SIR | ಮಲ್ಲೇಶ್ವರಂನಲ್ಲಿ ಬಿಜೆಪಿಯಿಂದ ಭಾರೀ ಅಕ್ರಮ; ಮೇಲಧಿಕಾರಿಗಳೇ ಶಾಮೀಲು ಶಂಕೆ- ʼಈ ದಿನʼಕ್ಕೆ ಸಿಕ್ಕಿದೆ ಸಾಕ್ಷ್ಯ

Date:

ಬಿಜೆಪಿಯ ಬಿಎಲ್‌ಎಗಳು ಸಲ್ಲಿಸಿರುವ ಅರ್ಜಿಗಳಲ್ಲಿ ನೂರಕ್ಕೆ ನೂರು ಹೆಸರುಗಳು ಮುಸ್ಲಿಮರದ್ದು. ಕಳೆದ ಇಪ್ಪತ್ತು ವರ್ಷಗಳಿಂದ ಅದೇ ವಾರ್ಡ್‌ನಲ್ಲಿ ವಾಸವಾಗಿದ್ದಾರೆ. ಬಿಎಲ್‌ಒಗಳು ಅವರ ಮನೆಗೆ ಹೋಗಿಯೇ ಫಾರಂ ತುಂಬಿ ಬಂದಿದ್ದಾರೆ; ಮೊದಲ ಪಟ್ಟಿಯಲ್ಲಿಯೇ ಅರ್ಹ ಮತದಾರರಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆಲ್ಲ ಬಿಜೆಪಿ ಕಡೆಯಿಂದ ಫಾರಂ 7 ಅಡಿಯಲ್ಲಿ ತಪ್ಪು ವಿಳಾಸ ನೀಡಿ ಹೆಸರು ಅಳಿಸುವ ಯತ್ನ ಮಾಡಲಾಗಿದೆ. ಕೆಲವು ಬಿಎಲ್‌ಎಗಳಿಗೆ ತಲಾ ಹತ್ತು ಸಾವಿರ ಲಂಚ ನೀಡಲಾಗಿದೆ ಎಂಬ ಆರೋಪ ಬಂದಿದೆ.

- Advertisement -

ಅದೇ ವಾರ್ಡಿನಲ್ಲಿ ದಶಕಗಳಿಂದ ಮತದಾನ ಮಾಡುತ್ತಿದ್ದಾರೆ. ಬಿಎಲ್‌ಒಗಳು ಮನೆ ವಿಸಿಟ್‌ ಮಾಡಿದ್ದಾರೆ. ಮೊದಲ ಪಟ್ಟಿಯಲ್ಲಿಯೇ ಹೆಸರಿದೆ. ಅಂತಹ ವ್ಯಕ್ತಿಗಳ ಹೆಸರಿನ ಮುಂದೆ ಬೇರೆ ವಿಳಾಸ ನಮೂದಿಸಿ ಮತದಾರರ ಪಟ್ಟಿಯಿಂದ ಹೆಸರು ತೆಗೆಯುವಂತೆ ಯಾರೋ ಅರ್ಜಿ ಸಲ್ಲಿಸಿದರೆ ಹೇಗಾಗಬೇಡ? ಎಸ್‌ಐಆರ್‌ ನಲ್ಲಿ ಭಾಗಿಯಾಗಿರುವ ಕೆಲವು ಬಿಎಲ್‌ಒಗಳಿಗೆ ಫಾರಂ 7 ಅರ್ಜಿಗಳಲ್ಲಿರುವ ಹೆಸರುಗಳನ್ನು ನೋಡಿದಾಗ ಅಚ್ಚರಿ ಕಾದಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆ ಕೊನೆಯ ಹಂತ ತಲುಪುತ್ತಿದ್ದಂತೆ ಭಾಲ್ಕಿ, ಬೆಳಗಾವಿ, ತೀರ್ಥಹಳ್ಳಿ, ಪುತ್ತೂರು ಹೀಗೆ ಹಲವು ಕಡೆ ಬಿಜೆಪಿ ನಾಯಕರು ಫಾರಂ 7 ಅಡಿ ನೂರಾರು ಮುಸ್ಲಿಂ ಮತದಾರರ ಹೆಸರು ಅಳಿಸುವಂತೆ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದು ಬಯಲಾಗುತ್ತಿದೆ. ಎಲ್ಲೆಡೆಯಿಂದ ಇಂತಹ ದೂರುಗಳು ಬರಲಾರಂಭಿಸಿವೆ. ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ, ಬಿಜೆಪಿಯ ಡಾ ಅಶ್ವತ್ಥನಾರಾಯಣ ಪ್ರತಿನಿಧಿಸುತ್ತಿರುವ ಕ್ಷೇತ್ರ. ಅಲ್ಲಿ ಭಾರೀ ಅಕ್ರಮ ನಡೆದಿರುವುದು ಮತ್ತು ಅದರಲ್ಲಿ ಮೇಲಧಿಕಾರಿಗಳೇ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಈ ಅನುಮಾನದಲ್ಲಿ ʼಈ ದಿನ.ಕಾಂʼ ಕೆಲವು ಬಿಎಲ್‌ಒಗಳನ್ನು ಸಂಪರ್ಕಿಸಿದಾಗ, ಅಲ್ಲಿ ಬಿಜೆಪಿ ನಡೆಸಿದ ಬ್ರಹ್ಮಾಂಡ ಭ್ರಷ್ಟಾಚಾರದ ಒಂದೊಂದೇ ಎಳೆಗಳು ಬಿಚ್ಚಿಕೊಂಡಿವೆ. ಬಿಎಲ್‌ಎಗಳಿಗೆ ತೊಂದರೆ ಆಗಬಾರದು ಎಂಬ ಕಾರಣದಿಂದ ಅವರ ಹೆಸರುಗಳನ್ನು ಈ ವರದಿಯಲ್ಲಿ ಬಹಿರಂಗಪಡಿಸುತ್ತಿಲ್ಲ.

