ಬೆಳಗಾವಿ | ಕಾಲು ಕಳೆದುಕೊಂಡ ನಾಮದೇವ, ಗೋಡೆಯಿಲ್ಲದ ಮನೆಯಲ್ಲಿ ಸಂಕಷ್ಟದ ಜೀವನ: ಬೇಕಿದೆ ನೆರವು

Date:

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಝುಂಜವಾಡ ಗ್ರಾಮದ ನಾಮದೇವ ದಬಾಲೆ ಅವರ ಬದುಕು ಇಂದು ಸಂಕಷ್ಟಗಳ ಸುಳಿಯಲ್ಲಿ ಸಿಲುಕಿದೆ. ಅವರ ಜೀವನದ ಕಥೆಯನ್ನು ಕೇಳಿದರೆ ಕಲ್ಲು ಹೃದಯವೂ ಕರಗುತ್ತದೆ.

- Advertisement -

ಕುಟುಂಬಕ್ಕೆ ಆಶ್ರಯವಾಗಿದ್ದ ನಾಮದೇವ ಅವರು ಮಹಾರಾಷ್ಟ್ರದ ಇಂಚಲಕರಂಜಿಯಲ್ಲಿ ಕೂಲಿ ಕೆಲಸ ಮಾಡಿ ಮನೆ ಸಾಗಿಸುತ್ತಿದ್ದರು. ಹೆಂಡತಿ, ಮೂವರು ಮಕ್ಕಳು-ಸಾಧಾರಣವಾದರೂ ಸಾಂತ್ವನದ ಬದುಕು ಸಾಗುತ್ತಿತ್ತು. ಆದರೆ ಕಳೆದ ವರ್ಷ ಕಾಲಿನಲ್ಲಿ ಕಾಣಿಸಿಕೊಂಡ ಸಣ್ಣ ನೋವೇ ಅವರ ಬದುಕನ್ನು ಸಂಪೂರ್ಣವಾಗಿ ಬದಲಿಸಿಬಿಟ್ಟಿತು. ಸೋಂಕಾಗಿ ಆರಂಭವಾದ ನೋವು ಗ್ಯಾಂಗ್ರಿನ್‌ಗೆ ತಿರುಗಿ, ಕೊನೆಗೆ ಅವರ ಎಡಗಾಲನ್ನು ಕತ್ತರಿಸುವಂತಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಜಕೀಯದಲ್ಲಿ ಮಹಿಳೆಯರ ಮೇಲೆ ಗಂಡಾಳ್ವಿಕೆಯ ಸಾಂಸ್ಕೃತಿಕ ರಾಜಕಾರಣ

ರಾಜಕೀಯದ ಮೇಲೆ ಪುರುಷ ಪ್ರಧಾನ ಹಿಡಿತ ಹೇಗೆ ನಿರ್ಮಾಣವಾಯಿತು? ರಾಜಕೀಯವೆಂದರೆ, ಜನರ ಬದುಕಿನ ಮೇಲೆ ನಿರ್ಧಾರ ತೆಗೆದುಕೊಳ್ಳುವ ಸಾರ್ವಜನಿಕ ಕ್ಷೇತ್ರ. ಆದರೆ ಶತಮಾನಗಳ ಕಾಲ ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆ ಅದನ್ನು...

ಈ ದಿನ ಕವಿತೆ | ಏನೂ ಇಲ್ಲ- ನಾಸೆರ್...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಇರಾನಿನ ಕವಿ ನಾಸೆರ್ ಫಯ್ಜ್ ಅವರ ಕವನವೊಂದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ ಹೆಚ್‌ ಭಾಗ್ಯ ಅಳುವ ಮಗವೊಂದನು ಸುಟ್ಟು ಬೂದಿ ಮಾಡಿದರು. ಅವನು ಏನೂ ಇಲ್ಲವೆಂದ. ತನ್ನೆಲ್ಲಾ...

ಕರ್ನಾಟಕ SIR | ಮತ ಹಕ್ಕಿಗೇ ಕನ್ನ: ಪರಿಶೋಧನಾ...

