ಚಿಕ್ಕಮಗಳೂರು l ನ.10ರಂದು ಸೂಫಿ ಪರಂಪರೆಯ ಧಾರ್ಮಿಕ ಆಚರಣೆ; ಸೈಯದ್ ಫಕ್ರುದ್ದೀನ್ ಶಾ ಖಾದ್ರಿ 

Date:

ಶ್ರೀಗುರು ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ ನ.10ರಂದು ಸೋಮವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಶತಮಾನಗಳಿಂದ ನಡೆದು ಬರುತ್ತಿರುವ ಸೂಫಿ ಪರಂಪರೆಯ ಧಾರ್ಮಿಕ ಆಚರಣೆ ರೊಟ್ಟಿ ಭಾಜಿ ಫಾತಿಹಾ(ಮಾಮಾ ಜಿಗ್ನಿ ಫಾತಿಹಾ)ಸಹಜ ನಡೆಯಲಿದೆ ಎಂದು ಸೈಯದ್ ಬುಡೆನ್ ಶಾ ಖಾದ್ರಿ ವಂಶಸ್ಥರಾದ ಸೈಯದ್ ಫಕ್ರುದ್ದೀನ್ ಶಾ ಖಾದ್ರಿ  ತಿಳಿಸಿದ್ದಾರೆ.

- Advertisement -

ರೊಟ್ಟಿ ಭಾಜಿ ಧಾರ್ಮಿಕ ಆಚರಣೆ ಕಾರ್ಯಕ್ರಮ ಬಾಬಾ ಬುಡನ್‌ಗಿರಿ ದರ್ಗಾದಲ್ಲಿ ಶತಮಾನಗಳಿಂದ ನಮ್ಮ ಪೂರ್ವಜರು ಆಚರಿಸಿಕೊಂಡು ಬಂದಿರುವ ಪರಂಪರೆಯಾಗಿದೆ. ಮುಹಮ್ಮದನ್ ರಾಜಕುಮಾರಿಯಾದ ಮಾಮಾ ಜಿಗ್ನಿ ಮಾಸಾಹಿಬ ಅವರ ಸ್ಮರಣಾರ್ಥವಾಗಿ ಈ ಧಾರ್ಮಿಕ ಆಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಅವರು ಆ ಕಾಲದಲ್ಲಿ ಫಕೀರ್‌ಗಳು ಮತ್ತು ಭಕ್ತರಿಗೆ ರೊಟ್ಟಿ ಹಾಗೂ ಭಾಜಿ ಹಂಚುವ ಶಾಂತಿಯುತ ಪರಂಪರೆ ಆರಂಭಿಸಿದ್ದು, ಅವರ ಶಾಂತಿ, ಐಕ್ಯತೆ ಮತ್ತು ಜ್ಞಾನದ ಸಂದೇಶ ಇಂದಿಗೂ ಎಲ್ಲ ಧರ್ಮಗಳ ಜನರಿಗೆ ಪ್ರೇರಣೆಯಾಗಿದೆ ಎಂದು ಸೈಯದ್ ಫಕ್ರುದ್ದೀನ್ ಶಾ ಖಾದ್ರಿ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಈ ದರ್ಗಾ ಶತಮಾನಗಳಿಂದ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಗೌರವಿಸುತ್ತಿರುವ ಶಾಂತಿಯ ತಾಣವಾಗಿದ್ದು, ಇತ್ತೀಚಿನ ಕೆಲವು ಚಟುವಟಿಕೆಗಳಿಂದಾಗಿ ದರ್ಗಾದ ಧಾರ್ಮಿಕ ಸ್ವರೂಪಕ್ಕೆ ಧಕ್ಕೆಯಾಗುತ್ತಿದೆ. ಇದು ದರ್ಗಾದ ಭಕ್ತರ ಧಾರ್ಮಿಕ ನಂಬಿಕೆಗೆ ಕುಂದುಂಟು ಮಾಡಿದೆ. ಆದ್ದರಿಂದ ಶಾಂತಿಪ್ರಿಯ ನಾಗರಿಕರು, ಭಕ್ತರು ಮತ್ತು ಅಧಿಕಾರಿಗಳು ಶತಮಾನಗಳಿಂದ ನಡೆಯುತ್ತಿರುವ ಈ ಶಾಂತಿಯುತ ಫಾತಿಹಾ ಪರಂಪರೆಯನ್ನು ಬೆಂಬಲಿಸಬೇಕು. ದರ್ಗಾದ ಪವಿತ್ರತೆ ಮತ್ತು ಇತಿಹಾಸದ ಸತ್ಯವನ್ನು ಕಾಪಾಡಬೇಕು. ಹಾಗೆಯೇ, ಈ ದರ್ಗಾ ಅಧಿಕೃತವಾಗಿ ಮುಹಮ್ಮದನ್ ಇನ್‌ಸ್ಟಿಟ್ಯೂಟ್ ಎಂದು ಗುರುತಿಸಲ್ಪಟ್ಟಿದ್ದು, ಮುಜರಾಯಿ ಕೈಪಿಡಿಯ ಅಧ್ಯಾಯ 11ಪುಟ 571 ಹಾಗೂ ಸ್ಥಳಗಳ ಪೂಜಾ ವಿಧಾನ ಕಾಯ್ದೆ, 1991 (ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ 1991) ಪ್ರಕಾರ ಇದರ ಧಾರ್ಮಿಕ ಸಂಪ್ರದಾಯ ಮತ್ತು ಸಂಸ್ಕೃತಿ ಕಾಪಾಡುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಚಾಲಕನ ನಿಯಂತ್ರಣ ತಪ್ಪಿ ಬಸ್ ಅಪಘಾತ; ಐವರು ವಿದ್ಯಾರ್ಥಿಗಳು ಗಂಭೀರ