ಮೊದಲ ಹಂತದಲ್ಲಿಯೇ ಎಲ್ಲ ದಾಖಲೆಗಳೂ ಸರಿಯಾಗಿದ್ದು, ಅವರ ಮನೆಗೇ ಹೋಗಿ ದಾಖಲೆಗಳನ್ನು ಪಡೆದು ಖಾತ್ರಿಪಡಿಸಿಕೊಂಡು ಬಂದವರಿಗೆ ಇದು ನಿಜಕ್ಕೂ ಅಚ್ಚರಿಯೇ ಸರಿ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಜೆಪಿಯಿಂದ ನಿಯೋಜನೆಗೊಂಡ ಬಿಎಲ್‌ಎ ಗಳು ಏಕಾಏಕಿ ಐವತ್ತರಿಂದ ನೂರು ಹೆಸರುಗಳ ಮುದ್ರಿತ ಹೆಸರಿರುವ ಅರ್ಜಿಯನ್ನು ಅಮಾಯಕ ಬಿಎಲ್‌ಒಗಳ ಕೈಗಿತ್ತು, “ಇವರೆಲ್ಲ ಬೇರೆಡೆಗೆ ಶಿಫ್ಟ್‌ ಆಗಿದ್ದಾರೆ, ಈ  ವಿಳಾಸದಲ್ಲಿ ಇಲ್ಲ, ಡಿಲೀಷನ್‌ಗೆ ಬರೀರಿ” ಅಂತ ಹೇಳುತ್ತಾರೆ. ಹೀಗೆ ಬೆಂಗಳೂರಿನ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲೂ ಮುಸ್ಲಿಂ ಮತದಾರರ ಹೆಸರು ಡಿಲಿಟ್‌ ಮಾಡುವ ಯತ್ನ ನಡೆದಿರುವುದನ್ನು ಬಿಎಲ್‌ಒಗಳೇ ಬಹಿರಂಗಪಡಿಸಿದ್ದಾರೆ.