ಪ್ರಜಾಪ್ರಭುತ್ವದ ಅಡಿಪಾಯವೇ ಮತದಾರ ಮತ್ತು ಮತದಾನ. ಆದರೆ, ಈ ಅಡಿಪಾಯವನ್ನೇ ಕೆಡವುವ ಸಂಚು ನಡೆದಿದೆ. ಕೇಂದ್ರ ಸರ್ಕಾರ (ಮೋದಿ-ಶಾ ಜೋಡಿ) ಮತ್ತು ಚುನಾವಣಾ ಆಯೋಗ (ಗ್ಯಾನೇಶ್‌ ಕುಮಾರ್‌) ಜಂಟಿಯಾಗಿ ಎಸ್‌ಐಆರ್‌ ಹೆಸರಿನಲ್ಲಿ ಅರ್ಹ...
1001558381 1

ಚಿಕಿತ್ಸೆಗಾಗಿ ಹಣ ಸಂಗ್ರಹಿಸಲು ತಮ್ಮ ಅರ್ಧ ಎಕರೆ ಜಮೀನನ್ನೇ ಆರು ವರ್ಷಗಳಿಗೆ ಇತರರಿಗೆ ಒಪ್ಪಿಸಬೇಕಾಯಿತು.

“ಒಂದು ಕಾಲಿನಿಂದಾದರೂ ಬದುಕಬಹುದು” ಎಂದು ಮನಸ್ಸು ಗಟ್ಟಿಮಾಡಿಕೊಂಡ ನಾಮದೇವರಿಗೆ ಮತ್ತೊಂದು ಹೊಡೆತ ಕಾದಿತ್ತು. ಇತ್ತೀಚೆಗೆ ಅವರ ಬಲಗಾಲಿಗೂ ಗ್ಯಾಂಗ್ರಿನ್ ಆರಂಭವಾಗಿದೆ. ಈಗ ಅವರ ಸ್ಥಿತಿ ನಿಂತುಕೊಳ್ಳುವುದೇ ಕಷ್ಟ, ನಡೆಯುವುದು ಕನಸಾಗಿದೆ. ತಮ್ಮ ಸ್ವಂತ ಕೆಲಸಗಳನ್ನೇ ಮಾಡಿಕೊಳ್ಳಲಾಗದ ದುಸ್ಥಿತಿ.

ಮನೆಯಲ್ಲೇ ಶೌಚಾಲಯ ಇದ್ದರೂ ಅದನ್ನು ಬಳಸಲು ಸಾಧ್ಯವಾಗದ ಪರಿಸ್ಥಿತಿ ಇನ್ನಷ್ಟು ಹೃದಯವಿದ್ರಾವಕವಾಗಿದೆ. ಕೇವಲ ಒಂಬತ್ತು ವರ್ಷದ ಮಗಳೇ ತಂದೆಯ ಶೌಚ ಕಾರ್ಯ ಮಾಡಿಸಿ ಸ್ವಚ್ಛಗೊಳಿಸುವಂತಾಗಿದೆ. ಬಾಲ್ಯದಲ್ಲೇ ಹೊತ್ತುಕೊಂಡ ಈ ಹೊಣೆಗಾರಿಕೆ ಆ ಮಗುವಿನ ನಿರಪರಾಧ ಜೀವನವನ್ನೇ ನುಂಗುತ್ತಿದೆ.

ಇದರ ನಡುವೆ, “ಇನ್ನೇನು ಬದುಕು?” ಎಂಬ ಪ್ರಶ್ನೆ ನಾಮದೇವರ ಮನಸ್ಸನ್ನು ಕಾಡುತ್ತಿದೆ. ದಿನವೂ ದೇವರನ್ನು ಬೇಡಿಕೊಳ್ಳುವುದು “ಬೇಗ ಸಾವು ಕೊಡಲಿ” ಎಂಬ ಮಾತು. ಈ ಒಂದು ವಾಕ್ಯವೇ ಅವರ ನೋವಿನ ಆಳವನ್ನು ಹೇಳುತ್ತದೆ.

ಇನ್ನೊಂದು ಕಡೆ, ಅವರ ಮನೆ ಕಥೆಯೂ ಅಷ್ಟೇ ದುಃಖಕರವಾಗಿದೆ. ಝುಂಜವಾಡದಲ್ಲಿರುವ ಹಳೆಯ ಸಾಲು ಮನೆಯಲ್ಲಿ, ಎರಡು ಮನೆಗಳಿಗೆ ಆಸರೆಯಾಗಿದ್ದ ಮಧ್ಯದ ಗೋಡೆಯನ್ನು ಸಂಬಂಧಿಯೊಬ್ಬರು ಕೆಡವಿ ಹಾಕಿದ್ದಾರೆ. ತನ್ನ ಮನೆ ಕಟ್ಟಿಕೊಳ್ಳುವ ಉದ್ದೇಶದಿಂದ ಪ್ರಾರಂಭಿಸಿದ ಕೆಲಸ ಅಲ್ಲಿ ನಿಂತುಹೋಗಿದ್ದು, ನಾಮದೇವರ ಮನೆ ಗೋಡೆಯಿಲ್ಲದೆ ಉಳಿದುಬಿಟ್ಟಿದೆ.

