ಬಾಗಲಕೋಟೆ | ಬರದ ಹೊಡೆತಕ್ಕೆ ಬೆಳೆ ನಿರ್ನಾಮ! ಎಕರೆಗೆ ರೂ.30 ಸಾವಿರ ಖರ್ಚು, ಕೈ ಸೇರದ ಫಸಲು

Date:

ಬಾಗಲಕೋಟೆ ಜಿಲ್ಲೆಯ ರೈತರು ಬಿತ್ತನೆ, ಗೊಬ್ಬರ, ಕೂಲಿ ಸೇರಿದಂತೆ ಎಕರೆಗೆ ರೂ.25ರಿಂದ 30 ಸಾವಿರದವರೆಗೆ ಹಣ ಸುರಿದರೂ, ಈ ಬಾರಿ ಹೊಲಕ್ಕೆ ಫಸಲು ಕೈಗೆಟುಕದ ಸ್ಥಿತಿ ಎದುರಿಸುತ್ತಿದ್ದಾರೆ. ಸಾಮಾನ್ಯವಾಗಿ ಎಕರೆಗೆ 7ರಿಂದ8 ಕ್ವಿಂಟಲ್‌ವರೆಗೆ ಭತ್ತದ ಇಳುವರಿ ಪಡೆಯುತ್ತಿದ್ದ ರೈತರಿಗೆ, ಈ ಬಾರಿ ಒಂದು ಕ್ವಿಂಟಲ್‌ ಕೂಡ ಸಿಗದ ಪರಿಸ್ಥಿತಿ ಎದುರಾಗಿದೆ.

- Advertisement -

ಹಳ್ಳೂರಿನ ರೈತ ಪದ್ಮರಾಜ ಜೋಶಿ ಅವರ ಹೊಲದಲ್ಲಿ ಕಂಡುಬಂದ ಬರದ ಕರಾಳ ಚಿತ್ರಣ. ಕೇಂದ್ರ ಬರ ಅಧ್ಯಯನ ತಂಡದ ಎದುರು ತಮ್ಮ ಸಂಕಷ್ಟ ತೋಡಿಕೊಂಡ ಅವರು, “ಆರು ಎಕರೆಯ ಬೆಳೆ ಸಂಪೂರ್ಣ ನಷ್ಟವಾಗಿದೆ. ಸೂಕ್ತ ಪರಿಹಾರ ನೀಡಬೇಕು” ಎಂದು ಮನವಿ ಮಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಬಾಗಲಕೋಟೆ ಜಿಲ್ಲೆಯ ಹಳದೂರ, ಶಿರೂರ, ಭಗವತಿ ಕ್ರಾಸ್, ಹಳ್ಳೂರ, ಬೇವೂರ, ನಂದನೂರ, ಅಮರಾವತಿ ಹಾಗೂ ಚಿಕ್ಕಕೊಡಗಲಿ ಗ್ರಾಮಗಳ ವ್ಯಾಪ್ತಿಯಲ್ಲಿ ಕೇಂದ್ರ ಬರ ಅಧ್ಯಯನ ತಂಡ ಸೋಮವಾರ ಬೆಳೆಗಳ ಸ್ಥಿತಿಗತಿ ಪರಿಶೀಲಿಸಿತು. ಹೊಲಗಳಿಗೆ ನೇರವಾಗಿ ತೆರಳಿದ ಅಧಿಕಾರಿಗಳು, ಬರದ ಪರಿಣಾಮ ಬೆಳೆಗಳ ಮೇಲೆ ಬೀರಿರುವ ಪರಿಣಾಮವನ್ನು ವೀಕ್ಷಿಸಿದರು.

ಪಟ್ನಾದ ಭತ್ತ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಮಾನ್‌ಸಿಂಗ್ ನೇತೃತ್ವದ ತಂಡ ಸೂರ್ಯಕಾಂತಿ, ಈರುಳ್ಳಿ, ಕಬ್ಬು, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಪರಿಶೀಲಿಸಿತು.

ರೈತರಿಂದ ಎಷ್ಟು ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ, ಸಾಮಾನ್ಯವಾಗಿ ಎಷ್ಟು ಇಳುವರಿ ಬರುತ್ತಿತ್ತು, ಈ ಬಾರಿ ಎಷ್ಟು ನಿರೀಕ್ಷಿಸಬಹುದು ಹಾಗೂ ಸಂಭವಿಸಿರುವ ಆರ್ಥಿಕ ನಷ್ಟ ಎಷ್ಟು ಎಂಬ ಮಾಹಿತಿಯನ್ನು ಪಡೆದುಕೊಂಡರು.