Advertisements

“ಮಲ್ಲೇಶ್ವರದ ವಾರ್ಡ್‌ವೊಂದರಲ್ಲಿ ಕಳೆದ ಆರು ತಿಂಗಳಿನಿಂದ ಮನೆ ಮನೆ ಭೇಟಿ ನೀಡಿ ಮಾಹಿತಿ ತುಂಬಿದ್ದೇನೆ. ಎಸ್‌ಐಆರ್‌ ನಿಯಮದಂತೆ ದಾಖಲೆ ಸಲ್ಲಿಸದ ನೂರು ಜನರ ಪಟ್ಟಿ ನನಗೆ ಬಂದಿತ್ತು. ಆ ವ್ಯಕ್ತಿಗಳ ಮನೆಗೆ ಹೋಗಿ ದಾಖಲೆ ಹುಡುಕಿ ಅಪ್‌ಲೋಡ್‌ ಮಾಡಿದ್ದೇನೆ. ಅದರಲ್ಲಿ ಒಂದೆರಡು ಹೆಸರುಗಳು ಮಾತ್ರ ಮುಸ್ಲಿಮರದ್ದಿತ್ತು. ಉಳಿದವರೆಲ್ಲ ಹಿಂದೂಗಳು. ಅದರಲ್ಲೂ ಹಿರಿಯ ನಾಗರಿಕರು. ಕಷ್ಟಪಟ್ಟು ಅವರ ದಾಖಲೆಗಳನ್ನು ಹುಡುಕಾಡಿ ಸೇರಿಸಿದ್ದೇನೆ. ಅಷ್ಟೆಲ್ಲ ಮಾಡಿದ ನಂತರ ನಮ್ಮ ಜೊತೆಗೇ ಮನೆ ಮನೆ ಭೇಟಿ ನೀಡಿದ್ದ ಬಿಎಲ್‌ಎಗಳ ಸಹಿ ಇರುವ ಫಾರಂ 7 ಬಂದಾಗ ಬಹಳ ಆಶ್ವರ್ಯ ಆಗಿತ್ತು. ಅವರಲ್ಲಿ ಕೇಳಿದಾಗ “ಈಗ ಅವರೆಲ್ಲ ಅಲ್ಲಿಲ್ಲ, ಡಿಲಿಟ್‌ ಮಾಡಿಸಿ” ಎಂದಷ್ಟೇ ಹೇಳಿ ನುಣುಚಿಕೊಂಡರು. ಆ ಅರ್ಜಿಗಳಲ್ಲಿ ಇರುವ ನೂರಕ್ಕೆ ನೂರು ಹೆಸರುಗಳು ಮುಸ್ಲಿಮರದ್ದು. ಕಳೆದ ಇಪ್ಪತ್ತು ವರ್ಷಗಳಿಂದ ಅಲ್ಲಿಯೇ ವಾಸವಾಗಿರುವ ವ್ಯಕ್ತಿಗಳದಾಗಿತ್ತು. ನಾನೇ ಆ ವ್ಯಕ್ತಿಗಳ ಮನೆಗೆ ಹೋಗಿಯೇ ಫಾರಂ ತುಂಬಿದ್ದೇನೆ. ಮೊದಲ ಪಟ್ಟಿಯಲ್ಲಿಯೇ ಅರ್ಹ ಮತದಾರರಾಗಿ ಆಯ್ಕೆ ಆಗಿದ್ದಾರೆ. ಅವರೆಲ್ಲ ಹಳೆಯ ವಿಳಾಸದಲ್ಲಿಯೇ ಇದ್ದಾರೆ ಎಂಬುದು ಖಾತ್ರಿಯಾಗಿತ್ತು. ನನಗೆ ಸುಮಾರು 67 ಮುಸ್ಲಿಂ ಹೆಸರುಗಳಿರುವ ಅರ್ಜಿಗಳನ್ನು ಒಬ್ಬರೇ ಬಿಎಲ್‌ಎ ಹೆಸರಿನಲ್ಲಿ ನೀಡಲಾಗಿದೆ. ಅವರೆಲ್ಲರೂ ಅರ್ಹ ಮತದಾರರು. ಫಾರಂ 7ನಲ್ಲಿ ಅವರ ಹೆಸರು ಎಪಿಕ್‌ ನಂಬರ್‌ ಮಾತ್ರ ಇತ್ತು. ಪೂರ್ತಿ ಮನೆ ವಿಳಾಸ ಇರಲಿಲ್ಲ. ಡೋರ್‌ ನಂಬರ್‌ 6, 8 ಹೀಗೆ ಇತ್ತು. ಹೀಗಾಗಿ ನಾನು ಮೇಲಧಿಕಾರಿ ಗಮನಕ್ಕೆ ತಂದೆ. ಅವರೂ ಆ ವಿಳಾಸದಲ್ಲಿ ಇದ್ದಾರಾ ನೋಡಿ ಅಂದ್ರು. ಅಷ್ಟರಲ್ಲಿ ಸರ್ಕಾರವೇ ಈ ವಿಚಾರವನ್ನು ಆಯೋಗದ ಗಮನಕ್ಕೆ ತಂದು ಫಾರಂ 7 ರದ್ದಾದ ನಂತರ ನಮ್ಮಿಂದ ವಾಪಸ್‌ ಪಡೆದಿದ್ದಾರೆ. ಬಹಳ ದೊಡ್ಡ ಅಕ್ರಮದಲ್ಲಿ ನಾವು ಸಿಲುಕುತ್ತಿದ್ದೆವು. ಈಗ ನಿರಾಳರಾಗಿದ್ದೇವೆ ” ಎಂದು ಬಿಎಲ್ಎ ಒಬ್ಬರು ಹೇಳಿಕೊಂಡರು.

