ಬಳ್ಳಾರಿ | ಬಿಜೆಪಿ ಮಾಜಿ ಶಾಸಕ ಸೋಮಲಿಂಗಪ್ಪ ವಿರುದ್ಧ ಜಮೀನು ಒತ್ತುವರಿ, ದೌರ್ಜನ್ಯ ಆರೋಪ

Date:

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಹಾಗೂ ಅವರ ಮಕ್ಕಳ ವಿರುದ್ಧ ಅಕ್ರಮ ಜಮೀನು ಒತ್ತುವರಿ ಆರೋಪ ಕೇಳಿಬಂದಿದೆ. ಜಮೀನಿನ ಮಾಲೀಕರ ಮೇಲೆಯೇ ದೌರ್ಜನ್ಯ ಎಸಗಿದ್ದಾರೆ ಎಂದು ಮಂಜುಳಾ ಎಂಬುವರು ಆರೋಪಿಸಿದ್ದಾರೆ.

- Advertisement -

ಸಿರುಗುಪ್ಪ ನಿವಾಸಿ ಮಂಜುಳಾ ಅವರ ತಂದೆ ತಿಪ್ಪಯ್ಯ ಶೆಟ್ಟಿ ಅವರು ತೆಕ್ಕಲಕೋಟೆ ಹೋಬಳಿಯ ದೇವಲಾಪುರ ಗ್ರಾಮದ ಸರ್ವೆ ನಂ. 8/3ರಲ್ಲಿ 3 ಎಕರೆ ಜಮೀನು ಹೊಂದಿದ್ದು, ಅವರ ಹೆಸರಿನಲ್ಲೇ ಪಟ್ಟಾ ದಾಖಲಾಗಿದೆ. ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ, ಅವರ ಮೂವರು ಮಕ್ಕಳು ಹಾಗೂ ಸುಮಾರು ಹತ್ತು ಜನ ಗೂಂಡೆಗಳು ಹಲ್ಲೆ ಮಾಡಲು ಯತ್ನಿಸಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಂಜುಳಾ ಅವರು ಸಿರುಗುಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾಜಿ ಶಾಸಕರ ದೌರ್ಜನ್ಯವನ್ನು ಖಂಡಿಸಿ ಅವರು ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ದೂರಿನಲ್ಲಿ ಮಂಜುಳಾ ಅವರು ಹೀಗೆ ಆರೋಪಿಸಿದ್ದಾರೆ:

ಆಗಸ್ಟ್ 4ರಂದು ಬೆಳಗ್ಗೆ ಸುಮಾರು 7 ಗಂಟೆಗೆ ನಾನು ನನ್ನ ಜಮೀನಿನಲ್ಲಿ ಮೂರು ಜೆಸಿಬಿಗಳನ್ನು ಇಟ್ಟು ಸ್ವಚ್ಛಗೊಳಿಸುವ ಕೆಲಸ ನಡೆಸುತ್ತಿದ್ದೆ. ಆ ಸಮಯದಲ್ಲಿ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಹಾಗೂ ಅವರ ಮಕ್ಕಳಾದ ಎಂ.ಎಸ್. ವೆಂಕಟಪ್ಪ ನಾಯಕ ಮತ್ತು ಸಿದ್ದಪ್ಪ ಅವರು ಕೆಎ-34-ಎನ್-6309 ಸಂಖ್ಯೆಯ ಇನ್ನೋವಾ ಕಾರಿನಲ್ಲಿ ಬಂದರು. ಅವರ ಜೊತೆಗೆ ಹತ್ತು ಜನ ಸಹಚರರು ಮತ್ತು ಹತ್ತು ಜನ ಗೂಂಡೆಗಳು ಸೇರಿಕೊಂಡು ನಮ್ಮ ಜೆಸಿಬಿಯನ್ನು ನಿಲ್ಲಿಸಿದರು. ನಂತರ ಅವರ ಜೆಸಿಬಿಯನ್ನು ಬಳಸಿ ನನ್ನ ಜಮೀನಿಗೆ ಅಕ್ರಮವಾಗಿ ನುಗ್ಗಿ ದೌರ್ಜನ್ಯ ಮಾಡಿದರು. “ನೀನು ಈಗಲೇ ಸ್ಥಳದಿಂದ ಹೊರಗೆ ಹೋಗದಿದ್ದರೆ ನಿನ್ನನ್ನು ಇಲ್ಲಿಯೇ ಕೊಂದು ಹಾಕುತ್ತೇವೆ” ಎಂದು ಧಮಕಿ ಹಾಕಿದರು. ಅವರು ನನ್ನನ್ನು ಕೈಹಿಡಿದು ಎಳೆದು ಜಮೀನಿನಿಂದ ದೂರಕ್ಕೆ ತಳ್ಳಿದರು. ನಾನು ಕಿರುಚಿದಾಗ ಮಾರುತಿ ಶೆಟ್ಟಿ (ತಂದೆ: ತಿಪ್ಪಯ್ಯ ಶೆಟ್ಟಿ) ಸ್ಥಳಕ್ಕೆ ಬಂದು ನನ್ನನ್ನು ಅವರಿಂದ ಬಿಡಿಸಿದರು. ಆದರೂ ನನಗೆ ಅವಾಚ್ಯ ಶಬ್ದಗಳಿಂದ ಬೈದು, ನನ್ನ ಜಮೀನಿನಲ್ಲಿ ಹತ್ತು ಜನ ಗೂಂಡಗಳನ್ನು ನಿಲ್ಲಿಸಿದ್ದಾರೆ.