Advertisements

ಶಿರೂರಿನ ರುದ್ರಪ್ಪ ಗಾಣಿಗೇರ ಅವರ ಹೊಲದಲ್ಲಿನ ಕಬ್ಬು ಹಾಗೂ ಬಸಯ್ಯ ಅವರ ಮೆಕ್ಕೆಜೋಳದ ಬೆಳೆಯನ್ನು ತಂಡ ಪರಿಶೀಲಿಸಿತು. ಕಬ್ಬಿನ ಬೆಳವಣಿಗೆ ಕುಂಠಿತಗೊಂಡಿರುವುದು ಮತ್ತು ಮೆಕ್ಕೆಜೋಳದ ತೆನೆ ಕಟ್ಟುವಿಕೆಯಲ್ಲಿನ ವ್ಯತ್ಯಾಸದ ಬಗ್ಗೆ ಅಧಿಕಾರಿಗಳು ರೈತರಿಂದ ಮಾಹಿತಿ ಪಡೆದರು.

ಬೇವೂರಿನ ರೈತ ಬಸವರಾಜ ಅಂಗಡಿ ಅವರು ಕಬ್ಬು ಬೆಳೆ ಎದುರಿಸುತ್ತಿರುವ ಸಂಕಷ್ಟವನ್ನು ತಂಡದ ಗಮನಕ್ಕೆ ತಂದರು.“ಈ ವೇಳೆಗೆ ಕಬ್ಬು ಆಳೆತ್ತರಕ್ಕಿಂತಲೂ ಹೆಚ್ಚು ಬೆಳೆಯಬೇಕಿತ್ತು. ಆದರೆ ನೀರಿನ ಕೊರತೆಯಿಂದ ಬೆಳವಣಿಗೆ ಸಂಪೂರ್ಣ ಕುಂಠಿತವಾಗಿದೆ. ಸಾಮಾನ್ಯವಾಗಿ ಎಕರೆಗೆ 40ರಿಂದ 45 ಟನ್‌ವರೆಗೆ ಕಬ್ಬು ಬರುತ್ತಿತ್ತು. ಈ ಬಾರಿ 10 ಟನ್‌ ಕೂಡ ಸಿಗುವುದು ಕಷ್ಟ” ಎಂದು ಅವರು ವಿವರಿಸಿದರು.

ಬಿತ್ತನೆದಿಂದ ಹಿಡಿದು ರಸಗೊಬ್ಬರ, ಕೂಲಿ ಸೇರಿದಂತೆ ಬೆಳೆಗೆ ಮಾಡಿದ ಸಂಪೂರ್ಣ ವೆಚ್ಚ ರೈತರ ಪಾಲಿಗೆ ಹೊರೆಯಾಗಿದ್ದು, ಉತ್ಪಾದನೆಯೇ ಕುಸಿದಿರುವುದರಿಂದ ಹಾಕಿದ ಬಂಡವಾಳ ಮರಳಿ ಬಾರದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರದಿಂದ ಹೆಚ್ಚಿನ ಪ್ರಮಾಣದ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬರದ ಲೆಕ್ಕಾಚಾರ:

ಹೊಲಗಳ ವಾಸ್ತವ ಸ್ಥಿತಿ ಪರಿಶೀಲಿಸಿದ ಬಳಿಕ ಕೇಂದ್ರ ಬರ ಅಧ್ಯಯನ ತಂಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿತು. ಮಳೆ ಪ್ರಮಾಣ, ಬಿತ್ತನೆ ಪ್ರದೇಶ, ಬೆಳೆಗಳ ಸ್ಥಿತಿ, ಇಳುವರಿ ಕುಸಿತ ಹಾಗೂ ಸಂಭವಿಸಿರುವ ಬೆಳೆ ನಷ್ಟದ ಕುರಿತು ಅಧಿಕಾರಿಗಳಿಂದ ತಂಡ ಮಾಹಿತಿ ಪಡೆದುಕೊಂಡಿತು.

