ಭಾಲ್ಕಿ| ಅವಹೇಳನಕಾರಿ ಹೇಳಿಕೆ : ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

Date:

ಹಿಂದೂಪರ ದೇವರ ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

- Advertisement -

ಈ ಕುರಿತು ಭಾಲ್ಕಿ ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ತಾಲೂಕು ಘಟಕದ ಪದಾಧಿಕಾರಿಗಳು ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

‘ಚಲಿಸುವ ರೈಲಿನಲ್ಲಿ ಅಟ್ಟರಗಾ ಗ್ರಾಮದ ನಿವಾಸಿ ಕಾಳಿದಾಸ ಅರ್ಜುನ ಸೂರ್ಯವಂಶಿ, ವರವಟ್ಟಿ ಗ್ರಾಮದ ಕಪಿಲ ಗೋಡಬಲೆ ಮತ್ತು ರಾಹುಲ ಖದಾರೆ ಎಂಬುವರ ಗುಂಪು ವಿಡಿಯೋ ಚಿತ್ರೀಕರಿಸಿ ಹಿಂದೂಪರ ಆರಾಧ್ಯ ದೈವರಾದ ಶ್ರೀರಾಮಚಂದ್ರ, ಶ್ರೀಕೃಷ್ಣ ಮತ್ತು ಮಹಾತ್ಮ ಗಾಂಧೀಜಿ ಅವರ ಅವಹೇಳನಕಾರಿ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡುವುದರ ಜತೆಗೆ ರಾಷ್ಟ್ರೀಯ ಗೌರವಕ್ಕೆ ಚ್ಯುತಿ ತಂದಿದ್ದಾರೆ’ ಎಂದು ದೂರಲಾಗಿದೆ.

ಸಮಾಜದಲ್ಲಿ ಧ್ವೇಷ ಭಾವನೆ ಬಿತ್ತುತ್ತಿರುವ ಇಂತಹ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಿ ತಾಲೂಕಿನಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಹಿಂದುಪರ ಸಂಘಟನೆಗಳ ಅಧ್ಯಕ್ಷ ಶಿವು ಲೋಖಂಡೆ, ತಾಲೂಕು ವಿಶ್ವಹಿಂದು ಪರಿಷತ್ ಅಧ್ಯಕ್ಷ ಸಚಿನ ಜಾಧವ, ತಾಲೂಕು ಬಜರಂಗದಳ ಸಂಯೋಜಕ ದೇವರಾಜಸಿಂಗ ಠಾಕೂರ, ಪ್ರಮುಖರಾದ ರವಿಕಾಂತ ಕುಂಬಾರ, ಶೈಲೇಶ ಮಾಲಪಾನಿ, ಜೈರಾಜ ಕೊಳ್ಳಾ, ಪಾಂಡುರಂಗ ಕನಸೆ, ಸಂದೀಪ ತೇಲಗಾಂವಕರ, ಪ್ರೀತಮ ಜಾಧವ, ಕೃಷ್ಣಕಾಂತ, ಮಲ್ಲಿಕಾರ್ಜುನ ಸೋಲಾಪುರೆ, ಸಾಗರ ಗುಬ್ಬೆ, ಪ್ರಕಾಶ ಪಾಟೀಲ್, ಬಸವ, ನವನಾಥ ಪಾಟೀಲ್, ವಿಜಯಕುಮಾರ ಸೇರಿದಂತೆ ಹಲವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾಲ್ಕಿ | ಗಾಂಧೀಜಿ ಅಹಿಂಸಾ ತತ್ವ ಬದುಕಿನಲ್ಲಿ ಅನುಸರಿಸಿ : ಮಲ್ಲಿಕಾರ್ಜುನ ಹಲ್ಮಂಡಗೆ

ಭಾಲ್ಕಿಯ ನಿರ್ಮಲಾ ಹಲ್ಮಂಡಗೆ ಶಿಕ್ಷಣ ಸಂಸ್ಥೆಯಲ್ಲಿ ಮಹಾತ್ಮ ಗಾಂಧೀಜಿ ಅವರ 157ನೇ...

ಬೀದರ್‌ | ಎಚ್‌ಐವಿ ಬಾಧಿತರು ಆತಂಕಕ್ಕೊಳಗಾಗದೆ ನಿಯಮಿತ ಔಷಧಿ ಸೇವಿಸಿ

ಎಚ್‌ಐವಿ ಬಾಧಿತರು ಯಾವುದೇ ರೀತಿಯ ಭಯ, ಆತಂಕಕ್ಕೆ ಒಳಗಾಗದೆ ವೈದ್ಯರ ಸಲಹೆಯಂತೆ...

ಬೀದರ್‌ | ಗಾಂಧೀ ಜಯಂತಿ : ಪೌರಕಾರ್ಮಿಕರಿಗೆ ಉಪಹಾರ ವಿತರಣೆ

ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಆಮ್ ಆದ್ಮಿ ಪಕ್ಷದ ಇಂಜಿನಿಯರಿಂಗ್ ವಿಂಗ್...

ಬೀದರ್‌ ಜಿಲ್ಲೆ ಯಾವತ್ತಿಗೂ ಕಾಂಗ್ರೆಸ್‌ ಭದ್ರಕೋಟೆ : ಈಶ್ವರ ಖಂಡ್ರೆ

ಬೀದರ್ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಅಬ್ದುಲ್ ಮನ್ನಾನ್ ಸೇಠ್...