ಸರ್ಕಾರ, ರಾಜಕೀಯ ಪಕ್ಷಗಳು ಹಿತಾಸಕ್ತಿ ಬಿಟ್ಟು, ಜನಪರವಾದ, ಸಂವಿಧಾನ ಬದ್ಧವಾದ ಮತ ಪರಿಷ್ಕರಣೆಗೆ ಮುಂದಾಗಬೇಕು ಎಂದು ಪುರಸಭೆ ಮಾಜಿ ಸದಸ್ಯ ಮಹಮ್ಮದ್ ನೂರುಲ್ಲಾ ಹೇಳಿದರು. ಪಟ್ಟಣದಲ್ಲಿ ಸೋಮವಾರ ಎದ್ದೇಳು ಕರ್ನಾಟಕ, ಪ್ರಗತಿಪರ ಮತ್ತು ಜನಪರ ಸಂಘಟನೆಗಳ ಒಕ್ಕೂಟ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಎಸ್‌ಐಆರ್ ವಿರುದ್ಧದ ಜನ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ಎಸ್ಐಆರ್ ಪ್ರಕ್ರಿಯೆ ಸಂವಿಧಾನ ವಿರೋಧಿ ಮತ್ತು ಪ್ರಜಾತಂತ್ರವನ್ನು ದುರ್ಬಲಗೊಳಿಸುವ ಹುನ್ನಾರವಾಗಿದೆ. ರಾಜ್ಯದ ಬಹುತೇಕ ಪ್ರಗತಿಪರ ಸಂಘಟನೆಗಳು ಮತ್ತು ಜಾತ್ಯಾತೀತ ಪಕ್ಷಗಳು ಎದ್ದೇಳು ಕರ್ನಾಟಕ ಜೊತೆ ಸೇರಿ ಎಸ್ಐಆರ್ ವಿರೋಧಿ ಜಾಥಾ ಸಂಘಟಸಿದ್ದೇವೆ ಎಂದರು.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಮತಗಳನ್ನು ಕದಿಯುವ ಮೂಲಕ ಹಗಲು ದರೋಡೆಗೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷಾಂತರ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಡುವುದು ಆಘಾತಕಾರಿ ವಿಚಾರ. ಈ ಕುರಿತು ಜನರಲ್ಲಿನ ಆತಂಕ ನಿವಾರಣೆ ಮಾಡುವುದು ಜಾಥಾದ ಮುಖ್ಯ ಉದ್ದೇಶ ಎಂದರು. ಅಲ್ಪಸಂಖ್ಯಾತರು, ಅಹಿಂದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆಗಳು ಹೆಚ್ಚಿವೆ. ಅದನ್ನು ತಡೆಯುವ ನಿಟ್ಟಿನಲ್ಲಿ ಹೋರಾಟ ಹಾಗೂ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ..? ಚೇಳೂರಿನಲ್ಲಿ ಶೀಘ್ರದಲ್ಲೇ ನ್ಯಾಯಾಲಯ ಪ್ರಾರಂಭ : ಸಂಜೀವಕುಮಾರ್
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷರು ಪೂಜಪ್ಪ ,ಕಾಂಗ್ರೆಸ್ ಪಕ್ಷದ ಮುಖಂಡ ಗೂಳೂರು ಬಾಬು,
ನಾರಾಯಣಸ್ವಾಮಿಜಿ. ಎನ್. ಅಂಜಿನಪ್ಪ, ಬಿ. ನರಸಿಂಹಪ್ಪ,ವೆಂಕಟರಮಣ, ಅಶ್ವತಪ್ಪ, ನಾರಾಯಣಸ್ವಾಮಿ, ಭಗವಾನ್ ಮೂರ್ತಿ, ನಾರಾಯಣಸ್ವಾಮಿ ಇನ್ನೂ ಮುಂತಾದವರು ಪ್ರಮುಖರು ಹಾಜರಿದ್ದರು.