ಕೇಂದ್ರ ಬರ ಅಧ್ಯಯನ ತಂಡದಲ್ಲಿ ಭತ್ತ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಮಾನ್‌ಸಿಂಗ್, ವೆಚ್ಚ ಇಲಾಖೆಯ ಅಧೀನ ಕಾರ್ಯದರ್ಶಿ ಪಾರ್ಥ ಪಾಲ್ ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ರಾಕೇಶಕುಮಾರ್ ಇದ್ದರು.

ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯಿತಿ ಸಿಇಒ ಗಜಾನನ ಬಾಲೆ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಅವರು, ಕೇಂದ್ರ ತಂಡದ ಅಧಿಕಾರಿಗಳಿಗೆ ಜಿಲ್ಲೆಯ ಬರ ಪರಿಸ್ಥಿತಿ ಮತ್ತು ರೈತರ ಸಂಕಷ್ಟದ ಕುರಿತು ಮಾಹಿತಿ ನೀಡಿದರು. ರೈತರು ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಅಧಿಕಾರಿಗಳೊಂದಿಗೆ ಹಂಚಿಕೊಂಡ ಅಹವಾಲುಗಳನ್ನೂ ತಂಡದ ಗಮನಕ್ಕೆ ತಂದರು.

ಹೊಲದಲ್ಲಿ ಬೆಳೆ ನಷ್ಟದ ಪ್ರಮಾಣವನ್ನು ಕಣ್ಣಾರೆ ಕಂಡು, ರೈತರ ಬಾಯಿಂದಲೇ ನಷ್ಟದ ಲೆಕ್ಕ ಕೇಳಿದ ಕೇಂದ್ರ ತಂಡದ ಭೇಟಿಯು, ಬಾಗಲಕೋಟೆಯಲ್ಲಿ ಬರದ ಪರಿಣಾಮ ಎಷ್ಟು ಗಂಭೀರವಾಗಿದೆ ಎಂಬುದಕ್ಕೆ ಸಾಕ್ಷಿಯಾಯಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR | ಮಲ್ಲೇಶ್ವರಂನಲ್ಲಿ ಬಿಜೆಪಿಯಿಂದ ಭಾರೀ ಅಕ್ರಮ; ಮೇಲಧಿಕಾರಿಗಳೇ ಶಾಮೀಲು ಶಂಕೆ- ʼಈ ದಿನʼಕ್ಕೆ ಸಿಕ್ಕಿದೆ ಸಾಕ್ಷ್ಯ

ಬಿಜೆಪಿಯ ಬಿಎಲ್‌ಎಗಳು ಸಲ್ಲಿಸಿರುವ ಅರ್ಜಿಗಳಲ್ಲಿ ನೂರಕ್ಕೆ ನೂರು ಹೆಸರುಗಳು ಮುಸ್ಲಿಮರದ್ದು. ಕಳೆದ...

ಸಾಗರ | ಡಾ. ಹೆಚ್. ಗಣಪತಿಯಪ್ಪ ಸ್ಮಾರಕ ಅಭಿವೃದ್ಧಿಗೆ ಶಾಸಕರಿಗೆ ಮನವಿ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ದಿವಂಗತ ಹೆಚ್.ಗಣಪತಿಯಪ್ಪ...

SIR ನಲ್ಲಿ ದೊಡ್ಡ ಪ್ರಮಾಣದ Form 7 ಅರ್ಜಿಗಳ ಸಲ್ಲಿಕೆ  ಆರೋಪ; ಕ್ರಮಕ್ಕೆ ತೆಲಂಗಾಣ ಚುನಾವಣಾ ಆಯುಕ್ತರ ಆದೇಶ

ಹೈದರಾಬಾದ್: ಪ್ರಸ್ತುತ ನಡೆಯುತ್ತಿರುವ SIR ಪ್ರಕ್ರಿಯೆಯಲ್ಲಿ  ದೊಡ್ಡ ಪ್ರಮಾಣದಲ್ಲಿ ನಕಲಿ Form...

ಆಗುಂಬೆ | ಕಂದಕಕ್ಕೆ ಬಿದ್ದ ಲಾರಿ; ಸ್ಥಳೀಯರಿಂದ ಚಾಲಕನ ರಕ್ಷಣೆ

ಆಗುಂಬೆ ಘಾಟಿಯ ಎರಡನೇ ತಿರುವಿನಲ್ಲಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸುಮಾರು...