ತುಮಕೂರು | ಸಾರ್ವತ್ರಿಕ ಮುಷ್ಕರ : ಬಿಎಸ್ಎನ್ಎಲ್ ಕಚೇರಿ ಮುತ್ತಿಗೆಗೆ ಯತ್ನ

Date:

 ಕಾರ್ಮಿಕ ವಿರೋಧಿ ಸಂಹಿತೆ- ಉದ್ಯೋಗ ಖಾತ್ರಿಯಲ್ಲಿ ಬದಲಾವಣೆ ವಿದ್ಯುತ್ ಖಾಸಗಿಕರಣ, ಬೀಜ ಮಸೂದೆ ವಿರುದ್ದ – ಬೃಹತ್ ಮೇರವಣಿಗೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮತ್ತು ಸಂಯುಕ್ತ ಹೋರಾಟ ಕರ್ನಾಟಕ ಜಂಟಿಯಾಗಿ ಕರೆ ನೀಡಿದ್ದ ಫೆ12 ,ರ ಅಖಿಲ ಭಾರತ ಸರ್ವಾತ್ರಿಕ ಮುಷ್ಕರದ ಭಾಗವಾಗಿ ತುಮಕೂರು ನಗರದಲ್ಲಿ ಸಾವಿರಾರು ರೈತ- ಕಾರ್ಮಿಕರು ಟೌನ್‌ಹಾಲ್ ಮುಂಭಾಗ ಸಮಾವೇಶಗೊಂಡು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಬಿ.ಎಸ್. ಎನ್. ಎಲ್ ಕಛೇರಿ ಎದುರು ಮುತ್ತಿಗೆ ಹಾಕಿದರು. 

- Advertisement -

ಕಾರ್ಮಿಕ ವಿರೋಧಿ 4 ಸಂಹಿತೆಗಳನ್ನು ಜಾರಿ ವಿರೋಧಿಸಿ, ಗ್ರಾಮಿಣ ಉದ್ಯೋಗ ಖಾತ್ರಿ ಯೋಜನೆ ಪುನರ್ ಸ್ಥಾಪಿಸಿ, ಎಲ್ಲಾ ಗುತ್ತಿಗೆ ಕಾರ್ಮಿಕರಿಗೆ ಸೇವೆಗಳನ್ನು ಖಾಯಂ ಮಾಡಿ, 12 ಗಂಟೆಯ ದುಡಿಮೆ ಕಾನೂನು ಹಿಂಪಡೆಯಿರಿ, ಕನಿಷ್ಟ ವೇತನ ಮಾಸಿಕ 41ಸಾವಿರ ನಿಗಧಿ ಮಾಡಿ,ನಿಗಧಿತ ಕಾಲಾವಧಿ ದುಡಿಮೆ ಅವಕಾಶ ನೀಡಿ, ಖಾಯಂ ಕೆಲಸಗಳೆ ಇಲ್ಲದಂತೆ ಮಾಡುವುದನ್ನು ವಿರೋಧಿಸಿ. ವಿದ್ಯುತ್ ಬಳಕೆದಾರರಿಗೆ ವಿಪರೀತ ಬೆಲೆ ಏರಿಕೆಗೆ ಕಾರಣವಾಗುವ ವಿದ್ಯುತ್ ಖಾಸಗಿಕರಣಕ್ಕೆ ದಾರಿ ಮಾಡುವ ವಿದ್ಯುತ್ ಕಾಯಿದೆ ವಿರೋಧಿಸಿ. ರೈತರ ಸ್ವಾವಲಂಬನೆಗೆ ಕುತ್ತು ತರುವ ಬೀಜ ಮಸೂದೆ ವಿರೋಧಿಸಿ , ಬಲವಂತದ ಭೂಸ್ವಾಧಿನ, ಬಗೇರ್ ಹುಕುಂ ಸಾಗುವಳಿದಾರರ ಪ್ರಶ್ನೆ ಇತ್ಯಾರ್ಥಕ್ಕೆ ಅಗ್ರಹಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...
1002818496

 ಅಂತರಸನ ಹಳ್ಳಿ, ಸತ್ಯಮಂಗಲ, ವಸಂತನರಸಾಪುರ, ಹಿರೇಹಳ್ಳಿ ಕೈಗಾರಿಕಾ ಪ್ರದೇಶದಿಂದ ಕೆಲಸಕ್ಕೆ ಹಾಜರಾಗದ ಸಾವಿರಾರು ಕಾರ್ಮಿಕರು ಮುಷ್ಕರದಲ್ಲಿ ಬಾಗಿಯಾದರು. ಅಂಗನವಾಡಿ, ಬಿಸಿಯೂಟ. ಅಶಾ, ಮುನಿಸಿಪಲ್ , ಅಸ್ವತ್ರೆ, ಹಮಾಲಿ ಕಾರ್ಮಿಕರು. ಫುಟ್‌ಪಾತ್ ವ್ಯಾಪಾರಿಗಳು. ಬ್ಯಾಂಕ್ ನೌಕರರು. ವಿಮಾ ನೌಕರರು. ಮುಷ್ಕರದಲ್ಲಿ ಭಾಗಿಯಾಗಿದ್ದರು.  