3c0ed2d4 b4ab 4098 8a62 a50659034bb0

ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ, ಅವರ ಸಹಚರರು ಹಾಗೂ ಗೂಂಡೆಗಳು ನನ್ನನ್ನು ನಿಂದಿಸಿ, ಧಮಕಿ ಹಾಕಿ ಸಾರ್ವಜನಿಕ ಸ್ಥಳದಲ್ಲಿ ನನ್ನ ಮಾನಹಾನಿ ಮಾಡಿದ್ದಾರೆ. ನನ್ನ ಸ್ವತ್ತಿನ ಸ್ವಾಧೀನಕ್ಕೆ ಅಡ್ಡಿಪಡಿಸುತ್ತಿರುವ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ನನಗೆ ನ್ಯಾಯ ಒದಗಿಸಬೇಕೆಂದು ಮಂಜುಳಾ ಅವರು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಇನ್ನೂ ಕಾದು ನೋಡಬೇಕಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ತೆರಿಗೆ ವಸೂಲಾತಿಯಲ್ಲಿ ಲೋಪ: ಇಬ್ಬರು ಪಿಡಿಓ ಅಮಾನತು, ಮೂವರು ಕರವಸೂಲಿಗಾರರ ವಜಾಕ್ಕೆ ವಿಚಾರಣೆ

ತೆರಿಗೆ ವಸೂಲಾತಿಯಲ್ಲಿ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪ ಎಸಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ...

ಹಾವೇರಿ | ಪುಸ್ತಕ ಓದಿನ ಪರಂಪರೆಯನ್ನು ಮರು ಕಟ್ಟಬೇಕಾಗಿದೆ: ಶೋಭಾ ಜಾಗಟಗೇರಿ

"ಮುಷ್ಠಿಯಲ್ಲಿ ಇರುವ ಮೊಬೈಲ್ ಜೀವನ ಪಾಠವನ್ನ್ನು ಕಲಿಸುವುದಕ್ಕಿಂತ ದಾರಿ ತಪ್ಪಿಸುವ ಕೆಲಸ...

ಔರಾದ್‌ | ಭಗತ್ ಸಿಂಗ್ ತ್ಯಾಗ, ದೇಶಪ್ರೇಮ ಯುವ ಜನಾಂಗಕ್ಕೆ ಆದರ್ಶ

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕ್ರಾಂತಿಯ ಕಿಡಿಯನ್ನು ಹೊತ್ತಿಸಿದ ಅಪ್ರತಿಮ ವೀರ...

ಉತ್ತರ ಕನ್ನಡ | 3.24 ಲಕ್ಷ ಪಡಿತರ ಚೀಟಿ ಸದಸ್ಯರ ಇ-ಕೆವೈಸಿ ಬಾಕಿ; ಅಕ್ಟೋಬರ್ 20ರೊಳಗೆ ಪೂರ್ಣಗೊಳಿಸಲು ಮನವಿ

ಉತ್ತರ ಕನ್ನಡ ಜಿಲ್ಲೆಯ ಪಡಿತರ ಚೀಟಿಗಳಲ್ಲಿರುವ 5,69,044 ಸದಸ್ಯರು ಐದು ವರ್ಷಗಳ...