ತುರುವೇಕೆರೆ ತಾಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ಬಿ.ಎಸ್. ನಂಜೇಶ್‌ ಗೌಡ ಆಯ್ಕೆ‌

Date:

 ತುರುವೇಕೆರೆ  ತಾಲೂಕು ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿ ಬಿ.ಎಸ್.ನಂಜೇಶ್‌ ಗೌಡ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದಿದ್ದ ಯುವ ಕಾಂಗ್ರೆಸ್‌ ನ ಚುನಾವಣೆಯಲ್ಲಿ ನಂಜೇಶ್‌ ಗೌಡ ಅತಿಹೆಚ್ಚು ಮತಗಳಿಸುವ ಮೂಲಕ ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರು. 

- Advertisement -

 ತುರುವೇಕೆರೆ ಬ್ಲಾಕ್ ಯುವ ಕಾಂಗ್ರೆಸ್‌ ನ ಅಧ್ಯಕ್ಷರಾಗಿ ಹಟ್ಟಿಹಳ್ಳಿಯ ಕಿರಣ್‌, ಸಿಎಸ್‌ ಪುರ ಬ್ಲಾಕ್‌ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ಎಂ.ನವೀನ್‌ ಆಯ್ಕೆಯಾಗಿದ್ದಾರೆ. ಜಿಲ್ಲಾ ಯುವ ಕಾಂಗ್ರೆಸ್‌ ನ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಜಿ.ಯೋಗೀಶ್‌ ಆಯ್ಕೆಯಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಈ ದಿನ ಕವಿತೆ | ನಾನು, ರಸ್ತೆ ಹಾಗೂ...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಮರಾಠಿ ಕವಿ ವಸಂತ್ ಆಬಾಜಿ ದಹಾಕೆ ಅವರ "ನಾನು, ರಸ್ತೆ ಹಾಗೂ ಕಪ್ಪು ಹಕ್ಕಿ" ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ...

ಶಿವಮೊಗ್ಗ | 40 ವರ್ಷ ದುಡಿದರೂ ಗಜಾನನ ಸಂಸ್ಥೆ...

ಮಲೆನಾಡಿನ ಸಾರಿಗೆ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿದ್ದ ಸಾಗರ ತಾಲೂಕಿನ ಹೆಸರಾಂತ ಗಜಾನನ ಬಸ್ ಸಂಸ್ಥೆ ಒಂದು ಕಾಲದಲ್ಲಿ ಸುಮಾರು 150ಕ್ಕೂ ಹೆಚ್ಚು ಬಸ್‌ಗಳ ಮೂಲಕ ಜನಪ್ರಿಯತೆ ಗಳಿಸಿತ್ತು. ಸಂಸ್ಥೆಯ ಬೆಳವಣಿಗೆಯಲ್ಲಿ...

ರಾಜಕೀಯ ಪಕ್ಷಗಳಿಗೆ ಪ್ರವೇಶವಿಲ್ಲ: ಚುನಾವಣೆ ಬಹಿಷ್ಕರಿಸಿದ ಹೊನ್ನಗುಂಡಿ ಗ್ರಾಮಸ್ಥರು!

ಅದೆಷ್ಟೋ ಚುನಾವಣೆ ನಡೆದು ಹೋದವು, ಆದರೆ ನಮ್ಮೂರಿಗೆ ಮೂಲಭೂತ ಸೌಕರ್ಯಗಳಿಲ್ಲ. ಕನಿಷ್ಠ ಸೌಲಭ್ಯವಾದ ಡಾಂಬರ್ ರಸ್ತೆ ಕಾಣದೆ ಅದೆಷ್ಟೋ ವರ್ಷ ಕಳೆದಿದೆ. ನಮ್ಮ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ ಯಾವ ರಾಜಕೀಯ ಪಕ್ಷಗಳು...

