ಬೀದರ್‌ | ಆರ್‌ಎಸ್‌ಎಸ್ ಕಾನೂನು ಬಾಹಿರ ನೀತಿ ವಿರೋಧಿಸಿ ಪ್ರತಿಭಟನೆ

Date:

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಕಾನೂನುಬಾಹಿರ ಹಾಗೂ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಬೀದರ್‌ ನಗರದಲ್ಲಿ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

- Advertisement -

ಆರ್‌ಎಸ್‌ಎಸ್‌ ಕಾನೂನು ಬಾಹಿರ ನಿಲುವು, ದಲಿತ ವಿರೋಧಿ ವರ್ತನೆ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅವರ ಕುಟುಂಬಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಬಂದಿರುವ ಜೀವಬೆದರಿಕೆಗಳನ್ನು ಖಂಡಿಸಲಾಗಿದೆ ಎಂದು ಕೈಯಲ್ಲಿ ಬಾಬಾಸಾಹೇಬರ ಭಾವಚಿತ್ರ ಹಿಡಿದು, ಘೋಷಣೆಗಳನ್ನು ಹಾಕುತ್ತ ನಗರದಲ್ಲಿ ಮೆರವಣಿಗೆ ನಡೆಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಮನವಿಯಲ್ಲಿ ಕೇಂದ್ರದಲ್ಲಿ ಮನುವಾದಿ ಶಕ್ತಿ ಅಧಿಕಾರಕ್ಕೆ ಬಂದ ನಂತರ ದಲಿತ ಸಮುದಾಯದ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿಂದೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ನಡೆದ ಶೂ ಎಸೆಯುವ ಪ್ರಯತ್ನ ನಡೆದಿದೆ. ಆರ್‌ಎಸ್‌ಎಸ್‌ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ವರ್ತಿಸುತ್ತಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸರ್ಕಾರ ತಕ್ಷಣವೇ ಸೂಕ್ತ ರಕ್ಷಣೆಯನ್ನು ಒದಗಿಸಬೇಕುʼ ಎಂದು ಒತ್ತಾಯಿಸಿದ್ದಾರೆ.

WhatsApp Image 2025 11 26 at 6.36.27 AM

ಬಳಿಕ ಬೀದರ್ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಮಾರುತಿ ಬೌದ್ಧೆ, ರಾಜಕುಮಾರ ವಾಘಮಾರೆ, ಅರುಣ ಪಟೇಲ್, ರಮೇಶ ಉಮಾಪೂರೆ, ಅಶೋಕ ಗಾಯಕವಾಡ, ಶಿವರಾಜ ತಡಪಳ್ಳಿ, ಸತೀಶ ರತ್ನಾಕರ್, ಝರೆಪ್ಪಾ ವರ್ಮಾ, ವಾಮನರಾವ ಮೈಸಲಗೆ, ನರಸಿಂಗ ಮೇಟಿ, ರಾಹುಲ ಹಾಲಹಿಪ್ಪರಗಾ, ಶಿರೋಮಣಿ ಹಲಗೆ, ರಮೇಶ ಬೆಲ್ದಾಳ, ವಿಜಯಕುಮಾರ ಭಾವಿಕಟ್ಟಿ, ಬಸವರಾಜ ಭಾವಿದೊಡ್ಡಿ, ಬಾಬುರಾವ ಹೊನ್ನಾ , ಅಬ್ದುಲ ಮನ್ನಾನ್ ಸೇಠ, ಉದಯ ನಾಯಕ, ಗಾಲೆಬ್ ಹಾಲ್ಕಿ, ಸಾಯಿ ಸಿಂಧೆ, ಮಹೇಶ ಗೋರನಾಳಕರ್, ವಹೀದ ಲಖನ್, ಅವಿನಾಶ ರಾಯ್, ಅಭಿ ಕಾಳೆ, ಜಗದೀಶ್ವರ ಬಿರಾದಾರ, ಓಂಪ್ರಕಾಶ ರೊಟ್ಟೆ, ಇಂದುಮತಿ ಸಾಗರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ಬಸವಕಲ್ಯಾಣ ನಗರಸಭೆಯಲ್ಲಿ ಅವ್ಯವಹಾರ : ಪೌರಾಯುಕ್ತ ಅಮಾನತಿಗೆ ಆಗ್ರಹಿಸಿ ಬಿಎಸ್ಪಿ ಪ್ರತಿಭಟನೆ

WhatsApp Image 2025 11 24 at 4.19.22 PM 2
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ನರಸಾಪುರ ಕೆ ಬಿ ಹೊಸಹಳ್ಳಿ ಬಂಡೆಯಲ್ಲಿ ಯಲಹಂಕ ಬಾಗಲೂರು ಮೂಲದ ಲಾರಿ ಚಾಲಕನ ಸಾವು

ಜಿಲ್ಲೆಯ ಕೆ.ಬಿ. ಹೊಸಹಳ್ಳಿ ಬಂಡೆಯಲ್ಲಿ ಯಲಹಂಕ ಮೂಲದ ಲಾರಿ ಚಾಲಕ ಮೃತಪಟ್ಟಿರುವ...

ಹುಬ್ಬಳ್ಳಿ | ಸಾರಿಗೆ ಸಂಸ್ಥೆ ಚಾಲಕ ಆತ್ಮಹತ್ಯೆ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗ್ರಾಮೀಣ ವಿಭಾಗದ ಡಿಪೊ ಬಳಿಯ...

ಬಾಗೇಪಲ್ಲಿ | ಬರ ಘೋಷಣೆ ರೈತರಿಗೆ ಮಾಡಿದ ಅವಮಾನ: ಚನ್ನರಾಯಪ್ಪ ಟೀಕೆ

ರಾಜ್ಯ ಸರ್ಕಾರ ಬರ ಪರಿಸ್ಥಿತಿಯಲ್ಲಿ ರೈತರಿಗೆ ₹2,500 ಆರ್ಥಿಕ ನೆರವು ನೀಡಲು...