ಚಿಕ್ಕಮಗಳೂರು: ಇತ್ತೀಚೆಗೆ ಇನಾಂ ದತ್ತಾತ್ರೇಯ ಪೀಠ ಗ್ರಾಮದ ಬಾಬಾ ಬುಡನ್ ದರ್ಗಾ ಹಾಗೂ ಅದರ ಧಾರ್ಮಿಕ ಆಚರಣೆಗಳ ಕುರಿತು ತಪ್ಪು ಕಲ್ಪನೆಗಳನ್ನು ಮೂಡಿಸುವ ಹೇಳಿಕೆಗಳು ಮತ್ತು ಇತಿಹಾಸವನ್ನು ತಿರುಚುವ ಪ್ರಯತ್ನಗಳನ್ನು ಸಂಘಪರಿವಾರದ ಕಾರ್ಯಕರ್ತರು ಮಾಡುತ್ತಿದ್ದಾರೆ. ಇಂತಹ ಹೇಳಿಕೆಗಳು ಸಮಾಜದ ಶಾಂತಿಭಂಗಕ್ಕೆ ಕಾರಣವಾಗಬಹುದು. ಸಂಘಪರಿವಾರದ ಇಂತಹ ಹೇಳಿಕೆಗಳು ಸತ್ಯಕ್ಕೆ ದೂರವಾದ ಸಂಗತಿಗಳಾಗಿವೆ ಎಂದು ಸಯ್ಯದ್ ಬುಡನ್ ಶಾ ಖಾದ್ರಿ ವಂಶಸ್ಥರಾದ ಸೈಯದ್ ಫಕ್ರುದ್ದೀನ್ ಶಾ ಖಾದ್ರಿ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತ್ತೀಚೆಗೆ ಬಜರಂಗದಳದ ಮುಖಂಡ ರಘು ಸಕಲೇಶಪುರ ಸೇರಿದಂತೆ ಕೆಲವರು ಬಾಬಾ ಬುಡನ್ ದರ್ಗಾದ ಇತಿಹಾಸ, ಧಾರ್ಮಿಕ ಆಚರಣೆಗಳು ಮತ್ತು ಪರಂಪರೆಯ ಕುರಿತು ತಪ್ಪು ಮಾಹಿತಿ ಹರಡುತ್ತಿದ್ದಾರೆ. ಗಿರಿ ಭಾಗದಲ್ಲಿ ಹೊಸದಾಗಿ ಗೋರಿ ನಿರ್ಮಿಸಲಾಗಿದೆ ಎಂದು ಸುಳ್ಳು ಅಪಪ್ರಚಾರ ಮಾಡಿದ್ದಾರೆ. ಇಂತಹ ಹೇಳಿಕೆಗಳು ಸಮಾಜದಲ್ಲಿ ತಪ್ಪು ಕಲ್ಪನೆ, ದ್ವೇಷ ಅಥವಾ ಅಶಾಂತಿ ಉಂಟುಮಾಡುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತವು ಈ ವಿಷಯವನ್ನು ಪರಿಶೀಲಿಸಿ, ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಬಾಬಾ ಬುಡನ್ ದರ್ಗಾ, ಚಿಲ್ಲಾ ಮತ್ತು ಸೂಫಿ ಪರಂಪರೆಯ ಆಧ್ಯಾತ್ಮಿಕ ಸ್ಥಳಗಳಲ್ಲಿ ಪವಿತ್ರ ಸಮಾಧಿಗಳಿಗೆ (ಗೋರಿಗಳಿಗೆ) ಚಾದರ್ ಅರ್ಪಿಸುವುದು, ಗೌರವ ಸಲ್ಲಿಸುವುದು ಮತ್ತು ಧಾರ್ಮಿಕ ಆಚರಣೆಗಳನ್ನು ನಡೆಸುವುದು ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಪವಿತ್ರ ಸಮಾಧಿಗಳಿಗೆ ಹಸಿರು ಚಾದರ್ ಅಥವಾ ಬಟ್ಟೆ ಅರ್ಪಿಸುವ ಪದ್ಧತಿ ಸೂಫಿ ಪರಂಪರೆಯ ಭಕ್ತಿಯ ಸಂಕೇತವಾಗಿದ್ದು, ಇದು ಯಾವುದೇ ಹೊಸ ಆಚರಣೆ ಅಲ್ಲ. ಇಂತಹ ಪುರಾತನ ಆಚರಣೆಗಳನ್ನು ಹೊಸದಾಗಿ ಸೃಷ್ಟಿಸಲಾಗಿದೆ ಎಂದು ಬಿಂಬಿಸುವುದು ಐತಿಹಾಸಿಕ ಸತ್ಯಗಳಿಗೆ ವಿರುದ್ಧವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಯ್ಯದ್ ಬುಡನ್ ಶಾ ಖಾದ್ರಿ ಅಲ್ ಹುಸೈನಿ (ಬಾಬಾ ಬುಡನ್) ಅವರ ಆಧ್ಯಾತ್ಮಿಕ ಪರಂಪರೆ ಭಕ್ತಿ, ಸತ್ಯ, ನ್ಯಾಯ, ಮಾನವೀಯತೆ ಮತ್ತು ಅಹ್ಲೆ ಬೈತ್ ಪರಂಪರೆಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಬಾಬಾ ಬುಡನ್ ಅವರು ಕಾಫಿ ಬೀಜಗಳನ್ನು ಭಾರತಕ್ಕೆ ಪರಿಚಯಿಸಿದ ಮಹತ್ವದ ಐತಿಹಾಸಿಕ ವ್ಯಕ್ತಿಯಾಗಿ ಕಾಫಿನಾಡಿನ ಇತಿಹಾಸದಲ್ಲಿಯೂ ವಿಶೇಷ ಸ್ಥಾನವನ್ನು ಹೊಂದಿದ್ದಾರೆ. ಚಿಕ್ಕಮಗಳೂರಿನ ಕಾಫಿ ಸಂಸ್ಕöÈತಿ ಮತ್ತು ಪರಂಪರೆಯೊಂದಿಗೆ ಬಾಬಾ ಬುಡನ್ ಅವರ ಹೆಸರು ಶತಮಾನಗಳಿಂದ ಸಂಬಂಧ ಹೊಂದಿದೆ ಎಂದಿದ್ದಾರೆ.
ಇನಾಂ ದತ್ತಾತ್ರೇಯ ಪೀಠ ಗ್ರಾಮದ ಬಾಬಾ ಬುಡನ್ ದರ್ಗಾದ ಇತಿಹಾಸವನ್ನು ಯಾವುದೇ ಊಹಾಪೋಹಗಳ ಆಧಾರದ ಮೇಲೆ ಅಲ್ಲದೆ, ಹಳೆಯ ಅಧಿಕೃತ ದಾಖಲೆಗಳು, ಕಂದಾಯ ದಾಖಲೆಗಳು ಮತ್ತು ಸರ್ಕಾರದ ಆದೇಶಗಳ ಆಧಾರದ ಮೇಲೆ ಅರ್ಥಮಾಡಿಕೊಳ್ಳಬೇಕು. ಬಾಬಾ ಬುಡನ್ ದರ್ಗಾ ಕೇವಲ ಒಂದು ಸ್ಥಳದ ಹೆಸರು ಅಲ್ಲ, ಇದು ಶತಮಾನಗಳ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಪವಿತ್ರ ಕ್ಷೇತ್ರವಾಗಿದೆ. ಮೈಸೂರು ಸರಕಾರದ ಅಪೀಲ್ ನಂ.೧೦೫೯ ಆಫ್ ೧೮೯೦-೦೧ ಸೇರಿದಂತೆ ಹಳೆಯ ಅಧಿಕೃತ ದಾಖಲೆಗಳಲ್ಲಿ ದತ್ತಾತ್ರೇಯ ಪೀಠ ದರ್ಗಾ ಮತ್ತು ಅದರ ಇನಾಂ ಹಕ್ಕುಗಳು, ಆಡಳಿತ ಹಾಗೂ ಧಾರ್ಮಿಕ ಕರ್ತವ್ಯಗಳಿಗೆ ಸಂಬಂಧಿಸಿದ ವಿಚಾರಣೆಗಳು ನಡೆದಿರುವುದು ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅದೇ ದಾಖಲೆಗಳ ಪ್ರಕಾರ, ಮೈಸೂರು ಸರ್ಕಾರದ ಇನಾಂ ಸೆಟ್ಲ್ಮೆಂಟ್ ಪ್ರಕ್ರಿಯೆಯಲ್ಲಿ ದರ್ಗಾಗೆ ಸಂಬAಧಿಸಿದ ಪ್ರದೇಶವನ್ನು ದತ್ತಾತ್ರಿಪೀಠ ಎಂಬ ಹೆಸರಿನ ಕಂದಾಯ ಗ್ರಾಮವಾಗಿ ಗುರುತಿಸಲಾಯಿಗಿದೆ. ಅದೇ ಸಂದರ್ಭದಲ್ಲಿ ಬಿಸಗಣಿ ಮಠಕ್ಕೆ ಸಂಬAಧಿಸಿದ ಪ್ರದೇಶವನ್ನು ಮಹಲ್ ಎಂಬ ಹೆಸರಿನ ಪ್ರತ್ಯೇಕ ಗ್ರಾಮವಾಗಿ ಗುರುತಿಸಲಾಯಿತು. ಈ ದಾಖಲೆಗಳು ಬಾಬಾ ಬುಡನ್ ದರ್ಗಾದ ಐತಿಹಾಸಿಕ ಹಿನ್ನೆಲೆ, ಧಾರ್ಮಿಕ ಕರ್ತವ್ಯಗಳು ಮತ್ತು ಆಡಳಿತ ಸಂಬAಧಿತ ವಿಚಾರಗಳಲ್ಲಿ ಸರಕಾರದ ಅಧಿಕೃತ ದಾಖಲೆಗಳಾಗಿವೆ. ಅದೇ ರೀತಿ ಮೈಸೂರು ಸರಕಾರದ ಮುಜರಾಯಿ ಕೈಪಿಡಿ ಮುಜರಾಯಿ ಮ್ಯಾನುಯಲ್ ೧೧ರಲ್ಲಿ ಧಾರ್ಮಿಕ ಸಂಸ್ಥೆಗಳ ನಿರ್ವಹಣೆ ಮತ್ತು ವರ್ಗೀಕರಣದ ಕುರಿತು ಉಲ್ಲೇಖಗಳಿದ್ದು, ಇನಾಂ ದತ್ತಾತ್ರೇಯ ಪೀಠ ಗ್ರಾಮದ ಬಾಬಾ ಬುಡನ್ ದರ್ಗಾದ ಮೊಹಮ್ಮದನ್ ಧಾರ್ಮಿಕ ಸಂಸ್ಥೆಯ ಐತಿಹಾಸಿಕ ಧಾರ್ಮಿಕ ಸ್ವರೂಪವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಪೋಕ್ಸೋ; ಶಿಕ್ಷಕನ ಮೇಲೆ ಪ್ರಕರಣ ದಾಖಲು
ಯಾವುದೇ ವ್ಯಕ್ತಿ ಅಥವಾ ಸಂಘಟನೆ ಇತಿಹಾಸ, ಸರ್ಕಾರದ ದಾಖಲೆಗಳು ಮತ್ತು ಕಾನೂನು ಹಿನ್ನೆಲೆಯನ್ನು ಕಡೆಗಣಿಸಿ ಬಾಬಾ ಬುಡನ್ ದರ್ಗಾದ ಧಾರ್ಮಿಕ ಸ್ವರೂಪ, ಆಚರಣೆಗಳು ಅಥವಾ ಭಕ್ತರ ಹಕ್ಕುಗಳಿಗೆ ಧಕ್ಕೆ ತರುವ ಪ್ರಯತ್ನ ಮಾಡಿದರೆ, ಅದನ್ನು ತೀವ್ರವಾಗಿ ಖಂಡಿಸುತ್ತೇವೆ. ಇಂತಹ ತಪುö್ಪ ಮಾಹಿತಿ ಹರಡುವ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಪ್ರಯತ್ನಗಳ ಕುರಿತು ಸಂಬAಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ, ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಅವರು, ಜಿಲ್ಲಾಡಳಿತವು ಯಾವುದೇ ಒತ್ತಡಕ್ಕೆ ಒಳಗಾಗದೆ, ಹಳೆಯ ದಾಖಲೆಗಳು, ಸರಕಾರದ ಆದೇಶಗಳು, ಕಾನೂನು ತತ್ವಗಳು ಮತ್ತು ಭಾರತೀಯ ಸಂವಿಧಾನದ ಮೌಲ್ಯಗಳ ಆಧಾರದ ಮೇಲೆ ಕಾರ್ಯನಿರ್ವಹಿಸಿ, ಎಲ್ಲಾ ಭಕ್ತರ ಧಾರ್ಮಿಕ ಹಕ್ಕುಗಳನ್ನು ರಕ್ಷಿಸಬೇಕು ಎಂದು ಮನವಿ ಮಾಡಿದ್ದಾರೆ.