 ಈ ನಾಲ್ಕು ಮಂದಿಯನ್ನು ಅಭಿನಂದಿಸಿ ಮಾತನಾಡಿದ ವಿಧಾನಪರಿಷತ್ ನ ಮಾಜಿ ಸದಸ್ಯ ಬೆಮಲ್‌ ಕಾಂತರಾಜ್‌ ಕಾಂಗ್ರೆಸ್‌ ಪಕ್ಷ ಯುವಕರಿಗೆ ಆಧ್ಯತೆ ನೀಡಿದೆ. ರಾಹುಲ್‌ ಗಾಂಧಿಯವರು ಯುವಕರು ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಸಮಾಜದಲ್ಲಿರುವ ಅಬಲರಿಗೆ ಯುವಕರು ಶಕ್ತಿ ತುಂಬಬೇಕು ಎನ್ನುವ ಕಾರಣಕ್ಕೆ ಯುವಕರನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದರು. 

 ರಾಜ್ಯ ಸರ್ಕಾರ ಜಾರಿಗೆ ತಂದಿರುವ ೫ ಗ್ಯಾರಂಟಿ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಹೊಣೆ ಯುವ ಕಾಂಗ್ರೆಸ್‌ ನ ಪದಾದಿಕಾರಿಗಳಿಗೆ ಇದೆ. ಎಲ್ಲಾ ೫ ಯೋಜನೆಗಳು ಬಡವರ ಆಶಾಕಿರಣವಾಗಿದೆ. ಹಾಗಾಗಿ ಪ್ರತಿಯೊಬ್ಬ ಫಲಾನುಭವಿಗೂ ಸರ್ಕಾರದ ಯೋಜನೆ ತಪ್ಪದೇ ತಲುಪಬೇಕು. ಯುವ ಪದಾದಿಕಾರಿಗಳು ಪಕ್ಷದ ಹಿತಕ್ಕಾಗಿ ಮತ್ತು ಬಡಜನರ ಉದ್ದಾರಕ್ಕಾಗಿ ದುಡಿಯಬೇಕು ಎಂದು ಬೆಮಲ್‌ ಕಾಂತರಾಜ್‌ ಕರೆ ನೀಡಿದರು.

 ತಾವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದೆ. ಹಾಗಂತ ನಾನು ಹತಾಶನಾಗಿಲ್ಲ. ತುರುವೇಕೆರೆ ಕ್ಷೇತ್ರದಾದ್ಯಂತ ಸಂಚರಿಸಿ ಕಾಂಗ್ರೆಸ್‌ ಪಕ್ಷದ ಸಾಧನೆಗಳು ಮತ್ತು ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಲೇ ಇದ್ದೇನೆ. ಆದರೆ ಕೆಲವರು ಉದ್ದೇಶಪೂರ್ವಕವಾಗಿ ಬೆಮಲ್‌ ಕಾಂತರಾಜ್‌ ಮುಂಬರುವ ಚುನಾವಣೆಯಲ್ಲಿ ನೆಲಮಂಗಲ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇವೆಲ್ಲಾ ಸುಳ್ಳು. ನನ್ನ ಜನ್ಮಭೂಮಿ ನೆಲಮಂಗಲವೇ ಆದರೂ ಸಹ ನನ್ನ ಕರ್ಮಭೂಮಿ ತುರುವೇಕೆರೆ. ಹಾಗಾಗಿ ತಾವು ಯಾವುದೇ ಕಾರಣಕ್ಕೂ ತುರುವೇಕೆರೆ ವಿಧಾನಸಭಾ ಕ್ಷೇತ್ರದಿಂದ ಹೊರಹೋಗುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.

 ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸಧೃಢಗೊಳಿಸುವ ಕಾರ್ಯ ನಡೆಯಲಿದೆ. ಕಾಂಗ್ರೆಸ್‌ ಪಕ್ಷ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳು ಜನ ಸಾಮಾನ್ಯರಿಗೆ ಜೀವನೋಪಾಯದ ದಾರಿ ದೀಪವಾಗಿದೆ ಎಂದು ವಿಶ್ವಸಂಸ್ಥೆಯೇ ಮೆಚ್ಚುಗೆ ವ್ಯಕ್ತಪಡಿಸಿದೆ. ನೇರವಾಗಿ ಫಲಾನುಭವಿಗೇ ತಲುಪುತ್ತಿರುವುದು ಈ ಯೋಜನೆಗಳು ಯಶಸ್ವಿಯಾಗಲು ಕಾರಣವಾಗಿದೆ ಎಂದು ಬೆಮಲ್‌ ಕಾಂತರಾಜ್‌ ಹೇಳಿದರು.

