ಬೀದರ್ | ಜನಪದರು ಸೃಷ್ಟಿಸಿದ ಜ್ಞಾನ ಪರಂಪರೆ ಅಗಾಧ: ಮಲ್ಲಪ್ಪ ಧಬಾಲೆ

Date:

ಜಾನಪದದ ನಿರ್ಲಕ್ಷ್ಯ ಮತ್ತು ಮರೆವು ಒಂದರ್ಥದಲ್ಲಿ ನಮ್ಮ ಜ್ಞಾನ ಪರಂಪರೆಯ ವಿಸ್ಮೃತಿಯಾಗಿದೆ ಎಂದು ಹುಲಸೂರ ವಲಯ ಕಸಾಪ ಮಾಜಿ ಅಧ್ಯಕ್ಷ ಮಲ್ಲಪ್ಪ ಧಬಾಲೆ ಹೇಳಿದರು.

ಬೀದರ್‌ ಜಿಲ್ಲೆಯ ಹುಲಸೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ಆಯೋಜಿಸಿದ್ದ ‘ಜಾನಪದ: ಚಿಂತನೆ ಮತ್ತು ಕಲಾ ಉತ್ಸವ’ ಸಮಾರಂಭದಲ್ಲಿ ಅವರು ಮಾತನಾಡಿದರು. “ಜನಪದರು ಸೃಷ್ಟಿಸಿದ ಜ್ಞಾನ ಪರಂಪರೆ ಅಗಾಧವಾಗಿದೆ. ಯುವ ಸಮುದಾಯದಿಂದ ಜಾನಪದದ ಅವಗಾಹನೆ, ನಿರ್ಲಕ್ಷ್ಯ ನೋವು ತರುವುದು” ಎಂದರು.

“ಹಳ್ಳಿಗರು ವಲಸೆ ಹೋಗುವುದರಿಂದ ಜಾನಪದ ಅವನತಿಗೆ ಸರಿಯುತ್ತಿದೆ. ಲಿಂಗ, ಜಾತಿ, ಮತದ ಎಲ್ಲೆಗಳನ್ನು ಮೀರಿದ ಜ್ಞಾನ ನಿಸರ್ಗ ಸಹಜವಾಗಿದೆ. ಅದರ ಸಂಪಾದನೆಗಾಗಿ ಶ್ರಮ, ಅಧ್ಯಯನ ಅಗತ್ಯ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಾರ್ಯನಿರತ ಪತ್ರಕರ್ತರ ಸಂಘದ ಹುಲಸೂರ ತಾಲೂಕು ಅಧ್ಯಕ್ಷ ರಾಜಕುಮಾರ ಹೊನ್ನಾಡೆ ಮಾತನಾಡಿ, “ಜಾನಪದ ನಶಿಸಿ ಹೋಗುತ್ತಿರುವ ಸಮಯದಲ್ಲಿ ಹಳ್ಳಿಗಳಲ್ಲಿ ಜನಪದ ಕಲೆಗಳನ್ನು ರಕ್ಷಿಸುವ ಕೆಲಸ ನಡೆಯಬೇಕು” ಎಂದರು.

“ಜಾನಪದ ನಿಂತ ನೀರಲ್ಲ. ಜಾನಪದ ಕಲಾವಿದರಿಗೆ ಸರ್ಕಾರದಿಂದ ಮಾಶಾಸನ ಸವಲತ್ತುಗಳನ್ನು ನೀಡಬೇಕು. ಇಂಗ್ಲಿಷ್ ಮಾಧ್ಯಮದ ಶಿಕ್ಷಣ, ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಮೈಗೂಡಿಸಿಕೊಂಡಿರುವ ಇಂದಿನ ಪೀಳಿಗೆಯ ಮನೋಭಾವದ ಎದುರು ಜಾನಪದವನ್ನು ಉಳಿಸುವ ಸವಾಲು ಈ ಕಾಲದ್ದಾಗಿದೆ” ಎಂದರು.

ಕಜಾಪ ತಾಲೂಕು ಅಧ್ಯಕ್ಷ ಶಿವರಾಜ್ ಖಪಲೆ ಮಾತನಾಡಿ, “ಅತಿಯಾದ ಟಿವಿ, ಮೋಬೈಲ್ ಬಳಕೆಯಿಂದ ಜನಪದ ಸಂಸ್ಕೃತಿ ಅಪಾಯದಲ್ಲಿದೆ. ಅಳಿವಿನಂಚಿನಲ್ಲಿರುವ ಜಾನಪದ ಹಳ್ಳಿಯ ಭಜನೆ, ಹಂತಿ ಹಾಡು, ಜೋಗುಳ ಪದಗಳಲ್ಲಿ ಉಳಿದಿದೆ ಶಾಲಾ ಕಾಲೇಜುಗಳಲ್ಲಿ ಜಾನಪದ ಪರಂಪರೆ ಬೆಳೆಸುವ ಅಗತ್ಯವಿದೆ” ಎಂದರು.

ಮುಖ್ಯೋಪಾಧ್ಯಾಯ ದೇವಾನಂದ್ ಕುರದೆ ಮಾತನಾಡಿ, “ಪ್ರಾಚೀನ ಸಂಸ್ಕೃತಿ, ಮಾನವೀಯ ಪರಂಪರೆ ಪುನಃ ನೆನಪಿಸಲು, ಮತ್ತೆ ಕಟ್ಟಲು ಜಾನಪದ ಅವಶ್ಯಕ. ಜನಪದ ಲಕಲೆ, ಸಂಗೀತ, ಸಾಹಿತ್ಯ ಮಾನಸಿಕ ನೆಮ್ಮದಿಗೆ ಹಾದಿಯಾಗಿವೆ. ಜಾನಪದದಿಂದ ಸಾಮಾಜಿಕ ಸಂವರ್ಧನೆ ಸಾಧ್ಯ” ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದತ್ತು ರಾಘೋ, ಧೂಳಪ್ಪ ಭರಮಶೆಟ್ಟೆ, ಶಿವಾಜಿರಾವ ಸೂರ್ಯವಂಶಿ, ಲಹು ಬಿರಾದಾರ, ವಿಶ್ವಜೀತ ಕುರದೆ, ಪ್ರಭುರಾವ ಬಿರಾದಾರ, ಸತೀಶ್ ಸ್ವಾಮಿ, ವೆಂಕಟರಾವ್ ಬಿರಾದಾರ, ಭಗವಾನ್ ಬಿರಾದಾರ, ರೇವಣ್ಣ ದರ್ಗೆ,ಜಗನ್ನಾಥ ಬಿರಾದಾರ, ದತ್ತು ಮೇತ್ರೆ, ಲಕ್ಷ್ಮಣ ಬಿರಾದಾರ, ನಾಗೇಶ್ ನಿಲಂಗೆ, ಡಾ. ಭೀಮಾಶಂಕರ ಬಿರಾದಾರ ಸೇರಿದಂತೆ ಅನೇಕರಿದ್ದರು.

ರಾಮಶಟ್ಟಿ ತಾಂಬೋಳೆ, ಗುರುನಾಥ ತಾಂಬೋಳೆ, ಝಟಿಂಗರಾವ ಬಿರಾದಾರ, ಜಗನ್ನಾಥ ತಾಂಬೋಳೆ ಮುಂತಾದವರು ವಚನ, ತತ್ವಪದ, ಜನಪದ ಹಾಗೂ ಭಜನೆ ಹಾಡುಗಳನ್ನು ಹಾಡಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸಂವಿಧಾನದ ಆಶಯಕ್ಕೆ ಪೂರಕವಾದ ಶಿಕ್ಷಣ ಸಿಗುತ್ತಿಲ್ಲ : ಶ್ರೀನಾಥ್‌ ಪೂಜಾರಿ

ಭಾರತದ ಭವಿಷ್ಯಕ್ಕಾಗಿ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಕೊಡಿಸುವ ಮೂಲಕ ಯೋಧರಂತೆ ಸಜ್ಜುಗೊಳಿಸುವುದು ...

ಬೀದರ್‌ | ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೃಷಿ ಕೆಲಸಕ್ಕೂ ಅವಕಾಶ ಕಲ್ಪಿಸಿ : ರೈತ ಸಂಘ

ಉದ್ಯೋಗ ಖಾತ್ರಿ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡ ಕೂಲಿಕಾರರು ರೈತರ ಹೊಲಗಳಲ್ಲಿಯೂ ದುಡಿಯುವಂತೆ...

ಬೀದರ್‌ | ವೈಚಾರಿಕ ಪ್ರಜ್ಞೆ ಜೀವಂತವಾಗಿಡುವ ಶಕ್ತಿ ಪಠ್ಯಗಳಿಗಿದೆ : ಭೀಮಾಶಂಕರ ಬಿರಾದರ್

ಸಮಾಜದಲ್ಲಿ ಬೌದ್ಧಿಕತೆ, ವೈಚಾರಿಕತೆ, ಮಾನವೀಯತೆ ಜೀವಂತವಾಗಿ ಇರಿಸುವ ಶಕ್ತಿ ಪಠ್ಯಗಳಿಗಿದೆ. ಒಂದು...

ಬೀದರ್‌ | ಬೈಕ್‌-ಕಾರು ಢಿಕ್ಕಿ; ಓರ್ವ ಯುವಕ ಸಾವು

ಬೈಕ್ ಮತ್ತು ಕಾರಿನ ಮಧ್ಯೆ ಢಿಕ್ಕಿ ಸಂಭವಿಸಿ ಯುವಕನೊಬ್ಬ ಸಾವನಪ್ಪಿದ ಘಟನೆ...