಾವಣಾ ವ್ಯವಸ್ಥೆಯು ಜಗತ್ತಿನ ಇತರ ದೇಶಗಳಿಗಿಂತ ಭಿನ್ನವಾಗಿದ್ದು, 'ಪ್ರಾತಿನಿಧಿಕ ವ್ಯವಸ್ಥೆ' (Proportional representation) ಅಡಿಯಲ್ಲಿ ನಡೆಯುತ್ತದೆ. ಅಂದರೆ, ಭಾರತದಂತೆ ಇಲ್ಲಿನ ಮತದಾರರು...

“ಈ ಹಿಂದೆ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಒಂದು ತಿಂಗಳೊಳಗೆ ಬಾಕಿ ಬಿಲ್ ಪಾವತಿಸುವುದಾಗಿ ಭರವಸೆ ನೀಡಲಾಗಿತ್ತು. ನಂತರ ಮೇ 31, 2026ರೊಳಗೆ ಹಣ ಪಾವತಿಸುವುದಾಗಿ ಹೇಳಲಾಗಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ಹಣ ಪಾವತಿಸಿಲ್ಲ. ಕಂಪನಿಯ ಮಾಲೀಕರಾದ ಕರಿಯಪ್ಪ ವಜ್ಜಲ್ ಅವರು ಗುತ್ತಿಗೆದಾರರೊಂದಿಗೆ ಸಮಾಲೋಚನೆ ನಡೆಸದೆ, ಭೇಟಿ ಮಾಡಲು ಬಂದವರಿಗೂ ಸ್ಪಂದಿಸುತ್ತಿಲ್ಲ. ಇದರಿಂದ ಬೇಸತ್ತ ಗುತ್ತಿಗೆದಾರರು ಕಳೆದ ಎರಡು ದಿನಗಳಿಂದ ಎನ್.ಡಿ. ವಡ್ಡರ್ ಕಂಪನಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ” ಎಂದು ತಿಳಿಸಿದರು.

“ಕಾಮಗಾರಿಗೆ ಕಂಕರ ಸರಬರಾಜು ಮಾಡಿದವರಿಗೂ ಸುಮಾರು 80 ಲಕ್ಷ ರೂ. ಬಾಕಿ ಪಾವತಿಸಿಲ್ಲ ಎಂದು ಗುತ್ತಿಗೆದಾರರು ಆರೋಪಿಸಿದರು. ಪಟ್ಟಣದ ಗುಡದನಾಳ ರಸ್ತೆಯ ಭಾಗದಲ್ಲಿ ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಖಾಸಗಿ ಮನೆಯ ಕಾಮಗಾರಿಯನ್ನೂ ಪ್ರತಿಭಟನೆಯ ಭಾಗವಾಗಿ ತಡೆಹಿಡಿಯಲಾಗಿದೆ. ನಮ್ಮ ಬಾಕಿ ಹಣವನ್ನು ಸಂಪೂರ್ಣವಾಗಿ ಪಾವತಿಸುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ. ಕಂಪನಿ ಮಾಲೀಕರು ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು” ಎಂದು ಗುತ್ತಿಗೆದಾರರು ಒತ್ತಾಯಿಸಿದರು.

ಇದನ್ನೂ ಓದಿ : ಈ ದಿನ ಸಂಪಾದಕೀಯ | ಏರುತ್ತಿರುವ ಬೆಲೆ ಮತ್ತು ಬದುಕಲು ಕಲಿಸುತ್ತಿರುವ ಮೋದಿ

ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಪಾಟೀಲ್, ಗುರುನಾಥ ರೆಡ್ಡಿ ಮಲದಕಲ್, ಶರಣಗೌಡ ಸುಂಕೇಶ್ವರಹಾಳ, ತುಕರಾಮ್ ಜಿನ್ನಾಪುರ, ಮರೆಪ್ಪ ಮಲದಕಲ್, ವೀರೇಶ ನಾಯಕ, ಚಂದ್ರಕಾಂತ ಸ್ವಾಮಿ ಮಸರಕಲ್, ಪರಮಾನಂದ ಸುಂಕೇಶ್ವರಹಾಳ, ಅಂಜಿನಯ್ಯ ಚಲುವಾದಿ, ಶಿವಕುಮಾರ ಅಮಾರಪುರ, ರಂಗಪ್ಪ ಮುಸ್ಟೂರು, ರವಿಚಂದ್ರ ಮಲದಕಲ್, ಶರಣಗೌಡ ಯರಮರಸ್, ರೆಡ್ಡಿ ರಾಮದುರ್ಗ, ವೀರನಗೌಡ ರಾಮದುರ್ಗ, ಶಫಿ ಮಲದಕಲ್, ಭೀಮಣ್ಣ ಮಲದಕಲ್, ಅಮರೇಶ ಇಟಗಿ ಸೇರಿದಂತೆ ಅನೇಕ ಗುತ್ತಿಗೆದಾರರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಸಾರ್ವಜನಿಕ ಸೇವೆಗಳಲ್ಲಿ ಲೋಪ; ಅಧಿಕಾರಿಗಳಿಗೆ ನೋಟಿಸ್ ನೀಡಲು ಸಿಇಒ ಗಜಾನನ ಬಾಲೆ ಸೂಚನೆ

ಬಡವರು, ರೋಗಿಗಳು, ವಿದ್ಯಾರ್ಥಿನಿಯರು ಹಾಗೂ ವೃದ್ಧರಿಗೆ ಉತ್ತಮ ಸೌಲಭ್ಯ ಕಲ್ಪಿಸಬೇಕಾದ ಸರ್ಕಾರಿ...

ಗ್ಯಾನೇಶ್ ಕುಮಾರ್ ವಜಾಗೊಂಡರೆ, 30 ಸೆಕೆಂಡ್‌ನಲ್ಲಿ ಪ್ರತಿಭಟನೆ ಅಂತ್ಯ: ರಾಹುಲ್‌ ಗಾಂಧಿ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಪ್ರಧಾನಿ...

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ,...

ಬೀದರ್‌ | ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆ ʼಬೆಂಕಿʼ ಪಾಲು, ಆರ್ಥಿಕ ಸಂಕಷ್ಟದಲ್ಲಿ ರೈತರು

ಜಿಲ್ಲೆಯ ವಿವಿಧೆಡೆ ಸಂಭವಿಸುತ್ತಿರುವ ಬೆಂಕಿ ಅವಘಡಗಳಿಂದಾಗಿ ಕೈಗೆ ಬಂದಿದ್ದ ಕಬ್ಬು ಸುಟ್ಟು...