ಮತ್ತೊಬ್ಬರು  ಬಿಎಲ್‌ಒವನ್ನು ವಿಚಾರಿಸಿದಾಗ, “ಪಟ್ಟಿಯಲ್ಲಿದ್ದ ಒಬ್ಬರು ನಮಗೆಲ್ಲ ಚಿರಪರಿಚಿತರು. ಹೈಸ್ಕೂಲ್‌ ಶಿಕ್ಷಕಿಯಾಗಿ ನಿವೃತ್ತರಾದವರು. ಅವರ ಪತಿ ಕೂಡ ಸರ್ಕಾರಿ ಸೇವೆಯಲ್ಲಿದ್ದು ನಿವೃತ್ತರಾಗಿದ್ದಾರೆ. ಅವರ ಮನೆಗೆ ಹೋಗಿ ಫಾರಂ ತುಂಬಿದ್ದೆವು. ಬಿಜೆಪಿಯ ಬಿಎಲ್‌ಎಗಳು ಅವರ ಹೆಸರನ್ನೂ ವಿಳಾಸದಲ್ಲಿ ಇಲ್ಲದವರು ಎಂದು ನಮೂದಿಸಿದ್ದರು. ಕೊನೆಯ ದಿನ ರಾಶಿ ಅರ್ಜಿಗಳು ನಮ್ಮ ಸೂಪರ್‌ವೈಸರ್‌ ಕಡೆಯಿಂದ ಬಂದಿದ್ದವು. ನೋಡಿದರೆ ವೈಯಕ್ತಿಕ ಅರ್ಜಿಗಳೇ ಇಲ್ಲ. ಮುದ್ರಿತ ಹೆಸರುಗಳು, ಎಲ್ಲವೂ ಮುಸ್ಲೀಮರದಾಗಿತ್ತು. ನಮ್ಮ ಮೇಲಿನವರಿಗೆ ತಿಳಿಸಿದಾಗ, ಚೆಕ್‌ ಮಾಡಿ ಎಂದಷ್ಟೇ ಹೇಳಿದರು. ಅರ್ಜಿ ಇಟ್ಟುಕೊಳ್ಳಿ, ಸಲ್ಲಿಸಬೇಡಿ ಅಂದ್ರು. ಕಳೆದ ವಾರ ಕಾಂಗ್ರೆಸ್‌ನವರು ಪ್ರತಿಭಟನೆ ಮಾಡಿದ ನಂತರ ಅರ್ಜಿಗಳನ್ನು ಮೇಲಧಿಕಾರಿಗಳು ವಾಪಸ್‌ ಪಡೆದಿದ್ದಾರೆ” ಎಂದು ಮಾಹಿತಿ ನೀಡಿದರು.

ಈ ಮೇಲಧಿಕಾರಿಗಳು ಮುಸ್ಲಿಮರ ಹೆಸರು ಡಿಲಿಟ್‌ ಮಾಡಿಸುವ ಸುಪಾರಿ ಪಡೆದಿದ್ದರೇ ಎಂಬ ಅನುಮಾನ ಬರುತ್ತದೆ. ಕೆಲವು ಬಿಜೆಪಿ ಪರ ಇರುವ ಬಿಎಲ್‌ಎ, ಸೂಪರ್‌ವೈಸರ್‌ಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಇದೆ. ಅದನ್ನು ಅಲ್ಲಗಳೆಯುವಂತಿಲ್ಲ.

” ಒಬ್ಬರಿಗೆ, 67, ಮತ್ತೊಬ್ಬರಿಗೆ 80, ಇನ್ನೊಬ್ಬರಿಗೆ 150 ಹೀಗೆ ಪಟ್ಟಿ ಮಾಡಿ ಕೊಟ್ಟಿದ್ದಾರೆ. ಮೂವರಿಗೆ ಕನಿಷ್ಠ ಮುನ್ನೂರು ಮತದಾರರ ಹೆಸರು ಕೊಟ್ಟಿದ್ದಾರೆ. ಇವರೆಲ್ಲ ಹಳೆಯ ವಿಳಾಸದಲ್ಲಿಯೇ ಇದ್ದಾರೆ. ಮೊದಲ ಪಟ್ಟಿಯಲ್ಲೂ ಹೆಸರುಗಳಿವೆ ಎಂದು ಹೇಳಿದಾಗ, ʼಅವರೆಲ್ಲ ಈ ವಿಳಾಸದಲ್ಲಿ ಇಲ್ಲ. ಬೇಕಿದ್ದರೆ ನಾವು ಜೊತೆಗೆ ಬರುತ್ತೇವೆʼ ಎಂದು ಹೇಳಿದ್ದಾರೆ. ನಿಜವಾದ ದಾಖಲೆಗಳಲ್ಲಿ ಇರುವ ವಿಳಾಸ ಮತ್ತು ಈ ಅರ್ಜಿಗಳಲ್ಲಿರುವ ವಿಳಾಸಗಳು ಸಂಪೂರ್ಣ ಬೇರೆಯಾಗಿತ್ತು” ಎಂದು ಬಿಎಲ್‌ಒ ಒಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

“ನಮ್ಮಲ್ಲಿ ಕೆಲವರು ನಮ್ಮ ಮೇಲಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದೇವೆ. ಇದು ನಮ್ಮ ಅನ್ನಕ್ಕೆ ಕುತ್ತು ತರುವ ಕೆಲಸ. ಇಷ್ಟು ದಿನ ನಾವು ಬಹಳಷ್ಟು ಶ್ರದ್ಧೆಯಿಂದ ಕೆಲಸ ಮಾಡಿದ್ದೇವೆ. ಕೊನೆಗೆ ನಮ್ಮ ಮೇಲೆ ಪ್ರಕರಣ ದಾಖಲಾಗುವ ಪರಿಸ್ಥಿತಿ ಬಂದರೆ ನಮ್ಮನ್ನು ರಕ್ಷಣೆ ಮಾಡೋರು ಯಾರು?” ಎಂದು ಆತಂಕ ವ್ಯಕ್ತಪಡಿಸಿದರು.

67 ಮುಸ್ಲಿಂ ಮತದಾರರ ಹೆಸರು ತೆಗೆಯಲು ಅರ್ಜಿ ಹಾಕಿದ್ದ ಬಿಜೆಪಿ ಬೂತ್‌ ಏಜೆಂಟ್‌

ಬಿಜೆಪಿಯ ಬೂತ್‌ ಲೆವೆಲ್‌ ಏಜೆಂಟ್‌ ಮಹಿಳೆ ಒಟ್ಟು 67 ಹೆಸರುಗಳನ್ನು ʼಬೇರೆ ಕಡೆ ಹೆಸರಿದೆ, ಶಾಶ್ವತವಾಗಿ ವಾಸಸ್ಥಳ ಬದಲಾಗಿದೆ…ʼ ಹೀಗೆ ಬೇರೆ ಬೇರೆ ಕಾರಣ ನೀಡಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಸಮ್ದಾನಿ ಅವರೂ ಒಬ್ಬರು. ಅವರನ್ನು ಸಂಪರ್ಕಿಸಿದಾಗ ಅವರಿಗೆ ಅಚ್ಚರಿಯಾಯ್ತು. “ಅದೇ ವಾರ್ಡ್‌ನಲ್ಲಿ ನಾನು ಹುಟ್ಟಿ ಬೆಳೆದವನು. ಈಗ ಐವತ್ತು ವರ್ಷ. ಈಗಲೂ ಅಲ್ಲಿನ ಮತದಾರ. ನನ್ನ ಮನೆಗೆ ಬಿಎಲ್‌ಒ ಬಂದಿದ್ದರು. ಮೊದಲ ಪಟ್ಟಿಯಲ್ಲಿಯೇ ನನ್ನ ಹೆಸರಿತ್ತು. ಆದರೆ, ಬಿಎಲ್‌ಎ ಈ ತರ ಮಾಡಿರುವುದು ಅನ್ಯಾಯ. ಇದು ನನ್ನ ಗಮನಕ್ಕೆ ಬಂದಿರಲಿಲ್ಲ” ಎಂದರು.

ಆಯೋಗಕ್ಕೆ ಸುಳ್ಳು ಮಾಹಿತಿ ನೀಡುವುದು Representation of the people Act 1950 (43 of 1950) ಅಡಿ ಶಿಕ್ಷಾರ್ಹ ಅಪರಾಧ ಎಂಬ ಡಿಕ್ಲರೇಷನ್‌ಗೆ ಅರ್ಜಿದಾರರು ಸಹಿ ಮಾಡಿದ್ದಾರೆ. ಯಾರದ್ದೋ ಬೆಂಬಲ ಇಲ್ಲದೇ ಹೀಗೆ ಮಾಡುವ ಧೈರ್ಯ ಸಾಮಾನ್ಯ ಕಾರ್ಯಕರ್ತರಿಗೆ ಎಲ್ಲಿಂದ ಬಂದೀತು? ಬಿಜೆಪಿಯ ಉನ್ನತ ನಾಯಕರ ಸೂಚನೆಯ ಮೇರೆಗೆ ನಡೆದ ಈ ಅಕ್ರಮದಲ್ಲಿ ಬೂತ್‌ ಏಜೆಂಟ್‌ಗಳು ಬಲಿಪಶುಗಳಾಗಿದ್ದಾರೆ.

declaration
ಬಿಎಲ್‌ಎ ಸಹಿ

ಅಧಿಕಾರಿಗಳೇ ಶಾಮೀಲಾಗಿರುವ ಶಂಕೆ!