ರೈತ ಸಂಘದ ಜಿಲ್ಲಾಧ್ಯಕ್ಷರಾದ ಎ. ಗೋವಿಂದ ರಾಜು ಅವರು ಮೆರವಣಿಗಗೆ ಚಾಲನೆ ನೀಡಿದರು.

  ಜೆಸಿಟಿಯು ಜಿಲ್ಲಾ ಸಂಚಾಲಕ ಕಂಬೆಗೌಡ  ಮಾತನಾಡಿ ಈ ಐತಿಹಾಸಿಕ ಮುಷ್ಕರಕ್ಕೆ ಎಲ್ಲಾರು ಕೈಜೋಡಿಸಲು ಮನವಿ ಮಾಡಿದರು. ಮಂಡಿಪೇಟೆ ಸರ್ಕಲ್ ನಲ್ಲಿ ಪ್ರತಿಭಟನಾ ಮೇರವಣಿಗೆಯನ್ನು ಕುರಿತು ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಸಂಚಾಲಕರಾದ ಮಂಜುಳ ಗೋನಾವರ ಅವರು ಸರ್ಕಾರಗಳು ನಿರಂತರವಾಗಿ ಜನವಿರೋಧಿಯಾಗಿ ವರ್ತಿಸುತ್ತಿವೆ , ಹೋರಾಟವೆ ಜನರಿಗೆ ಇರುವ ದಾರಿ ವರ್ತಕರಾದಿಯಾಗಿಎಲ್ಲಾರು ಕೈಜೋಡಿಸಬೇಕೆಂದರು. 

ಉರಿಯುವ ಬಿಸಿಲಿನಲ್ಲೂ ಬಿಎಸ್ ಎನ್ಎಲ್ ಮುಂದೆ ಧರಣಿಕಾರರನ್ನು ಉದ್ದೆಶಿಸಿ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ ಜನತೆ- ರೈತ – ಕಾರ್ಮಿಕರಿಗೆ ಮಾರಕವಾದ ಸರ್ಕಾರದ ನೀತಿಗಳು ಬಂಡವಾಳಗಾರ- ಕಾರ್ಪೂರೇಟ್ ಕಂಪನಿಗಳ ಲಾಭದ ಗ್ಯಾರೆಂಟಿಯನ್ನು ಮಾತ್ರ ನೋಡುತ್ತಿವೆ , ಕಾರ್ಮಿಕ- ರೈತರು-ಜನತೆ ನೀತಿ ಅಧಾರಿತವಾಗಿ ಮತ ನೀಡಲು, ಅಸಮಾನತೆ ಹೆಚ್ಚಿಸುವ ನೀತಿಗಳನ್ನು ಸೊಲಿಸಲು ಕರೆ ನೀಡಿದರು. 

1002818497 1

ಎಐಟಿಯುಸಿ ಜಿಲ್ಲಾ ಕಾರ್ಯಧ್ಯಕ್ಷರಾದ ಗಿರಿಶ್ ಮಾತನಾಡಿ ಸ್ವದೇಶಿ ಎಂದು ಹೇಳಿ ಅಧಿಕಾರ ಹಿಡಿದ ಬಿಜೆಪಿ ಅಮೇರಿಕಾ ದೇಶಕ್ಕೆ ಭಾರತವನ್ನು ಒತ್ತೆಇಟ್ಟಿದೆ. ನಾವು ಎಲ್ಲಿ ಪೆಟ್ರೋಲ್ ಖರಿದಿಸಬೇಕು. ಎಂಬು ಅವರೆ ಹೇಳುತ್ತಾರೆ. ಭಾರತವನ್ನು ಮತ್ತೆ ಅವರ ಗುಲಾಮಗಿರಿಗೆ ಬಿಜೆಪಿ ತಂದು ನಿಲ್ಲಿಸಿದೆ ಎಂದರು

ಐಎನ್ಟಿಯುಸಿ ಗೊವಿಂದರಾಜು 4 ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿ ಮಾಡಬಾರದು ಎಂದರು. ರಂಗನಾಥ್ ಮಾತನಾಡಿ ಉದ್ಯೋಗ ಖಾತರಿ ಯೊಜನೆಯನ್ನು ನಾಶಮಾಡಲು ಬಿಡಬಾರದು ಎಂದರು. 