ಗೋಡೆಯಿಲ್ಲದ ಮನೆ ಎಂದರೆ, ಅದು ಮನೆ ಅಲ್ಲ-ಬಯಲು. ಕಳೆದ ಎರಡು ವರ್ಷಗಳಿಂದ ತಾಡಪಲ್ ಮತ್ತು ಶೀಟಿನ ಆಶ್ರಯದಲ್ಲಿ ಕುಟುಂಬ ಬದುಕು ಸಾಗಿಸುತ್ತಿದೆ. ಮಳೆ ಬಂದರೆ ಮನೆ ಒಳಗೆ ನೀರು ತುಂಬುತ್ತದೆ. ಬಿಸಿಲು ಹೊಡೆದರೆ ತಲೆಮೇಲೆ ಬೆಂಕಿಯಂತೆ ಕಾಡುತ್ತದೆ. ಚಳಿಯಲ್ಲಿ ನಡುಗುವ ಪರಿಸ್ಥಿತಿ. ಪುಟ್ಟ ಮಕ್ಕಳೊಂದಿಗೆ ಪ್ರತಿದಿನವೂ ನರಕಯಾತನೆ.

ಇದರ ಜೊತೆಗೆ ನಾಮದೇವರಿಗೆ ಸಕ್ಕರೆ ಕಾಯಿಲೆಯೂ ತೀವ್ರವಾಗಿದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ 300-400ರ ಮಟ್ಟದಲ್ಲಿದ್ದು, ಪ್ರತಿದಿನ ಔಷಧ ಸೇವಿಸಲೇಬೇಕು. ವಾರಕ್ಕೊಮ್ಮೆ ನಂದಗಡದ ಸರ್ಕಾರಿ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳುವುದು ಕೂಡ ಕಷ್ಟಕರವಾಗಿದೆ.

ಕುಟುಂಬದ ಹೊಣೆಗಾರಿಕೆಯನ್ನು ಈಗ ಪತ್ನಿ ನೇಹಾ ಅವರು ಒಬ್ಬರೇ ಹೊತ್ತಿದ್ದಾರೆ. ಹತ್ತಿರದ ಪೆಟ್ರೋಲ್ ಬಂಕ್‌ನಲ್ಲಿ ತಿಂಗಳಿಗೆ ಕೇವಲ ₹6000 ಸಂಬಳಕ್ಕೆ ಕೆಲಸ ಮಾಡುತ್ತಾ ಕುಟುಂಬವನ್ನು ನಡೆಸುತ್ತಿದ್ದಾರೆ. ಈ ಅಲ್ಪ ಆದಾಯದಲ್ಲಿ ಚಿಕಿತ್ಸೆ, ಮಕ್ಕಳ ಶಿಕ್ಷಣ, ದಿನನಿತ್ಯದ ಖರ್ಚು-ಎಲ್ಲವೂ ಭಾರವಾಗಿಯೇ ಉಳಿದಿದೆ.

ಸಂಬಂಧಿಕರ ನೆರವು ಇಲ್ಲ, ಆತ್ಮೀಯರ ಬೆಂಬಲವೂ ಇಲ್ಲ. ಊರಿನ ಜನರು ಇವರ ಸ್ಥಿತಿಯನ್ನು ನೋಡಿ ಕರುಣೆ ವ್ಯಕ್ತಪಡಿಸುತ್ತಾರೆ, ಆದರೆ ಸಹಾಯ ಮಾಡಲು ಮುಂದೆ ಬರುತ್ತಿಲ್ಲ. ಪಂಚಾಯಿತಿ ಸದಸ್ಯರು, ಅಧಿಕಾರಿಗಳಿಗೆ ತಿಳಿಸಿದರೂ ಸ್ಪಂದನೆ ಕಾಣಿಸಿಕೊಂಡಿಲ್ಲ.

ನಾಮದೇವರ ಕುಟುಂಬ ಇಂದು ಕಷ್ಟದ ಅಂಚಿನಲ್ಲಿದೆ. ಅವರಿಗೆ ತಕ್ಷಣ ವೈದ್ಯಕೀಯ ನೆರವು ಅತ್ಯಗತ್ಯ. ಮನೆ ಮರುನಿರ್ಮಾಣ ಮಾಡಬೇಕಾಗಿದೆ. ಜೀವನ ಸಾಗಿಸಲು ಆರ್ಥಿಕ ಸಹಾಯವೂ ಅವಶ್ಯಕವಾಗಿದೆ.