ಯಾರೋ ನೂರಾರು ಹೆಸರುಗಳನ್ನು ಡಿಲಿಟ್‌ ಮಾಡಲು ಅರ್ಜಿ ಕೊಟ್ಟಾಗ, ಅದರಲ್ಲೂ ಒಂದೇ ಸಮುದಾಯದ ಹೆಸರುಗಳನ್ನು ಕಂಡಾಗ ಎಂತಹ ದಡ್ಡರಿಗಾದರೂ ಅನುಮಾನ ಬರುತ್ತದೆ. ಸಾಮಾನ್ಯ ಬಿಎಲ್‌ಒಗಳಿಗೂ ಅನುಮಾನ ಬಂದಿದೆ. ಇಲ್ಲೇನೋ ಅಕ್ರಮ ನಡೆಯುತ್ತಿದೆ ಎಂಬ ಸಂಶಯ ಬಂದಾಗ ಪರಸ್ಪರ ಮೂರ್ನಾಲ್ಕು ಬಿಎಲ್‌ಒಗಳು ಮಾತನಾಡಿಕೊಂಡಿದ್ದಾರೆ. ಎಲ್ಲರಿಗೂ  ಮುಸ್ಲಿಮರ ಹೆಸರುಗಳಿರುವ ಮುದ್ರಿತ ಪಟ್ಟಿ ನೀಡಿಲಾಗಿತ್ತು. ಕೆಲವರಿಗೆ ಆರ್‌ಒ ಕಡೆಯಿಂದ ಸೂಪರ್‌ವೈಸರ್‌ ಮೂಲಕ ಕಳಿಸಿಕೊಡಲಾಗಿತ್ತು. ಹೋಗಿ ಚೆಕ್‌ ಮಾಡಿ ಎಂದು ಕಳಿಸಿದ್ದಾರೆ. ಇಲ್ಲಿ ಕಾಡುವ ಪ್ರಶ್ನೆ ಎಂದರೆ, ತಳಮಟ್ಟದ ಬಿಎಲ್‌ಒಗಳಿಗೆ ಅನುಮಾನ ಬಂದಿರುವಾಗ ಸೂಪರ್‌ವೈಸರ್‌, ಮೇಲಧಿಕಾರಿಗಳಿಗೆ ಅನುಮಾನ ಬಂದಿಲ್ಲವೇ? ಅಥವಾ ಇವರೆಲ್ಲ ಬಿಜೆಪಿ ಷಡ್ಯಂತ್ರದ ಭಾಗವಾಗಿ ಗೊತ್ತಿದ್ದೇ ಬಿಎಲ್‌ಒಗಳಿಂದ ಈ ಕೆಲಸ ಮಾಡಿಸಲು ಹೊರಟಿದ್ದರೇ? ಎಂಬುದು ಸಮಗ್ರ ತನಿಖೆಯಿಂದಷ್ಟೇ ತಿಳಿಯಬೇಕಿದೆ.

ಇದನ್ನೂ ಓದಿ ತೀರ್ಥಹಳ್ಳಿ | ಮತಪಟ್ಟಿಯಿಂದ ಮುಸ್ಲಿಮರ ಹೆಸರು ಅಳಿಸಲು ಬಿಜೆಪಿ ಸಂಚು? ತಹಶೀಲ್ದಾರ್‌ಗೆ ಪತ್ರ ಬರೆದಿದ್ದ ಬಿಜೆಪಿ ಮುಖಂಡ

ಬಿಎಲ್‌ಒ ಒಬ್ಬರ ಮಾತು ಈ ಅನುಮಾನ ಮೂಡಿಸಿದೆ. “ಫಾರಂ 7 ಅರ್ಜಿ ಸಲ್ಲಿಕೆಯ ಕೊನೆಯ ದಿನ ನಾನು ಆಫೀಸಿಗೆ ಹೋದಾಗ ಅಲ್ಲಿ ಬಹಳಷ್ಟು ಬಿಎಲ್‌ಎಗಳು ಮತ್ತು ಬಿಎಲ್‌ಒಗಳು ಸೇರಿದ್ದರು. ನಾನು ಹೋಗುತ್ತಿದ್ದಂತೆ, “ನಿಮಗೆ ಪೇಮೆಂಟ್‌ ಆಯ್ತಾ..?” ಎಂದು ಬಿಎಲ್‌ಎಗಳು ಮಾತನಾಡಿಕೊಳ್ಳುತ್ತಿದ್ದರು. “ನಮಗೆಲ್ಲ ಹತ್ತು ಸಾವಿರ ಪೇಮೆಂಟ್‌ ಆಯ್ತು” ಎಂದು ಬಿಎಲ್‌ಎ ಒಬ್ಬರು ಹೇಳಿದರು. ಬಿಜೆಪಿ ಪರವಾಗಿರುವ ಬಿಎಲ್‌ಒ, ಬಿಎಲ್‌ಎ ಮತ್ತು ಮೇಲಧಿಕಾರಿಗಳೂ ಹಣ ಪಡೆದಿರುವ ಸಾಧ್ಯತೆ ಇದೆ ಎಂಬ ಅನುಮಾನವನ್ನು ಈ ಪ್ರಕರಣ ಮೂಡಿಸಿದೆ.

