ಬಾಗಲಕೋಟೆ | ಕೈಕೊಟ್ಟ ಮುಂಗಾರು; ಹಳ್ಳಿಯನ್ನೇ ತೊರೆದ ಗ್ರಾಮಸ್ಥರು

Date:

ತಡವಾಗಿ ಮಾನ್ಸೂನ್ ಮಾರುತಗಳು ರಾಜ್ಯ ಪ್ರವೇಶಿಸಿವೆ. ಆದರೂ, ಮಳೆ ಕಣ್ಮರೆಯಾಗಿದೆ. ರಾಜ್ಯದ ನಾನಾ ಭಾಗಗಳಲ್ಲಿ ಮಳೆ ಹನಿ ಇನ್ನೂ ಭೂಮಿಗೆ ಬಿದ್ದಿಲ್ಲ. ಹೀಗಾಗಿ, ಮಳೆ ಆಧಾರಿತ ಕೃಷಿಯನ್ನೇ ನಂಬಿದ್ದ ಜನರು ಬರದ ಆತಂಕದಲ್ಲಿದ್ದಾರೆ. ಕೂಲಿ ಕೆಲಸ ಹರಸಿ ಊರನ್ನೇ ತೊರೆಯುತ್ತಿದ್ದಾರೆ.

ಇಂಥದೊಂದು ಸನ್ನಿವೇಶಕ್ಕೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲ್ಲೂಕಿನ ಲಿಂಗಾಪುರ ಗ್ರಾಮ ಸಾಕ್ಷಿಯಾಗಿದೆ. ಗ್ರಾಮದ ದುಡಿಯುವ ವಯಸ್ಸಿನ ಪುರುಷರು-ಮಹಿಳೆಯರು ಉದ್ಯೋಗ ಹರಸಿ ನಗರಗಳತ್ತ ಗುಳೆ ಹೋಗುತ್ತಿದ್ದಾರೆ. ವೃದ್ಧರಷ್ಟೇ ಗ್ರಾಮದಲ್ಲಿ ಕಾಣಸಿಗುತ್ತಿದ್ದಾರೆ.

ಗ್ರಾಮದಲ್ಲಿ 300ಕ್ಕೂ ಅಧಿಕ‌ ಮನೆಗಳಿದ್ದು, ಸುಮಾರು 2,000 ಜನಸಂಖ್ಯೆಯಿದೆ. ಗ್ರಾಮದ ಬಹುತೇಕರು ರೈತರು ಮತ್ತು ಕೃಷಿ ಕಾರ್ಮಿಕರು. ನೀರಾವರಿ ಸೌಲಭ್ಯವಿಲ್ಲದ ಗ್ರಾಮದಲ್ಲಿ ಕೃಷಿಗೆ ಮಳೆ ನೀರೇ ಆಧಾರ. ಆದರೆ, ಈ ವರ್ಷ ಗ್ರಾಮದಲ್ಲಿ ಮಳೆ ಸುರಿದಿಲ್ಲ. ಕೃಷಿ ಮಾಡಲು ನೀರಿಲ್ಲದ ಕಾರಣ, ಮುಂಗಾರು ಬಿತ್ತನೆ ಆರಂಭವೇ ಆಗಿಲ್ಲ. ಇನ್ನು, ಮನರೇಗಾ ಅಡಿಯಲ್ಲಿಯೂ ಸರಿಯಾಗಿ ಕೂಲಿ ಕೆಲಸ ಸಿಗದೆ ಬೇಸತ್ತಿರುವ ಗ್ರಾಮದ ಜನರು ತಮ್ಮ ಮನೆಗಳಿಗೆ ಬೀಗ ಜಡಿದು, ನಗರಗಳತ್ತ ಮುಖ ಮಾಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈಗಾಗಲೇ ಗ್ರಾಮದ 80% ಮಂದಿ ಊರು ತೊರೆದಿದ್ದಾರೆ. ಹಿರಿಯ ಜೀವಗಳು ಊರಿನಲ್ಲಿವೆ. ಅವರೊಂದಿಗೆ ಒಂದಷ್ಟು ಮಂದಿ ಪ್ರಾಯದವರಿದ್ದಾರೆ. ಒಬ್ಬನೇ ಒಬ್ಬ ಯುವಕನೂ ಗ್ರಾಮದಲ್ಲಿ ಕಾಣ ಸಿಗುವುದಿಲ್ಲವೆಂದು ಟಿವಿ9 ವರದಿ ಮಾಡಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಗಬ್ಬೂರು ಗ್ರಾಮಕ್ಕೆ ಪದವಿ ಕಾಲೇಜು ನೀಡುವಂತೆ ಪ್ರಗತಿಪರ ಸಂಘಟನೆಗಳ ಒತ್ತಾಯ

ಸರ್ಕಾರ, ನಿರ್ಲಕ್ಷ್ಯ ಧೋರಣೆ ಬಿಟ್ಟು ಗಬ್ಬೂರು ಗ್ರಾಮಕ್ಕೆ ಪದವಿ ಕಾಲೇಜು ನೀಡುವಂತೆ...

ಕಲಬುರಗಿ | ಸಿಮೆಂಟ್‌ ಕಾರ್ಖಾನೆಯಲ್ಲಿ ಕಾರ್ಮಿಕ ಸಾವು; 2 ತಿಂಗಳಲ್ಲಿ 4ನೇ ದುರಂತ

ಸಿಮೆಂಟ್‌ ಕಾರ್ಖಾನೆಯಲ್ಲಿ ಬೃಹತ್ ಟ್ಯಾಂಕರ್ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ,...

ಬೀದರ್‌ | ವಿದ್ಯುತ್‌ ಸ್ಪರ್ಶ: ಸ್ಥಳದಲ್ಲೇ ವ್ಯಕ್ತಿ ಸಾವು

ವಿದ್ಯುತ್‌ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬಸವಕಲ್ಯಾಣ ತಾಲೂಕಿನ ಲಾಡವಂತಿ...

ವಿಜಯಪುರ | ಮರಗೂರ ಮೊರಾರ್ಜಿ ದೇಸಾಯಿ ವಸತಿಶಾಲೆ ಅವ್ಯವಸ್ಥೆ ಸರಿಪಡಿಸುವಂತೆ ಡಿಎಸ್‌ಎಸ್‌ ಮನವಿ 

ವಿಜಯಪುರ ಜಿಲ್ಲೆಯ ಮರಗೂರ ಮೊರಾರ್ಜಿ ದೇಸಾಯಿ ವಸತಿಶಾಲೆಯ ಅವ್ಯವಸ್ಥೆಗೆ ಕಾರಣರಾಗಿರುವ ಅಧಿಕಾರಿಗಳ...