ಬೀದರ್‌ | ಭಾರತದ ನಿಜವಾದ ಶಕ್ತಿ ಏಕತೆ

Date:

ವಿವಿಧತೆಯಲ್ಲಿ ಏಕತೆ ಭಾರತದ ನಿಜವಾದ ಶಕ್ತಿಯಾಗಿದೆ ಎಂದು ಜಮಾ ಅತೆ ಇಸ್ಲಾಮಿ ಹಿಂದ್‍ನ ಕೇಂದ್ರ ನಾಯಕ ಮೌಲಾನಾ ಹಾಮಿದ್ ಮುಹಮ್ಮದ್ ಖಾನ್ ಹೇಳಿದರು.

- Advertisement -

ಜಮಾ ಅತೆ ಇಸ್ಲಾಮಿ ಹಿಂದ್, ಸದ್ಭಾವನಾ ಮಂಚ್ ಹಾಗೂ ರಾಬ್ತಾ ಎ ಮಿಲ್ಲತ್ ಸಹಯೋಗದಲ್ಲಿ ರಂಜಾನ್ ಪ್ರಯುಕ್ತ ನಗರದ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಈದ್ ಸ್ನೇಹಕೂಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

“ಒಗ್ಗಟ್ಟಿನಲ್ಲಿ ಬಲ ಇದೆ. ಐಕ್ಯತೆ ಇಲ್ಲದ ದೇಶ ಬಲಹೀನ ಆಗುತ್ತದೆ. ಕಾರಣ, ದೇಶವನ್ನು ಸದೃಢಗೊಳಿಸಲು ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂಬ ಭಾವನೆ ಬರಬೇಕು. ಸಮೃದ್ಧಿ ಅಲ್ಲಾಹನ ಗುಣ ವಿಶೇಷವಾಗಿದೆ. ಕುರ್‌ಆನ್ ಸಮೃದ್ಧಿಯ ಗ್ರಂಥವಾಗಿದ್ದರೆ, ಪವಿತ್ರ ರಂಜಾನ್ ಸಮೃದ್ಧಿಯ ಮಾಸವಾಗಿದೆ. ಸಭ್ಯ ಹಾಗೂ ಸುಂದರವಾಗಿ ಸಂತೋಷಪಡುವುದು ಹಾಗೂ ಇಸ್ಲಾಂ ಮೌಲ್ಯಗಳನ್ನು ಅತ್ಯುತ್ತಮವಾಗಿ ಆಚರಿಸುವುದೇ ಈದ್ ಆಗಿದೆ” ಎಂದು ಹೇಳಿದರು.

WhatsApp Image 2026 03 26 at 3.50.36 PM
ಚನ್ನಬಸವಾನಂದ ಸ್ವಾಮೀಜಿ ಮಾತನಾಡಿದರು.

ಸಾನಿಧ್ಯ ವಹಿಸಿದ್ದ ಬೆಂಗಳೂರಿನ ಬಸವ ಗಂಗೋತ್ರಿ ಜ್ಞಾನ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, “ನಮ್ಮೆಲ್ಲರ ಪ್ರಭು ಒಬ್ಬನೇ ಆಗಿದ್ದಾನೆ. ಈ ಜಗತ್ತನ್ನು ಸೃಷ್ಟಿಸಿದವನು ಹಾಗೂ ಮುನ್ನಡೆಸುತ್ತಿರುವವನು ಅವನೇ. ನಾವು ಅವನನ್ನು ಮಾತ್ರ ಆರಾಧಿಸಬೇಕು. ಮಾನವೀಯತೆ ಹಾಗೂ ಪರ ಧರ್ಮ ಸಹಿಷ್ಣುತೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ತಮ್ಮ ಧರ್ಮವನ್ನು ಆಚರಿಸುತ್ತಾ, ಪರ ಧರ್ಮವನ್ನು ಗೌರವಿಸಬೇಕು” ಎಂದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರತಿಮಾ ಬಹೆನ್‍ಜಿ ಮಾತನಾಡಿ, “ಎಲ್ಲರೂ ಹೃದಯಾಂತರಾಳದಿಂದ ಪರಸ್ಪರರನ್ನು ಪ್ರೀತಿಸಿದರೆ ಮಾತ್ರ ಸಮಾಜದಲ್ಲಿ ಸಾಮರಸ್ಯ ನೆಲೆಗೊಳ್ಳುತ್ತದೆ” ಎಂದರು.

ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಡಿಸೋಜಾ ಥಾಮಸ್ ಮಾತನಾಡಿ, “ಪರಸ್ಪರರ ಸುಖ, ದುಃಖದಲ್ಲಿ ಭಾಗಿಯಾಗಬೇಕು. ನಾವು ಬದುಕುವ ಜತೆಗೆ ಇತರರಿಗೆ ಬದುಕಲು ಸಹಾಯ ಮಾಡಬೇಕು” ಎಂದು ತಿಳಿಸಿದರು.

ಜಮೀಯತ್ ಉಲೆಮಾ ಏ ಹಿಂದ್ ಜಿಲ್ಲಾ ಅಧ್ಯಕ್ಷ ಮೌಲಾನಾ ಅಬ್ದುಲ್ ಗನಿ ಖಾನ್ ಮಾತನಾಡಿ, “ಇಸ್ಲಾಂ ಶಾಂತಿಯ ಧರ್ಮವಾಗಿದೆ. ಎಲ್ಲರೂ ಸೃಷ್ಟಿಕರ್ತನನ್ನು ಪರಿಚಯಿಸಿಕೊಂಡು, ಅವನು ತೋರಿದ ದಾರಿಯಲ್ಲಿ ನಡೆಯಬೇಕು” ಎಂದು ತಿಳಿಸಿದರು.

WhatsApp Image 2026 03 26 at 3.50.35 PM 1
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರತಿಮಾ ಬಹೆನ್‍ಜಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಗಜೀತಸಿಂಗ್ ಸಿಲೇದಾರ್, ಭಂತೆ ಜ್ಞಾನಸಾಗರ್, ಮೌಲ್ವಿ ಮುಹಮ್ಮದ್ ಫಹೀಮುದ್ದೀನ್ ಮಾತನಾಡಿದರು. ಹಾಫಿಜ್ ಸೈಯದ್ ಅತೀಕುಲ್ಲಾ ಅವರ ಕುರ್‍ಆನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕುರ್‌ಆನ್ ಪಠಣವನ್ನು ಸಿರಾಜ್ ನೆಲವಾಡಕರ್ ಕನ್ನಡಕ್ಕೆ ಅನುವಾದಿಸಿದರು.

ಫಾದರ್ ಕ್ಲೇರಿ ಡಿಸೋಜಾ, ಮಹಾ ಪೌರ ಮುಹಮ್ಮದ್ ಗೌಸ್, ಸೈಯದ್ ಹುಸಾಮುದ್ದೀನ್, ಉಝೇರ್, ಶ್ರೀಕಾಂತ ಸ್ವಾಮಿ, ಷಣ್ಮುಕಯ್ಯ ಬಿ.ಸ್ವಾಮಿ, ಮುಹಮ್ಮದ್ ಮೌಅಝಂ, ಸಂಜೀವಕುಮಾರ ಅತಿವಾಳೆ, ಮುಹಮ್ಮದ್ ಆಸಿಫುದ್ದೀನ್, ಡಾ.ವಿಜಯ ಬಲ್ಲೂರಕರ್, ಇಕ್ಬಾಲ್ ಗಾಜಿ, ತೌಹೀದ್ ಸಿಂಧೆ, ಡಾ.ರಾಜಶೇಖರ ಸೇಡಂಕರ್, ಮುಹಮ್ಮದ್ ಜಾವೀದ್, ಸೈಯದ್ ಮುಬಸ್ಸಿರ್ ಅಲಿ ಅಬ್ಬು, ಪಿ.ಟಿ.ಶಾಮು ಪುಷ್ನಾಕೆ, ಅಸ್ಮಾ ಸುಲ್ತಾನಾ, ಡಾ.ಬುಶ್ರಾ ಐಮನ್, ಮುಹಮ್ಮದ್ ಜೋಹರ್ ಕಾಷಿಪ್, ಸೈಯದ್ ಇಝಾನ್ ಅಹ್ಮದ್, ಅಜೀಜ್ ಖಾನ್, ಅಷ್ಫಾಕ್ ಅಹ್ಮದ್, ಡಾ. ದೀಪಾ ನಂದಿ,  ಅಬ್ದುಲ್ ಖದೀರ್, ಬಿಲ್ಕಿಸ್ ಫಾತಿಮಾ ಮತ್ತಿತರರು ಇದ್ದರು.

ಇದನ್ನೂ ಓದಿ : ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ ₹5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸದ್ಭಾವನಾ ಮಂಚ್ ಸಂಚಾಲಕ ಗುರುನಾಥ ಗಡ್ಡೆ ಸ್ವಾಗತಿಸಿದರು. ನಿವೃತ್ತ ಪ್ರಾಚಾರ್ಯ ಮುಹಮ್ಮದ್ ನಿಜಾಮುದ್ದೀನ್ ನಿರೂಪಿಸಿದರು. ಜಮಾ ಅತೆ ಇಸ್ಲಾಮಿ ಹಿಂದ್ ಸ್ಥಳೀಯ ಘಟಕದ ಅಧ್ಯಕ್ಷ ಮುಹಮ್ಮದ್ ಆರಿಫುದ್ದೀನ್ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೆ.29ರಂದು ನೀರು, ಬರ, ಪರಿಸರ ಕುರಿತು ವಿಚಾರ ಸಂಕಿರಣ

ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ, ಸಿದ್ದಾರ್ಥ ಪದವಿ ಪೂರ್ವ ಕಾಲೇಜು, ಟೀಮ್...

ಬೀದರ್‌ | ಶಿಕ್ಷಕರು ಸಮಾಜದ ಭವಿಷ್ಯ ನಿರ್ಮಿಸುವ ಶಿಲ್ಪಿಗಳು: ಪುಣ್ಯವತಿ ವಿಸಾಜಿ

ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ. ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಜೊತೆಗೆ ಸಮಾಜದ...

ಬೀದರ್‌ | ಅಂಬೇಡ್ಕರ್ ಚಿಂತನೆ ವಿದ್ಯಾರ್ಥಿಗಳ ಬದುಕಿಗೆ ಮಾರ್ಗದರ್ಶನವಾಗಲಿ: ಸಿದ್ರಾಮ ಸಿಂಧೆ

ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು, ಸಾಧನೆ ಹಾಗೂ ಬರಹಗಳನ್ನು ವಿದ್ಯಾರ್ಥಿಗಳು ಆಳವಾಗಿ ಅಧ್ಯಯನ...

Bhalki Ground Report | ಮುಸ್ಲಿಮರ ಮತ ಹಕ್ಕಿಗೆ ಕನ್ನ: ಬಗೆದಷ್ಟು ಬಯಲಾಗ್ತಿದೆ ‘ಫಾರ್ಮ್-7’ರ ಸಂಚು?

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಈಶ್ವರ ಬಿ.ಖಂಡ್ರೆ ಅವರು ಪ್ರತಿನಿಧಿಸುವ...