ಬಳ್ಳಾರಿ | ಅನಧಿಕೃತವಾಗಿ ನೀರು ಬಳಕೆ; ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

Date:

ಅನಧಿಕೃತವಾಗಿ ನೀರಾವರಿ ಸೌಲಭ್ಯ ಪಡೆಯುತ್ತಿರುವ ವ್ಯಕ್ತಿಗಳನ್ನು ಬಂಧಿಸಬೇಕು. ರಾಜಾರೋಷವಾಗಿ ಕಾಲುವೆಗಳಿಗೆ ಹಾಕಿರುವ ಪೈಪುಗಳು ಮತ್ತು ಮೋಟಾರ್‌ಗಳನ್ನೂ ಜಪ್ತಿ ಮಾಡಿ ಅಧಿಕೃತ ನೀರಾವರಿ ರೈತರಿಗೆ ನೀರು ತಲುಪಿಸಲು ಕೂಡಲೇ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಸಿರಗುಪ್ಪ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.

“ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಬಾಗೇವಾಡಿ ಕಾಲುವೆಯ ಕೆಳಭಾಗದ ರೈತರಾಗಿದ್ದು, ನಾವು ಅಧಿಕೃತವಾಗಿ ನೀರಾವರಿ ಸೌಲಭ್ಯ ಹೊಂದಿದ್ದೇವೆ. ನಮ್ಮ ಹೊಲಗಳಿಗೆ ಕಾಲುವೆಯಿಂದ ಬರಬೇಕಾದ ನೀರು ಸರಿಯಾದ ಸಮಯಕ್ಕೆ ನೀರು ಬರುತ್ತಿಲ್ಲ. ಏಕೆಂದರೆ ಮೇಲ್ಭಾಗದ ಅನಧಿಕೃತ ರೈತರು ತಮ್ಮ ಹೊಲಗಳಿಗೆ ವಿದ್ಯುತ್ ಮೋಟಾರ್‌ಗಳು ಹಾಗೂ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಂಡು ಕಾಲುವೆ ಮೂಲಕ ಹರಿಯುತ್ತಿರುವ ನೀರನ್ನು ಕೆಲವು ಭಾಗದಲ್ಲಿ ಕಳ್ಳತನದಿಂದ ಅನಧಿಕೃತವಾಗಿ ನೀರು ಹರಿಸಿಕೊಂಡು ಅಧಿಕೃತವಾಗಿರುವ ನಮ್ಮ ಜಮೀನುಗಳಿಗೆ ಸರ್ಕಾರದಿಂದ ಪಡೆದಿರುವ ನೀರು ಬರುತ್ತಿಲ್ಲ” ಎಂದು ಕಾರ್ಯಕರ್ತರು ಆಗ್ರಹಿಸಿದರು .

ರೈತ ಮುಖಂಡ ಜ್ಞಾನನಂದ ಸ್ವಾಮಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕಾಲುವೆ ನೀರನ್ನು ಕೆರೆಗೆ ತಿರುಗಿಸಿ ಹೊಲ ಗದ್ದೆಗಳಿಗೆ ನೀರು ಬಿಡುತ್ತಾರೆ. ಹಾಗೆಯೇ ಕಾಲುವೆ ನೀರನ್ನು ಸತತ ಕೆರೆಗೆ  ಹರಿಸುತ್ತಾರೆ. ಕೆಳಭಾಗದ ಜನರಿಗೆ ಕಾಲುವೆ ನೀರು ಬರುವುದಿಲ್ಲ. ಹಾಗಾಗಿ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಕೆಳ ಭಾಗದ ರೈತರಿಗೆ ನೀರು ಹರಿಸುವಂತೆ ಮಾಡಬೇಕು” ಎಂದು ಒತ್ತಾಯಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ರಾಯಚೂರು | ತುಂಗಭದ್ರಾ ಎಡದಂಡೆ ಕಾಲುವೆ; 104 ಮೈಲ್ ಕೆಳಭಾಗದ ರೈತರಿಗೆ ನೀರೊದಗಿಸಲು ವಿಫಲ

“ಹಲವು ಬಾರಿ ಸಂಬಂಧಪಟ್ಟ ನೀರಾವರಿ ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ರೈತರು ಅವಲತ್ತುಕೊಂಡರು

ಈ ಸಂದರ್ಭದಲ್ಲಿ ಕೇಶವಪ್ಪ, ಹುಸೇನ ಬಾಷಾ, ನಾಗರಾಜ್ ಸೇರಿದಂತೆ ಇತರರು ಇದ್ದರು.

ವರದಿ : ಗುರುಸ್ವಾಮಿ ಸಿರಗುಪ್ಪ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೇಡಂ | ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಲು ಅಂಬೇಡ್ಕರ್ ಯುವ ಸೇನೆ ಒತ್ತಾಯ

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಡೆಂಘೀ, ಕಾಲರಾ, ಮಲೇರಿಯಾ...

ಕಲಬುರಗಿ | ಭೀಮಾನದಿ ಸಂರಕ್ಷಣೆಗಾಗಿ ಅರಿವಿನ ಅಭಿಯಾನ

ಕಲಬುರಗಿ ಜಿಲ್ಲೆಗೆ ಜೀವಜಲವಾಗಿರುವ ಭೀಮಾನದಿ ಸಂರಕ್ಷಣೆಗಾಗಿ ಸಂವಾದ ಯುವಸಂಪನ್ಮೂಲ ಕೇಂದ್ರ ಮತ್ತು...

ಕಲಬುರಗಿ | ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ವೆಲ್ಫೇರ್ ಪಾರ್ಟಿ ಆಗ್ರಹ

ಕಲಬುರಗಿ ನಗರದಲ್ಲಿ ಕುಡಿಯುವ ನೀರು ಸರಬರಾಜು ಅವ್ಯವಸ್ಥೆಯಿಂದ ಕೂಡಿದ್ದು, ಕೂಡಲೇ ಸಮಸ್ಯೆಯನ್ನು...

ತುಮಕೂರು | ಕೆಐಎಡಿಬಿ ಅಪರ ನಿರ್ದೇಶಕನ ಮನೆ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ

ಬೆಂಗಳೂರಿನ 'ಖನಿಜ ಭವನ'ದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಐಎಡಿಬಿ ಅಪರ ನಿರ್ದೇಶಕ ಮುದ್ದುಕುಮಾರ್‌ ಮನೆ...