ಚಿಕ್ಕಬಳ್ಳಾಪುರ | ಶಾಸಕ ಪ್ರದೀಪ್ ಈಶ್ವರ್ ಅವರ ಹೆಸರನ್ನು ಕೆಡಿಸಲು ನಡೆಸಿದ ಪ್ರಯತ್ನ ಖಂಡನೀಯ : ಕಾಂಗ್ರೆಸ್ ಮುಖಂಡರು

Date:

ಚಿಕ್ಕಬಳ್ಳಾಪುರ: ಸುಸೂತ್ರವಾಗಿ ನಡೆಯುತ್ತಿದ್ದ ಕೆಂಪೇಗೌಡ ಜಯಂತಿ ಸರ್ಕಾರಿ ಕಾರ್ಯಕ್ರಮದಲ್ಲಿ ಉದ್ದೇಶಪೂರ್ವಕವಾಗಿ ಕೆಲ ಕಿಡಿಗೇಡಿಗಳು ಪ್ರವೇಶಿಸಿ ಗದ್ದಲ ಉಂಟು ಮಾಡಿದ್ದು,ಶಾಸಕ ಪ್ರದೀಪ್ ಈಶ್ವರ್ ಅವರ ಹೆಸರನ್ನು ಕೆಡಿಸಲು ನಡೆಸಿದ ಪ್ರಯತ್ನ ಖಂಡನೀಯ ಎಂದು ಕಾಂಗ್ರೆಸ್ ಅಹಿಂದ ಮುಖಂಡರು ಆರೋಪಿಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ದಲಿತ ಮುಖಂಡ ಸುಧಾ ವೆಂಕಟೇಶ್,ಪ್ರೋಟೋಕಾಲ್ ಪ್ರಕಾರವೇ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಅದನ್ನು ಸಹಿಸಲಾಗದೆ ಕೆಲವರು ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮವು ಶಿಸ್ತಿನಿಂದ ನಡೆಯುತ್ತಿದ್ದ ಸಂದರ್ಭದಲ್ಲಿ ಕೆಲವರು ಬಂದು ಶಾಸಕರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಕಾರ್ಯಕ್ರಮದ ಶಿಸ್ತು ಹಾಳು ಮಾಡಿದ್ದಾರೆ.ಇದು ಕೇವಲ ಶಾಸಕರಿಗೆ ನೋವುಂಟು ಮಾಡುವ ಕೆಲಸವಲ್ಲದೆ,ನಾಡಪ್ರಭು ಕೆಂಪೇಗೌಡರಿಗೂ ಅವಮಾನ ಮಾಡಿದಂತಾಗಿದೆ ಕಾರ್ಯಕ್ರಮದ ವೇಳೆ ಶಾಸಕರ ವಿರುದ್ಧ ಎಷ್ಟೇ ಪ್ರಚೋದನೆ ನಡೆದಿದ್ದರೂ ಅವರು ಶಾಂತ ಹಾಗೂ ಶಿಸ್ತಿನಿಂದ ಕಾರ್ಯಕ್ರಮವನ್ನು ಮುನ್ನಡೆಸಿದರು.ಆದರೆ ಕಾರ್ಯಕ್ರಮದ ನಂತರ ನೂರಕ್ಕೂ ಹೆಚ್ಚು ಮಂದಿ ಸೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಚೋದನೆ ನೀಡಿದ್ದು,ಬಳಿಕ ಅವರತ್ತ ಚಪ್ಪಲಿ ಎಸೆಯಲಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿ ಬಂಧನ ಕ್ರಮ ಕೈಗೊಂಡಿದ್ದು,ಇದು ಯಾರಾದರೂ ದೂರು ನೀಡಿದ ನಂತರ ನಡೆದ ಕ್ರಮವಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನೂ ಶಾಸಕರ ಅವರ ಪ್ರಚೋದನೆಯಿಂದಲೇ ಗದ್ದಲ ನಡೆದಿದೆ ಎಂದು ಆರೋಪಿಸಿ ಕೆಲವರು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವುದು ಎಷ್ಟರ ಮಟ್ಟಿಗೆ ನ್ಯಾಯಸಮ್ಮತ ಎಂದು ಪ್ರಶ್ನಿಸಿದರು.

