ಚಿಂತಾಮಣಿ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಜಿ.ಎಲ್. ಶಂಕರ್ ಅವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಚಿಕ್ಕಬಳ್ಳಾಪುರ ಕ್ಷೇತ್ರವು ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು.2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಕೆ ಸುಧಾಕರ್ ಅವರು ನಂತರ ಬಿಜೆಪಿಗೆ ಹೋದರು.ಆ ಸಂದರ್ಭದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಕ್ಷೇತ್ರವನ್ನು ಮರಳಿ ಪಡೆಯಲು ಸೂಕ್ತ ಅಭ್ಯರ್ಥಿಯ ಹುಡುಕಾಟ ನಡೆಸಿದರು.ಆ ಸಮಯದಲ್ಲಿ ಪ್ರದೀಪ್ ಈಶ್ವರ್ ತಮ್ಮನ್ನು ಅನಾಥನೆಂದು ಕರೆದುಕೊಂಡು ಬಂದು ಕಾಂಗ್ರೆಸ್ ಟಿಕೆಟ್ ಪಡೆದು ಗೆಲುವು ಸಾಧಿಸಿದರು.ಶಾಸಕರಾದ ನಂತರ ಪ್ರದೀಪ್ ಈಶ್ವರ್ ಅವರು ದಲಿತ ಸಮುದಾಯದ ಬಗ್ಗೆ ಅಪಾರ ಕಾಳಜಿ ಇರುವಂತೆ ಮಾತನಾಡುತ್ತಾ,ದಲಿತರ ಮನೆಯಲ್ಲಿ ವಾಸ್ತವ್ಯ ಮಾಡುವುದಾಗಿ ಹೇಳುತ್ತಿದ್ದಾರೆ.ಆದರೆ ದಲಿತರ ಮತ್ತು ಬಡವರ ನಿಜವಾದ ಅಭಿವೃದ್ಧಿಗೆ ಯಾವುದೇ ದೊಡ್ಡ ಕೊಡುಗೆ ನೀಡಿಲ್ಲ ಹಾಗೂ ಯಾವುದೇ ಬೃಹತ್ ಯೋಜನೆಗಳನ್ನು ಘೋಷಿಸಿಲ್ಲ ಎಂದು ಆರೋಪಿಸಿದರು.
ಬಲಿಜ ಹಾಗೂ ದಲಿತ ಸಮುದಾಯದ ಜನರನ್ನು ಓಲೈಸಲು ಯತ್ನಿಸುತ್ತಾ,ವಿವಿಧ ಜಾತಿ-ಸಮುದಾಯಗಳ ನಡುವೆ ಗೊಂದಲ ಮತ್ತು ಅಭದ್ರತೆಯ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಶಂಕರ್ ಹರಿದಾಯ್ದರು.
ಇದನ್ನು ಓದಿದ್ದೀರಾ..?ಆರ್‌ಟಿಒ ಕಚೇರಿಗಳಲ್ಲಿ ಬೋಗಸ್ ವಾಹನ ನೋಂದಣಿ ಮತ್ತು ಡಿಎಲ್ ಅಕ್ರಮ: ಸೈಯದ್ ಮಾಲಿಕ್ ಆರೋಪ
ಶಾಸಕರಾಗಿ ಸುಮಾರು ಮೂರುವರೆ ವರ್ಷ ಕಳೆದರೂ ಸಹ ಯಾವುದೇ ಪ್ರಮುಖ ಅಭಿವೃದ್ಧಿ ಕೆಲಸಗಳಿಗೆ ವಿಶೇಷ ಅನುದಾನ ತರಲು ವಿಫಲರಾಗಿದ್ದಾರೆ.ರಾಜ್ಯದ 224 ಶಾಸಕರಲ್ಲಿ ಈ ರೀತಿಯಾಗಿ ಅನುದಾನ ತರದೆ ಶೂನ್ಯ ಸಾಧನೆ ಮಾಡುತ್ತಿರುವ ಏಕೈಕ ಶಾಸಕ ಪ್ರದೀಪ್ ಈಶ್ವರ್ ಎಂದು ಜಿ.ಎಲ್. ಶಂಕರ್ ಕಟುವಾಗಿ ವಿಮರ್ಶಿಸಿದರು.




