ಬೆಂಗಳೂರು | ರೈಲಿನಲ್ಲಿ ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ಒದಗಿಸುವಂತೆ ಆಗ್ರಹ

Date:

ರೈಲಿನಲ್ಲಿ ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆಯನ್ನು ಖಾತ್ರಿಪಡಿಸುವಂತೆ ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್ಎಸ್) ಸಂಘಟನಾಕಾರರು ಬೆಂಗಳೂರು ರೈಲ್ವೆ ಸೆಕ್ಯೂರಿಟಿ ಕಮಿಷನರ್ ದೇವಾಂಶ್ ಶುಕ್ಲಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

“ಮಾಧ್ಯಮದಲ್ಲಿ ವರದಿಯಾದ ಶಿವಮೊಗ್ಗ-ಯಶವಂತಪುರ ರೈಲಿನಲ್ಲಿ ಮಹಿಳೆಯೊಬ್ಬರನ್ನು ಹತ್ಯೆಮಾಡಿ, ಚಿನ್ನಾಭರಣ ದೋಚಿರುವ ದುರ್ಘಟನೆಯು, ನಾಡಿನ ನಾಗರಿಕರಿಗೆ ಅದರಲ್ಲೂ ಮಹಿಳೆಯರಿಗೆ ತೀವ್ರ ಆಘಾತವವನ್ನುಂಟು ಮಾಡಿದೆ” ಎಂದರು.

“ಪ್ರಸ್ತುತದಲ್ಲಿ ಮಹಿಳೆಯರಿಗೆ ರಕ್ಷಣೆ ಎನ್ನುವುದು ಮರೀಚಿಕೆಯಾಗಿದೆ. ಬೆಂಗಳೂರಿನ ಅರಣ್ಯ ಭವನದಲ್ಲಿ ಸ್ಪೆನೋಗ್ರಾಫರ್ ಆಗಿದ್ದ ಜಿ ಅನ್ನಪೂರ್ಣ ಅವರು ಇಲಾಖೆಯ ಪರೀಕ್ಷೆಯ ಮೇಲ್ವಿಚಾರಣೆಗಾಗಿ ಶಿವಮೊಗ್ಗಕ್ಕೆ ಹೋಗಿ ಹಿಂತಿರುಗಿವಾಗ ಘಟನೆ ನಡೆದಿದ್ದು, ರೈಲ್ವೆ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ” ಎಂದು ಆರೋಪಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“2 ರಿಂದ 3 ದಿನ ರಜೆ ಇದ್ದ ಕಾರಣ ಅನ್ನಪೂರ್ಣ ಅವರಿಗೆ ಸ್ಲೀಪಿಂಗ್ ಕೋಚ್‌ನಲ್ಲಿ ಬುಕಿಂಗ್ ಸಿಗದ ಕಾರಣ ಅವರು ಸಾಮಾನ್ಯ ಭೋಗಿಯಲ್ಲಿ ಪ್ರಯಾಣಿಸಿದ್ದಾರೆ. ಅಲ್ಲಿ ಜನಸಂದಣಿ ಇದ್ದು, ಕುಳಿತುಕೊಳ್ಳಲೂ ಜಾಗವಿಲ್ಲದ ಕಾರಣ ಮತ್ತು ಬೆಳಿಗ್ಗೆ ಕಚೇರಿಗೆ ಹೋಗಬೇಕಾದರೆ ಕೊಂಚ ವಿಶ್ರಾಂತಿ ಅವಶ್ಯಕ ಎಂದು ಮಹಿಳಾ ಬೋಗಿಗೆ ಹೋಗಿ ಕುಳಿತಿದ್ದಾರೆ. ಮಹಿಳಾ ಭೋಗಿಯಲ್ಲೇ ಈ ದುರ್ಘಟನೆ ನಡೆದಿದ್ದು, ಮಹಿಳಾ ಬೋಗಿಗಳು ಮಹಿಳೆಯರಿಗೆ ಎಷ್ಟರ ಮಟ್ಟಿಗೆ ಸುರಕ್ಷತೆ ಖಾತ್ರಿಪಡಿಸುತ್ತವೆ ಎಂಬುವ ಪ್ರಶ್ನೆಗೆ ಇಲಾಖೆಯು ಉತ್ತರಿಸಬೇಕಿದೆ” ಎಂದರು.

“ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ ಮತ್ತು ನಡೆದ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯನ್ನು ಖಾತ್ರಿಪಡಿಸಬೇಕು. ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಪರಿಹರಿಯದ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ; ಲೋಕಸಭಾ ಚುನಾವಣೆ ಬಹಿಷ್ಕಾರದ ಎಚ್ಚರಿಕೆ 

“ನಡೆದ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯನ್ನು ಖಾತ್ರಿಪಡಿಸಬೇಕು. ರೈಲ್ವೆ ಭೋಗಿಗಳ ಸುರಕ್ಷತೆ ಬಗ್ಗೆ ರೈಲ್ವೆ ಇಲಾಖೆ ಆದ್ಯತೆಯನ್ನು ಹೆಚ್ಚಿಸಬೇಕು. ರಜಾ ದಿನಗಳಲ್ಲಿ ಜನರಲ್ ಭೋಗಿಗಳನ್ನು ಹೆಚ್ಚಿಸಬೇಕು. ಮಹಿಳಾ ಭೋಗಿಗಳನ್ನು ರೈಲ್ವೆಯ ಮಧ್ಯಭಾಗದಲ್ಲಿ ಅಳವಡಿಸಬೇಕು” ಎಂದು ಒತ್ತಾಯಿಸಿದರು.

ಎಐಎಂಎಸ್ಎಸ್ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಶಾಂತ ಎ ಸೇರಿದಂತೆ ಇತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಮಾ.3ರಿಂದ 5ರವರೆಗೆ ತೆಲಂಗಾಣದಲ್ಲಿ ರಾಷ್ಟ್ರೀಯ ಐಕ್ಯತಾ ಸಮ್ಮೇಳನ

ಸಿಪಿಐ(ಎಂಎಲ್) ಮಾಸ್ ಲೈನ್ ಸಮಿತಿಯಿಂದ ಮಾ.3ರಿಂದ 5ರವರೆಗೆ ತೆಲಂಗಾಣ ಖಮ್ಮಂನಲ್ಲಿ ರಾಷ್ಟ್ರೀಯ...

ಹಾಸನ | ಬಸ್‌ಗಳಿಲ್ಲದೇ ಪರದಾಟ; ವಿದ್ಯಾರ್ಥಿಗಳ ಪ್ರತಿಭಟನೆ

ಬಸ್ ಅವಾಂತರದಿಂದ ಬೇಸತ್ತ ವಿದ್ಯಾರ್ಥಿಗಳು ಬೇಲೂರು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ....

ಬೆಂಗಳೂರು | ಫೆ.26ರಿಂದ ಮೆಜೆಸ್ಟಿಕ್ – ಗರುಡಾಚಾರ್ ಪಾಳ್ಯ ಮೆಟ್ರೋ ನಿಲ್ದಾಣಗಳ ನಡುವೆ ಹೆಚ್ಚುವರಿ ಮೆಟ್ರೋ ಸೇವೆ

ಬೆಳಗಿನ ಜನದಟ್ಟಣೆಯ ಸಮಯದಲ್ಲಿ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ಮತ್ತು ಗರುಡಾಚಾರ್‌ಪಾಳ್ಯ...

ವಿಪಕ್ಷ ನಾಯಕನ ಹುದ್ದೆಗೆ ಅಶೋಕ್ ನಾಲಾಯಕ್: ಪ್ರಮೋದ್ ಮುತಾಲಿಕ್

ವಿಧಾನಸಭೆ ವಿಪಕ್ಷ ನಾಯಕನ ಹುದ್ದೆಗೆ ಆರ್ ಅಶೋಕ್ ನಾಲಾಯಕ್. ಬೆಂಗಳೂರಿನ ಚಾಮರಾಜಪೇಟೆಯಲ್ಲಿ...