ಬೆಳಗಾವಿ ಜಿಲ್ಲೆಯ ರಾಜಕೀಯದಲ್ಲಿ ಮತ್ತೆ ವಾಕ್ಸಮರ ಆರಂಭವಾಗಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಲಕ್ಷ್ಮಣ ಸವದಿ ಅವರು ತಮ್ಮ ರಾಜಕೀಯ ಎದುರಾಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
“ನನ್ನನ್ನು ಟ್ರ್ಯಾಕ್ಟರ್ ಹೊಡೆಯಲು ಕಳುಹಿಸುತ್ತೇನೆ ಎಂದು ಒಬ್ಬ ಪ್ರೀತಿಯ ಸ್ನೇಹಿತ ಹೇಳಿದ್ದಾನೆ. ನಾನು ರೈತನ ಮಗ, ಎಲ್ಲದಕ್ಕೂ ಸಿದ್ಧನಿದ್ದೇನೆ. ಎತ್ತಿನ ಗಾಡಿಯನ್ನೂ ಹೊಡೆಯುತ್ತೇನೆ. ಅನ್ಯಾಯ ಮಾಡಲು ಬಂದವರನ್ನು ಮೆಟ್ಟಿನಿಂದ ಹೊಡೆಯುತ್ತೇನೆ” ಎಂದು ಸವದಿ ಕಿಡಿಕಾರಿದರು.
ತಮ್ಮ ಕ್ಷೇತ್ರದ ಜನರ ಸ್ವಾಭಿಮಾನಕ್ಕೆ ಧಕ್ಕೆಯಾಗಲು ಬಿಡುವುದಿಲ್ಲ ಎಂದು ಹೇಳಿದ ಅವರು, “ಶಿವಯೋಗಿ ನಾಡಿನಲ್ಲಿ ಅನ್ಯಾಯ ನಡೆಯಲು ಅವಕಾಶ ನೀಡುವುದಿಲ್ಲ. ಇದಕ್ಕೆ ನಾನು ಅವಕಾಶ ಕೊಡುವುದಿಲ್ಲ” ಎಂದು ಎಚ್ಚರಿಕೆಯ ಧ್ವನಿಯಲ್ಲಿ ಹೇಳಿದರು.
ಸವದಿ ಅವರ ಈ ಹೇಳಿಕೆಗಳು ಅವರ ರಾಜಕೀಯ ವಿರೋಧಿಗಳಿಗೆ ಪರೋಕ್ಷವಾಗಿ ವಾಗ್ದಾಳಿ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.



