ಚಿಕ್ಕಮಗಳೂರು | ತಿಂಗಳಿಗೆ ₹10ಲಕ್ಷ ವಿದ್ಯುತ್‌ ಬಿಲ್‌; ಸಮಸ್ಯೆ ಬಗೆಹರಿಸದ ಮೆಸ್ಕಾಂ ಸಿಬ್ಬಂದಿ

Date:

ಆಗಸ್ಟ್ 1ರಿಂದ ಸೆಪ್ಟೆಂಬರ್ 1ರವರೆಗೆ ಒಂದು ತಿಂಗಳ ವಿದ್ಯುತ್(ಕರೆಂಟ್) ಬಿಲ್ 10 ಲಕ್ಷ ರೂಪಾಯಿ ಬಂದಿರುವುದನ್ನು ಕಂಡು ಅಂಗಡಿ ಮಾಲೀಕ ಗಾಬರಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ನಡೆದಿದೆ.

ಕಡೂರು ಪಟ್ಟಣದ ಉಳುಕಿನಕಲ್ಲು ಸಮೀಪದ ಡಾಗಾ ಕಾಂಪ್ಲೆಕ್ಸ್‌ನಲ್ಲಿನ ಮೋಹಿತ್ ಏಜೆನ್ಸಿಗೆ ಆಗಸ್ಟ್ ತಿಂಗಳಲ್ಲಿ ₹10,26,054 ವಿದ್ಯುತ್ ಬಿಲ್ ಬಂದಿದೆ. ಪ್ರತಿ ತಿಂಗಳು ವಿದ್ಯುತ್ ಬಿಲ್ ಅಂದಾಜು ₹4,000ದಿಂದ ₹4,500ರವರೆಗೆ ಬರುತ್ತಿತ್ತು. ಆಗಸ್ಟ್ ತಿಂಗಳ ಬಿಲ್ ಏಕಾಏಕಿ 10 ಲಕ್ಷ ದಾಟಿದೆ.

ಬಿಲ್ ಅವಧಿ ಆಗಸ್ಟ್‌ 1ರಿಂದ ಸೆಪ್ಟೆಂಬರ್‌ 1ರವರೆಗೆ ಎಂದು ನಮೂದಿಸಲಾಗಿದೆ. ಬಿಲ್ ನಂ.259 ಆಗಿದ್ದು 8,35,737 ಬಿಲ್ ಎಫ್‍ಪಿಪಿಎಸಿ (1.16) ಟ್ಯಾಕ್ಸ್ 0.9% (75,216.33 ರೂಗಳು) ಒಟ್ಟು 10,260,54 ರೂಪಾಯಿಯ ಬಿಲ್ ನೀಡಿದ್ನೀದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಈವರೆಗೂ ಸಮಯಕ್ಕೆ ಸರಿಯಾಗಿ ವಿದ್ಯುತ್ ಬಿಲ್ ಪಾವತಿಸುತ್ತಾ ಬಂದಿದ್ದೇವೆ. ಯಾವ ತಿಂಗಳೂ ಕೂಡ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿಲ್ಲ. ಆದರೆ, ಈ ತಿಂಗಳು 10 ಲಕ್ಷ ರೂಪಾಯಿ ಬಿಲ್ ಬಂದಿದೆ” ಎಂದು ಮೋಹಿತ್ ಏಜೆನ್ಸಿ ಮಾಲೀಕ ತಿಳಿಸಿದ್ದಾರೆ.

“ಈಗಾಗಲೇ ಕಡೂರು ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಬಿಲ್ ಪರಿಶೀಲಿಸಿದ ಕಡೂರು ಮೆಸ್ಕಾಂ ಸಿಬ್ಬಂದಿ ಸರಿಪಡಿಸಿಕೊಡುತ್ತೇವೆಂದು ಭರವಸೆ ನೀಡಿದ್ದರು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸಂಕಷ್ಟಕ್ಕೆ ಸಿಲುಕಿದ ತೊಗರಿ ಬೆಳೆಗಾರರು; ಪರಿಹಾರಕ್ಕೆ ಆಗ್ರಹ

“ಮೆಸ್ಕಾಂ ಸಿಬ್ಬಂದಿ ಈ ಬಗ್ಗೆ ಹೇಳಿ 4 ದಿನವಾದರೂ ಈವರೆಗೂ ಯಾವುದೇ ಮಾಹಿತಿ ನೀಡಿಲ್ಲ” ಎಂದು ಅಂಗಡಿ ಮಾಲೀಕ ಕಮಲ್ ಚಂದ್ ಡಾಗಾ ಹಾಗೂ ಮೊಹಿತ್ ಡಾಗಾ, ಮೆಸ್ಕಾಂ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಮಂಗಳೂರಿನ ಮನೆಯೊಂದಕ್ಕೆ 7 ಲಕ್ಷ ರೂ ವಿದ್ಯುತ್ ಬಿಲ್

ಈ ಹಿಂದೆ ಮಂಗಳೂರಿನ ಉಳ್ಳಾಲದ ವ್ಯಕ್ತಿಯೊಬ್ಬರ ಮನೆಗೆ ಬರೋಬ್ಬರಿ ₹7,71,072 ರಷ್ಟು ವಿದ್ಯುತ್ ಬಿಲ್ ಬಂದಿತ್ತು. ಕೂಡಲೇ ಅವರು ಮಾಹಿತಿ ಕಲೆ ಹಾಕಿ ಮನೆಯಲ್ಲಿ ಕೇವಲ 99,338 ಯೂನಿಟ್ ವಿದ್ಯುತ್ ಖರ್ಚಾಗಿದೆ. ಪ್ರತಿ ತಿಂಗಳು ಮೂರು ಸಾವಿರದಷ್ಟು ಬಿಲ್ ಬರುತ್ತಿತ್ತು ಎಂದು ಮೆಸ್ಕಾಂ ಕಚೇರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಪರಿಶೀಲನೆ ನಡೆಸಿದ ಮೆಸ್ಕಾಂ ಸಿಬ್ಬಂದಿ ಬಳಿಕ 2,833 ರೂಪಾಯಿಗಳ ಪರಿಷ್ಕೃತ ಬಿಲ್ ತಲುಪಿಸಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ | ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ನಾಮಪತ್ರ ಸಲ್ಲಿಕೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗ್ಡೆ ಅವರು...

ಉಡುಪಿ-ಚಿಕ್ಕಮಗಳೂರು ಸೇರಿದಂತೆ 14 ಕ್ಷೇತ್ರಗಳಲ್ಲಿ ಕೆಆರ್‌ಎಸ್‌ ಪಕ್ಷದಿಂದ ನಾಮಪತ್ರ ಸಲ್ಲಿಕೆ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆಗೆ...

ಚಿಕ್ಕಮಗಳೂರು | ಬಾಳೆಹೊನ್ನೂರಿನಲ್ಲಿ 2 ಸೆಂ.ಮೀ ಮಳೆ; ಕಲಬುರಗಿಯಲ್ಲಿ ಮುಂದುವರೆದ ಬಿಸಿ

ಕರ್ನಾಟಕದಾದ್ಯಂತ ಬಿಸಿಲಿನ ಝಳಕ್ಕೆ ಜನರು ತತ್ತರಿಸಿರುವ ನಡುವೆಯೇ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ...

ಚಿಕ್ಕಮಗಳೂರು | ಜಮಾಅತೆ ಇಸ್ಲಾಮೀ ಹಿಂದ್‌ನಿಂದ ಸೌಹಾರ್ದ ಇಫ್ತಾರ್ ಕೂಟ

ಆತ್ಮ ನಿಯಂತ್ರಣದ ಮೂಲಕ ಮನಸ್ಸನ್ನು ಗೆಲ್ಲಬಹುದು. ಮನಸ್ಸನ್ನು ಜಯಿಸುವ ಕೆಲಸ ಉಪವಾಸದಿಂದಾಗುತ್ತದೆ....