ಫಾತಿಹಾ ಸಂಪೂರ್ಣ ಶಾಂತಿಯುತವಾಗಿ ನಡೆಯಲಿದ್ದು, ಇದರ ಅಂಗವಾಗಿ ಹಜ್ರತ್ ದಾದಾ ಹಯಾತ್ (ದಾದಾ ಪೀರ್) ಅವರ ಪಾದುಕೆ (ಖಡವೇ) ದರ್ಶನ, ಚಿಲ್ಲಾ ಮತ್ತು ಪೀಠದ ದರ್ಶನ, ಮಾಮಾ ಜಿಗ್ನಿ ಮಾಸಾಹಿಬ ಅವರ ಪವಿತ್ರ ಚಿಲ್ಲಾ ಮತ್ತು ಪೀಠದ ದರ್ಶನ, ಪವಿತ್ರ ಕಲಿಮಾ ತಯ್ಯಿಬ ಇರುವ ದ್ವಾರದ ದರ್ಶನ, ಗುಹೆಯ ಹೊರಗಿನ ಪವಿತ್ರ ಚೌಕಿ ಮತ್ತು ಅರೇಬಿಕ್ ಹಾಗೂ ಫರ್ಶಿಯನ್ ಭಾಷೆಯ ತಾವೀಜ್ ದರ್ಶನ ಮತ್ತು ಜಮಾಲುಲ್ಲಾ ಮಘ್ರಿಬಿ ಶಾ ಖಾದ್ರಿ (ಕಾಫಿ ಗೋರಿ) ಅವರ ದರ್ಶನ ನಡೆಯಲಿದೆ. ಫಾತಿಹಾ ನಂತರ ನಿಯಾಜ್ (ರೊಟ್ಟಿ-ಭಾಜಿ ಆಹಾರ ವಿತರಣೆ) ಮಾಡಲಾಗುತ್ತದೆ. ಭಕ್ತರು ಪ್ರೀತಿ ಮತ್ತು ಧಾರ್ಮಿಕ ಐಕ್ಯತೆಯೊಂದಿಗೆ ಈ ದರ್ಗಾದ ಸಂರಕ್ಷಣೆ ಹಾಗೂ ಪಾವಿತ್ರö್ಯತೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸಬೇಕೆಂದು ಸೈಯದ್ ಬುಡೆನ್ ಶಾ ಖಾದ್ರಿ ವಂಶಸ್ಥರಾದ ಸೈಯದ್ ಫಕ್ರುದ್ದೀನ್ ಶಾ ಖಾದ್ರಿ 

ವಿನಂತಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗ್ರಾಮೀಣ ಬದುಕು, ಕೃಷಿ ಸಂಸ್ಕೃತಿ ಪ್ರವಾಸಿಗರಿಗೆ ಪರಿಚಯಿಸಲು ಹೊಸ ಪ್ರವಾಸೋದ್ಯಮ ಪ್ಯಾಕೇಜ್‌ಗಳ ಚಿಂತನೆ

ಉಡುಪಿ ಜಿಲ್ಲೆಯ ನೈಸರ್ಗಿಕ ಸೌಂದರ್ಯ, ಧಾರ್ಮಿಕ ಕ್ಷೇತ್ರಗಳು ಹಾಗೂ ಕಡಲತೀರಗಳೊಂದಿಗೆ ಗ್ರಾಮೀಣ...

ವಿಜಯಪುರ | ಬರ ಪರಿಹಾರ ಹೆಚ್ಚಳ, ಸಾಲಮನ್ನಾಕ್ಕೆ ರಾಜ್ಯ ರೈತ ಸಂಘ ಆಗ್ರಹ

ವಿಜಯಪುರ ಜಿಲ್ಲೆಯಲ್ಲಿ ಮಳೆ ಕೈಕೊಟ್ಟು ಕೃಷಿ ಚಟುವಟಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿರುವ...

ಇಂಡಿ | ಸ್ಥಳೀಯ ಚುನಾವಣೆ: ಕಾಂಗ್ರೆಸ್ ಬಲಗೊಳಿಸಲು ಯಶವಂತರಾಯಗೌಡ ಪಾಟೀಲ ಕರೆ

ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರಸಭೆ...

ಬಸವನ ಬಾಗೇವಾಡಿ ಸಮೀಪ 3.5 ತೀವ್ರತೆಯ ಭೂಕಂಪ ದಾಖಲು!

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ದಿಂದಾವರ ಗ್ರಾಮ ಪಂಚಾಯಿತಿ ಸಮೀಪ...