ಐದು ವರ್ಷಗಳ ಹಿಂದೆ ʼಚಿಲುಮೆʼಯಿಂದ ಆರಂಭವಾಗಿತ್ತು ಅಕ್ರಮ

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ನಾಯಕರು ನಡೆಸಲು ಉದ್ದೇಶಿಸಿದ್ದ ಈ ಅಕ್ರಮ ಐದು ವರ್ಷಗಳ ಹಿಂದೆಯೇ ʼಚಿಲುಮೆʼ ಎಂಬ ಖಾಸಗಿ ಸಂಸ್ಥೆಯ ಮೂಲಕ ಮಾಡಿಸಿದ್ದರು. 2021ರಲ್ಲಿ ಅಕ್ರಮ ಮತದಾರರ ಗುರುತಿನ ಚೀಟಿ ಸೃಷ್ಟಿಸಿ ಭಾರೀ ಸದ್ದು ಮಾಡಿದ್ದ ಮಲ್ಲೇಶ್ವರಂ ಕ್ಷೇತ್ರ. ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. 2023ರ ಚುನಾವಣಾ ಅಕ್ರಮಕ್ಕೆ ಬಿಜೆಪಿ ಮುಂದಾಗಿತ್ತು. ಮತದಾರರ ಪಟ್ಟಿಗೆ ಹೆಸರು ಸೇರಿಸುವ/ ತೆಗೆಯುವ ಕೆಲಸವನ್ನು ಚುನಾವಣಾ ಆಯೋಗ ಚಿಲುಮೆ ಎಂಬ ಖಾಸಗಿ ಸಂಸ್ಥೆಗೆ ವಹಿಸಿತ್ತು. ಬಿಜೆಪಿಯೇತರ ಮತದಾರರ ಹೆಸರು ಡಿಲಿಟ್‌ ಮಾಡಿ, ನಕಲಿ ಮತದಾರರನ್ನು ಸೇರ್ಪಡೆ ಮಾಡಿದ ಆರೋಪ ಚಿಲುಮೆ ಮೇಲಿದೆ. ಅಲ್ಲಿನ ಶಾಸಕ ಡಾ ಅಶ್ವತ್ಥನಾರಾಯಣ ಅವರಿಗೂ ಚಿಲುಮೆಗೂ ನಂಟಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಈಗ ಎಸ್‌ಐಆರ್‌ನಲ್ಲೂ ಅರ್ಹ ಮುಸ್ಲಿಂ ಮತದಾರರ ಹೆಸರು ಅಳಿಸುವ ಕುತಂತ್ರ ಬಿಜೆಪಿ ನಾಯಕರೇ ಮಾಡಿದ್ದಾರೆ. ಬಿಜೆಪಿ ಕಚೇರಿಯಿಂದ ಮುದ್ರಿತ ಹೆಸರುಗಳ ಪಟ್ಟಿಯನ್ನು ಕಾರ್ಯಕರ್ತರಿಗೆ ಪೂರೈಸಲಾಗಿದೆ. ಅವರು ಫಾರಂ 7 ಅರ್ಜಿಗೆ ಸಹಿ ಮಾಡಿ ತಗಲಾಕಿಕೊಂಡಿದ್ದಾರೆ.

