ಚಿಕ್ಕಬಳ್ಳಾಪುರ ಜಿಲ್ಲೆಯ ಪಿಡಚಲಹಳ್ಳಿ ಗ್ರಾಮದಲ್ಲಿ ದಲಿತರ ಕೇರಿಗೆ ದೇವರ ಮೂರ್ತಿ ಹೋಗುವುದನ್ನು ವಿರೋಧಿಸಿ “ದಲಿತರ ಕೇರಿಗೆ ದೇವರ ಮೂರ್ತಿ ಹೋದ್ರೆ ನಾನು ಸತ್ತು ಹೋಗ್ತೀನಿ” ಎಂದು ಪೂಜಾರಿಯೊಬ್ಬ ಉದ್ಧಟತನ ಮೆರೆದಿರುವ ಘಟನೆ ನಡೆದಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ವೈರಲ್ ಆಗಿದ್ದು, ಗ್ರಾಮದಲ್ಲಿ ದೇವರ ಮೆರವಣಿಗೆ/ಉತ್ಸವ ಸಂದರ್ಭದಲ್ಲಿ ಜನರು ಸೇರಿರುವುದರ ಜತೆಗೆ ದೇವರ ಮೂರ್ತಿಯನ್ನು ವಾಹನದ ಮೇಲೆ ಇಟ್ಟು ಸಾಗಿಸುತ್ತಿರುವುದು ಕಂಡುಬಂದಿದೆ. ಜತೆಗೆ ಅಂಬೇಡ್ಕರ್ ಭಾವಚಿತ್ರವನ್ನು ಹಿಡಿದು, ಕೈ ಮುಷ್ಟಿ ಎತ್ತಿ ಪ್ರತಿಭಟನೆಯಂತೆ ಕೂಗುತ್ತಿರುವ ದೃಶ್ಯಗಳೂ ಇವೆ. ಜನರು ಅಲ್ಲಲ್ಲಿ ಗುಂಪುಕಟ್ಟಿಕೊಂಡು ಚರ್ಚಿಸುತ್ತಿರುವುದು ಮತ್ತು ಕೆಲವರು ವಿಡಿಯೊ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಈ ಘಟನೆ ಜಾತಿ ಆಧಾರಿತ ತಾರತಮ್ಯ ಮತ್ತು ದೇವರ ಮೆರವಣಿಗೆಗೆ ಸಂಬಂಧಿಸಿದ್ದು, “ಪೂಜಾರಿಯೊಬ್ಬರು ಕಾಲೋನಿಯೊಳಗೆ ನಾವು ಬರುವುದಿಲ್ಲ. ಮಾದಿಗರ ಮನೆಗೆ ಬಂದರೆ ಸಾಯುತ್ತೇನೆಂದು ಹೇಳಿರುವ ಪೂಜಾರಿಗೆ ಶಿಕ್ಷೆಯಾಗುವವರೆಗೆ, ಆತ ಕ್ಷಮೆ ಕೇಳುವವರೆಗೆ, ನಮಗೆ ನ್ಯಾಯ ಸಿಗುವವರೆಗೆ ಇಲ್ಲಿಂದ ಕದಲುವುದಿಲ್ಲ. ದೇವರಿಗೆ ಜಾತಿ ಇದೆಯಾ ಹಾಗಾದರೆ ಎಂದು ಯುವಕರು ಪಟ್ಟುಹಿಡಿದಿದ್ದರು.
ದಲಿತರ ಕೇರಿಗೆ ದೇವರ ಮೂರ್ತಿ ಹೋದ್ರೆ ನಾನು ಸತ್ತು ಹೋಗ್ತೀನಿ ಎಂದು ಉದ್ಧಟನ ಮೆರೆದ ಪೂಜಾರಿ.
— 👑Che_ಕೃಷ್ಣ🇮🇳💛❤️ (@ChekrishnaCk) September 21, 2026
ಚಿಕ್ಕಬಳ್ಳಾಪುರ ಪಿಡಚಲಹಳ್ಳಿ ಯಲ್ಲಿ ನಡೆದ ಘಟನೆ. pic.twitter.com/BrMiTEigUK
This video cannot be played in your browser. Open the video directly
ಬಳಿಕ ಸುಮಾರು ಶೇ.48ರಷ್ಟು ದಲಿತ ಜನಸಂಖ್ಯೆ ಇರುವ ಪಿಡಚಲಹಳ್ಳಿ ಗ್ರಾಮಕ್ಕೆ ತಹಶೀಲ್ದಾರರು, ಪೊಲೀಸರು ಭೇಟಿ ನೀಡಿದ್ದು, ತಹಶೀಲ್ದಾರರು ಮನವಿ ಸ್ವೀಕರಿಸಿ ನ್ಯಾಯ ದೊರಕಿಸುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿದ್ದೀರಾ? ಮಧುಗಿರಿ | ಗಣೇಶ ವಿಸರ್ಜನೆ ವೇಳೆ ಗಲಾಟೆ: ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪ; ಆರೋಪಿ ಬಂಧನ
ಈ ಬಗ್ಗೆ ಅಧಿಕೃತ ಪೊಲೀಸ್ ಅಥವಾ ಆಡಳಿತಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಈ ವೀಡಿಯೊ ಹರಡುತ್ತಿದ್ದು, ಜಾತಿ ತಾರತಮ್ಯದ ವಿರುದ್ಧ ಖಂಡನೆ ವ್ಯಕ್ತವಾಗುತ್ತಿದೆ.