ಹೋರಾಟದಲ್ಲಿ ಸಿಐಟಿಯು ಷಣ್ಮಗಪ್ಪ. ಸುಜಿತ್ ನಾಯಕ್, ರಂಗಧಾಮಯ್ಯ, ಕರ್ನ ಲಿರ‍್ಸ್ ಕಾರ್ಮಿಕರ ಸಂಘ ಶಿವಕುಮಾರ್ ಸ್ವಾಮಿ. ಫೀಟ್ ವೆಲ್ ಕಾರ್ಮಿಕ ಸಂಘದ ಅಧ್ಯಕ್ಷ ಮುತ್ತುರಾಜ್, ಅಂಗನವಾಡಿ ನೌಕರರ ಸಂಘ ಅಧ್ಯಕ್ಷೆ ಗೌರಮ್ಮ. ಗಂಗಮ್ಮ. ಜಬಿನಾ, ಹಮಾಲಿ ಕಾರ್ಮಿಕರ ಸಂಘ ನಾಗರಾಜು. ಗ್ರಾಮ ಪಂಚಾಯತ್ ನೌಕರರ ಸಂಘ ನಾಗೇಶ, ಯೋಗಿಶ್. ವಿಶಾಕ ಕಾರ್ಮಿಕ ಸಂಘ ಸ್ಟಾಲಿ ಸುಕುಮಾರ್. 

ಎಐಟಿಯುಸಿ ಚಂದ್ರಶೇಖರ್, ರಮೇಶ್ , ರವಿಪ್ರಸಾದ್ ಅಶೋಕ್ ಕುಮಾರ್ ರಾಣಿ ಇಂಜಿನ್ ,ಸಿಪ್ಸಾ ಯೊಗೀಶ್, ರಮೇಶ್, ಐಎನ್‌ಟಿಯುಸಿ ನವಾಜ್, ಜಗದಿಶ್ , ಮುನಿಸಿಪಾಲ್ ಕಾರ್ಮಿಕರ ಸಂಘ ಮಾರುತಿ , ಪ್ರಕಾಶ್, ಮಂಜುನಾಥ್, ಕುಮಾರ್ ಅಶಾ ನೌಕರರ ಸಂಘದ ರೇಖಾ ಕಟ್ಟಡ ಕಾರ್ಮಿಕರ ಸಂಘ ಕಲೀಲ್ , ಪ್ರೇರಣಾ ಟ್ರೆಸ್ಟ್ ಬಾಬು ಮಾನಸೆ, ಪಿ.ಎಫ್ ಪಿಂಚಣಿದಾರರ ಸಂಘ ಟಿ.ಜಿ ಶಿವಲಿಂಯ್ಯ, ಜನವಾಧಿ ಮಹಿಳಾ ಸಂಘ ಟಿ.ಅರ್. ಕಲ್ಪನಾ ಮತ್ತಿತರರು ಮುಂದಾಳತ್ವ ವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು ವಿವಿಯಿಂದ ವರುಣ್‌ರಾಜ್ ಜಿ ಅವರಿಗೆ ಪಿಎಚ್‌.ಡಿ. ಪದವಿ ಪ್ರದಾನ

ತುಮಕೂರು ವಿಶ್ವವಿದ್ಯಾನಿಲಯದ ಡಾ. ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ...

ಗುಬ್ಬಿ | ಸಿಂಹಾದ್ರಿ ಹತ್ಯೆ ಖಂಡಿಸಿ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

 ಮಧುಗಿರಿ ತಾಲ್ಲೂಕು ಕಾಸಾಪುರ ಗ್ರಾಮದಲ್ಲಿ ಗಣೇಶ ವಿಸರ್ಜನಾ ಮಹೋತ್ಸವದಲ್ಲಿ ದಲಿತ ಯುವಕ...

ತುಮಕೂರು | ರೈತರ ಸಂಕಷ್ಟಕ್ಕೆ ಸ್ಪಂದಿಸಿ : ವೈಜ್ಞಾನಿಕ ಬರ ಪರಿಹಾರಕ್ಕೆ ಆಗ್ರಹ

ಭೀಕರ ಬರಗಾಲದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರೂ ಕೇಂದ್ರ ಮತ್ತು ರಾಜ್ಯ...

ತುಮಕೂರು | ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಪಡೆಯಬೇಕು ಹಾಗೂ ಇದುವರೆಗೆ...