ಶಿಕ್ಷಣವೆಂಬುದು ಕೇವಲ ಶಾಲೆಯಲ್ಲಿ ಕಲಿಯುವ ಪಾಠಗಳಿಗೆ ಸೀಮಿತವಾಗದೆ, ಸಂಗೀತ, ಸಾಹಿತ್ಯ, ಅಭಿನಯ ಸೇರಿದಂತೆ ವಿವಿಧ ಕಲೆಗಳನ್ನು ಒಳಗೊಂಡಾಗ ಮಾತ್ರ ಪರಿಪೂರ್ಣ ಶಿಕ್ಷಣವಾಗುತ್ತದೆ. ಕಲೆಯು ಜಗತ್ತಿಗೆ ಸೌಂದರ್ಯ ನೀಡಿದರೆ, ಸಂಗೀತವು ಮನಸ್ಸಿಗೆ ಮಾಧುರ್ಯ ನೀಡುತ್ತದೆ ಎಂದು ಶರಣ ಉರಲಿಂಗಪೆದ್ದಿ ಹೇಳಿದರು.
ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪುರ ಗ್ರಾಮದ ಜವಾಹರ್ ನವೋದಯ ವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಶಿಕ್ಷಣದಲ್ಲಿ ಕಲೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
“ಶಾಲೆಗಳು ಕೇವಲ ಜ್ಞಾನ ನೀಡುವ ತಾಣಗಳಾಗದೆ, ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಸ್ಫೂರ್ತಿಯ ಕೇಂದ್ರಗಳಾಗಬೇಕು. ಆಗ ಮಾತ್ರ ನಿಜವಾದ ಶಿಕ್ಷಣ ದೊರೆತಂತಾಗುತ್ತದೆ. ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಾಗದೆ, ಸುಂದರ ಬದುಕು ರೂಪಿಸುವ ಸಾಧನವಾಗಬೇಕು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಬುಚ್ಚಿ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳು ಕಲೆಗಳನ್ನು ಉಳಿಸುವುದರ ಜೊತೆಗೆ ನಮ್ಮ ಪರಂಪರೆಯನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಲೆಯ ಮೂಲಕ ಮಾನವೀಯ ಮೌಲ್ಯಗಳು ಮನುಷ್ಯನಲ್ಲಿ ಶಾಶ್ವತವಾಗಿ ಬೆಳೆದು ಬರುತ್ತವೆ” ಎಂದರು.
This video cannot be played in your browser. Open the video directly
ಕಾರ್ಯಕ್ರಮದಲ್ಲಿ ಕರ್ನಾಟಕದ ಸುಮಾರು 20 ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ಹಾಡುಗಾರಿಕೆ, ಕಥೆ ಹೇಳುವಿಕೆ, ಚಿತ್ರಕಲೆ, ಚಿತ್ರಗಳ ವಸ್ತುಪ್ರದರ್ಶನ ಸೇರಿದಂತೆ ವಿವಿಧ ಕಲಾ ಪ್ರಕಾರಗಳನ್ನು ಪ್ರದರ್ಶಿಸಿದರು. ಆಯ್ಕೆಯಾಗುವ ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಗೆ ಪ್ರವೇಶ ಪಡೆಯಲಿದ್ದಾರೆ.
ತೀರ್ಪುಗಾರರಾಗಿ ಸಂತೋಷ್ ಕಾಮಶೆಟ್ಟಿ, ಹನುಮಂತರಾವ್, ಸಂಗಯ್ಯ ಸ್ವಾಮಿ, ಕಪಿಲ್ ಕುಮಾರ್, ರಾಮಚಂದ್ರ ಭಜಂತ್ರಿ, ಮಾಂತೇಶ್ ಹರವಾಳ, ಶರಣಬಸಪ್ಪ ಬಿರಾದಾರ್, ಸಂತೋಷ್ ಕುಮಾರ್ ಹುಲ್ಸುರೆ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದನ್ನೂ ಓದಿ : ಬೀದರ್ | ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಚಾರ್ಯ ನಾಗರಾಜನ್, ಧರ್ಮಣ್ಣ ಚಿಟ್ಟಾ, ಅಲ್ಕಾ, ಶ್ರೀಶೈಲಪ್ಪ, ಲಕ್ಷ್ಮಿಕಾಂತ್ ದುದ್ದಣಗಿ, ಸತೀಶ್ ಕುಮಾರ್ ಸ್ವಾಮಿ, ರಾಜೇಶಮ, ಚೇತನ್ ಕುಮಾರ್ ಜಂಬಗಿ, ಸಂಜು ರಾಥೋಡ್, ರಶ್ಮಿ, ಚಿನ್ಮಯಿ, ಲಕ್ಷ್ಮಿ, ಪ್ರಕಾಶ ಶಹಾ, ಮದನ್ ಲಾಂತುರೆ, ಮೌನೇಶ್, ಸುನೈನಾ, ನಂದಿನಿ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