 ಕೇಂದ್ರದ ಬೃಹತ್‌ ಕೈಗಾರಿಕಾ ಸಚಿವರಾಗಿರುವ ಹೆಚ್.ಡಿ.ಕುಮಾರಸ್ವಾಮಿಯವರು ಚುನಾವಣಾ ಪ್ರಚಾರಕ್ಕೆ ಬಂದ ಸಂಧರ್ಭದಲ್ಲಿ ತಾಲೂಕಿನ ಋಣ ತೀರಿಸಲು ಸಾಧ್ಯವಿಲ್ಲ. ನನ್ನ ಎರಡು ಕಣ್ಣುಗಳು ಇದ್ದಂತೆ, ಜೆಡಿಎಸ್‌ ನ ಭದ್ರಕೋಟೆ ಎಂದೆಲ್ಲಾ ಹಾಡಿ ಹೊಗಡಿ ಜನರಿಂದ ಮತಗಳಿಸಿಕೊಂಡಿದ್ದಾರೆ. ಆದರೆ ಈ ತಾಲೂಕಿಗೆ ಅವರ ಕೊಡುಗೆ ಏನೇನೂ ಇಲ್ಲ. ಕೂಡಲೇ ತಾಲೂಕಿಗೆ ಅವರು ಯಾವುದಾದರೂ ಕೈಗಾರಿಕೆಯನ್ನು ತರಲಿ. ತಾಲೂಕಿನಲ್ಲಿರುವ ಹಲವಾರು ಯುವಕರಿಗೆ ಉದ್ಯೋಗ ನೀಡಲಿ ಎಂದು ಕಿವಿಮಾತು ಹೇಳಿದರು.

 ತಾಲೂಕಿನ ಅಮ್ಮಸಂದ್ರದ ಸಿಮೆಂಟ್‌ ಕಾರ್ಖಾನೆ ಮುಚ್ಚುವ ಸ್ಥಿತಿಯಲ್ಲಿದೆ. ಆ ಕಾರ್ಖಾನೆಗೆ ಪುನಶ್ಚೇತನ ನೀಡಬೇಕು. ಇಲ್ಲವೇ ಅಲ್ಲಿರುವ ಸಾವಿರಾರು ಎಕರೆ ಭೂಮಿಯನ್ನು ಬಳಸಿಕೊಂಡು ಬೇರೆ ಯಾವುದಾದರೂ ಕಾರ್ಖಾನೆಯನ್ನು ಪ್ರಾರಂಭಿಸಬೇಕೆಂದು ಬೆಮಲ್‌ ಕಾಂತರಾಜ್‌ ಆಗ್ರಹಿಸಿದರು. 

 ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಶ್ರೀರಂಗಪಟ್ಟಣ – ಬೀದರ್‌ ರಸ್ತೆ ಕಾಮಗಾರಿ ಚುರುಕುಗೊಳಿಸಬೇಕು ಮತ್ತು ಎಡಿಯೂರು ತಿಪಟೂರು ರಸ್ತೆಯನ್ನು ಕೂಡಲೇ ಅಭಿವೃದ್ಧಿಪಡಿಸಲು ಕೇಂದ್ರದ ರೈಲ್ವೆ ಸಚಿವರೂ ನಮ್ಮ ಜಿಲ್ಲೆಯೂ ಸಂಸದರೂ ಆಗಿರುವ ವಿ.ಸೋಮಣ್ಣನವರು ಇತ್ತ ಗಮನಹರಿಸಬೇಕೆಂದು ಬೆಮಲ್‌ ಕಾಂತರಾಜ್‌ ಆಗ್ರಹಿಸಿದರು.

