ಬೆಳಗಾವಿ | ಸಾಲ ಹಾಗೂ ಉದ್ಯೋಗ ಭರವಸೆ: ಕೋಟ್ಯಾಂತರ ರೂಪಾಯಿ ವಂಚನೆ

Date:

ಸಾರ್ವಜನಿಕರಿಗೆ ಸರ್ಕಾರದಿಂದ ಸಾಲ ಹಾಗೂ ಉದ್ಯೋಗ ಒದಗಿಸುವುದಾಗಿ ನಂಬಿಸಿ ಬ್ಯಾಂಕ್‌ ಖಾತೆಗಳನ್ನು ತೆರೆಯಿಸಿ, ಅವುಗಳನ್ನು ದುಬೈನಲ್ಲಿದ್ದ ಸೈಬ‌ರ್ ವಂಚಕರಿಗೆ ನೀಡುತ್ತಿದ್ದ ಅಂತಾರಾಷ್ಟ್ರೀಯ ಜಾಲ ಆರೋಪಿಗಳನ್ನು ಬೆಳಗಾವಿ ನಗರ ಸೈಬ‌ರ್ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

- Advertisement -

ಈ ಸಂಬಂಧ ಬೆಳಗಾವಿ ನಗರದ ಮೇಘಾ ಮಾರಡೋಳಕರ ಹಾಗೂ ಮುಂಬೈ ಮೂಲದ ಹೈದ‌ರ್ ಅಲಿ ಗುಲಾಮ್ ಅಲಿ ಉನವಾಲಾ ಅವರನ್ನು ಬಂಧಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಪೊಲೀಸರ ಪ್ರಕಾರ, ಮೇಘಾ ಸಾರ್ವಜನಿಕರಿಗೆ ಮನೆಯಲ್ಲಿ ಮಾಡುವ ಕೆಲಸ ಹಾಗೂ ಸರ್ಕಾರದಿಂದ ಸಾಲ ಸಿಗುತ್ತದೆ ಎಂದು ನಂಬಿಸಿ ನಗರದ ವಿವಿಧ ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆಯಿಸುತ್ತಿದ್ದಳು. ಬಳಿಕ ಆ ಖಾತೆಗಳ ಪಾಸ್‌ಬುಕ್‌ ಹಾಗೂ ಇತರ ದಾಖಲೆಗಳನ್ನು ಹೈದರ್ ಅಲಿಗೆ ಕಳುಹಿಸುತ್ತಿದ್ದಳು.

ಹೈದರ್ ಅಲಿ ಈ ಮಾಹಿತಿಯನ್ನು ದುಬೈನಲ್ಲಿದ್ದ ತನ್ನ ಪುತ್ರ ಇದ್ರಿಸ್ ಅಲಿ, ಅಜಿಜ್ ಬೋರಾ ಹಾಗೂ ಮೇಘಾಳ ಪುತ್ರಿ ಶಿವಾನಿ ಮಾರಡೋಳಕರ ಅವರಿಗೆ ರವಾನಿಸುತ್ತಿದ್ದನು. ಇವರು ದುಬೈನಿಂದಲೇ ಜನರನ್ನು ವಂಚಿಸಿ, ಈ ಖಾತೆಗಳಿಗೆ ಹಣ ಜಮೆ ಮಾಡಿಸಿ ಬಳಿಕ ವರ್ಗಾಯಿಸಿಕೊಳ್ಳುತ್ತಿದ್ದರು.

ಮಾನಸಿ ಚವಾಣ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಾಗ ಈ ವಂಚನೆ ಜಾಲ ಬೆಳಕಿಗೆ ಬಂದಿದೆ. ತನಿಖೆಯಲ್ಲಿ ಆರೋಪಿಗಳ ಮಕ್ಕಳು ದುಬೈನಿಂದಲೇ ಜಾಲವನ್ನು ನಿರ್ವಹಿಸುತ್ತಿರುವುದು ಪತ್ತೆಯಾಗಿದೆ.

ಆರೋಪಿ ಮೇಘಾಳ ಮೂಲಕ ಒಟ್ಟು 72 ಬ್ಯಾಂಕ್ ಖಾತೆಗಳು ವಂಚಕರಿಗೆ ಸಿಕ್ಕಿದ್ದು, ಅವುಗಳಲ್ಲಿ 47 ಖಾತೆಗಳ ವಿರುದ್ಧ ವಿವಿಧ ರಾಜ್ಯಗಳಲ್ಲಿ 144 ಪ್ರಕರಣಗಳು ದಾಖಲಾಗಿವೆ. ಈ ಖಾತೆಗಳಲ್ಲಿ ₹1,27,04,678 ಹಣ ಜಮೆಯಾಗಿರುವುದು ಪತ್ತೆಯಾಗಿದೆ.

ಮಾರ್ಚ್ 22ರಂದು ಮುಂಬೈನಲ್ಲಿ ಹೈದರ್ ಅಲಿಯನ್ನು ಹಾಗೂ ಮಾರ್ಚ್ 26ರಂದು ಗೋವಾದ ಪೊರ್ವರಿಮ್‌ನಲ್ಲಿ ಮೇಘಾಳನ್ನು ಬಂಧಿಸಲಾಗಿದೆ. ವಿಚಾರಣೆ ಬಳಿಕ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

IMG 20251111 WA0000
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಹೋರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು

ಯಾರ ತಂಟೆಗೂ ಹೋಗದೆ ತಿರುಗಾಡುತ್ತಿದ್ದ ಮೂಕ ಪ್ರಾಣಿಯೊಂದರ ಮೇಲೆ ಅಮಾನವೀಯ ಕೃತ್ಯ...

ಬೆಳಗಾವಿಯಲ್ಲಿ ₹100 ಕೋಟಿ ವೆಚ್ಚದಲ್ಲಿ ಗಾಂಧೀಜಿ ಸ್ಮಾರಕ: ಡಿ.ಕೆ.ಶಿವಕುಮಾ‌ರ್

ಮಹಾತ್ಮ ಗಾಂಧೀಜಿ ಪಾಲ್ಗೊಂಡಿದ್ದ ಬೆಳಗಾವಿ ಕಾಂಗ್ರೆಸ್‌ ಅಧಿವೇಶನಕ್ಕೆ ನೂರು ವರ್ಷ ಪೂರ್ಣಗೊಂಡಿರುವ...

ಬೆಳಗಾವಿ | ಬಸ್‌ನಿಂದ ಇಳಿಯಲು ದಾರಿ ಬಿಡಲಿಲ್ಲವೆಂದು ಮಹಿಳೆ ಮೇಲೆ ಹಲ್ಲೆ

ಬಸ್‌ನಿಂದ ಇಳಿಯಲು ದಾರಿ ಬಿಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಮಹಿಳೆಯ...