ಬೆಳಗಾವಿ | ಮಲತಂದೆ ಮತ್ತು ಸ್ನೇಹಿತರಿಂದ ಬಾಲಕನ ಅಮಾನುಷ್ಯ ಹತ್ಯೆ

Date:

ಮಲತಂದೆ ಮತ್ತು ಆತನ ಸ್ನೇಹಿತರು ಸೇರಿ ಮೂರು ವರ್ಷದ ಬಾಲಕನ್ನು ಅಮಾನುಷ್ಯವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಾರೂಗೊಪ್ಪ ಗ್ರಾಮದ ಬಳಿ ನಡೆದಿದೆ.

- Advertisement -

ಬಿಹಾರ ಮೂಲದ ಕಾರ್ತಿಕ್ ಮುಖೇಶ್ ಮಾಂಜಿ(3) ಕೊಲೆಯಾದ ಬಾಲಕ. ಆತನ ಮಲತಂದೆ ಮಹೇಶ್ವರ ಮಾಂಜಿ ಕೊಲೆ ಮಾಡಿದ ಆರೋಪಿಯಾಗಿದ್ದು ಘಟನಾ ಸ್ಥಳಕ್ಕೆ ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ, ಮುರಗೋಡ ಸಿಪಿಐ ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಮೊದಲ ಗಂಡನನ್ನು ಬಿಟ್ಟಿದ್ದ ರಂಗೀಲಾ ಆರೋಪಿ ಮಹೇಶ್ ಮಾಂಜಿ ಜೊತೆಗೆ ಎರಡನೇ ಮದುವೆ ಆಗಿದ್ದಳು. ಬಿಹಾರ ಮೂಲದ ಕಾರ್ಮಿಕರು ಹಾರೂಗೊಪ್ಪ ಬಳಿ ಇರುವ ಜಿನ್ನಿಂಗ್ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇವರು ಮಿಲ್ ಸಮೀಪದ ಶೆಡ್‌ನಲ್ಲೇ ಇದ್ದರು. ಹೀಗೆ ಇರುವಾಗ ನಿನ್ನೆ ರಂಗೀಲಾ ಜೊತೆಗೆ ಮಹೇಶ್ವ‌ರ್ ಜಗಳ ತೆಗೆದಿದ್ದಾನೆ. ಆ ಬಾಲಕನನ್ನು ನೀನು ಯಾಕೆ ಕರೆದುಕೊಂಡು ಬಂದೆ ಎಂದು ಹಲ್ಲೆ ಮಾಡಲು ಯತ್ನಿಸಿದ್ದಾನೆ” ಎಂದು ತಿಳಿಸಿದರು.

“ಅದೇ ಸಮಯದಲ್ಲಿ ಆತನ ಮೂವರು ಸ್ನೇಹಿತರು ಬಂದಿದ್ದಾರೆ. ಆ ಬಾಲಕನನ್ನು ಕರೆದುಕೊಂಡು ಬರಬೇಡ ಅಂತಾ ಹೇಳಿದರೂ ಕರೆದುಕೊಂಡು ಬಂದಿದ್ದಾಳೆ. ಹಾಗಾಗಿ, ಈಕೆಗೆ ಪಾಠ ಕಲಿಸಬೇಕು ಅಂತಾ ಮಹೇಶ್ ಆತನ ಸ್ನೇಹಿತರಿಗೆ ಹೇಳಿದ್ದಾನೆ. ಬಳಿಕ ಎಲ್ಲರೂ ಕೂಡಿಕೊಂಡು ಆಕೆಯ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಆಗ ಭಯದಿಂದ ರಂಗೀಲಾ ಅಲ್ಲಿಂದ ಓಡಿ ಹೋಗಿದ್ದಾಳೆ. ಆದರೆ, ಆ ಬಾಲಕ ಅಲ್ಲಿಯೇ ಇದ್ದ. ಆ ವೇಳೆ ಬಾಲಕನ ತಲೆಗೆ ಕಟ್ಟಿಗೆಯಿಂದ ಅವರೆಲ್ಲಾ ಹೊಡೆದಿದ್ದಾರೆ” ಎಂದು ವಿವರಿಸಿದರು.

ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ ಅವರು ಮಾತನಾಡಿ, “ಇದು ಹೃದಯ ವಿದ್ರಾವಕ ಘಟನೆ. ಮೂರು ವರ್ಷದ ಬಾಲಕನನ್ನು ಮಲ ತಂದೆ ಮತ್ತು ಆತನ ಸಂಗಡಿಗರು ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಬಾಲಕನ ತಾಯಿ ರಂಗೀಲಾ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ಕೊಲೆಯಾದ ಬಾಲಕನ ಮಲತಂದೆ ಮಹೇಶ್ವರ ಮಾಂಜಿ ಮತ್ತು ಆತನ ಸ್ನೇಹಿತರಾದ ರಾಕೇಶ ಮಾಂಜಿ, ಶಿವನಾಥ ಮಾಂಜಿ, ಮಹೇಶ ಮಾಂಜಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದೇವೆ” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿಯಲ್ಲಿ ₹100 ಕೋಟಿ ವೆಚ್ಚದಲ್ಲಿ ಗಾಂಧೀಜಿ ಸ್ಮಾರಕ: ಡಿ.ಕೆ.ಶಿವಕುಮಾ‌ರ್

ಮಹಾತ್ಮ ಗಾಂಧೀಜಿ ಪಾಲ್ಗೊಂಡಿದ್ದ ಬೆಳಗಾವಿ ಕಾಂಗ್ರೆಸ್‌ ಅಧಿವೇಶನಕ್ಕೆ ನೂರು ವರ್ಷ ಪೂರ್ಣಗೊಂಡಿರುವ...

ಬೆಳಗಾವಿ | ಬಸ್‌ನಿಂದ ಇಳಿಯಲು ದಾರಿ ಬಿಡಲಿಲ್ಲವೆಂದು ಮಹಿಳೆ ಮೇಲೆ ಹಲ್ಲೆ

ಬಸ್‌ನಿಂದ ಇಳಿಯಲು ದಾರಿ ಬಿಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಮಹಿಳೆಯ...

ಬೆಳಗಾವಿ | ಮಾಂಜಾ ದಾರಕ್ಕೆ ಸಿಲುಕಿ ಬೈಕ್ ಸವಾರ ಸಾವು

ಗಾಳಿಪಟದ ಮಾಂಜಾ ದಾರ ಬೈಕ್‌ ಚಲಾಯಿಸುತ್ತಿದ್ದ ಯುವಕನ ಕೊರಳಿಗೆ ಸಿಲುಕಿ ಸ್ಥಳದಲ್ಲೇ...