ಬೀದರ್ ಜಿಲ್ಲೆಯ ಗಡಿ ಭಾಗದ ಔರಾದ್ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಇದೇ ಫೆ.4ರಂದು ಜರುಗಲಿರುವ ಔರಾದ್ ತಾಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಹೊರತರಲು ಉದ್ದೇಶಿಸಿರುವ ಸ್ಮರಣ ಸಂಚಿಕೆಗೆ ಲೇಖನಗಳನ್ನು ಆಹ್ವಾನಿಸಲಾಗಿದೆ ಎಂದು ಸಮ್ಮೇಳನದ ಸ್ಮರಣ ಸಂಚಿಕೆ ಸಂಪಾದಕ ಮಂಡಳಿ ತಿಳಿಸಿದ್ದಾರೆ.
ಔರಾದ್ ತಾಲೂಕು ವ್ಯಾಪ್ತಿಯ ಸಾಹಿತಿಗಳು, ಲೇಖಕರು, ವಿದ್ಯಾರ್ಥಿಗಳು, ಸಾರ್ವಜನಿಕರು ತಾಲೂಕಿನ ಕಲೆ, ಸಾಹಿತ್ಯ ಸಂಸ್ಕೃತಿ, ಕೃಷಿ, ಶಿಕ್ಷಣ, ಐತಿಹ್ಯ ವಿಶೇಷತೆಯ ವೈಚಾರಿಕ ಬರಹಗಳು ಸೇರಿದಂತೆ ನಾಡಿನ ಭಾಷೆ, ಇತಿಹಾಸದ ವಿಶೇಷತೆಗಳ ಬಗ್ಗೆ ಲೇಖನ ಕಳುಹಿಸಬಹುದಾಗಿದೆ.
ಲೇಖನಗಳು ಡಿಟಿಪಿ ಮಾಡಿ ಸಾಫ್ಟ್ ಕಾಪಿಯನ್ನು ಯಥಾವತ್ತಾಗಿ ಇಮೇಲ್ ಮುಖಾಂತರ [email protected], [email protected] ಅಥವಾ 9740308419, 9739756216 ಮೊಬೈಲ್ ವಾಟ್ಸಾಪ್‌ಗೆ ಕಳುಹಿಸಲು ತಿಳಿಸಿದೆ.
ಇದನ್ನೂ ಓದಿ : ಮಲಯಾಳಂ ಭಾಷಾ ನೀತಿ : ಸಿದ್ದರಾಮಯ್ಯನವರ ವಿರೋಧದಲ್ಲಿ ತಪ್ಪಿದೆಯೇ?
ಲೇಖನಗಳು ಕಳುಹಿಸಲು ಜನವರಿ 20 ಕೊನೆಯ ದಿನವಾಗಿದ್ದು, ಸಂಪಾದಕೀಯ ಮಂಡಳಿಯಲ್ಲಿ ಆಯ್ಕೆಯಾಗುವ ಅರ್ಹ ಲೇಖನಗಳು ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 9845659709, 9481059622 ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಸ್ಮರಣ ಸಂಚಿಕೆ ಸಂಪಾದಕರಾದ ಡಾ.ಶಿವಲಿಂಗ ಹೇಡೆ, ಬಾಲಾಜಿ ಕುಂಬಾರ ತಿಳಿಸಿದ್ದಾರೆ.




