ಬಾಗೇಪಲ್ಲಿ: ರೆಡ್ಡಿಕೆರೆ ಕಟ್ಟೆಯ ಮೇಲೆ ತಡೆಗೋಡೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆ

Date:

ಗೂಳೂರು ರಸ್ತೆಯ ರೆಡ್ಡಿಕೆರೆಯ ಕಟ್ಟೆ ಮೇಲೆ ಎರಡು ಬದಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಿ ಅಪಘಾತಗಳನ್ನು ತಪ್ಪಿಸಬೇಕೆಂದು ಆಗ್ರಹಿಸಿ ಡಿವೈಎಫ್‌ಐ ಮತ್ತು ಎಸ್‌ಎಫ್‌ಐವತಿ,ಸಿ.ಐ.ಟಿ.ಯು, ಕರ್ನಾಟಕ ಪ್ರಾಂತ್ಯ ರೈತ ಸಂಘ, ಕರ್ನಾಟಕ ಕೃಷಿ ಗ್ರಾಮೀಣ ಕಾರ್ಮಿಕರು ಸಂಘ ,ದಲಿತ ಹಕ್ಕುಗಳ ಸಮಿತಿ ಸಂಘದ ವತಿಯಿಂದ ಕೆರೆ ಕಟ್ಟೆಯ ಮೇಲೆ ಒಂದು ತಾಸಿಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ್ದರಿಂದ ವಾಹನ ಸಂಚಾರ ಮತ್ತು ಜನಸಂಚಾರ ಅಸ್ಥವ್ಯಸ್ಥೆಗೊಂಡಿತು.

ಈ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಚನ್ನರಾಯಪ್ಪ ಮಾತನಾಡಿ ಗೂಳೂರು ರಸ್ತೆಯ ಮೂಲಕ ಆಂಧ್ರಪ್ರದೇಶದ ಕದರಿ,ಅಮಡಗೂರು ಹಾಗೂ ಕರ್ನಾಟಕದ ಗೂಳೂರು,ಮಾರ್ಗಾನುಕುಂಟೆ,ಗೊರ್ತಪಲ್ಲಿ,ಬಿಳ್ಳೂರು ಮತ್ತು ತಿಮ್ಮಂಪಲ್ಲಿ ಗ್ರಾಮಗಳಿಗೆ ಏಕೈಕ ರಸ್ತೆಯಾಗಿದೆ.ಈ ರಸ್ತೆಯಲ್ಲಿ ಸಂಚಾರಿಸುವಾಗ ಕೆರೆಕಟ್ಟೆಯ ಮೇಲೆ ಸಂಚಾರ ಮಾಡಬೇಕಾಗಿದೆ ಎರಡು ಬದಿಯಲ್ಲಿ ತಡೆಗೋಡೆ ಇಲ್ಲದೆ ಅನೇಕ ವಾಹನ ಸವಾರಿದಾರರು ಆಯಾತಪ್ಪಿ ಕೆರೆಯಲ್ಲಿ ಬಿದ್ದು ಮೃತಪಟ್ಟಿರುವ ಘಟನೆಗಳು ನಡೆದಿದ್ದು ಉಂಟು ಅನೇಕ ಕಾರುಗಳ ಸಹ ಕೆರೆಗೆ ಉರಳಿಬಿದ್ದಿವೆ. ವಾಹನ ದಟ್ಟಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಘಟನೆಗಳು ನಡೆಯುತ್ತಿವೆ.ಕೆರೆ ಕಟ್ಟೆಯ ಮೇಲೆ ರಸ್ತೆ ಕಿರಿದಾಗಿದ್ದು ಅನೇಕ ತಿರುವುಗಳು ಇರುವುದರಿಂದ ಹಾಗೂ ರಸ್ತೆ ಅತ್ಯಂತ ಕಿರಿದಾಗಿ ಇದ್ದು ಎದುರು -ಬದುರು ವಾಹನಗಳು ಸಂಚಾರ ಮಾಡುವಾಗ ಅಪಘಾತಗಳಿಗೆ ಅವಕಾಶವಾಗುತ್ತಿವೆ.ಅನೇಕ ಬಾರಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ರಸ್ತೆ ಅಗಲೀಕರಣ ಮಾಡದೆ ಹಾಗೂ ಎರಡು ಬದಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.