 ಪತ್ರಿಕಾಗೋಷ್ಠಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ದೇವರಾಜ್‌, ಮುಖಂಡರಾದ ಸುಬ್ರಮಣಿ ಶ್ರೀಕಂಠೇಗೌಡ, ಪಟ್ಟಣ ಪಂಚಾಯ್ತಿ ಸದಸ್ಯ ಯಜಮಾನ್‌ ಮಹೇಶ್‌, ಟಿ.ಎಸ್.‌ ಶ್ರೀನಿವಾಸ್‌, ಮಾಜಿ ಸದಸ್ಯ ಟಿ.ಎನ್.‌ಶಶಿಶೇಖರ್‌, ಟಿಎಪಿಸಿಎಂಎಸ್‌ ಮಾಜಿ ಅಧ್ಯಕ್ಷ ಗೋಣಿತುಮಕೂರು ಲಕ್ಷ್ಮೀಕಾಂತ್‌, ಪಿಎಲ್‌ ಡಿ ಬ್ಯಾಂಕ್‌ ನಿರ್ದೇಶಕ ಕೆಂಪರಾಜ್‌, ಸೇವಾದಳದ ಅಧ್ಯಕ್ಷ ಕೊಂಡಜ್ಜಿ ಶಿವಕುಮಾರ್, ಮಾವಿನಹಳ್ಳಿ ಮಹಲಿಂಗಯ್ಯ,ಗೊಟ್ಟೀಕೆರೆ ನಾರಾಯಣಗೌಡ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

ವರದಿ – ಎಸ್. ನಾಗಭೂಷಣ್ ತುರುವೇಕೆರೆ

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಳ ಸಮುದಾಯಗಳ ಹೋರಾಟಕ್ಕೆ ಅಹಿಂದ ಒಂದೇ ವೇದಿಕೆಯಾಗಲಿ: ಡಾ. ಭೀಮಣ್ಣ ಮೇಟಿ

ಸಮಾಜದಲ್ಲಿ ಶತಮಾನಗಳಿಂದ ಶೋಷಣೆ ಮತ್ತು ಅಸಮಾನತೆಯನ್ನು ಎದುರಿಸುತ್ತಿರುವ ಸಮುದಾಯಗಳಿಗೆ ರಾಜಕೀಯ, ಸಾಮಾಜಿಕ...

ಮಂಗಳೂರು | ಸಹಕಾರ ಸಂಘಗಳ ಸಭೆಗಳಲ್ಲಿ ಕನಿಷ್ಠ ಹಾಜರಾತಿ, ವಹಿವಾಟು ಕಡ್ಡಾಯ: ಸಚಿವ ಸವದಿ ಸಲಹೆ

ಸಹಕಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಸ್ತಿತ್ವ ಕಳೆದುಕೊಳ್ಳಬಾರದು. ಈ ಕ್ಷೇತ್ರದಲ್ಲಿ...

ತುಮಕೂರು | ಗ್ರಾಮೀಣ ಮಕ್ಕಳೇ ಹೆಚ್ಚು ಧೈರ್ಯಶಾಲಿಗಳು; ಆತ್ಮವಿಶ್ವಾಸದಿಂದ ಮುನ್ನಡೆಯಿರಿ: ಮುರುಳೀಧರ ಹಾಲಪ್ಪ

ತುಮಕೂರು ನಗರ ಪ್ರದೇಶದ ಮಕ್ಕಳಿಗೆ ಹೋಲಿಸಿದರೆ ಗ್ರಾಮೀಣ ಭಾಗದ ಮಕ್ಕಳು ಹೆಚ್ಚು...

ಮಂಡ್ಯ | ಕನ್ನಡ ಶಾಲೆ ಉಳಿಸುವ ಸಂಕಲ್ಪ ಮಾಡಿ: ಬರಗೂರು ರಾಮಚಂದ್ರಪ್ಪ

ಕನ್ನಡ ಶಾಲೆಗಳು ತಾವಾಗಿಯೇ ಮುಚ್ಚಿದರೆ ಅದು ಆತ್ಮಹತ್ಯೆ; ಸರ್ಕಾರವೇ ಮುಚ್ಚಿದರೆ ಹತ್ಯೆಯಾಗುತ್ತದೆ....