ಗವಿರಾಯಪ್ಪ ಮಾತನಾಡಿ ಕೆಂಪೇಗೌಡ ಜಯಂತಿ ವೇಳೆ ನಡೆದ ಘಟನೆಯಲ್ಲಿ ಕೆಲ ಕಿಡಿಗೇಡಿಗಳ ವರ್ತನೆಯೇ ಪ್ರಮುಖ ಕಾರಣವಾಗಿದೆ ಕಾರ್ಯಕ್ರಮದಲ್ಲಿ ಗದ್ದಲ ಉಂಟು ಮಾಡಿದ್ದಲ್ಲದೆ,ನಂತರವೂ ಶಾಸಕರ ವಾಹನ ಸ್ಥಳದಿಂದ ತೆರಳುವವರೆಗೂ ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗಿದೆ. ಬಳಿಕ ಶಾಸಕರ ಕಾರಿನತ್ತ ಚಪ್ಪಲಿ ಎಸೆದು ಜನಪ್ರತಿನಿಧಿಗೆ ಅಗೌರವ ತೋರಲಾಗಿದೆ ಎಂದು ಹೇಳಿದರು.ಈ ಎಲ್ಲಾ ಘಟನೆಗಳ ಹಿನ್ನೆಲೆಯಲ್ಲಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿ ತಪ್ಪಿತಸ್ಥರನ್ನು ವಶಕ್ಕೆ ಪಡೆದಿದ್ದಾರೆ.ಅಂತಹ ಸಂದರ್ಭದಲ್ಲಿ ಇದರಲ್ಲಿ ಶಾಸಕರ ಪಾತ್ರ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.

ಘಟನೆಗೆ ಶಾಸಕರ ಪ್ರಚೋದನೆಯೇ ಕಾರಣ ಎಂದು ಆರೋಪಿಸಿ ನಿನ್ನೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿರುವುದು ಸರಿಯಲ್ಲ ಆದರೆ ಶಾಸಕರ ವಿರುದ್ಧ ನಿರಾಧಾರ ಆರೋಪಗಳನ್ನು ಮಾಡಿ ಅವರ ಗೌರವಕ್ಕೆ ಧಕ್ಕೆ ತರುವ ರೀತಿಯ ಅಪಪ್ರಚಾರವನ್ನು ಇಲ್ಲಿಗೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಡಾನ್ಸ್ ಶ್ರೀನಿವಾಸ್ ಮಾತನಾಡಿ ಉದ್ದೇಶಪೂರ್ವಕವಾಗಿ ಗದ್ದಲ ಸೃಷ್ಟಿಸಿ ಶಾಸಕರ ಹೆಸರನ್ನು ಕೆಡಿಸುವ ಪ್ರಯತ್ನ ನಡೆದಿದೆ. ಕೆಲವರು ಹಣ ಖರ್ಚು ಮಾಡಿ ಹೊರಗಡೆಯವರನ್ನು ಕರೆಸಿ ಕಾರ್ಯಕ್ರಮದಲ್ಲಿ ಗೊಂದಲ ಉಂಟು ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಇದನ್ನು ಓದಿದ್ದೀರಾ..?ಚಿಕ್ಕಬಳ್ಳಾಪುರ | ಮುದ್ದೇನಹಳ್ಳಿ ಬಳಿಯ ಹೋಂ ಸ್ಟೇ ಒಂದರಲ್ಲಿಅನುಮಾನಾಸ್ಪದವಾಗಿ ಯುವತಿಯೊಬ್ಬಳು ಸಾವು

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ನಾಯನಹಳ್ಳಿ ನಾರಾಯಣಸ್ವಾಮಿ,ರಾಮಚಂದ್ರ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗಭೂಷಣ್,ರಕ್ಷಿತ್ ರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆರಾದ ನಾರಾಯಣಮ್ಮ,ಹಮೀಮ್, ಪೆದ್ದಣ್ಣ, ನಗರಸಭೆ ಮಾಜಿ ಸದಸ್ಯ ಶ್ರೀನಿವಾಸ್,ಮಹಮದ್ ಜಾಫರ್,ಟಿಎಪಿಸಿಎಂಎಸ್ ನಿರ್ದೇಶಕ ಬಿಸೇಗಾರಹಳ್ಳಿ ನಾಗೇಶ್,ತಿಪ್ಪೇನಹಳ್ಳಿ ನಾರಾಯಣ,ದಲಿತ ಮುಖಂಡ ಬಿ.ವಿ ಆನಂದ್ ಮತ್ತು ಇತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೌಜನ್ಯಾ ಪ್ರಕರಣ: ಮಂಗಳೂರಿಗೆ ನೂತನ SIT ತಂಡ; ತನಿಖೆಗೆ ಸಿದ್ಧತೆ

ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್...

ಭಾರತ–ಜಪಾನ್ ತಂತ್ರಜ್ಞಾನ ಸಹಕಾರದಿಂದ ಹೊಸ ಉದ್ಯಮ ಅವಕಾಶ: ನವತಾ ಹಿರೋಷಿ

ಜಪಾನ್‌ನ ತಂತ್ರಜ್ಞಾನ ಹಾಗೂ ಕೈಗಾರಿಕಾ ಅನುಭವಕ್ಕೆ ಭಾರತದ ಯುವಶಕ್ತಿ ಮತ್ತು ಡಿಜಿಟಲ್...

ಕೋಲಾರ | ತಡೆಹಿಡಿದಿದ್ದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಮರುಸ್ಥಾಪನೆ

ಕೋಲಾರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಫ್ರೀದ್ ಪಾಷಾ ಅವರ...