ಬೈಕ್‌ ಕಳ್ಳತನದ ಜಾಲ ಭೇದಿಸಿದ ಹುನಗುಂದ ಪೊಲೀಸರು; 27 ಮೋಟರ್ ಸೈಕಲ್‌ ವಶಕ್ಕೆ

Date:

ಮೋಟಾರ್ ಸೈಕಲ್ ಕಳ್ಳತನದ ಜಾಲ ಭೇದಿಸಿರುವ ಹುನಗುಂದ ಪೊಲೀಸರು, ಕಳ್ಳತನವಾಗಿದ್ದ 27 ಮೋಟರ್ ಸೈಕಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಲ್ಲಿ ಭಾಗಿಯಾದ ಮೂವರ ವಿರುದ್ದ ಪ್ರಕರಣ ದಾಖಲಿಸಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

- Advertisement -

ಬಾಗಲಕೋಟೆ ಜಿಲ್ಲೆಯ ಹುನಗುಂದ ಪೊಲೀಸ್ ಠಾಣೆಯಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಬೈಕ್ ಕಳೆದುಕೊಂಡಿದ್ದ ತಾಲೂಕಿನ ಹಡಗಲಿ ಗ್ರಾಮದ ಸಂಗಪ್ಪ ಬಸಪ್ಪ ಅಂಗಡಿ ನೀಡಿದ ದೂರಿನ ಮೇರೆಗೆ ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್ಪಿ ಸಿದ್ದಾರ್ಥ ಗೋಯಲ್, ಡಿವೈಎಸ್ಪಿ, ಸಂತೋಷ ಬನ್ನಟ್ಟಿ, ಸಿಪಿಐ. ಎಸ್.ಬಿ. ಅಜೂರ ಮಾರ್ಗದರ್ಶನದಲ್ಲಿ ಪಿಎಸ್‌ಐ, ಎಸ್.ಜಿ. ಆಲದಕಟ್ಟಿ ನೇತೃತ್ವದ ತಂಡ ಈ ಕುರಿತು ತನಿಖೆ ಕೈಗೊಂಡಿತ್ತು ಎಂದು ಮಾಹಿತಿ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಯಾದಗಿರಿಯ ಸುರಪುರ ತಾಲೂಕಿನ ಸತ್ಯಂಪೇಟೆ ಗ್ರಾಮದ ಹುಲಗಪ್ಪ ಹನಮಂತ ಮೋಡಕೇರ, ರಾಯಚೂರು ಜಿಲ್ಲೆ ದೇವದುರ್ಗ ಮೂಲದ ಹಣಮಂತ ರಾಮಣ್ಣ ಮೋಡಕೇರ ಹಾಗೂ ಆಂಜನೇಯ ಬಂಧಿತ ಆರೋಪಿಗಳು. ಇವರಿಂದ ಒಟ್ಟು 27 ಮೋಟರ್ ಸೈಕಲ್ ಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಮೌಲ್ಯ ಸುಮಾರು ₹16 ಲಕ್ಷ ಆಗಬಹುದು. ಅಮೀನಗಡ ಠಾಣೆಯಲ್ಲಿ 30, ಇಳಕಲ್ ಠಾಣೆಯಲ್ಲಿ 5, ಹುನಗುಂದ ಠಾಣೆಯಲ್ಲಿ 27 ಸೇರಿ ಒಟ್ಟು 62 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಶ ಪಡಿಸಿಕೊಂಡ ಬೈಕ್‌ಗಳು ರಾಜ್ಯವಲ್ಲದೇ ಹೊರ ರಾಜ್ಯಕ್ಕೂ ಸೇರಿದ್ದಾಗಿವೆ. ಇದು ವರ್ಷದ ದೊಡ್ಡ ಪ್ರಕರಣ ಎಂದು ಹೇಳಿದರು.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಕರಣ ಭೇದಿಸುವಲ್ಲಿ ಶ್ರಮಿಸಿದ ಸಿಪಿಐ ಎಸ್.ಬಿ. ಅಜೂರ, ಪಿಎಸ್‌ಐ.ಗಳಾದ ಎಸ್.ಜಿ. ಆಲದಕಟ್ಟಿ ಹಾಗೂ ಎನ್‌.ಎಸ್. ಸಿಮಾನಿ, ಸಿಬ್ಬಂದಿಗಳಾದ ಎಸ್.ಬಿ. ಅಮಲಿಹಾಳ, ಆಯ್.ಎಸ್. ಮಂಟ್ಕಾಳ, ಕೆ.ವಾಯ್. ವಾಲಿಕಾರ, ಎಂ.ಎಸ್. ನಾರಗಲ್ಲ, ಸಿದ್ದಪ್ಪ ಕೌಲಗಿ, ಬಿ.ಎನ್. ಗೌಡರ, ಎ.ಬಿ. ಯರದಾಳ, ಯಲ್ಲಪ್ಪ ಅಂಬಿಗೇರ, ಗಣೇಶ ಪವಾರ, ಆನಂದ ಗೋಲಪ್ಪನವರ, ಚಂದ್ರು ಜಟ್ಟೆಪ್ಪಗೋಳ, ಬಸವರಾಜ ಜಗಲಿ ಇವರ ಕಾರ್ಯವನ್ನು ಎಸ್ಪಿ ಸಿದ್ದಾರ್ಥ ಶ್ಲಾಘಿಸಿದರು.

ಇದನ್ನೂ ಓದಿ: ಮುಂಡಗೋಡ | ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸಲು 20 ಶಾಲೆಗಳ ವಿದ್ಯಾರ್ಥಿಗಳಿಗೆ ವಿಶೇಷ ಪ್ರೇರಣಾ ಶಿಬಿರಕ್ಕೆ ಚಾಲನೆ

ಡಿವೈಎಸ್ಪಿ ಸಂತೋಷ ಬನ್ನಟ್ಟಿ, ಸಿಪಿಐ ಎಸ್.ಬಿ. ಅಜೂರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ ಕಂಗಾಲಾದ ಬಡ ಕಾರ್ಮಿಕರು

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM...

ತೆಲಂಗಾಣ ಬೆಳೆ ರಕ್ಷಣೆಗೆ 3 ಟಿಎಂಸಿ ನೀರು: ಅಚ್ಚುಕಟ್ಟು ಪ್ರದೇಶದ ರೈತರ ಭವಿಷ್ಯವೇನು?

ಕೃಷ್ಣಾ ನದಿಯ ನೀರು ಮತ್ತೊಮ್ಮೆ ಕರ್ನಾಟಕ–ತೆಲಂಗಾಣದ ನಡುವಿನ ಪ್ರಮುಖ ವಿಚಾರವಾಗಿ ಮುನ್ನೆಲೆಗೆ...

ಗುಳೇದಗುಡ್ಡ | ಎರಡು ತಿಂಗಳಿಂದ 108 ಆಂಬುಲೆನ್ಸ್ ಸೇವೆ ಸ್ಥಗಿತ

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕು ಕೇಂದ್ರವಾಗಿರುವ ಗುಳೇದಗುಡ್ಡದಲ್ಲಿ ತುರ್ತು ಚಿಕಿತ್ಸೆಗೆ ಪ್ರಮುಖ...