ಚಂದ್ರಯಾನ-3 | ಜುಲೈ 13ರಂದು ಉಡಾವಣೆ

Date:

ಮೂರನೇ ಚಂದ್ರಯಾನವನ್ನು ಭಾರತ ಕೈಗೊಂಡಿದೆ. ಮಾನವರಹಿತ ಚಂದ್ರಯಾನ-3ರ ರಾಕೇಟ್‌ ಜುಲೈ 13ರಂದು ಮಧ್ಯಾಹ್ನ 2:30ಕ್ಕೆ ಉಡಾವಣೆಯಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

“ಜುಲೈ 13 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್‌ಡಿಎಸ್‌ಸಿ) ಉಡಾವಣೆ ನಡೆಯಲಿದೆ. ಭಾರತದ ಬಾಹ್ಯಾಕಾಶ ಸಾಮರ್ಥ್ಯಗಳನ್ನು ಸಾಬೀತುಪಡಿಸುವ ಗುರಿಯನ್ನು ಚಂದ್ರಯಾನ-3 ಹೊಂದಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

“ಚಂದ್ರಯಾನ-3 ನೌಕೆಗೆ ಜಿಎಸ್‌ಎಲ್‌ವಿ-ಎಂಕೆ3 ಎಂದು ಹೆಸರಿಡಲಾಗಿದೆ. ಚಂದ್ರಯಾನ-3 ಮಿಷನ್‌ ಆರ್ಬಿಟರ್ ಅನ್ನು ಹೊಂದಿರುವುದಿಲ್ಲ. ರೋವರ್ ಮತ್ತು ಲ್ಯಾಂಡರ್‌ಅನ್ನು ಹೊಂದಿರುತ್ತದೆ. ಇವೆರಡನ್ನೂ ಹೊತ್ತು ಪ್ರೊಪಲ್ಷನ್ ಮಾಡ್ಯೂಲ್ ಚಂದ್ರನ ಕಕ್ಷೆಯ 100 ಕಿ.ಮೀವರೆಗೆ ಹೋಗುತ್ತದೆ” ಎಂದು ಹೇಳಿದ್ದಾರೆ.

“ಹವಾಮಾನ, ಭೂಮಿಯಿಂದ ಚಂದ್ರನ ದೂರ ಮತ್ತು ಭೂಮಿಯ ಸುತ್ತ ತನ್ನ ಕಕ್ಷೆಯಲ್ಲಿ ಚಂದ್ರನ ಸ್ಥಾನವನ್ನು ಒಳಗೊಂಡಂತೆ ವಿವಿಧ ಅಂಶಗಳನ್ನು ಗಮನಿಸಿ ಜುಲೈ 12ರಿಂದ ಜುಲೈ 19ರ ನಡುವೆ ಉಡಾವಣೆಗೆ ಚಿಂತಿಸಿದ್ದೆವು. ಅಂತಿಮವಾಗಿ ಜುಲೈ 13ರಂದು ಉಡಾವಣೆಗೆ ನಿರ್ಧರಿಸಲಾಗಿದೆ. ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಭೂಮಿಯ ಕಕ್ಷೆಯ ನಂತರ ಚಂದ್ರನ ಕಕ್ಷೆಗೆ ಸಂಧಿಸುವಂತೆ ಮಾಡಲು ಅಗತ್ಯವಿರುವ ಲೆಕ್ಕಾಚಾರಗಳನ್ನು ಗಣನೆಗೆ ತೆಗೆದುಕೊಂಡು ಸಮಯವನ್ನು ನಿರ್ಧರಿಸಿದ್ದೇವೆ” ಎಂದು ಇಸ್ತ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಹಾಸನ | ಮಕ್ಕಳು, ಮಹಿಳೆಯರ ನಾಪತ್ತೆ ಪ್ರಕರಣದ ತನಿಖೆಗೆ ವಿಶೇಷ ತಂಡ; ಒಂದು ತಿಂಗಳಲ್ಲಿ 51 ಮಂದಿ ಪತ್ತೆ

ಇಸ್ರೋ ಬಿಡುಗಡೆ ಮಾಡಿದ ಮಿಷನ್ ಪ್ರೊಫೈಲ್ ಪ್ರಕಾರ, ಇಂಟಿಗ್ರೇಟೆಡ್ ಚಂದ್ರಯಾನ-3 (ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮತ್ತು ರೋವರ್) ಚಂದ್ರನ ಕಕ್ಷೆಗೆ ಸೇರುವ ಮೊದಲು ಭೂಮಿಯನ್ನು ಐದು ಸುತ್ತು ಸುತ್ತುತ್ತದೆ. ಬಳಿಕ, ಚಂದ್ರನ ಮೇಲೆ ಇಳಿಯುವ ಮೊದಲು ಚಂದ್ರನ ಸುತ್ತ ಏಳು ಸುತ್ತು ಸುತ್ತುತ್ತದೆ.

ಚಂದ್ರನ ರಾಸಾಯನಿಕ ವಿಶ್ಲೇಷಣೆ ಮಾಡುವ ರೋವರ್

ಚಂದ್ರಯಾನ-3 ಒಂದು ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮಾಡ್ಯೂಲ್ ಮತ್ತು ರೋವರ್ ಅನ್ನು ಒಳಗೊಂಡಿದೆ. ಇವುಗಳನ್ನು ಅಂತರ-ಗ್ರಹಗಳ ಕಾರ್ಯಾಚರಣೆಗಳಿಗೆ ಅಗತ್ಯವಾದ ಹೊಸ ತಂತ್ರಜ್ಞಾನಗಳ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಲ್ಯಾಂಡರ್ ಮತ್ತು ರೋವರ್‌ಅನ್ನು ಹೊತ್ತು ಪ್ರೊಪಲ್ಷನ್ ಮಾಡ್ಯೂಲ್ ಚಂದ್ರನ ಕಕ್ಷೆಯ 100 ಕಿ.ಮೀ.ವರೆಗೆ ಹೋಗುತ್ತದೆ. ಬಳಿಕ ಲ್ಯಾಂಡರ್‌ ಮತ್ತು ರೋವರ್‌ಅನ್ನು ಬಿಡಗುಡೆ ಮಾಡುತ್ತದೆ.

ರೋವರ್‌ಅನ್ನು ತನ್ನ ಉದರದಲ್ಲಿ ಇಟ್ಟುಕೊಂಡು ಕೆಳಗಿಳಿಯುವ ಲ್ಯಾಂಡರ್‌, ಚಂದ್ರನ ಮೇಲೆ ಇಳಿದ ಬಳಿ ರೋವರ್‌ಅನ್ನು ಚಂದ್ರನ ಮೇಲಿರಿಸುತ್ತದೆ. ರೋವರ್‌ ಚಂದ್ರನ ಮೇಲ್ಮೈಯ ರಾಸಾಯನಿಕ ವಿಶ್ಲೇಷಣೆಯನ್ನು ನಡೆಸುತ್ತದೆ.

2019ರಲ್ಲಿ ಇಸ್ರೋ ಚಂದ್ರಯಾನ-2ಅನ್ನು ಕೈಗೊಂಡಿತ್ತು. ಲ್ಯಾಂಡರ್ ಮತ್ತು ರೋವರ್‌ಅನ್ನು ಆರ್ಬಿಟರ್‌ ಚಂದ್ರನ ಕಕ್ಷೆಗೆ ಸೇರಿಸಿತ್ತು. ಆದರೆ, ಲ್ಯಾಂಡರ್‌ ಚಂದ್ರನ ಮೇಲ್ಮೈನಲ್ಲಿ ಇಳಿಯುವ ವಿಫಲವಾಯಿತು. ಹೀಗಾಗಿ, ಆ ಕಾರ್ಯಾಚರಣೆಯನ್ನು ಚಂದ್ರಯಾನ-3 ಪೂರೈಸಲಿದೆ ಎಂಬ ವಿಶ್ವಾಸ ವಿಜ್ಞಾನಿಗಳಲ್ಲಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಎನ್‌.ಎಸ್‌.ಎಸ್‌ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ದಾರಿ: ನಾಲತವಾಡ

ವಿದ್ಯಾರ್ಥಿಗಳಲ್ಲಿ ಕೇವಲ ಶೈಕ್ಷಣಿಕ ಜ್ಞಾನವಷ್ಟೇ ಅಲ್ಲದೆ, ಸಾಮಾಜಿಕ ಜವಾಬ್ದಾರಿ, ನಾಯಕತ್ವ ಗುಣ...

ವಿಜಯಪುರ | ಮತದಾರರ ಹಕ್ಕು ರಕ್ಷಣೆಗೆ SIR ಪರಿಶೋಧನಾ ಪ್ರವಾಸ; ನಟ ಪ್ರಕಾಶ್ ರಾಜ್ ಭಾಗಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಮತದಾರರ...

ಯುವ ಪೀಳಿಗೆ ಸತ್ಯ, ಸರಳತೆಯ ತತ್ವಗಳನ್ನು ಅಳವಡಿಸಿಕೊಳ್ಳಬೇಕು: ಪ್ರೊ. ವಿಜಯಾ ಕೋರಿಶೆಟ್ಟಿ

ಸತ್ಯ, ಅಹಿಂಸೆ, ಸರಳತೆ, ಕರ್ತವ್ಯನಿಷ್ಠೆ ಮತ್ತು ನೈತಿಕ ಮೌಲ್ಯಗಳು ಕೇವಲ ಇತಿಹಾಸದ...

ಅಹಿಂಸೆ-ಸತ್ಯಾಗ್ರಹದ ಸಂದೇಶದೊಂದಿಗೆ ಸಾಮರಸ್ಯ ನಡಿಗೆ

ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಭಾರತವನ್ನು ಮುನ್ನಡೆಸಿ, ಜಗತ್ತಿಗೆ ಬೆಳಕಾದ ಮಹಾತ್ಮ...