ಈ ನೋವಿನ ಕಥೆ ಕೇವಲ ಈ ಒಂದು ಕುಟುಂಬದಷ್ಟೇ ಅಲ್ಲ ಸಮಾಜದಲ್ಲಿರುವ ನಮ್ಮೆಲ್ಲರಿಗೂ ಪರಿಕ್ಷೆಯಾಗಿದೆ. ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಮಾಜದ ಹಿತೈಷಿಗಳು ಈಗಾದರೂ ಕಣ್ಣತೆರೆದು ಈ ಕುಟುಂಬದ ಕಡೆ ಗಮನಹರಿಸಬೇಕಿದೆ. ಇಲ್ಲದಿದ್ದರೆ, ನಾವು ಕೇವಲ ನೋಡುವವರಾಗಿಯೇ ಉಳಿಯುತ್ತೇವೆ.

ಈ ಕುರಿತು ಈದಿನ.ಕಾಮ್ ಜತೆ ನಾಮದೇವ ಅವರು ಮಾತನಾಡಿ, “ನನಗೆ ಕಾಲು ಇಲ್ಲ. ನಮ್ಮ ಕುಟುಂಬದಲ್ಲಿ ಮೂರು ಮಕ್ಕಳು ಇದ್ದಾರೆ. ಮನೆಗೆ ಸರಿಯಾದ ಗೋಡೆಯೇ ಇಲ್ಲದ ಕಾರಣ ಮಳೆ ಬಂದಾಗ ತುಂಬಾ ಸಂಕಷ್ಟ ಅನುಭವಿಸಬೇಕಾಗುತ್ತದೆ. ಈ ವಿಷಯವನ್ನು ಗ್ರಾಮ ಪಂಚಾಯತಿಗೆ ತಿಳಿಸಿದರೂ, ಪಂಚಾಯಿತಿ ಚುನಾವಣೆ ಮುಗಿದ ಬಳಿಕ ನೋಡೋಣ ಎಂದು ತಿಳಿಸಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಜೀವನ ನಡೆಸುವುದು ಬಹಳ ಕಷ್ಟವಾಗಿದೆ. ಆದ್ದರಿಂದ ಸರ್ಕಾರವು ನಮ್ಮಂತಹ ಸಂಕಷ್ಟದಲ್ಲಿರುವ ಕುಟುಂಬಕ್ಕೆ ತಕ್ಷಣ ಸಹಾಯ ಮಾಡಬೇಕು” ಎಂದು ಮನವಿ ಮಾಡಿದ್ದಾರೆ.

1001558373 1

ಈ ಕುರಿತು ಈ ದಿನ.ಕಾಮ್ ಜತೆ ಮಾತನಾಡಿದ ನಾಮದೇವ ಅವರ ಪತ್ನಿ ನೇಹಾ, “ನಾನು ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡುತ್ತಿದ್ದು ತಿಂಗಳಿಗೆ ಕೇವಲ ₹6,000 ಸಂಬಳ ಸಿಗುತ್ತದೆ. ಅದರಲ್ಲಿ ಕುಟುಂಬವನ್ನು ನಡೆಸಬೇಕು. ನಮ್ಮ ಮನೆ ಬಿದ್ದು ಒಂದೂವರೆ ವರ್ಷಗಳಾಗಿದ್ದು, ಮಳೆಯಾದಾಗ ನೀರು ಮನೆಯೊಳಗೆ ಬರುತ್ತದೆ. ಆ ಸಂದರ್ಭದಲ್ಲಿ ಮಲಗಲು ಸಹ ಜಾಗ ಇರುವುದಿಲ್ಲ” ಎಂದು ನೋವು ವ್ಯಕ್ತಪಡಿಸಿದರು.

“ಈ ಕುರಿತು ಗ್ರಾಮ ಪಂಚಾಯತಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದಲ್ಲದೆ ನಮಗೆ ರೇಷನ್ ಕಾರ್ಡ್ ಕೂಡ ಇಲ್ಲ. ಮೂವರು ಮಕ್ಕಳನ್ನು ಸಾಕುವ ಜವಾಬ್ದಾರಿ ನನ್ನ ಮೇಲಿದೆ. ಸರ್ಕಾರ ಹಾಗೂ ಸಾಮಾಜಿಕ ಸಂಸ್ಥೆಗಳು ಸಹಾಯ ಮಾಡಬೇಕು” ಎಂದು ಅವರು ಮನವಿ ಮಾಡಿಕೊಂಡರು.

ಈ ದಿನ.ಕಾಮ್ ಈ ಕುರಿತು ಹ್ಯೂಮ್ಯಾನಿಟಿ ರಿಲೀಫ್ ಸೊಸೈಟಿಯ (ಎಚ್ ಆರ್ ಎಸ್) ಸಂಸ್ಥೆಯ ಯಾಸಿನ್ ಮಖಾನಂದಾ‌ರ್ ಅವರಿಗೆ ಈ ಕುಟುಂಬದ ಕುರಿತು ಮಾಹಿತಿ ನೀಡಿದಾಗ ಹ್ಯೂಮ್ಯಾನಿಟಿ ರಿಲೀಪ್ ಸಂಸ್ಥೆಯ ಸದಸ್ಯರು ನಾಮದೇವ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಅಲ್ಲದೆ, ತಮ್ಮ ಸಂಸ್ಥೆಯ ಮೂಲಕ ಅಗತ್ಯ ಸಹಾಯವನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ನಾಮದೇವ ದಬಾಲೆ ಅವರ ಅನಾರೋಗ್ಯ, ಗೋಡೆಯಿಲ್ಲದ ಮನೆ, ಆರ್ಥಿಕ ಸಂಕಷ್ಟ , ಜತೆಗೆ ಮೂವರು ಮಕ್ಕಳ ಜೀವನ ಈ ಎಲ್ಲಾ ಸಮಸ್ಯೆಗಳ ನಡುವೆ ದಿನನಿತ್ಯ ಬದುಕಿಗಾಗಿ ನೇಹಾ ಮತ್ತು ನಾಮದೇವ ಅವರು ಹೋರಾಟ ನಡೆಸುತ್ತಿದ್ದಾರೆ.

ಆದ್ದರಿಂದ, ಮಾನವೀಯ ಮನಸ್ಸುಳ್ಳ ದಾನಿಗಳು, ಸಮಾಜ ಸೇವಕರು, ಸಂಘಟನೆಗಳು ಹಾಗೂ ಸಾರ್ವಜನಿಕರು ಸಂಬಂದಪಟ್ಟ ಅಧಿಕಾರಿಗಳು, ಸ್ಥಳಿಯ ಜನಪ್ರತಿನಿಧಿಗಳು ಆರ್ಥಿಕ ಸಹಾಯ, ವೈದ್ಯಕೀಯ ನೆರವು ಮತ್ತು ಮನೆ ನಿರ್ಮಾಣಕ್ಕೆ ಸಹಕರಿಸಬೇಕಾಗಿದೆ.

1001558464

ಈ ಕುಟುಂಬಕ್ಕೆ ನೀವು ನೀಡುವ ಪ್ರತಿಯೊಂದು ಸಹಾಯವೂ ಅವರ ಬದುಕಿನಲ್ಲಿ ಹೊಸ ಆಶೆಯನ್ನು ಮೂಡಿಸುತ್ತದೆ. ನಾಮದೇವ ಮತ್ತು ನೇಹಾ ಅವರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತದೆ.

ಈ ಕುಟುಂಬಕ್ಕೆ ಸಹಾಯ ಮಾಡಲಿಚ್ಚಿಸುವವರು ಈ ಕುಟುಂಬವನ್ನು ಸಂಪರ್ಕಿಸಲು ಕೊರಲಾಗಿದೆ

IMG 20251111 WA0000
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಮಾಂಜಾ ದಾರಕ್ಕೆ ಸಿಲುಕಿ ಬೈಕ್ ಸವಾರ ಸಾವು

ಗಾಳಿಪಟದ ಮಾಂಜಾ ದಾರ ಬೈಕ್‌ ಚಲಾಯಿಸುತ್ತಿದ್ದ ಯುವಕನ ಕೊರಳಿಗೆ ಸಿಲುಕಿ ಸ್ಥಳದಲ್ಲೇ...

ಬೆಳಗಾವಿ | ಇನ್‌ಸ್ಟಾಗ್ರಾಂ ಹನಿಟ್ರ್ಯಾಪ್ ಮೂಲಕ ಯುವಕನ ಕೊಲೆ: ನಾಲ್ವರ ಬಂಧನ

ಕಾಣೆಯಾಗಿದ್ದ ಯುವಕನೊಬ್ಬನ ಕೊಲೆ ಪ್ರಕರಣಕ್ಕೆ ಭಾರೀ ತಿರುವು ಸಿಕ್ಕಿದ್ದು, ಹಳೆ ಹಣಕಾಸಿನ...

ಬೆಳಗಾವಿ | ಮತಕಳ್ಳತನ ಆರೋಪಕ್ಕೆ ಸಾಕ್ಷ್ಯವಿದ್ದರೆ ನ್ಯಾಯಾಲಯಕ್ಕೆ ಹೋಗಲಿ: ಜಗದೀಶ್ ಶೆಟ್ಟರ್

ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು...