ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕ್ರಾಂತಿಯ ಕಿಡಿಯನ್ನು ಹೊತ್ತಿಸಿದ ಅಪ್ರತಿಮ ವೀರ ಹಾಗೂ ದೇಶಭಕ್ತ ಹುತಾತ್ಮ ಭಗತ್ ಸಿಂಗ್ ಅವರ ತ್ಯಾಗ, ದೇಶಪ್ರೇಮ ಮತ್ತು ಆದರ್ಶಗಳು ಇಂದಿನ ಯುವಜನತೆಗೆ ಸದಾ ಸ್ಫೂರ್ತಿದಾಯಕವಾಗಿವೆ ಎಂದು ಭಾಲ್ಕಿ ಹಿರೇಮಠದ ಪೂಜ್ಯಶ್ರೀ ಗುರುಬಸವ ಪಟ್ಟದೇವರು ಹೇಳಿದರು.
ಸಂತಪೂರ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ದೇಶಭಕ್ತ ಹುತಾತ್ಮ ಭಗತ್ ಸಿಂಗ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಭಗತ್ ಸಿಂಗ್ ಅವರು ಚಿಕ್ಕ ವಯಸ್ಸಿನಲ್ಲಿಯೇ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟದ ಹಾದಿ ಹಿಡಿದು, ತಮ್ಮ ಜೀವನವನ್ನೇ ದೇಶಕ್ಕಾಗಿ ಸಮರ್ಪಿಸಿದರು. ಅವರಲ್ಲಿ ದೇಶಪ್ರೇಮ, ಧೈರ್ಯ, ತ್ಯಾಗ ಮನೋಭಾವ ಹಾಗೂ ಸಾಮಾಜಿಕ ಕಾಳಜಿ ತುಂಬಿತ್ತು. ಯುವಕರು ಅವರ ಜೀವನ ಮತ್ತು ವಿಚಾರಗಳನ್ನು ಅಧ್ಯಯನ ಮಾಡಿಕೊಂಡು, ದೇಶದ ಬಗ್ಗೆ ಜವಾಬ್ದಾರಿಯುತ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಪ್ರೇಕ್ಷಕರ ಮನಗೆದ್ದ ʼಸಣ್ಣಗೌಡಸಾನಿ’ ನಾಟಕ
ಕಾರ್ಯಕ್ರಮದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ನಿಕಟಪೂರ್ವ ಅಧ್ಯಕ್ಷ ಶಶಿಧರ್ ಕೋಸಂಬೆ, ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಸಂಜೀವಕುಮಾರ ಜುಮ್ಮಾ, ಕಾಲೇಜಿನ ಪ್ರಾಂಶುಪಾಲ ನವೀಲಕುಮಾರ ಉತ್ಕಾರ, ಉಪನ್ಯಾಸಕರಾದ ಸುಧಾ ಕೌಟಿಗೆ, ಮೀರಾತಾಯಿ ಕಾಂಬಳೆ, ಪ್ರಿಯಾಂಕಾ ಗೊನ್ನಳ್ಳಿಕರ್, ಅಶ್ವಿನಿ ಹಿಂದೊಡ್ಡಿ, ಶಿಲಾದಾರ ಕುಚ್ಚಬಾಳ, ರಾಜಕುಮಾರ ಹಳ್ಳಿಕರ್, ಶಿವಪುತ್ರ ಧರಣಿ, ಮಹಾಂತೇಶ್ ಪಾಂಚಾಳ, ಸುಧೀರ್ ಆಲೂರೆ, ಸಂತೋಷ ದೊಳಗಂಡೆ, ಚಂದ್ರರೆಡ್ಡಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