ಬಾಗೇಪಲ್ಲಿ ಪಟ್ಟಣಕ್ಕೆ ವಿವಿಧ ಹಳ್ಳಿಗಳಿಗೆ ಹೋಗಿ ಬರುವ ಶಾಲಾ ಕಾಲೇಜಿನ ವಿದ್ಯಾರ್ಥಿಗಳು,ರೈತರು,ವರ್ತಕರು,ಮಹಿಳೆಯರು ವಿವಿಧ ಕೆಲಸಗಳ ನಿಮಿತ್ತ ಬಂದು ಹೋಗುವುದು ವಾಡಿಕೆ ಆದರೆ ಕೆರೆ ಕಟ್ಟೆಯ ಮೇಲೆ ತಡೆಗೋಡೆ ಇಲ್ಲದೆ ವಾಹನಗಳ ಸವಾರಿದಾರರು ಆಯಾತಪ್ಪಿ ನೇರವಾಗಿ ಕೆರೆಗೆ ಉರಳಿ ಬೀಳುತ್ತಿರುವ ಘಟನೆಗಳು ನಡೆಯತ್ತಲೇ ಇವೆ.ಈಗಾಗಲೇ 4-5ಜನ ಸವಾರಿದಾರರು ಬಲಿಯಾಗಿದ್ದಾರೆ.ಆದ್ದರಿಂದ ಕೆರೆ ಕಟ್ಟೆಯ ರಸ್ತೆಯ ಎರಡು ಬದಿಯಲ್ಲಿ ತಡೆಗೋಡೆ (ಕಬ್ಬಿಣದ ಗ್ರಿಲ್ಸ್) ಹಾಗೂ ರಸ್ತೆ ಹಂಪ್ಸ್ ಅಳವಡಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಇದನ್ನು ಓದಿದ್ದೀರಾ..?ಚಿಕ್ಕಬಳ್ಳಾಪುರ | ಆಗಸ್ಟ್ 22ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉಪಮುಖ್ಯಮಂತ್ರಿಗಳಿಂದ ಚಾಲನೆ

ಲೋಕೋಪಯೋಗಿ ಇಲಾಖೆಯ ಎಇಇ ಕಲ್ಯಾಣ್ ಕುಮಾರ್ ಸ್ಥಳಕ್ಕೆ ಬೇಟಿ ನೀಡಿ ಪ್ರತಿಭಟನೆಕಾರರೊಂದಿಗೆ ಮಾತುಕತೆ ನಡೆಸಿ ತಡೆಗೋಡೆ,ಹಂಪ್ಸ್ ಅಳವಡಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

- Advertisement -

ಈ ಸಂದರ್ಭದಲ್ಲಿ ಮುಖಂಡರಾದ ಎಂ.ಪಿ.ಮುನಿವೆಂಕಟಪ್ಪ,ದೇವಿ ಕುಂಟೆ ಶ್ರೀನಿವಾಸ,ಡಿ.ಟಿ.ಮುನಿಸ್ವಾಮಿ ಚನ್ನರಾಯಪ್ಪ,ಜಿ.ಕೃಷಪ್ಪ, ಇಮ್ರಾನ್ ಅಬೂಬಕರ್,ಜಿ.ಮುಸ್ತಾಫ್,ರಮಣ,ರಾಮಾಂಜಿ, ಶ್ರೀನಿವಾಸ ರೆಡ್ಡಿ, ಮೊಹೀದ್ದಿನ್,ನಾಗಮಣಿ, ಹನುಮಂತು,ರಿಜ್ವಾನ್,ಎ.ಸೋಮಶೇಖರ್ ಇದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು ವಿವಿಯಿಂದ ವರುಣ್‌ರಾಜ್ ಜಿ ಅವರಿಗೆ ಪಿಎಚ್‌.ಡಿ. ಪದವಿ ಪ್ರದಾನ

ತುಮಕೂರು ವಿಶ್ವವಿದ್ಯಾನಿಲಯದ ಡಾ. ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ...

ಬಾಗೇಪಲ್ಲಿ | ಯುವಕರ ಪರ ಹೋರಾಟದ ರೂಪುರೇಷೆಗಳನ್ನು ರೂಪಿಸಬೇಕಿದೆ: ಅನಿಲ್ ಕುಮಾರ್

ಸಮ್ಮೇಳನದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ...

ಚಿಂತಾಮಣಿ | ಎನ್.ವಿ. ಶ್ರೀನಿವಾಸನ್ ಅವರ ಚೊಚ್ಚಲ ಕವನ ಸಂಕಲನ ‘ಕಾವ್ಯ ಕುಸುಮಗಳು ಅರಳಿದಾಗ’ಲೋಕಾರ್ಪಣೆ

ಕಾವ್ಯವು ಮನುಷ್ಯನ ಭಾವನೆಗಳಿಗೆ ಅಕ್ಷರ ರೂಪ ನೀಡುವ ಶಕ್ತಿಯುತ ಮಾಧ್ಯಮವಾಗಿದ್ದು, ಕವಿಯ...