ಇಂದಿನ ಯಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬರೂ ಒತ್ತಡದ ಬದುಕಿನಲ್ಲಿ ಜೀವನ ಸಾಗಿಸುತ್ತಿದ್ದು, ನೆಮ್ಮದಿ ಮತ್ತು ಶಾಂತಿಗಾಗಿ ಸಂಗೀತದ ಮೊರೆ ಹೋಗಬೇಕಾಗಿದೆ ಎಂದು ಉದ್ಯಮಿ ಬಸವರಾಜ ಧನ್ನೂರ ಹೇಳಿದರು.
ಬೀದರ್ ನಗರದ ಮೈಲೂರು ಕ್ರಾಸ್ ಸಮೀಪದ ಶ್ರೀ ಕೃಷ್ಣ ಉಡುಪಿ ಹೋಟೆಲ್‌ನ ಮಹಾಲಕ್ಷ್ಮಿ ಸಭಾಂಗಣದಲ್ಲಿ ಮಂದಾರ ಕಲಾವಿದರ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಕವಿಗೋಷ್ಠಿ, ಗೌರವ ಸನ್ಮಾನ ಹಾಗೂ ಸಂಗೀತ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಸಂಗೀತ ಮತ್ತು ಸಾಹಿತ್ಯ ಮಾನವನ ಮನಸ್ಸಿಗೆ ಶಾಂತಿ, ತೃಪ್ತಿ ಹಾಗೂ ನೆಮ್ಮದಿ ನೀಡುವ ಅವಿಭಾಜ್ಯ ಅಂಗಗಳಾಗಿವೆ. ಸಾಹಿತ್ಯ ಮತ್ತು ಸಂಗೀತ ಕೇವಲ ಅಕ್ಷರಗಳಲ್ಲ, ಅವು ಭಾವನಾತ್ಮಕವಾಗಿ ಬೆಸೆಯುವ ಸಂಬಂಧಗಳಾಗಿವೆ. ನಾಡು ಕಟ್ಟುವ, ದೇಶ ಮುನ್ನಡೆಸುವ ಶಕ್ತಿಯುಳ್ಳ ಈ ಕಲೆಗಳು ದೇಶ ಬೆಳಗಿಸುವ ದೀಪಗಳಾಗಿವೆ. ಸಾಹಿತ್ಯ ವೈಚಾರಿಕತೆಯಿಂದ ಬೆಳಗುತ್ತಿದ್ದು, ಅದು ನಮ್ಮ ಸಂಸ್ಕೃತಿಯ ಬೆನ್ನೆಲುಬಾಗಿದೆ” ಎಂದು ಹೇಳಿದರು.
“ಸಂಗೀತಕ್ಕೆ ಯಾವುದೇ ಭಾಷೆ, ಜಾತಿ, ಮತ-ಪಂಥಗಳ ಗಡಿ ಇಲ್ಲ. ಅದು ಎಲ್ಲರನ್ನು ಒಂದೆಡೆ ಸೇರಿಸುವ ಶಕ್ತಿ ಹೊಂದಿದ್ದು, ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎಲೆಮರೆಯ ಕಾಯಿಯಂತಿರುವ ಅನೇಕ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಸಂಘ-ಸಂಸ್ಥೆಗಳ ಕರ್ತವ್ಯ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮಾಣಿಕ ನೇಳಗೆ ಮಾತನಾಡಿ, “ಕನ್ನಡ ಸಾಹಿತ್ಯ ಮತ್ತು ಕಾವ್ಯ ಪರಂಪರೆಗೆ ಸಮೃದ್ಧ ಇತಿಹಾಸವಿದೆ. ಪಂಪ, ರನ್ನ, ವಚನ ಸಾಹಿತ್ಯ ಹಾಗೂ ದಾಸರ ಕೀರ್ತನೆಗಳು ಕಾವ್ಯ ಲೋಕಕ್ಕೆ ಬೆಳಕು ಹರಿಸಿವೆ. ಅವುಗಳ ಅಧ್ಯಯನದಿಂದ ಕವಿ-ಕವಯಿತ್ರಿಯರು ಸಾರ್ಥಕ ಕಾವ್ಯಗಳನ್ನು ರಚಿಸಲು ಸಾಧ್ಯವಾಗುತ್ತದೆ. ಅಧ್ಯಯನ ಮತ್ತು ಅನುಭವಗಳಿಂದ ಪಕ್ವವಾದ ಸಾಹಿತ್ಯ ಹೊರಹೊಮ್ಮುತ್ತದೆ” ಎಂದು ಅಭಿಪ್ರಾಯಪಟ್ಟರು.
ಹಿರಿಯ ಸಾಹಿತಿ ಡಾ.ರಘುಶಂಖ ಭಾತಂಬ್ರಾ ಮಾತನಾಡಿ, “ಸಂಗೀತವೆಂಬುದು ಧ್ವನಿ ಮತ್ತು ತರಂಗಗಳಿಂದ ಕೂಡಿದ ಅಲಾಪವಾಗಿದ್ದು, ಅದನ್ನು ಆಲಿಸುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ” ಎಂದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಮಂಡಳಿ ಸದಸ್ಯ ಸಂಜೀವಕುಮಾರ ಅತಿವಾಳೆ, ಹಿರಿಯ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ, ಪ್ರಾಚಾರ್ಯ ಅಶೋಕ ಬೂದಿಹಾಳ, ಬಾಬುರಾವ ಗೊಂಡ ಉಪಸ್ಥಿತರಿದ್ದರು. ಕಿರಣ ಮಹಾರಾಜ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಎಂ.ಜಿ. ದೇಶಪಾಂಡೆ ಪ್ರಸ್ತಾವಿಕವಾಗಿ ಮಾತನಾಡಿದರು.
ಕವಿಗೋಷ್ಠಿಯಲ್ಲಿ ಶೈಲಜಾ ಹುಡುಗಿ, ವೀರೇಶ್ವರಿ ಮೂಲಗೆ, ಬಸವಪ್ರಕಾಶ ಕೋಡಂಬಲ, ವಿನುತಾ ಎಚ್. ಹಿರೇಮಠ್, ಓಂಕಾರ್ ಪಾಟೀಲ್, ಶ್ರೀದೇವಿ ಪಾಟೀಲ್ ಸೇರಿದಂತೆ ಹಲವು ಕವಿ-ಕವಯಿತ್ರಿಯರು ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧನೆ ಬಾಲಾಜಿ ಕುಂಬಾರ, ಧರ್ಮೇಂದ್ರ ಪೂಜಾರಿ, ಶ್ರೇಯಾ ಮಹೀಂದ್ರಕರ್, ಕಲ್ಲಪ್ಪ ಚನ್ನಬಸಪ್ಪ ಮಲ್ಲಿಗೆವಾಡ ಧಾರವಾಡ, ಮಲ್ಲಿಕಾರ್ಜುನ ರಾಂಪುರೆ, ಡಾ.ಮಕ್ತುಂಬಿ, ಗಂಗಮ್ಮಾ ಕೂಡ್ಲೀಕರ್, ಅಂಕಿತಾ ಬಚ್ಚಣ್ಣ, ಯೋಗೇಂದ್ರ ಯದಲಾಪುರೆ, ಶಿಲ್ಪಾ ಪಾಟೀಲ್ ಸೇರಿದಂತೆ ಅನೇಕ ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸಂಗೀತ ಕಾರ್ಯಕ್ರಮದಲ್ಲಿ ಶಿವಕುಮಾರ ಪಾಂಚಾಳ, ಹಾವಗಿರಾವ ಶೆಂಬೆಳ್ಳಿ, ಜಗನ್ನಾಥ್ ಯರನಳ್ಳಿ, ದೇವದಾಸ ಚಿಮಕೋಡ್, ಮಲ್ಲಿಕಾರ್ಜುನ ರಾಂಪುರೆ, ರೇವಣಪ್ಪ ಮೂಲಗೆ, ಚಂದ್ರಕಾಂತ ಪೂಜಾರಿ, ರಮೇಶ್ ಕೊಳಾರ, ಗಂಗಮ್ಮ, ಮಹಾದೇವಿ ಪಾಟೀಲ, ಸಂಜೀವ್ ಕುಮಾರ ಸ್ವಾಮಿ ಉಜನಿ, ಶೇಶಪ್ಪ ಚಿಟ್ಟಾ, ಕಾಂಚನ ಜೋಳದಾಬಕೆ, ಲಕ್ಷ್ಮೀಬಾಯಿ ಚಿದರಿ ಸೇರಿದಂತೆ ಅನೇಕ ಕಲಾವಿದರು ಹಾಗೂ ಅವರ ತಂಡಗಳು ಅದ್ಧೂರಿ ಸಂಗೀತ ಪ್ರದರ್ಶನ ನೀಡಿ ಪ್ರೇಕ್ಷಕರ ಮನರಂಜಿಸಿದರು.ಕು ಆಸ್ತಾ, ಕು.ಅವಿಷ್ಕಾ ಹಾಗೂ ಕು.ನಿರೂಪಮಾ ನೃತ್ಯ ಪ್ರದರ್ಶನ ನೀಡಿದರು.
ಇದನ್ನೂ ಓದಿ : ಭಾಲ್ಕಿ | ಏಣಕೂರ ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರ ಆರೋಪ : ತನಿಖೆಗೆ ಆಗ್ರಹ
ಈ ಸಂದರ್ಭದಲ್ಲಿ ಕಾಶಿನಾಥ್ ಖಪ್ಲೆ, ರಮೇಶ್ ಇಟಗಿ, ಶಿಲ್ಪಾ ಮಜ್ಜಗೆ, ದೇವದಾಸ್ ಜೋಶಿ, ಸುನೀತಾ ಬಿರಾದರ, ಆರ್.ಎಸ್. ಬಿರಾದರ ಸೇರಿದಂತೆ ಕಲಾವಿದರು, ಸಾಹಿತ್ಯ, ಸಂಗೀತಾಸಕ್ತರು ಭಾಗವಹಿಸಿದ್ದರು.