ಈಗ ತಮ್ಮ ಬಣ್ಣ ಬಯಲಾಗುವ ಭಯದಿಂದ ಬಿಜೆಪಿ ನಾಯಕರು ಏನೇನೋ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ತಮ್ಮ ಕಾರ್ಯಕರ್ತರಿಗೆ ಹಿಂಸೆ ನೀಡಲಾಗುತ್ತಿದೆ. ಬಿಜೆಪಿಕಾರ್ಯಕರ್ತರ ಮೇಲಿನ ಎಫ್‌ಐಆರ್‌ ಕೈ ಬಿಡಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಪೊಲೀಸರಿಗೆ ಆಗ್ರಹ ಮಾಡಿದ್ದಾರೆ. ಈ ಸಂಬಂಧ ಇಂದು ರಾಜ್ಯಪಾಲರಿಗೂ ಮನವಿ ಕೊಡುವುದಾಗಿ ಹೇಳಿದ್ದಾರೆ. ದೇಶಾದ್ಯಂತ ಎಸ್‌ಐಆರ್‌ ಹೆಸರಿನಲ್ಲಿ ಅರ್ಹ ಮತದಾರರ ಹೆಸರು ಡಿಲಿಟ್‌ ಮಾಡುವ ಸಂವಿಧಾನ ವಿರೋಧಿ ಕೃತ್ಯವನ್ನು ಬಿಜೆಪಿ ಮತ್ತು ಚುನಾವಣಾ ಆಯೋಗ ಒಂದಾಗಿ ಮಾಡುತ್ತಿದೆ ಎಂಬ ಅನುಮಾನ ಈಗ ಅನುಮಾನವಷ್ಟೇ ಆಗಿ ಉಳಿದಿಲ್ಲ. ಅವರೇ ಪುರಾವೆಗಳನ್ನು ಒದಗಿಸುತ್ತಿದ್ದಾರೆ.
***
ರಾಜ್ಯದ ಬೇರೆ ಬೇರೆ ಕಡೆಗಳಿಂದ ಎಸ್‌ಐಆರ್‌ ಅಕ್ರಮದ ಬಗ್ಗೆ ದಿನವೂ ಮಾಧ್ಯಮಗಳಲ್ಲಿ ವರದಿಗಳು ಬರುತ್ತಿವೆ. ಕೆಲವು ಬಿಎಲ್‌ಒಗಳು ಈ ದಿನ.ಕಾಮ್‌ ಸಂಪರ್ಕಿಸುತ್ತಿದ್ದಾರೆ. ಅಂತಹ ಹಲವು ಅಕ್ರಮಗಳ ಸಾಕ್ಷಾತ್‌ ವರದಿ ಈ ದಿನ.ಕಾಮ್‌ ಮಾಡಲಿದೆ. ಬಿಎಲ್‌ಒಗಳ ಮಾಹಿತಿ ಬಹಿರಂಗಪಡಿಸದೇ ವರದಿ ಮಾಡಲಿದ್ದೇವೆ.

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಬರದ ಹೊಡೆತಕ್ಕೆ ಬೆಳೆ ನಿರ್ನಾಮ! ಎಕರೆಗೆ ರೂ.30 ಸಾವಿರ ಖರ್ಚು, ಕೈ ಸೇರದ ಫಸಲು

ಬಾಗಲಕೋಟೆ ಜಿಲ್ಲೆಯ ರೈತರು ಬಿತ್ತನೆ, ಗೊಬ್ಬರ, ಕೂಲಿ ಸೇರಿದಂತೆ ಎಕರೆಗೆ ರೂ.25ರಿಂದ...

ಸಾಗರ | ಡಾ. ಹೆಚ್. ಗಣಪತಿಯಪ್ಪ ಸ್ಮಾರಕ ಅಭಿವೃದ್ಧಿಗೆ ಶಾಸಕರಿಗೆ ಮನವಿ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ದಿವಂಗತ ಹೆಚ್.ಗಣಪತಿಯಪ್ಪ...

SIR ನಲ್ಲಿ ದೊಡ್ಡ ಪ್ರಮಾಣದ Form 7 ಅರ್ಜಿಗಳ ಸಲ್ಲಿಕೆ  ಆರೋಪ; ಕ್ರಮಕ್ಕೆ ತೆಲಂಗಾಣ ಚುನಾವಣಾ ಆಯುಕ್ತರ ಆದೇಶ

ಹೈದರಾಬಾದ್: ಪ್ರಸ್ತುತ ನಡೆಯುತ್ತಿರುವ SIR ಪ್ರಕ್ರಿಯೆಯಲ್ಲಿ  ದೊಡ್ಡ ಪ್ರಮಾಣದಲ್ಲಿ ನಕಲಿ Form...

ಆಗುಂಬೆ | ಕಂದಕಕ್ಕೆ ಬಿದ್ದ ಲಾರಿ; ಸ್ಥಳೀಯರಿಂದ ಚಾಲಕನ ರಕ್ಷಣೆ

ಆಗುಂಬೆ ಘಾಟಿಯ ಎರಡನೇ ತಿರುವಿನಲ್ಲಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸುಮಾರು...