ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಕೃಷಿ ಕೂಲಿ ಕಾರ್ಮಿಕರ ಸಂಘ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಹಾಗೂ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಸಂಯುಕ್ತಾಶ್ರಯದಲ್ಲಿ ಆ.10ರಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಛೇರಿ ಮುತ್ತಿಗೆ ಹಾಕುವ ಮೂಲಕ ಬೃಹತ್ ಪ್ರದರ್ಶನ- ಜೈಲ್ ಭರೋ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಇದರ ಅಂಗವಾಗಿ ಪಟ್ಟಣದ ದಿವಂಗತ ಜಿ.ವಿ.ಶ್ರೀರಾಮ ರೆಡ್ಡಿ ಪ್ರತಿಮೆ ಮುಂದೆ ಇಂದು ಪ್ರಚಾರ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕೃಷಿ ಕೂಲಿ ಕಾರ್ಮಿಕರ ಸಂಘ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ರಾಜ್ಯ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ ತಿಳಿಸಿದರು.
ತದನಂತರ ಮಾತನಾಡಿದ ಅವರು 1947 ಆಗಸ್ಟ್ 10 ರಂದು ಕ್ವಿಟ್ ಇಂಡಿಯಾ ನೆನಪಿನಲ್ಲಿ ಕಾರ್ಪೊರೇಟ್‌ಗಳೇ ದೇಶ ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಛೇರಿ ಮುತ್ತಿಗೆ ಹಾಕುವ ಮೂಲಕ ಜೈಲ್ ಭರೋ ನಡೆಸಲಿದ್ದೇವೆ ಎಂದರು.
ಬಾಗೇಪಲ್ಲಿ ತಾಲ್ಲೂಕು ಕೃಷಿ ಕೂಲಿ ಕಾರ್ಮಿಕರು, ರೈತರು,ಮಹಿಳೆಯರು, ಬಡವರು, ವಿಧ್ಯಾರ್ಥಿಗಳು ಹಾಗೂ ವಿವಿಧ ಕಾರ್ಮಿಕ ಹಾಗೂ ರೈತ ಸಂಘಟನೆಗಳ ಕರೆ ಮೇರೆಗೆ ಜನಸಾಮಾನ್ಯರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಗಸ್ಟ್ 10 ರಂದು ದೇಶಾದ್ಯಂತ ಬೃಹತ್ ‘ಜೈಲ್ ಭರೋ’ ಆಂದೋಲನ ಹಮ್ಮಿಕೊಳ್ಳಲಾಗಿದೆ. ಹೆಚ್ಚುತ್ತಿರುವ ಬೆಲೆ ಏರಿಕೆ, ನಿರುದ್ಯೋಗ ಮತ್ತು ಕಾರ್ಪೊರೇಟ್ ಪರ ನೀತಿಗಳನ್ನು ವಿರೋಧಿಸಿ ವಿದ್ಯುತ್ ದರ ಏರಿಕೆ ಹಾಗೂ ಕೃಷಿ ಕ್ಷೇತ್ರದ ಮೇಲಿನ ಹೊರೆ ಖಂಡಿಸಿ,ಕಾರ್ಮಿಕ ವಿರೋಧಿ ನಾಲ್ಕು ಲೇಬರ್ ಕೋಡ್‌ಗಳು ಹಾಗೂ ಬೀಜ ಮಸೂದೆ ರದ್ದುಗೊಳಿಸುವುದು.ರೈತರ ಸಾಲ ಮನ್ನಾ,ಹೊಸ ಸಾಲ ನೀಡುವ , ಭೂ ಹಕ್ಕುಗಳ ರಕ್ಷಣೆ.ದೇಶಾದ್ಯಂತ ಸಾವಿರಾರು ಸ್ಥಳಗಳಲ್ಲಿ ಸಾರ್ವಜನಿಕರು ಹಾಗೂ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಬಂಧನಕ್ಕೊಳಗಾಗುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಲಿದ್ದಾರೆ. ದೇಶವ್ಯಾಪಿ ನಡೆಯಲಿರುವ ಸಿಪಿಐಎಂ ಜೈಲ್ ಭರೋ ಆಂದೋಲನದ ಮಾಡಲಾಗಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ..?ಮಾಲೂರಿನಲ್ಲಿ ಮುಖ್ಯಮಂತ್ರಿಗಳ ಬೃಹತ್ ಕಾರ್ಯಕ್ರಮ: ಅದ್ದೂರಿ ಸ್ವಾಗತಕ್ಕೆ ಜಿಲ್ಲಾಧಿಕಾರಿ ಖಡಕ್ ಸೂಚನೆ
ಈ ಸಂದರ್ಭದಲ್ಲಿ ರಘುರಾಮ ರೆಡ್ಡಿ, ಡಿ.ಟಿ.ಮುನಿಸ್ವಾಮಿ, ಮುನಿಯಪ್ಪ,ಮುಸ್ತಫಾ,ಜಿ. ಕೃಷ್ಣಪ್ಪ, ಸೋಮಶೇಖರ್, ರಾಜಶೇಖರ್,ಹರೀಶ್,ಬಿಳ್ಳೂರು ನಾಗರಾಜು,ಹಾಗೂ ಇತರರು ಹಾಜರಿದ್ದರು.




