ಹುಮನಾಬಾದ್ | ಗಾನಯೋಗಿ ಪುಟ್ಟರಾಜ ಗವಾಯಿಗಳ 112ನೇ ಜಯಂತಿ ಆಚರಣೆ

Date:

ಹುಮನಾಬಾದ ಪಟ್ಟಣ ಹೊರವಲಯದ ಮಾಣಿಕ ಪ್ರಭು ಸಂಸ್ಥಾನದಲ್ಲಿ ಗಾನಯೋಗಿ ಡಾ.ಪಂಡಿತ್ ಪುಟ್ಟರಾಜ ಗವಾಯಿಗಳ 112ನೇ ಜಯಂತಿ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.

- Advertisement -

ರೇವಣಸಿದ್ದಯ್ಯ ಹಿರೇಮಠ ಅವರು ಮಾತನಾಡಿ, ʼಅರಮನೆಗಳಲ್ಲಿ ಸೀಮಿತವಾಗಿದ್ದ ಸಂಗೀತವನ್ನು ಗುರುಮನೆಗೆ ತಂದು ಮನೆ-ಮನೆಗೂ ತಲುಪಿಸಿದ ಮಹಾನ್ ವ್ಯಕ್ತಿ ಪುಟ್ಟರಾಜ ಕವಿ ಗವಾಯಿಗಳು. ಅಂಧರು, ಅನಾಥರು ಹಾಗೂ ದೀನದಲಿತರ ಬದುಕಿಗೆ ಆಶಾಕಿರಣವಾಗಿ ಅನ್ನ, ವಿದ್ಯೆ ಮತ್ತು ವಸತಿ ಒದಗಿಸಿ ಸಮಾಜ ಸೇವೆಗೈದ ಮಹಾನ್‌ ಚೇತನರುʼ ಎಂದು ನುಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಉತ್ತರ ಕನ್ನಡ: ನಡುಮುರಿದ ಕಾಂಗ್ರೆಸ್ ಕಟ್ಟಬಲ್ಲರೆ ಹೊಸ ಅಧ್ಯಕ್ಷರು?

ಉತ್ತರ ಕನ್ನಡ ಅಹಿಂದ ಜಿಲ್ಲೆ. ಬುಡಕಟ್ಟು ಹಾಲಕ್ಕಿ ಒಕ್ಕಲಿಗರು, ದೀವರು, ವಿವಿಧ ಪಂಗಡದ ಮೀನುಗಾರ ಸಂಕುಲ, ಕೋಮಾರ ಪಂಥ, ಕೊಂಕಣ ಮರಾಠರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಓಬಿಸಿಗಳ ಬೆಂಬಲ ಕ್ರೋಡೀಕರಿಸುವ ಚಾಕಚಕ್ಯತೆ ಹೊಸ...

ಹಳೇ ಮೈಸೂರು: ಮಹಿಳಾ ರಾಜಕಾರಣಕ್ಕೆ ದಿಕ್ಕು ತೋರಿದ ‘ಗುಂಡ್ಲುಪೇಟೆ...

ಹಳೇ ಮೈಸೂರು ಭಾಗದ ರಾಜಕೀಯ ಇತಿಹಾಸವನ್ನು ಗಮನಿಸಿದಾಗ, ಪುರುಷ ಪ್ರಧಾನ ರಾಜಕಾರಣದ ನಡುವೆ ತನ್ನದೇ ಆದ ಛಾಪು ಮೂಡಿಸಿದ ಮಹಿಳಾ ನಾಯಕಿಯರ ಪೈಕಿ ಕೆ.ಎಸ್. ನಾಗರತ್ನಮ್ಮ ಅವರ ಹೆಸರು ವಿಶಿಷ್ಟವಾಗಿ ಕಾಣಿಸುತ್ತದೆ. ಶಾಸಕಿಯಾಗಿ,...

ಬಡ ಯೆಮನ್ ಇಕ್ಕಳದಲ್ಲಿ ಶ್ರೀಮಂತ ಸೌದಿ: ವಿನಾಕಾರಣ ದಾಳಿ...

ಸುಮ್ಮನೆ ಇರಲಾರದ ಸೌದಿ ಅರೇಬಿಯಾ, ಬಡ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ಮಾಡಲು ಹೋಗಿ, ಮರ್ಮಕ್ಕೆ ತಾಕುವಂತಹ ಹೊಡೆತ ತಿಂದು ಕೂತಿದೆ. ಈಗ ಸೌದಿ ಅರೇಬಿಯಾದ ನೆರವಿಗೆ ಅಮೆರಿಕಾ, ಇಸ್ರೇಲ್‌, ಪಾಕಿಸ್ತಾನ ಮತ್ತು ಟಿರ್ಕಿ...

ಸಾಹಿತಿ ಮಾಣಿಕ ನೇಳಗಿ ಮಾತನಾಡಿ, ʼಪುಟ್ಟರಾಜ ಕವಿ ಗವಾಯಿಗಳು ಕೇವಲ ವ್ಯಕ್ತಿಯಲ್ಲ, ಅವರು ಸಂಗೀತ ಮತ್ತು ಸಾಹಿತ್ಯ ಲೋಕದ ಮಹಾನ್ ಶಕ್ತಿಯಾಗಿದ್ದಾರೆ. ಗವಾಯಿಗಳ ಸಂಗೀತ ಸೇವೆ ಸಮಾಜಕ್ಕೆ ಅನನ್ಯವಾಗಿದೆʼ ಎಂದರು.

ಸಂಸ್ಥಾನದ ಆನಂದರಾಜ ಮಾಣಿಕ ಪ್ರಭುಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಕುಪೇಂದ್ರ ಹುಲಸೂರ ವಹಿಸಿದ್ದರು. ಪಿಎಸ್‌ಐ ಸುರೇಶ ಚೌವ್ಹಾಣ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಪಂಚಾಕ್ಷರ ಪ್ರಶಸ್ತಿ ಪುರಸ್ಕೃತ ಮಡಿವಾಳಯ್ಯ ಸಾಲಿ ಅಲ್ಲೂರು ಹಾಗೂ ಪುಟ್ಟರಾಜ ಪ್ರಶಸ್ತಿ ಪುರಸ್ಕೃತ ಏಕನಾಥ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶರದಕುಮಾರ ನಾರಾಯಣ ಪೇಟಕರ, ಡಾ.ಸಾರಿಕಾ ಎಸ್.ಗಂಗಾ, ಪ್ರಭು ಎಂ.ಹಂಜಾಳ, ವೈಜಿನಾಥ ಬಂಡೆನೋರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ : ಬಸವಕಲ್ಯಾಣ | ದೌರ್ಜನ್ಯ ತಡೆ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮ

ಗುರುಕುಮಾರ ಹಿರೇಮಠರ ವಾಯಲಿನ್ ವಾದನ ಕಾರ್ಯಕ್ರಮ ವಿಶೇಷವಾಗಿತ್ತು. ಮಾಣಿಕ ಪ್ರಭು ಶಾಲೆಯ ಮಕ್ಕಳು ಪ್ರಾರ್ಥನೆ ಸಲ್ಲಿಸಿದರು. ಯಲ್ಲಾಲಿಂಗ ರೊಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಭದ್ರ ಆರ್. ಗಿರಿ ಸ್ವಾಗತಿಸಿದರು. ತುಕಾರಾಂ ನಿರೂಪಿಸಿದರು ಹಾಗೂ ವಿವೇಕಾನಂದ ಗುರುಮೂರ್ತಿ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಬಾರದ ಮಳೆ, ಒಣಗಿದ ಬೆಳೆ : ಟ್ರ್ಯಾಕ್ಟರ್‌ನಿಂದ ಸೋಯಾಬೀನ್‌ ಬೆಳೆ ನಾಶಪಡಿಸಿದ ರೈತ

ಮಳೆ ಕೊರತೆಯಿಂದ ಬೆಳೆ ಬಾಡುತ್ತಿರುವುದನ್ನು ಕಂಡು ನಿರಾಸೆಗೊಂಡ ರೈತರೊಬ್ಬರು, ಮೂರು ಎಕರೆ...

ಹುಲಸೂರ ತಾಲೂಕು ಬರ ಘೋಷಣೆಗೆ ಆಗ್ರಹ : 5ನೇ ದಿನ ಪೂರೈಸಿದ ಧರಣಿ ಸತ್ಯಾಗ್ರಹ

ಹುಲಸೂರ ತಾಲೂಕು ಬರಪೀಡಿತ ಘೋಷಿಸಬೇಕೆಂದು ಆಗ್ರಹಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು...

ಬೀದರ್‌ | ನೆಟ್‌ವರ್ಕ್ ಸಮಸ್ಯೆ : ಮೊಬೈಲ್‌ ಕರೆ, ರೇಷನ್‌ ಕಾರ್ಡ್ ಬಯೋಮೆಟ್ರಿಕ್‌ಗಾಗಿ ಗ್ರಾಮಸ್ಥರ ಪರದಾಟ!

ದೇಶ 5ಜಿ ಅಂತರ್ಜಾಲ ಸೇವೆ, ಎಐ ತಂತ್ರಜ್ಞಾನದಂತಹ ಅತ್ಯಾಧುನಿಕ ಕಾಲದಲ್ಲಿದೆ. ಆದರೆ,...

ಬೀದರ್‌ ವಿವಿ ಪ್ರಥಮ ಘಟಿಕೋತ್ಸವ : 20 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಇಬ್ಬರಿಗೆ ಗೌರವ ಡಾಕ್ಟರೇಟ್

ಭಾಲ್ಕಿ ತಾಲೂಕಿನ ಹಾಲಹಳ್ಳಿ(ಕೆ) ಸಮೀಪದ ಬೀದರ್ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಸಮಾರಂಭವು...